ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Railway: ಸರಕು ಸಾಗಣೆ ಆದಾಯ: ದಾಖಲೆ ಬರೆದ ಭಾರತೀಯ ರೈಲ್ವೆ

ವಾರ್ಷಿಕವಾಗಿ ಸಾಗಿಸುವ ಸರಕು ಸಾಗಣೆಯಲ್ಲಿ ಅಮೆರಿಕವನ್ನು ಮೀರಿಸಿರುವ ಭಾರತೀಯ ರೈಲ್ವೆಯು 2.62 ಲಕ್ಷ ಕೋಟಿ ರೂ. ಆದಾಯವನ್ನು ಗಳಿಸಿದೆ. ದಾಖಲೆಯ ಸಂಖ್ಯೆಯ ಪ್ರಯಾಣಿಕರ ಹೊರತಾಗಿ ರೈಲ್ವೆಯು 80,000 ಕೋಟಿ ರೂ. ಆದಾಯದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ರೈಲುಗಳ ಮೂಲಕ ಗಮನಾರ್ಹ ಪ್ರಮಾಣದಲ್ಲಿ ಕಲ್ಲಿದ್ದಲು ಸಾಗಾಟ ಮಾಡಲಾಗಿದೆ.

ಸರಕು ಸಾಗಣೆ: ಅಮೆರಿಕವನ್ನು ಮೀರಿಸಿರುವ ಭಾರತೀಯ ರೈಲ್ವೆಯ ಆದಾಯ

Profile Vidhya Iravathur Apr 1, 2025 7:36 PM

ನವದೆಹಲಿ: ಭಾರತೀಯ ರೈಲ್ವೆಯು (Indian Railway) ಸರಕು ಸಾಗಣೆ ಆದಾಯದಲ್ಲಿ ಈ ಬಾರಿಯೂ ದಾಖಲೆ ನಿರ್ಮಿಸಿದೆ. ಕಳೆದ ನಾಲ್ಕು ವರ್ಷಗಳ ಆದಾಯದ ದಾಖಲೆಗಳನ್ನು ಮುರಿದಿದ್ದು, 2025ರ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆ 1.61 ಶತಕೋಟಿ ಟನ್‌ಗಳಿಗಿಂತ ಹೆಚ್ಚಿನ ಸರಕು ಸಾಗಾಟ ಮಾಡಿ ಇತಿಹಾಸ ಬರೆದಿದೆ. ವಾರ್ಷಿಕವಾಗಿ ಸಾಗಿಸುವ ಸರಕು ಸಾಗಣೆಯಲ್ಲಿ ಅಮೆರಿಕವನ್ನು ಮೀರಿಸಿರುವ ಭಾರತೀಯ ರೈಲ್ವೆಯು 2025 ಆರ್ಥಿಕ ವರ್ಷದಲ್ಲಿ 2.62 ಲಕ್ಷ ಕೋಟಿ ರೂ. ಆದಾಯ ಗಳಿಸಿದೆ. ದಾಖಲೆಯ ಸಂಖ್ಯೆಯ ಪ್ರಯಾಣಿಕರ ಹೊರತಾಗಿ ರೈಲ್ವೆಯು 80,000 ಕೋಟಿ ರೂ. ಆದಾಯದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ರೈಲುಗಳ ಮೂಲಕ ಗಮನಾರ್ಹ ಪ್ರಮಾಣದಲ್ಲಿ ಕಲ್ಲಿದ್ದಲು ಸಾಗಾಟ ಮಾಡಲಾಗಿದೆ.

2025ರ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆ ಸರಕು ಸಾಗಣೆ ಮತ್ತು ಆದಾಯದಲ್ಲಿ ಸತತ ನಾಲ್ಕನೇ ವರ್ಷವೂ ಉತ್ತಮ ದಾಖಲೆ ಬರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಅಮೆರಿಕವನ್ನು ಹಿಂದಿಕ್ಕಿರುವ ಭಾರತದ ರೈಲ್ವೆ ಜಾಲವು ವಾರ್ಷಿಕವಾಗಿ ಸರಕು ಸಾಗಣೆಯಲ್ಲಿ ಎರಡನೇ ಅತಿ ದೊಡ್ಡ ರಾಷ್ಟ್ರವನ್ನಾಗಿ ಮಾಡಿದೆ. ರೈಲ್ವೆ ಜಾಲವು ನಿರ್ವಹಿಸುವ ಸರಕು ಸಾಗಣೆಯಲ್ಲಿ ಚೀನಾ ಭಾರತಕ್ಕಿಂತ ಮುಂದಿರುವ ಏಕೈಕ ದೇಶವಾಗಿದೆ ಎಂದು ಅವರು ಹೇಳಿದ್ದಾರೆ.



2023-24ರ ಆರ್ಥಿಕ ವರ್ಷದ ಕೊನೆಯ ದಿನವಾದ ಮಾರ್ಚ್ 31ರ ವೇಳೆಗೆ ರೈಲ್ವೆಯ ವೆಚ್ಚ ಬಜೆಟ್ ಅಂದಾಜು 2.65 ಲಕ್ಷ ಕೋಟಿ ರೂ. ಅನ್ನು ಮೀರಿದೆ. ಭಾರತೀಯ ರೈಲ್ವೆಯ ಒಟ್ಟು ಆದಾಯ 2025ರ ಆರ್ಥಿಕ ವರ್ಷದಲ್ಲಿ 2.62 ಲಕ್ಷ ಕೋಟಿ ರೂ. ಗಳನ್ನು ಗಳಿಸಿದ್ದು, ಇದು ಸತತ ಮೂರನೇ ವರ್ಷದ ದಾಖಲೆಯಾಗಿದೆ ಎಂದು ಅವರು ಹೇಳಿದರು.

ಪ್ರಯಾಣಿಕರ ಸಾಗಣೆಯಿಂದ ಬರುವ ಗಳಿಕೆಯು 2023- 24ರ ಆರ್ಥಿಕ ವರ್ಷದಲ್ಲಿ 70,693 ಕೋಟಿ ರೂ. ಗಳಾಗಿದ್ದು, ಈ ಬಾರಿ 75,000 ಕೋಟಿ ರೂ.ಗೆ ಏರಿಕೆಯಾಗಿದೆ. ಕುಂಭಮೇಳದಲ್ಲಿ ದಾಖಲೆ ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸಿದರೂ ಬಜೆಟ್‌ನಲ್ಲಿ ಪ್ರಯಾಣಿಕರ ಆದಾಯದಿಂದ ನಿರೀಕ್ಷಿಸಿದ್ದ 80,000 ಕೋಟಿ ರೂ. ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ.

ಸರಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಸಾಗಿಸಿದ್ದು, ಇದು 817 ಮಿಲಿಯನ್ ಟನ್‌ಗಳಾಗಿವೆ. ಇದು ಹಿಂದಿನ ವರ್ಷ 781 ಮಿಲಿಯನ್ ಟನ್‌ನಷ್ಟಿತ್ತು. ಇದು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆಯನ್ನು ನೀಗಿಸಿದೆ. ಈ ಹಿಂದೆ ವಿದ್ಯುತ್ ಸ್ಥಾವರಗಳಲ್ಲಿ 57 ಮಿಲಿಯನ್ ಟನ್‌ಗಳಷ್ಟು ಮಾತ್ರ ಸಂಗ್ರಹವಿರುತ್ತಿತ್ತು. ಇದು ಕಳೆದ ಆರ್ಥಿಕ ವರ್ಷದ ಕೊನೆಯಲ್ಲಿ 50 ಮಿಲಿಯನ್ ಆಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಪಾರ್ಸೆಲ್ ಸಾಗಾಟದಲ್ಲಿ ಶೇ. 29ರಷ್ಟು ಹೆಚ್ಚಾಗಿದ್ದು, 1.3 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಭಾರತೀಯ ರೈಲ್ವೆಯು ಸಾಗಿಸಿದ ಪಾರ್ಸೆಲ್‌ಗಳ ಸಂಖ್ಯೆ 31 ಮಿಲಿಯನ್‌ನಿಂದ 44 ಮಿಲಿಯನ್‌ಗೆ ಏರಿದೆ. ಇದು ಭಾರತೀಯ ರೈಲ್ವೆಯ ಆದಾಯದ ಹರಿವನ್ನು ಹೆಚ್ಚಿಸಲಿದೆ ಎಂದು ಅವರು ಹೇಳಿದರು.ಚಇದಲ್ಲದೆ ಶುಲ್ಕೇತರ ಆದಾಯದ ಗಳಿಕೆಗಳಲ್ಲಿ ರೈಲ್ವೆ ಸ್ಕ್ರ್ಯಾಪ್ ಮಾರಾಟದಿಂದ 6,500 ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯವನ್ನು ಗಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.