ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shubhanshu Shukla: ಶುಭಾಂಶು ಶುಕ್ಲಾ ತಂಡ ಭೂಮಿಗೆ ಹಿಂದಿರುಗಲು ಡೇಟ್ ಫಿಕ್ಸ್...!

Axiom-4: ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದ ಆಕ್ಸಿಯಮ್-4 (Axiom-4) ತಂಡವು ಜುಲೈ 14ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮರಳಲಿದ್ದಾರೆ ಎಂದು ಆಕ್ಸಿಯಮ್ ಸ್ಪೇಸ್ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದೆ. ಆ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಶುಭಾಂಶು ಶುಕ್ಲಾ ತಂಡ ಭೂಮಿಗೆ ಹಿಂದಿರುಗಲು ಡೇಟ್ ಫಿಕ್ಸ್...!

ಶುಭಾಂಶು ಶುಕ್ಲಾ

Profile Sushmitha Jain Jul 11, 2025 6:53 PM

ನವದೆಹಲಿ: ಭಾರತೀಯ ಗಗನಯಾತ್ರಿ (Indian Astronaut) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಸೇರಿದ ಆಕ್ಸಿಯಮ್-4 (Axiom-4) ತಂಡವು ಜುಲೈ 14ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (International Space Station) ಮರಳಲಿದ್ದಾರೆ ಎಂದು ಆಕ್ಸಿಯಮ್ ಸ್ಪೇಸ್ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದೆ.

“ಅನುಕೂಲಕರ ಹವಾಮಾನವಿದ್ದರೆ, ಆಕ್ಸಿಯಮ್ ಮಿಷನ್ 4 ತಂಡವು ಜುಲೈ 14, ಸೋಮವಾರ ಬೆಳಿಗ್ಗೆ 7:05ಕ್ಕೆ (ಭಾರತೀಯ ಕಾಲಮಾನ 4:35 PM) ಐಎಸ್‌ಎಸ್‌ನಿಂದ ಬೇರ್ಪಡಲಿದೆ” ಎಂದು ಕಂಪನಿಯು ಎಕ್ಸ್‌ನಲ್ಲಿ ತಿಳಿಸಿದೆ. ಕಮಾಂಡರ್ ಪೆಗ್ಗಿ ವಿಟ್ಸನ್, ಪೈಲಟ್ ಶುಭಾಂಶು ಶುಕ್ಲಾ, ಮಿಷನ್ ಸ್ಪೆಶಲಿಸ್ಟ್‌ಗಳಾದ ಸ್ಲಾವೊಸ್ಜ್ ಉಜ್ಞಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬೋರ್ ಕಪು ಅವರು ಕಕ್ಷೆಯಲ್ಲಿನ ಕೊನೆಯ ದಿನಗಳಲ್ಲಿ 60 ಪ್ರಯೋಗಗಳನ್ನು ನಡೆಸಲಿದ್ದಾರೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿಯು ಪೋಲಿಷ್ ಗಗನಯಾತ್ರಿ ಉಜ್ಞಾನ್ಸ್ಕಿ-ವಿಸ್ನಿಯೆವ್ಸ್ಕಿಯನ್ನು ನಿಯೋಜಿಸಿದ್ದು, ಜುಲೈ 14ರಂದು ಮರಳುವ ದಿನಾಂಕವನ್ನು ಈಗಾಗಲೇ ಸೂಚಿಸಿತ್ತು. ಸ್ಪೇಸ್‌ಎಕ್ಸ್ ಡ್ರಾಗನ್ ಗ್ರೇಸ್ ಬಾಹ್ಯಾಕಾಶ ನೌಕೆ ಜೂನ್ 26ರಂದು ಐಎಸ್‌ಎಸ್‌ಗೆ ತಲುಪಿದ್ದರಿಂದ, ತಂಡವು ಎರಡು ವಾರಗಳ ಕಾಲ ಕಡಿಮೆ ಕಕ್ಷೆಯ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಿತು.

ಈ ಸುದ್ದಿಯನ್ನು ಓದಿ: Viral Video: ಸಿಕ್ಕಾಪಟ್ಟೆ ವೈರಲ್ ಆಯ್ತು ಈತನ ರೆಸ್ಯೂಮ್; ಅಂಥದ್ದೇನಿದೆ ಇದರಲ್ಲಿ?

ಶುಕ್ಲಾ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ಇಸ್ರೋ) ಪ್ರತಿನಿಧಿಸುತ್ತಾ, ಏಳು ಸ್ವದೇಶಿ ಮೈಕ್ರೋಗ್ರಾವಿಟಿ ಪ್ರಯೋಗಗಳು ಮತ್ತು ಇಸ್ರೋ-ನಾಸಾ ಸಹಯೋಗದ ಐದು ಪ್ರಯೋಗಗಳನ್ನು ನಡೆಸಿದ್ದಾರೆ. 15ನೇ ದಿನದಂದು, ಶುಕ್ಲಾ ಮೈಕ್ರೊಆಲ್ಗೀ ಪ್ರಯೋಗವನ್ನು ಮುಂದುವರೆಸಿದರು, ಇದು ಭವಿಷ್ಯದ ದೀರ್ಘ ಬಾಹ್ಯಾಕಾಶ ಯಾತ್ರೆಗಳಿಗೆ ಆಹಾರ, ಆಕ್ಸಿಜನ್, ಮತ್ತು ಜೈವಿಕ ಇಂಧನವನ್ನು ಒದಗಿಸಬಹುದು.

ತಂಡವು ವಾಯೇಜರ್ ಡಿಸ್‌ಪ್ಲೇಸ್ ಅಧ್ಯಯನವನ್ನು ಮುಂದುವರೆಸಿದ್ದಿ, ಇದು ಬಾಹ್ಯಾಕಾಶ ಯಾತ್ರೆಯು ಕಣ್ಣಿನ ಚಲನೆ ಮತ್ತು ಸಮನ್ವಯದ ಮೇಲೆ ಬೀರುವ ಪರಿಣಾಮವನ್ನು ಪರಿಶೀಲಿಸುತ್ತದೆ. ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳು ಮತ್ತು ನರಮಂಡಲದ ಮಾನಿಟರಿಂಗ್ ಕ್ಯಾಪ್‌ಗಳನ್ನು ಧರಿಸಿ, ಮೈಕ್ರೋಗ್ರಾವಿಟಿಯು ಗಮನ, ಮೋಟಾರ್ ಕೌಶಲ್ಯಗಳು ಮತ್ತು ಒತ್ತಡದ ಪ್ರತಿಕ್ರಿಯೆಗಳ ಮೇಲೆ ಬೀರುವ ಪರಿಣಾಮವನ್ನು ತಂಡವು ಮೌಲ್ಯಮಾಪನ ಮಾಡಿತು. ಈ ಪ್ರಯೋಗಗಳು ಭವಿಷ್ಯದ ಬಾಹ್ಯಾಕಾಶ ಸಂಶೋಧನೆಯನ್ನು ರೂಪಿಸಲಿದ್ದು, ಭೂಮಿಯ ಮೇಲಿನ ಜೀವನವನ್ನು ಸುಧಾರಿಸಬಹುದು ಎಂದು ಆಕ್ಸಿಯಮ್ ಸ್ಪೇಸ್ ತಿಳಿಸಿದೆ.