ಇದೇ ಘಟನೆ ಭಾರತದಲ್ಲಿ ನಡೆದಿದ್ದರೆ, ನೀವು ಸುಮ್ಮನೆ ಬಿಡುತ್ತಿದ್ರಾ? ಸುನೀಲ್ ಗವಾಸ್ಕರ್ ಕಿಡಿ!
Sunil Gavaskar on Ball Change Controversy: ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಚೆಂಡು ಬದಲಾವಣೆಗಾಗಿ ಹೈಡ್ರಾಮಾ ನಡೆದಿತ್ತು. 10.4 ಓವರ್ ಬೌಲ್ ಮಾಡಿದ್ದ ಚೆಂಡಿನ ಬದಲಿಸಿದ ಬಳಿಕ ಭಾರತದ ನಾಯಕ ಶುಭಮನ್ ಗಿಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಕೂಡ ಪ್ರತಿಕ್ರಿಯಿಸಿದ್ದಾರೆ.

ಚೆಂಡು ಬದಲಾವಣೆ ವಿವಾದದ ಬಗ್ಗೆ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ (IND vs ENG) ಎರಡನೇ ದಿನ ಚೆಂಡು ಬದಲಾವಣೆಗೆ ಸಂಬಂಧಿಸಿದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಫೀಲ್ಡ್ ಅಂಪೈರ್‌ಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ತಂಡದ ಇನಿಂಗ್ಸ್ ವೇಳೆ ಬಳಿಸಿದ್ದ ಚೆಂಡು ಬಹುಬೇಗ ತನ್ನ ಸ್ವರೂಪವನ್ನು ಕಳೆದುಕೊಂಡಿತ್ತು. ಈ ಕಾರಣದಿಂದ ಭಾರತದ ನಾಯಕ ಶುಭಮನ್ ಗಿಲ್ (Shubman Gill), ಬೇರೆ ಚೆಂಡನ್ನು ಬದಲಿಸಬೇಕೆಂದು ಅಂಪೈರ್‌ಗಳಿಗೆ ಮನವಿ ಮಾಡಿದ್ದರು. ಆದರೆ, ನೀಡಿದ್ದ ಬದಲಿ ಚೆಂಡಿನ ಬಗ್ಗೆ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಮೂರನೇ ಟೆಸ್ಟ್ ಪಂದ್ಯದ ಎರಡನೇ ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ಭಾರತ ತಂಡ ಎರಡನೇ ಹೊಸ ಚೆಂಡಿನಲ್ಲಿ 10.4 ಓವರ್‌ಗಳನ್ನು ಬೌಲ್ ಮಾಡಿತ್ತು. ಈ ವೇಳೆ ಚೆಂಡು ತನ್ನ ಸ್ವರೂಪವನ್ನು ಕಳೆದುಕೊಂಡಿತ್ತು ಹಾಗೂ ನಾಯಕ ಶುಭಮನ್ ಗಿಲ್ ಈ ಚೆಂಡನ್ನು ಬದಲಿಸುವಂತೆ ಅಂಪೈರ್‌ಗೆ ಮನವಿ ಮಾಡಿದ್ದರು. ಅದರಂತೆ ಭಾರತದ ನಾಯಕನ ಮನವಿಯನ್ನು ಸ್ವೀಕರಿಸಿ ರಿಂಗ್‌ನಲ್ಲಿ ಚೆಂಡನ್ನು ಇಟ್ಟು ಪರೀಕ್ಷಿಸಿದರು ಹಾಗೂ ಚೆಂಡು ರಿಂಗ್ ಒಳಗಡೆ ಪ್ರವೇಶಿಸುವಲ್ಲಿ ವಿಫಲವಾಯಿತು. ನಂತರ ಅಂಪೈರ್ ಬೇರೆ ಚೆಂಡನ್ನು ಪಡೆದರು. ಆದರೆ, ಬದಲಿ ಚೆಂಡು 10 ಓವರ್ ಆಡಿರುವ ರೀತಿ ಕಾಣುತ್ತಿಲ್ಲ ಎಂದು ಶುಭಮನ್ ಗಿಲ್ ವಾಗ್ವಾದ ನಡೆಸಿದ್ದರು.
IND vs ENG: ಅರ್ಧಶತಕ ಬಾರಿಸಿದ ಬಳಿಕ ಸರ್ಫರಾಝ್ ಖಾನ್ ದಾಖಲೆ ಮುರಿದ ಜೇಮಿ ಸ್ಮಿತ್!
ಬದಲಿ ಚೆಂಡಿಗೆ ಪರ್ಯಾಯವಾಗಿ 10 ಓವರ್‌ಗಳಿಗೆ ಬಳಿಸಿದ ಚೆಂಡನ್ನು ನೀಡಿ ಎಂದು ಸಾಕಷ್ಟು ವಾದ ಮಾಡಿದ್ದರು. ಆದರೆ, ಗಿಲ್ ಅವರ ಮನವಿಯನ್ನು ತಿರಸ್ಕರಿಸಿದರು. ಈ ವೇಳೆ ಮೊಹ್ಮಮದ್ ಸಿರಾಜ್ ಸ್ಟಂಪ್ ಮೈಕ್‌ನಲ್ಲಿ "ಇದು 10 ಓವರ್‌ಗಳಿಗೆ ಬಳಸಿರುವ ಚೆಂಡಾ?" ಎಂದು ಪ್ರಶ್ನೆ ಮಾಡಿದ್ದರು. ಈ ವೇಳೆ ಗಿಲ್ ಕೂಡ ಅಂಪೈರ್ ಬಳಿ ದೀರ್ಘಾವಧಿ ವಾದ ಮಾಡಿದ್ದರು. ಆದರೆ, ಭಾರತದ ನಾಯಕನ ಮನವಿಯನ್ನು ಅಂಪೈರ್ ಸ್ವೀಕರಿಸಲಿಲ್ಲ. ಸೋನಿ ಸ್ಪೋರ್ಟ್ಸ್ ವಾಹಿನಿಗೆ ಕಾಮೆಂಟರಿ ಮಾಡುತ್ತಿದ್ದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಕಿಡಿ ಕಾರಿದರು. ಅವರಿಗೂ ಕೂಡ ಮೈದಾನದಲ್ಲಿ ಅಂಪೈರ್‌ಗಳು ನಡೆದುಕೊಂಡು ಹಾದಿ ಇಷ್ಟವಾಗಲಿಲ್ಲ.
Shubman Gill got angry on the field looking like Ricky Ponting is back 🥶⁰#INDvsENG #ENGvIND
— Kavya Maran (@Kavya_Maran_SRH) July 11, 2025
pic.twitter.com/lsmX5AYZU7
ಚೆಂಡು ಬದಲಾವಣೆ ವಿವಾದದ ಬಗ್ಗೆ ಗವಾಸ್ಕರ್ ಪ್ರತಿಕ್ರಿಯೆ
"ನೀವು ಇಲ್ಲಿಂದ ನೋಡಿದರೂ ಅದು 10 ಓವರ್‌ಗಳ ಹಳೆಯ ಚೆಂಡಲ್ಲ ಎಂದು ಹೇಳಬಹುದು, ಅದು 20 ಓವರ್‌ಗಳ ಹಳೆಯ ಚೆಂಡಿನಂತಿದೆ," ಎಂದು ಹೇಳಿದ ಸುನೀಲ್ ಗವಾಸ್ಕರ್, ಎಂದು "ಈ ಘಟನೆ ಭಾರತದಲ್ಲಿ ನಡೆದಿದ್ದರೆ...." ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಬದಲಾಯಿಸಲಾದ ಚೆಂಡುಗಳಿಗೆ ಹೋಲುವ ಚೆಂಡುಗಳು ಇಲ್ಲದಿದ್ದರೆ, ಬ್ರಿಟಿಷ್ ಮಾಧ್ಯಮವು ಖಂಡಿತವಾಗಿಯೂ ಅದನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿತ್ತು ಎನ್ನುವ ಅರ್ಥದಲ್ಲಿ ಗವಾಸ್ಕರ್ ತಿಳಿಸಿದ್ದಾರೆ.
IND vs ENG: ಚೆಂಡು ಬದಲಾಯಿಸಿದ ಅಂಪೈರ್ ಜೊತೆ ಶುಭಮನ್ ಗಿಲ್ ವಾಗ್ವಾದ! ವಿಡಿಯೊ
ಇಂಗ್ಲೆಂಡ್ 387 ರನ್‌ಗಳಿಗೆ ಆಲ್‌ಔಟ್
ಎರಡನೇ ದಿನ ಬೆಳಿಗ್ಗ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡದ ಪರ ಜೋ ರೂಟ್ ಶತಕ ಪೂರ್ಣಗೊಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಬೆನ್ ಸ್ಟೋಕ್ಸ್ ಕೂಡ ಜಾಸ್ತಿ ಹೊತ್ತು ಆಡಲಿಲ್ಲ. ಆದರೆ, ಜೇಮಿ ಸ್ಮಿತ್ (51) ಹಾಗೂ ಬ್ರೈಡೆನ್ ಕಾರ್ಸ್ (56) ತಲಾ ಅರ್ಧಶತಕಗಳನ್ನು ಗಳಿಸಿದರು. ಅಲ್ಲದೆ ಈ ಇವರಿಬ್ಬರೂ 82 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಇಂಗ್ಲೆಂಡ್ ತಂಡ 112.3 ಓವರ್‌ಗಳಿಗೆ 387 ರನ್‌ಗಳನ್ನು ಕಲೆ ಹಾಕಿ ಆಲ್‌ಔಟ್ ಆಯಿತು.