ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Dhananjay Munde: ಸರಪಂಚ್ ಹತ್ಯೆ ಪ್ರಕರಣದಲ್ಲಿ ಆಪ್ತ ಸಹಾಯಕನ ಬಂಧನ; ಮಹಾರಾಷ್ಟ್ರ ಸಚಿವ ಧನಂಜಯ್​ ಮುಂಡೆ ರಾಜೀನಾಮೆ

ಮಹಾರಾಷ್ಟ್ರ ಸರ್ಕಾರದ ಸಚಿವ ಧನಂಜಯ್​ ಮುಂಡೆ ಅವರು ಮಂಗಳವಾರ ತಮ್ಮ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೀಡ್‌ನ ಸರಪಂಚ್‌ವೋರ್ವರ ಹತ್ಯೆ ಪ್ರಕರಣದಲ್ಲಿ ತಮ್ಮ ಆಪ್ತ ಸಹಾಯಕ ವಾಲ್ಮಿಕ್ ಕರಾಡ್ ಪ್ರಮುಖ ಆರೋಪಿ ಎಂದು ವರದಿ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸೂಚನೆಯ ಮೇರೆಗೆ ರಾಜಿನಾಮೆ ನೀಡಿದ್ದಾರೆ.

ಮಹಾರಾಷ್ಟ್ರ ಸಚಿವ ಧನಂಜಯ್​ ಮುಂಡೆ ರಾಜೀನಾಮೆ

ಧನಂಜಯ್​ ಮುಂಡೆ

Profile Vishakha Bhat Mar 4, 2025 12:55 PM

ಮುಂಬೈ: ಮಹಾರಾಷ್ಟ್ರ ಸರ್ಕಾರದ ಸಚಿವ ಧನಂಜಯ್​ ಮುಂಡೆ (Dhananjay Munde) ಅವರು ಮಂಗಳವಾರ ತಮ್ಮ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ಹೊಂದಿದ್ದ ಮುಂಡೆ, ಬೀಡ್‌ನ ಸರಪಂಚ್‌ವೋರ್ವರ ಹತ್ಯೆ ಪ್ರಕರಣದಲ್ಲಿ ತಮ್ಮ ಆಪ್ತ ಸಹಾಯಕ ವಾಲ್ಮಿಕ್ ಕರಾಡ್ ಪ್ರಮುಖ ಆರೋಪಿ ಎಂದು ವರದಿ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸೂಚನೆಯ ಮೇರೆಗೆ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ತಮ್ಮ ರಾಜಿನಾಮೆ ಕುರಿತು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಸರಪಂಚರ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬುದು ನಾನು ಆಗ್ರಹಿಸುತ್ತೇನೆ. ನಿನ್ನೆ ಕಾಣಿಸಿಕೊಂಡ ಫೋಟೋಗಳನ್ನು ನೋಡಿ, ನನಗೆ ತುಂಬಾ ದುಃಖವಾಯಿತು. ಈ ವಿಷಯದ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಅಲ್ಲದೆ, ನ್ಯಾಯಾಂಗ ತನಿಖೆಯನ್ನು ಪ್ರಸ್ತಾಪಿಸಲಾಗಿದೆ. ತಮ್ಮ ನಾಯಕರು ಹೇಳಿದ ಮೇರೆಗೆ ತಾನು ರಾಜಿನಾಮೆ ನೀಡಿದ್ದು, ಸತ್ಯ ಆದಷ್ಟು ಬೇಗ ಬೀಳುತ್ತದೆ. ತನಗೆ ಆರೋಗ್ಯ ಸಮಸ್ಯೆಯಿದ್ದರಿಂದ ನಾನು ರಾಜಿನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ನಲವತ್ತೊಂಬತ್ತು ವರ್ಷದ ಧನಂಜಯ್ ಮುಂಡೆ ಅವರು ಅಜಿತ್ ಪವಾರ್ ಅವರ ಎನ್‌ಸಿಪಿಯ ಶಾಸಕರಾಗಿದ್ದು, ಬೀಡ್‌ನ ಪಾರ್ಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕ ದಿವಂಗತ ಗೋಪಿನಾಥ್ ಮುಂಡೆ ಅವರ ಸೋದರಳಿಯ ಧನಂಜಯ್ ಮುಂಡೆ ಅವರು ಮಹಾರಾಷ್ಟ್ರ ಸಚಿವ ಪಂಕಜಾ ಮುಂಡೆ ಅವರ ಸೋದರಸಂಬಂಧಿ. ಧನಂಜಯ್ ಮುಂಡೆ 2013 ರಲ್ಲಿ ಎನ್‌ಸಿಪಿ ಸೇರಿದರು. 2023 ರಲ್ಲಿ ಶರದ್ ಪವಾರ್ ನೇತೃತ್ವದ ಪಕ್ಷ ವಿಭಜನೆಯಾದಾಗ, ಅವರು ಅಜಿತ್ ಪವಾರ್ ಅವರ ಪರವಾಗಿದ್ದರು. ಹಿಂದೆ, ಅವರು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಮತ್ತು ಉದ್ಧವ್ ಠಾಕ್ರೆ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಏನಿದು ಹತ್ಯೆ ಪ್ರಕರಣ ?

2024ರ ಡಿಸೆಂಬರ್‌ನಲ್ಲಿ ಸಂತೋಷ್ ದೇಶ್‌ಮುಖ್ ಅಪಹರಣ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಮಸ್ಸಾಜೋಗ್ ಗ್ರಾಮದ ಸರ್‌ಪಂಚ್‌ ಆಗಿದ್ದ ಅವರ ಕೊಲೆ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನ ಉಂಟು ಮಾಡಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀಡ್ ಜಿಲ್ಲಾ ಕೋರ್ಟ್‌ಗೆ 1,200 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ಪೊಲೀಸ್ ಅಧಿಕಾರಿಗಳ ಪ್ರಕಾರ, ಆತನನ್ನು ಎರಡು ಗಂಟೆಗಳಿಗೂ ಹೆಚ್ಚು ಕಾಲ ಗ್ಯಾಸ್ ಪೈಪ್, ಕಬ್ಬಿಣದ ರಾಡ್, ಮರದ ಕೋಲುಗಳು ಮತ್ತು ಹರಿತವಾದ ಆಯುಧಗಳಿಂದ ಥಳಿಸಲಾಗಿದೆ ಎಂದು ಹೇಳಿದ್ದರು. ಸಿಐಡಿ, ಈ ಪ್ರಕರಣದಲ್ಲಿ ವಾಲ್ಮಿಕ್ ಕರಾಡ್‌ ಪ್ರಮುಖ ಆರೋಪಿ ಎಂದು ಹೇಳಿತ್ತು. ಸಂತೋಷ್‌ನನ್ನು ಕೊಲೆ ಮಾಡುವ ಮುನ್ನ ಆರೋಪಿಗಳು 15 ನಿಮಿಷದ ವಿಡಿಯೋವನ್ನು ರಿಲೀಸ್‌ ಮಾಡಿದ್ದರು. ಅದರಲ್ಲಿ ಸಂತೋಷ್‌ ಅರೆ ಪ್ರಜ್ಞಾವಸ್ಥೆಯಲ್ಲಿ ಕಾಣಿಸಿಕೊಂಡಿದ್ದ. ಈ ಪ್ರಕರಣದಲ್ಲಿ ಧನಂಜಯ ಮುಂಡೆ ಅವರ 6 ಸಹಾಯಕರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ಸರಿಯಾಗಿ ನಡೆಯಲು ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು ಇದೀಗ ಅವರು ರಾಜಿನಾಮೆ ನೀಡಿದ್ದಾರೆ.