Sahkar Taxi: ಓಲಾ, ಊಬರ್‌ನಂತೆ ಬರ್ತಿದೆ ʻಸಹಕಾರ್ ಟ್ಯಾಕ್ಸಿʼ! ಇದು ಕೇಂದ್ರ ಸರ್ಕಾರ ವಿನೂತನ ಪ್ರಯತ್ನ
ಶೀಘ್ರದಲ್ಲೇ ಸಹಕಾರ್ ಟ್ಯಾಕ್ಸಿಗಳು(Sahkar Taxi) ರಸ್ತೆಗಿಳಿಯಲಿವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದ್ದು, ಸಹಕಾರಿ ಸಂಘಗಳು ದ್ವಿಚಕ್ರ ವಾಹನಗಳು, ಟ್ಯಾಕ್ಸಿಗಳು, ರಿಕ್ಷಾಗಳು ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ನೋಂದಾಯಿಸಲು ಅನುವು ಮಾಡಿಕೊಡುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ 'ಸಹಕಾರ್ ಸೆ ಸಮೃದ್ಧಿ' (ಸಹಕಾರದ ಮೂಲಕ ಸಮೃದ್ಧಿ) ಎಂಬ ಪರಿಕಲ್ಪನೆಗೆ ಪೂರಕವಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದರು.


ನವದೆಹಲಿ: ಓಲಾ, ಊಬರ್‌ನ ರೀತಿಯಲ್ಲಿ ಸರ್ಕಾರವೇ ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ಕೇಂದ್ರ ಮುಂದಾಗಿದೆ. ಈ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಸಂಸತ್‌ನಲ್ಲಿ ಮಾತನಾಡಿದ್ದು, ಸರ್ಕಾರವು ಸಹಕಾರ್ ಟ್ಯಾಕ್ಸಿ(Sahkar Taxi) ಅನ್ನು ಪರಿಚಯಿಸಲು ಸಿದ್ಧವಾಗಿದೆ ಎಂದು ಘೋಷಿಸಿದರು, ಇದು ಚಾಲಕರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಸಲುವಾಗಿ ವಿನ್ಯಾಸಗೊಳಿಸಲಾದ ಸಹಕಾರಿ ಆಧಾರಿತ ಟ್ಯಾಕ್ಸಿ ಸೇವೆಯಾಗಿದೆ. ಓಲಾ(Ola) ಮತ್ತು ?ಊಬರ್‌ನಂತಹ ಅಪ್ಲಿಕೇಶನ್ ಆಧಾರಿತ ಸೇವೆಗಳ ಮಾದರಿಯಲ್ಲೇ ಇದು ಕಾರ್ಯನಿರ್ವಹಿಸಲಿದೆ. ಶೀಘ್ರದಲ್ಲೇ ಸಹಕಾರ್ ಟ್ಯಾಕ್ಸಿಗಳುನ ರಸ್ತೆಗಿಳಿಯಲಿವೆ ಎಂದು ಅವರು ತಿಳಿಸಿದರು. ಸಹಕಾರಿ ಸಂಘಗಳು ದ್ವಿಚಕ್ರ ವಾಹನಗಳು, ಟ್ಯಾಕ್ಸಿಗಳು, ರಿಕ್ಷಾಗಳು ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ನೋಂದಾಯಿಸಲು ಅನುವು ಮಾಡಿಕೊಡುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರ 'ಸಹಕಾರ್ ಸೆ ಸಮೃದ್ಧಿ' (ಸಹಕಾರದ ಮೂಲಕ ಸಮೃದ್ಧಿ) ಎಂಬ ಪರಿಕಲ್ಪನೆಗೆ ಪೂರಕವಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಇದು ಕೇವಲ ಘೋಷಣೆಯಲ್ಲ. ಇದನ್ನು ಕಾರ್ಯಗತಗೊಳಿಸಲು ಸಹಕಾರ ಸಚಿವಾಲಯವು ಮೂರೂವರೆ ವರ್ಷಗಳಿಂದ ಅವಿರತವಾಗಿ ಶ್ರಮಿಸಿದೆ. ಕೆಲವೇ ತಿಂಗಳುಗಳಲ್ಲಿ, ಪ್ರಮುಖ ಸಹಕಾರಿ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲಾಗುವುದು, ಇದು ಚಾಲಕರಿಗೆ ನೇರ ಲಾಭದ ಹರಿವನ್ನು ಖಚಿತಪಡಿಸುತ್ತದೆ ಎಂದು ಅಮಿತ್ ಶಾ ಹೇಳಿದರು.
ಇದು ಹೇಗೆ ಭಿನ್ನ?
ಈ ಉಪಕ್ರಮವು ಸಹಕಾರಿ ಸಂಘಗಳು ಆರ್ಥಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ನಾಗರಿಕರಿಗೆ ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ಸೇವೆಗಳನ್ನು ಖಚಿತಪಡಿಸುತ್ತದೆ. ಈ ಬೆಳವಣಿಗೆಗಳೊಂದಿಗೆ, ಸರ್ಕಾರವು ಭಾರತದ ಸಹಕಾರಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ, ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಮತ್ತು ಬಹು ಕೈಗಾರಿಕೆಗಳಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಬೆಳೆಸುತ್ತದೆ.
ಈ ಸುದ್ದಿಯನ್ನೂ ಓದಿ: ಓಲಾ, ಉಬರ್, ರ್‍ಯಾಪಿಡೋ ಅಪ್ಲಿಕೇಶನ್‌ಗಳ ನಿಷೇಧ: ಸರ್ಕಾರಕ್ಕೆ 7 ದಿನಗಳ ಗಡುವು
ಓಲಾ, ಊಬರ್ ಸಂಸ್ಥೆಗಳಿ ಗ್ರಾಹಕರಿಗೆ ತಾರತಮ್ಯದ ಬೆಲೆ ನಿಗದಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಬಳಕೆದಾರರು ಐಫೋನ್ ಅಥವಾ ಆಂಡ್ರಾಯ್ಡ್ ಸಾಧನದ ಮೂಲಕ ಬುಕ್ ಮಾಡುತ್ತಿದ್ದಾರೆಯೇ ಎಂಬುದರ ಆಧಾರದ ಮೇಲೆ ಪ್ರಯಾಣ ದರಗಳು ಬದಲಾಗುತ್ತವೆ ಎಂದು ವರದಿಗಳು ಬಂದ ನಂತರ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಇತ್ತೀಚೆಗೆ ಎರಡೂ ಕಂಪನಿಗಳಿಗೆ ನೋಟಿಸ್ ನೀಡಿದೆ. ಇಂತಹ ಸಮಸ್ಯೆಗಳನ್ನು ಸರ್ಕಾರ ಈಗಾಗಲೇ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಪ್ರತಿಯಾಗಿ ಇದೀಗ ಸರ್ಕಾರವೇ ಇಂತಹ ಸೇವೆಯನ್ನು ಜಾರಿಗೊಳಿಸುತ್ತಿದೆ.
ಇನ್ನು ಈ ಬೆಲೆ ತಾರತಮ್ಯದ ಆರೋಪವನ್ನು ಓಲಾ, ಊಬರ್ ತಳ್ಳಿ ಹಾಕಿದೆ. ನಮ್ಮ ಎಲ್ಲಾ ಗ್ರಾಹಕರಿಗೆ ನಾವು ಏಕರೂಪದ ಬೆಲೆ ರಚನೆಯನ್ನು ಹೊಂದಿದ್ದೇವೆ ಮತ್ತು ಒಂದೇ ರೀತಿಯ ಸವಾರಿಗಳಿಗಾಗಿ ಬಳಕೆದಾರರ ಸೆಲ್‌ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿ ಬೆಲೆ ನಿರ್ಧರಿಸುವುದಿಲ್ಲ ಎಂದು ಓಲಾ ಸ್ಪಷ್ಟನೆ ನೀಡಿತ್ತು. ಮತ್ತೊಂದೆಡೆ ಊಬರ್‌ಕೂಡ ಆರೋಪಗಳನ್ನು ನಿರಾಕರಿಸಿದ್ದು,, ಬೆಲೆಯನ್ನು ಸವಾರನ ಫೋನ್ ಮಾದರಿಯಿಂದ ನಿರ್ಧರಿಸಲಾಗುವುದಿಲ್ಲ, ಇನ್ನು ಆಧಾರರಹಿತ ಆರೋಪ ಎಂದಿತ್ತು.