Anam Mirza: ಸಾನಿಯಾ ಮಿರ್ಜಾ ಸಹೋದರಿ ಅನಮ್ ಆಯೋಜಿಸಿದ್ದ ದಾವತ್-ಎ-ರಂಜಾನ್ ಎಕ್ಸ್ಪೋನಲ್ಲಿ ಗಲಾಟೆ; ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ
ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಅವರು ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ದಾವತ್-ಎ-ರಂಜಾನ್ ಪ್ರದರ್ಶನದಲ್ಲಿ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಪೊಲೀಸರು ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಗುಡಿಮಲ್ಕಾಪುರ ಪೊಲೀಸ್ ಠಾಣೆ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿ ಬಂದೂಕನ್ನು ವಶಪಡಿಸಿಕೊಂಡರು.


ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ (Anam Mirza) ಅವರು ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ದಾವತ್-ಎ-ರಂಜಾನ್ ಪ್ರದರ್ಶನದಲ್ಲಿ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಪೊಲೀಸರು ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕ್ಷುಲಕ ಕಾರಣಕ್ಕೆ ನಡೆದ ಜಗಳದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಶನಿವಾರ ಎರಡು ಅಂಗಡಿ ಮಾಲೀಕರ ನಡುವಿನ ಜಗಳದಲ್ಲಿ ಈ ಘಟನೆ ನಡೆದಿದ್ದು, ಮೂರನೇ ವ್ಯಕ್ತಿ ಹಸೀಬುದ್ದೀನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಗುಡಿಮಲ್ಕಾಪುರ ಪೊಲೀಸ್ ಠಾಣೆ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿ ಬಂದೂಕನ್ನು ವಶಪಡಿಸಿಕೊಂಡರು.
ಹೈದರಾಬಾದ್‌ನಲ್ಲಿ ನಡೆದ ದಾವತ್-ಎ-ರಮ್ಜಾನ್ ಪ್ರದರ್ಶನದಲ್ಲಿ ಸುಗಂಧ ದ್ರವ್ಯ ಅಂಗಡಿ ಮತ್ತು ಆಟಿಕೆ ಅಂಗಡಿಯ ಮಾಲೀಕರ ನಡುವೆ ನಡೆದ ಸಣ್ಣ ಜಗಳವೇ ಈ ಘಟನೆಗೆ ಕಾರಣವಾಗಿದೆ. ದಾವತ್-ಎ-ರಮ್ಜಾನ್ ಪ್ರದರ್ಶನದಲ್ಲಿ ಸುಗಂಧ ದ್ರವ್ಯದ ಅಂಗಡಿ ಮತ್ತು ಆಟಿಕೆ ಅಂಗಡಿ ಮಾಲೀಕರ ನಡುವೆ ಸಣ್ಣ ಜಗಳ ನಡೆಯಿತು, ಮತ್ತು ಅದು ರಾಜಿಯಾಯಿತು" ಎಂದು ಗುಡಿಮಲ್ಕಾಪುರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಜಗಳದ ಸಮಯದಲ್ಲಿ , ಹಸೀಬುದ್ದೀನ್ ತನ್ನ ಪರವಾನಗಿ ಪಡೆದ ಪಿಸ್ತೂಲಿನಿಂದ ಅನಗತ್ಯವಾಗಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದನು ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Sania Mirza: ದುಬೈನಲ್ಲಿ ಜತೆಯಾಗಿ ಕಾಣಿಸಿಕೊಂಡ ಶಮಿ-ಸಾನಿಯಾ ಮಿರ್ಜಾ!
ಆರೋಪಿಯನ್ನು ಹಸೀಬುದ್ದೀನ್ ಅಲಿಯಾಸ್ ಹೈದರ್ ಎಂದು ಗುರುತಿಸಲಾಗಿದೆ. ಮಾಜಿ ಸರಪಂಚ್ ಆಗಿದ್ದ ಆತ ಎಸಿ ಗಾರ್ಡ್ಸ್ ಪ್ಯಾರಾಮೌಂಟ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಕೃತ್ಯದ ಹಿಂದಿನ ಉದ್ದೇಶವನ್ನು ಹುಡುಕುತ್ತಿದ್ದಾರೆ. ಅನಮ್ ಮಿರ್ಜಾ ಆಯೋಜಿಸುವ ದಾವತ್-ಎ-ರಮ್ಜಾನ್ , ರಂಜಾನ್ ಸಮಯದಲ್ಲಿ ಹೈದರಾಬಾದ್‌ನಲ್ಲಿ ವಾರ್ಷಿಕವಾಗಿ ನಡೆಯುವ ಜನಪ್ರಿಯ ಪ್ರದರ್ಶನ ಮತ್ತು ಆಹಾರ ಮೇಳವಾಗಿದೆಹೈದರಾಬಾದ್‌ನಲ್ಲಿರುವ ಅವರ ಎಕ್ಸ್‌ಪೋ ಮತ್ತು ಜಿಲ್ಲಾ ಬಜಾರ್, 400 ಕ್ಕೂ ಹೆಚ್ಚು ಚಿಲ್ಲರೆ ಅಂಗಡಿಗಳು ಮತ್ತು 60 ಆಹಾರ ಬ್ರಾಂಡ್‌ಗಳನ್ನು ಹೊಂದಿದೆ, ಇದು ರಂಜಾನ್ ಸಮಯದಲ್ಲಿ 3,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ ಮತ್ತು 11 ದಿನಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಸಂದರ್ಶಕರನ್ನು ಆಕರ್ಷಿಸಿದೆ.