ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ ಆಫರ್‌ ತಿರಸ್ಕರಿಸಿದ ಇಂಗ್ಲೆಂಡ್‌ ಬ್ಯಾಟರ್‌

ಬೆನ್ ಡಕೆಟ್ ಈ ಹಿಂದೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಆಫರ್ ಸಿಕ್ಕರೂ ಅವರು ಇದನ್ನು ತಿರಸ್ಕರಿಸಿ ಫ್ರಾಂಚೈಸಿಗಳ ವಿರುದ್ಧ ಸೇಡು ತೀರಿಸಿಕೊಂಡಂತಿದೆ. ಡೆಲ್ಲಿ ಇದೀಗ ಬೇರೆ ಆಟಗಾರನ ಹುಡುಕಾಟ ನಡೆಸಬೇಕಿದೆ.

ಐಪಿಎಲ್‌ ಆಫರ್‌ ತಿರಸ್ಕರಿಸಿದ ಇಂಗ್ಲೆಂಡ್‌ ಬ್ಯಾಟರ್‌

Profile Abhilash BC Mar 30, 2025 1:37 PM

ನವದೆಹಲಿ: ಐಪಿಎಲ್‌(IPL 2025)ನಲ್ಲಿ ಅವಕಾಶ ಸಿಗಲು ಅದೆಷ್ಟೊ ಯುವ ಕ್ರಿಕೆಟಿಗರು ತುದಿಗಾಲಲ್ಲಿ ಕಾದು ಕುಳಿತಿರುತ್ತಾರೆ. ಆದರೆ ಇಂಗ್ಲೆಂಡ್‌ ತಂಡದ ಆರಂಭಿಕ ಆಟಗಾರ ಬೆನ್ ಡಕೆಟ್(Ben Duckett) ಐಪಿಎಲ್‌ ಆಡಲು ಕೋಟಿ ಮೊತ್ತದ ಆಫರ್‌ ನೀಡಿದರೂ ಇದನ್ನು ತಿರಸ್ಕರಿಸಿದ್ದಾರೆ. ಡೆಲ್ಲಿ ತಂಡದಿಂದ ಹೊರಗುಳಿದಿದ್ದ ಹ್ಯಾರಿ ಬ್ರೂಕ್‌ ಸ್ಥಾನಕ್ಕೆ ಬದಲಿ ಆಟಗಾರನಾಗಿ ಡೆಲ್ಲಿ ಫ್ರಾಂಚೈಸಿ(Delhi Capitals) ಬೆನ್ ಡಕೆಟ್ ಅವರನ್ನು ಸಂಪರ್ಕಿಸಿತ್ತು. ಆದರೆ ಅವರು ಈ ಆಫರ್ ತಿರಸ್ಕರಿಸಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಬಹಿರಂಗಪಡಿಸಿದ್ದಾರೆ.

ಬೆನ್ ಡಕೆಟ್ ಈ ಹಿಂದೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಆಫರ್ ಸಿಕ್ಕರೂ ಅವರು ಇದನ್ನು ತಿರಸ್ಕರಿಸಿ ಫ್ರಾಂಚೈಸಿಗಳ ವಿರುದ್ಧ ಸೇಡು ತೀರಿಸಿಕೊಂಡಂತಿದೆ. ಡೆಲ್ಲಿ ಇದೀಗ ಬೇರೆ ಆಟಗಾರನ ಹುಡುಕಾಟ ನಡೆಸಬೇಕಿದೆ.

ಇದನ್ನೂ ಓದಿ IPL 2025: ಇಂದು ಐಪಿಎಲ್‌ನಲ್ಲಿ ಡಬಲ್‌ ಹೆಡರ್‌ ಪಂದ್ಯ

ಪ್ರಸಕ್ತ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಇಂದು ತನ್ನ ದ್ವಿತೀಯ ಪಂದ್ಯವನ್ನಾಡಲಿದೆ. ಎದುರಾಳಿ ಸನ್‌ರೈಸರ್ಸ್‌ ಹೈದರಾಬಾದ್‌. ತಂದೆಯಾದ ಬಳಿಕ ಕೆ.ಎಲ್‌ ರಾಹುಲ್‌ ಡೆಲ್ಲಿ ಪರ ಆಡುತ್ತಿರುವ ಮೊದಲ ಪಂದ್ಯ ಇದಾಗಿರುವ ಕಾರಣ ಪಂದ್ಯ ಇನ್ನಷ್ಟು ಕುತೂಹಲವೆನಿಸಿದೆ.

ಇನಿಂಗ್ಸ್‌ ಆರಂಭಿಸಲು ಫಾಫ್ ಡು ಪ್ಲೆಸಿಸ್‌ ಮತ್ತು ಜೇಕ್‌ ‌ಫ್ರೇಸರ್‌ ಮೆಗರ್ಕ್‌ ಇರುವುದರಿಂದ ರಾಹುಲ್‌ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಲು ಡೆಲ್ಲಿ ಫ್ರಾಂಚೈಸಿ ನಿರ್ಧರಿಸಿದೆ. ಜತೆಗೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನೂ ವಹಿಸಲಿದೆ ಎಂದು ತಿಳಿದುಬಂದಿದೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ರಾಹುಲ್‌ ಮಧ್ಯಮ ಕ್ರಮಾಂಕದ ಜತೆಗೆ ಕೀಪಿಂಗ್‌ನಲ್ಲಿಯೂ ಮಿಂಚಿದ್ದರು.