ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್ಸ್! ಭಾರತೀಯರಿಗೆ ಸ್ಥಾನವಿಲ್ಲ
ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ಜುಲೈ 7 ರಂದು ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ವಿಯಾನ್ ಮುಲ್ಡರ್ ತಮ್ಮ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ತ್ರಿಶತಕ ಗಳಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಕೇವಲ 23 ರನ್ ಅಂತರದಲ್ಲಿ ಬ್ರಿಯಾನ್ ಲಾರಾ ದಾಖಲೆಯನ್ನು ಮುರಿಯುವ ಅವಕಾಶವನ್ನು ಕೈ ಬಿಟ್ಟ ಅವರು, ಹಲವು ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಐವರು ಬ್ಯಾಟ್ಸ್ಮನ್ಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.



ಬ್ರಿಯಾನ್ ಲಾರಾ (400*)
ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ 2004 ರಲ್ಲಿ ಆಂಟಿಗುವಾ ರಿಕ್ರಿಯೇಶನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ 400 ರನ್ಗಳನ್ನು ಬಾರಿಸಿದ್ದರು. ಇಲ್ಲಿಯ ತನಕ ಯಾವುದೇ ಬ್ಯಾಟ್ಸ್ಮನ್ ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆಯನ್ನು ಮಾಡಿಲ್ಲ.

ಮ್ಯಾಥ್ಯೂ ಹೇಡನ್ (380)
2003 ರಲ್ಲಿ ಪರ್ತ್ನ ಡಬ್ಲ್ಯುಎಸಿಎ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧ ಮ್ಯಾಥ್ಯೂ ಹೇಡನ್ 380 ರನ್ಗಳನ್ನು ಗಳಿಸಿದ್ದರು. ಬ್ರಿಯಾನ್ ಲಾರಾ ಅವರು 400ರನ್ ಗಳಿಸುವುದಕ್ಕೂ ಮುನ್ನ ಹೇಡನ್ ಸಾಧನೆಯನ್ನು ತಲುಪಲು ಕೇವಲ 20 ರನ್ ಅಂತರದಲ್ಲಿ ಕಳೆದುಕೊಂಡಿದ್ದರು.

ಬ್ರಿಯಾನ್ ಲಾರಾ (375)
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 350 ಕ್ಕಿಂತ ಹೆಚ್ಚು ರನ್ಗಳನ್ನು ಎರಡು ಬಾರಿ ಗಳಿಸಿದ ಏಕೈಕ ಆಟಗಾರ ಬ್ರಿಯಾನ್ ಲಾರಾ. 400 ರನ್ ಗಳಿಸುವ 10 ವರ್ಷಗಳಿಗೂ ಮುನ್ನ ಲಾರಾ, ಅದೇ ಸ್ಥಳದಲ್ಲಿ ಅದೇ ಎದುರಾಳಿ (ಇಂಗ್ಲೆಂಡ್) ವಿರುದ್ಧ 375 ರನ್ ಗಳಿಸಿದ್ದರು. ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಮಹೇಲ ಜಯವರ್ಧನೆ (374)
2026ರಲ್ಲಿ ಕೊಲಂಬೊದ ಎಸ್ಎಸ್ಸಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮಹೇಲಾ ಜಯವರ್ಧನೆ ದಕ್ಷಿಣ ಆಫ್ರಿಕಾ ವಿರುದ್ಧ 374 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ 624 ರನ್ಗಳ ವಿಶ್ವ ದಾಖಲೆಯ ಜೊತೆಯಾಟವನ್ನು ಆಡಿದ್ದರು. ಶ್ರೀಲಂಕಾ ಈ ಪಂದ್ಯವನ್ನು ಇನಿಂಗ್ಸ್ ಮತ್ತು 153 ರನ್ಗಳಿಂದ ಗೆದ್ದುಕೊಂಡಿತು.

ವಿಯಾನ್ ಮುಲ್ಡರ್ (367*)
2025ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ತವರಿನಿಂದ ಹೊರಗೆ ಟೆಸ್ಟ್ ಕ್ರಿಕೆಟ್ನಲ್ಲಿ 350 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ವಿಯಾನ್ ಮುಲ್ಡರ್. ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಮುಲ್ಡರ್ 400 ಕ್ಕೆ 33 ರನ್ಗಳ ಕಡಿಮೆ ಅಂತರದಲ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.