ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: 10 ವಿಕೆಟ್‌ ಕಿತ್ತು ವಿಶೇಷ ಸಂದೇಶ ಕಳುಹಿಸಿದ್ದ ಆಕಾಶ್‌ ದೀಪ್‌ಗೆ ಅಕ್ಕನ ಹೃದಯಸ್ಪರ್ಶಿ ಪ್ರತಿಕ್ರಿಯೆ!

ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 336 ರನ್‌ಗಳ ದೊಡ್ಡ ಅಂತರದಲ್ಲಿ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಮ್‌ ಇಂಡಿಯಾ 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿದೆ. ಈ ಪಂದ್ಯದಲ್ಲಿ 10 ವಿಕೆಟ್‌ ಸಾಧನೆ ಮಾಡಿದ ಆಕಾಶ್‌ ದೀಪ್‌, ತಮ್ಮ ಅಕ್ಕನನ್ನು ಸ್ಮರಿಸಿಕೊಂಡಿದ್ದರು ಹಾಗೂ ಅವರು ತಮ್ಮ 10 ವಿಕೆಟ್‌ಗಳ ಸಾಧನೆಯನ್ನು ಕ್ಯಾನ್ಸರ್‌ ಪೀಡಿತ ಅಕ್ಕನಿಗೆ ಸಮರ್ಪಿಸಿದ್ದರು. ಇದೀಗ ತಮ್ಮ ಆಕಾಶ್‌ ದೀಪ್‌ಗೆ ಅಕ್ಕ ಅಖಂಡ ಜ್ಯೋತಿ ಸಿಂಗ್‌ ಪ್ರತಿಕ್ರಿಯೆ ನೀಡಿದ್ದಾರೆ.

10 ವಿಕೆಟ್‌ ಕಿತ್ತ ಆಕಾಶ್‌ ದೀಪ್‌ಗೆ ಅಕ್ಕನ ಹೃದಯಸ್ಪರ್ಶಿ ಸಂದೇಶ!

ತಮ್ಮ ಆಕಾಶ ದೀಪ್‌ಗೆ ವಿಶೇಷ ಸಂದೇಶ ರವಾನಿಸಿದ ಅಕ್ಕ ಜ್ಯೋತಿ ಸಿಂಗ್‌.

Profile Ramesh Kote Jul 7, 2025 4:39 PM

ನವದೆಹಲಿ: ಇಂಗ್ಲೆಂಡ್‌ ವಿರುದ್ದ ಎಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯದಲ್ಲಿನ(IND vs ENG) ಸಹೋದರ ಆಕಾಶ್‌ ದೀಪ್‌ (Akash Deep) ಪ್ರದರ್ಶನದ ಬಗ್ಗೆ ಅಕ್ಕ ಅಖಂಡ ಜ್ಯೋತಿ ಸಿಂಗ್‌ ಅವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ 10 ವಿಕೆಟ್‌ಗಳ ಸಾಧನೆಯನ್ನು ಆಕಾಶ್‌ ದೀಪ್‌, ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಅಕ್ಕ ಅಖಂಡ ಜ್ಯೋತಿ ಸಿಂಗ್‌ಗೆ (Akhand Jyoti Singh) ಸಮರ್ಪಿಸಿದ್ದರು. ಇದೀಗ ಅವರು ತನ್ನ ತಮ್ಮನ ವಿಶೇಷ ಸಂದೇಶಕ್ಕೆ ಹೃದಯಸ್ಪರ್ಶಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ತನ್ನ ಆರೋಗ್ಯದ ಬಗ್ಗೆ ಚಿಂತಿಸದೆ, ರಾಷ್ಟ್ರೀಯ ತಂಡದ ಪರ ಆಡುವ ಕಡೆಗೆ ಹೆಚ್ಚಿನ ಗಮನ ನೀಡಿ ಎಂದು ಕರೆ ನೀಡಿದ್ದಾರೆ.

ಆಕಾಶ್‌ ದೀಪ್‌ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ ಜ್ಯೋತಿ, ಕಠಿಣ ಸನ್ನಿವೇಶದಲ್ಲಿ ಇಡೀ ಕುಟುಂಬ ಸಂತೋಷವಾಗಿದೆ. ಇದೀಗ ಜ್ಯೋತಿ ಅವರ ಕ್ಯಾನ್ಸರ್‌ ಮೂರನೇ ಹಂತದಲ್ಲಿದೆ. ಹಾಗಾಗಿ ತಾನು ಆರು ತಿಂಗಳ ಕಾಲ ಚಿಕಿತ್ಸೆ ಪಡೆಯಬೇಕಾದ ಅಗತ್ಯವಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ENG vs IND: ಮೂರನೇ ಪಂದ್ಯಕ್ಕೆ ಬುಮ್ರಾ ಲಭ್ಯ; ಖಚಿತಪಡಿಸಿದ ನಾಯಕ ಗಿಲ್‌

ಆಕಾಶ್‌ ದೀಪ್‌ ಬಗ್ಗೆ ಅಕ್ಕ ಜ್ಯೋತಿ ಸಿಂಗ್‌ ಹೇಳಿದ್ದಿದು

"10 ವಿಕೆಟ್‌ಗಳನ್ನು ಪಡೆಯುವ ಮೂಲಕ ಅವರು ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ನಾನು ಏರ್‌ಪೋರ್ಟ್‌ನಲ್ಲಿ ಭೇಟಿಯಾಗಿದ್ದೆವು. ಈ ವೇಳೆ ನಾನು, ʻನನ್ನ ಬಗ್ಗೆ ಚಿಂತಿಸಬೇಡಿ, ನಾನು ಚೆನ್ನಾಗಿದ್ದೇನೆ, ನೀವು ರಾಷ್ಟ್ರೀಯ ತಂಡದ ಪರ ಉತ್ತಮ ಪ್ರದರ್ಶನ ತೋರುವ ಕಡೆಗೆ ಗಮನ ನೀಡಿ,ʼ ಎಂದು ಹೇಳಿದ್ದೆ. ನಾನು ಕ್ಯಾನ್ಸರ್‌ನಿಂದ ಹೋರಾಟ ನಡೆಸುತ್ತಿದ್ದೇನೆ ಹಾಗೂ ಸದ್ಯ ಇದು ಮೂರನೇ ಹಂತದಲ್ಲಿದೆ. ಇದಕ್ಕೆ ಆರಕ್ಕಿಂತ ಹೆಚ್ಚಿನ ತಿಂಗಳುಗಳ ಕಾಲ ಚಿಕಿತ್ಸೆ ಪಡೆಯಬೇಕೆಂದು ವೈದ್ಯರು ನಮಗೆ ತಿಳಿಸಿದ್ದಾರೆ. ಆ ಮೇಲೆ ನೋಡಬೇಕು," ಎಂದು ಆಕಾಶ್‌ ದೀಪ್‌ ಅವರ ಅಕ್ಕ ಆಜ್‌ತಕ್‌ಗೆ ತಿಳಿಸಿದ್ದಾರೆ.



"ಆಕಾಶ ದೀಪ್‌ ವಿಕೆಟ್‌ಗಳನ್ನು ಪಡೆಯುತ್ತಿದ್ದಾಗ ನಮಗೆ ತುಂಬಾ ಸಂತೋಷವಾಗುತ್ತಿತ್ತು. ಆಕಾಶ್‌ ದೀಪ್‌ ವಿಕೆಟ್‌ಗಳನ್ನು ಪಡೆಯುತ್ತಿದ್ದಾಗಲೂ ನಾವು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸುತ್ತಿದ್ದೆವು. ಈ ವೇಳೆ ನಮ್ಮ ಕಾಲೋನಿಯವರು ನಿಮ್ಮ ಮನೆಯಲ್ಲಿ ಏನಾಗುತ್ತಿದೆ ಎಂದು ನಮನ್ನು ಕೇಳುತ್ತಿದ್ದರು," ಎಂದು ಅವರು ನಗುತ್ತಾ ಪ್ರತಿಕ್ರಿಯಿಸಿದ್ದಾರೆ.

ತನಗೆ ಕ್ಯಾನ್ಸರ್ ಇರುವುದು ಯಾರಿಗೂ ತಿಳಿದಿಲ್ಲ ಮತ್ತು ಆಕಾಶ್ ಈಗಾಗಲೇ ಅಂತಾರಾಷ್ಟ್ರೀಯ ಟಿವಿಯಲ್ಲಿ ಘೋಷಿಸಿದ್ದ ವಿಷಯ ತನಗೆ ತಿಳಿದಿರಲಿಲ್ಲ ಎಂದು ಜ್ಯೋತಿ ಬಹಿರಂಗಪಡಿಸಿದರು. ಪಂದ್ಯದ ನಂತರದ ಭಾವನಾತ್ಮಕ ಸಂದರ್ಶನದಲ್ಲಿ, ಆಕಾಶ್ ದೀಪ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ 10 ವಿಕೆಟ್ ಗೊಂಚಲನ್ನು ಅವರಿಗೆ (ಅಖಂಡ ಜ್ಯೋತಿ ಸಿಂಗ್‌) ಅರ್ಪಿಸಿದ್ದರು.



ನಾವು ಸಾರ್ವಜನಿಕವಾಗಿ ಮಾತನಾಡಲು ಸಿದ್ದರಿರಲಿಲ್ಲ

"ಆಕಾಶ್ ದೀಪ್‌ ಆ ರೀತಿ ಮಾತನಾಡುತ್ತಾರೆಂದು ನನಗೆ ತಿಳಿದಿರಲಿಲ್ಲ. ಬಹುಶಃ ನಾವು ಅದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಸಿದ್ಧರಿರಲಿಲ್ಲ. ಆದರೆ ಅವರು ಭಾವುಕರಾಗಿ 10 ವಿಕೆಟ್‌ಗಳ ಸಾಧನೆಯನ್ನು ನನಗಾಗಿ ಅರ್ಪಿಸಿದ್ದಾರೆ. ಇದು ಒಂದು ದೊಡ್ಡ ವಿಷಯ. ಅವರು ನಮ್ಮ ಕುಟುಂಬ ಮತ್ತು ನನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಮನೆಯಲ್ಲಿನ ಪರಿಸ್ಥಿತಿ ಕಠಿಣವಾಗಿದ್ದರೂ ಅವರು ಈ ರೀತಿಯ ಪ್ರದರ್ಶನ ತೋರುತ್ತಿರುವುದು ನಿಜಕ್ಕೂ ಒಂದು ದೊಡ್ಡ ವಿಷಯ. ನಾನು ಅವರಿಗೆ ತುಂಬಾ ಆತ್ಮೀಯ ವ್ಯಕ್ತಿ, ” ಎಂದು ಅವರು ಹೇಳಿದ್ದಾರೆ.