ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narednra Modi : ಲೆಕ್ಸ್ ಫ್ರಿಡ್‌ಮನ್ ಜೊತೆ ಪ್ರಧಾನಿ ಮೋದಿಯ ವಿಶೇಷ ಪಾಡ್‌ಕ್ಯಾಸ್ಟ್ ಇಂದು ಪ್ರಸಾರ

ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಅಮೆರಿಕದ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರ ಬಹುನಿರೀಕ್ಷಿತ ಪಾಡ್‌ಕ್ಯಾಸ್ಟ್ ಭಾನುವಾರ ಬಿಡುಗಡೆಯಾಗಲಿದೆ. ಎಕ್ಸ್​ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡ ಲೆಕ್ಸ್ ಫ್ರಿಡ್‌ಮನ್, 3 ಗಂಟೆಗಳ ಚರ್ಚೆಯನ್ನು ತಮ್ಮ ಜೀವನದ ಅತ್ಯಂತ ಉತ್ತಮ ಅನುಭವಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ.

ಲೆಕ್ಸ್ ಫ್ರಿಡ್‌ಮನ್ ಜೊತೆ ಪ್ರಧಾನಿ ಮೋದಿಯ ಪಾಡ್‌ಕ್ಯಾಸ್ಟ್ ಇಂದು ಪ್ರಸಾರ

ನರೇಂದ್ರ ಮೋದಿ ಜೊತೆ ಲೆಕ್ಸ್ ಫ್ರಿಡ್‌ಮನ್

Profile Vishakha Bhat Mar 16, 2025 9:23 AM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ (Narednra Modi) ಅಮೆರಿಕದ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ (Lex Fridman) ಅವರ ಬಹುನಿರೀಕ್ಷಿತ ಪಾಡ್‌ಕ್ಯಾಸ್ಟ್ ಭಾನುವಾರ (ಮಾರ್ಚ್ 16) ಬಿಡುಗಡೆಯಾಗಲಿದೆ. ಎಕ್ಸ್​ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡ ಲೆಕ್ಸ್ ಫ್ರಿಡ್‌ಮನ್, 3 ಗಂಟೆಗಳ ಚರ್ಚೆಯನ್ನು ತಮ್ಮ ಜೀವನದ ಅತ್ಯಂತ ಉತ್ತಮ ಅನುಭವಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಬಾಲ್ಯದ ನೆನಪುಗಳು, ಹಿಮಾಲಯದಲ್ಲಿನ ಅವರ ವರ್ಷಗಳು ಮತ್ತು ಸಾರ್ವಜನಿಕ ಜೀವನದಲ್ಲಿ ಅವರ ಪ್ರಯಾಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಚರ್ಚೆ ನಡೆಸಿದ್ದಾರೆ.

ಲೆಕ್ಸ್ ಫ್ರಿಡ್‌ಮನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾನು 3 ಗಂಟೆಗಳ ಪಾಡ್‌ಕ್ಯಾಸ್ಟ್ ಸಂಭಾಷಣೆ ನಡೆಸಿದೆ. ಇದು ನನ್ನ ಜೀವನದ ಅತ್ಯುತ್ತಮ ಸಂಭಾಷಣೆಗಳಲ್ಲಿ ಒಂದಾಗಿದೆ. ಇದು ನಾಳೆ ಪ್ರಸಾರವಾಗಲಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ರಷ್ಯನ್ ಮೂಲದ ಅಮೆರಿಕನ್ ಕಂಪ್ಯೂಟರ್ ವಿಜ್ಞಾನಿ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧಕರಾದ ಲೆಕ್ಸ್ ಫ್ರಿಡ್‌ಮನ್, ಕೇಂಬ್ರಿಡ್ಜ್‌ನಲ್ಲಿರುವ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೂಡ ಕೆಲಸ ನಿರ್ವಹಿಸಿದ್ದರು. ಪಾಡ್‌ಕ್ಯಾಸ್ಟರ್ ಫ್ರಿಡ್‌ಮನ್ ಪ್ರಧಾನಿ ಮೋದಿಯವರನ್ನು ಸಂದರ್ಶಿಸಲು ಕಳೆದ ತಿಂಗಳು ಭಾರತಕ್ಕೆ ಬಂದಿದ್ದರು. ತಮ್ಮ ಭೇಟಿಗೂ ಮುನ್ನ ಭಾರತದ ಇತಿಹಾಸ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಧಾನಿ ಮೋದಿಯವರೊಂದಿಗೆ ಗಂಟೆಗಟ್ಟಲೆ ಸಂವಹನ ನಡೆಸುವ ತಮ್ಮ ಸಂತೋಷ ಮತ್ತು ಉತ್ಸಾಹವನ್ನು ಫ್ರಿಡ್‌ಮನ್ ವ್ಯಕ್ತಪಡಿಸಿದ್ದರು.



ಈ ಸುದ್ದಿಯನ್ನೂ ಓದಿ: Narendra Modi : ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್‌ನಿಂದ ಪ್ರತೀ ತಿಂಗಳು ಗಳಿಸುವ ಆದಾಯವೆಷ್ಟು? ಕೇಳಿದ್ರೆ ಶಾಕ್‌ ಆಗ್ತೀರಾ!

2018 ರಲ್ಲಿ, ಅವರು ಲೆಕ್ಸ್ ಫ್ರಿಡ್‌ಮನ್ ಪಾಡ್‌ಕ್ಯಾಸ್ಟ್ (ಮೂಲತಃ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪಾಡ್‌ಕ್ಯಾಸ್ಟ್ ಎಂದು ಹೆಸರಿಸಲಾಯಿತು) ಅನ್ನು ಪ್ರಾರಂಭಿಸಿದರು. ಕಡಿಮೆ ಸಮಯದಲ್ಲಿ ಈ ಪಾಡ್‌ಕ್ಯಾಸ್ಟ್ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿತು. ಅವರ ಪಾಡ್‌ಕ್ಯಾಸ್ಟ್ AI ರೊಬೊಟಿಕ್ಸ್, ನರವಿಜ್ಞಾನ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರೊಂದಿನ ಸಂಭಾಷಣೆಗಳನ್ನು ಕಾಣಬಹುದಾಗಿದೆ. ಫ್ರಿಡ್‌ಮನ್ ಯೂಟ್ಯೂಬ್‌ನಲ್ಲಿ 4.5 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರು, ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್ ಫಾಲವರ್ಸ್‌ ಮತ್ತು ಟ್ವಿಟರ್‌ನಲ್ಲಿ 4.2 ಮಿಲಿಯನ್ ಫಾಲವರ್ಸ್‌ವನ್ನು ಹೊಂದಿದ್ದಾರೆ.