ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kunal Kamra: ಕುನಾಲ್‌ ಹೇಳಿಕೆಗೆ ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿ ಬೆಂಬಲ; ಶಿಂಧೆ ವಿರುದ್ಧ ಹಲವರ ಟೀಕೆ

ಸ್ಟಾಂಡ್‌ ಅಪ್‌ ಕಾಮಿಡಿಯನ್‌ ಕುನಾಲ್ ಕಮ್ರಾ ಹೇಳಿದ ಒಂದು ಹೇಳಿಕೆ ಇದೀಗ ದೇಶದಾದ್ಯಂತ ಸುದ್ದಿಯಾಗಿದೆ. ಕುನಾಲ್‌ ಹೇಳಿಕೆಯನ್ನು ವಿರೋಧಿಸಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಕುನಾಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಪಂಚದ ವಿವಿಧ ಮೂಲೆಗಳಿಂದ ಲಕ್ಷಾಂತರ ಬೆಂಬಲಿಗರು ಯೂಟ್ಯೂಬ್‌ನಲ್ಲಿ ಸೂಪರ್ ಥ್ಯಾಂಕ್ಸ್ ಬಳಸಿಕೊಂಡು ದೇಣಿಗೆ ನೀಡಿದ್ದಾರೆ.

ಕುನಾಲ್‌ ಹೇಳಿಕೆಗೆ ಸೋಶಿಯಲ್‌ ಮೀಡಿಯಾದಲ್ಲಿ ಬೆಂಬಲ!

Profile Vishakha Bhat Mar 25, 2025 12:25 PM

ಮುಂಬೈ: ಸ್ಟಾಂಡ್‌ ಅಪ್‌ ಕಾಮಿಡಿಯನ್‌ ಕುನಾಲ್ ಕಮ್ರಾ (Kunal Kamra) ಹೇಳಿದ ಒಂದು ಹೇಳಿಕೆ ಇದೀಗ ದೇಶದಾದ್ಯಂತ ಸುದ್ದಿಯಾಗಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ( Eknath Shinde) ಅವರನ್ನು (ಗದ್ದಾರ್) ದೇಶದ್ರೋಹಿ ಎಂದು ಹೇಳಿದ್ದರು. ಏಕನಾಥ್ ಶಿಂಧೆ ಅವರು ರಾಜಕೀಯ ಪಕ್ಷ ಬದಲಾಯಿಸಿದ್ದಕ್ಕಾಗಿ ಪರೋಕ್ಷ ಟೀಕೆ ಮಾಡಿ ಗದ್ದಾರ್ ಎಂದು ಕರೆದಿದ್ದರು. 1997 ರ ಚಲನಚಿತ್ರ ದಿಲ್ ತೋ ಪಾಗಲ್ ಹೈ ನ ಹಿಂದಿ ಹಾಡಿನ ಮಾರ್ಪಡಿಸಿದ ಆವೃತ್ತಿಯನ್ನು ಕಮ್ರಾ ಏಕ್ ನಾಥ್ ಶಿಂಧೆ ಅವರನ್ನು ಟೀಕಿಸಲು ಬಳಸಿದ್ದಾರೆ. 2022 ರಲ್ಲಿ ಶಿಂಧೆ ತನ್ನ ಮಾಜಿ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಬಿಜೆಪಿಯ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಕುನಾಲ್‌ ಹೇಳಿಕೆಯನ್ನು ವಿರೋಧಿಸಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಕುನಾಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಏಕನಾಥ್‌ ಶಿಂಧೆ ಅವರ ಬೆಂಬಲಿಗರು ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೋಗೆ ನುಗ್ಗಿ ದಾಂಧಲೆ ಸೃಷ್ಟಿಸಿದ್ದರು. ಅಷ್ಟೇ ಅಲ್ಲದೆ ಕುನಾಲ್‌ ಕಮ್ರಾಗೆ ಬೆದರಿಕೆಯನ್ನು ಹಾಕಿದ್ದರು. ಕಮ್ರಾ ಸಾರ್ವಜನಿಕವಾಗಿ ಶಿಂಧೆ ಅವರ ಬಳಿ ಕ್ಷಮೆ ಕೇಳಬೇಕು ಎಂದು ಶಿವಸೇನೆಯ ನಾಯಕರು ಒತ್ತಾಯ ಪಡಿಸಿದ್ದಾರೆ. ಸದ್ಯ ಕಮ್ರಾ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಸಾರ್ವಜನಿಕವಾಗಿ ಎಲ್ಲಿಯಾದರೂ ಕಾಣಿಸಿಕೊಂಡರೆ, ನಾವು ಅವರ ಮುಖಕ್ಕೆ ಕಪ್ಪು ಬಣ್ಣ ಬಳಿಯುತ್ತೇವೆ ಎಂದು ಅವರು ಹೇಳಿದ್ದಾರೆ.

ವಾಕ್ ಸ್ವಾತಂತ್ರ್ಯ

ವಿವಾದಗಳ ನಡುವೆ ಕುನಾಲ್‌ ಕಮ್ರಾ, ಶಿವಸೇನಾ ನಾಯಕ ಸಂಜಯ್‌ ರಾವತ್‌ ಅವರು ಸಂಸದೆ ಹಾಗೂ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರ ಮನೆಯನ್ನು ಕೆಡವಿದ್ದರ ಬಗ್ಗೆ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿ ತಿರುಗೇಟು ನೀಡಿದ್ದಾರೆ. ವಿಡಿಯೋದಲ್ಲಿ ಸಂಜಯ್‌ ರಾವತ್‌ ಕಂಗನಾ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ನನಗೆ ತುಂಬಾ ಖುಷಿಯಾಯಿತು, ಕಂಗನಾ ಮನೆ ಕೆಡುವಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದ್ದರು. 2020 ರಲ್ಲಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಶಿವಸೇನೆಯೊಂದಿಗಿನ ಹೋರಾಟದ ನಡುವೆ ನಟಿ ಕಂಗನಾ ರನೌತ್ ಅವರ ಮುಂಬೈ ಮನೆಯನ್ನು ಕೆಡವಿದ್ದ ಹಳೆ ವಿಡಿಯೋವದು. ಈ ಪೋಸ್ಟ್‌ಗೆ ಹಲವು ಟೀಕೆಗಳು ವ್ಯಕ್ತವಾದರೆ, ಇನ್ನೂ ಹಲವರು ಕಮ್ರಾ ಪರ ಮಾತನಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Eknath Shinde: ಸುಪಾರಿ ತೆಗೆದುಕೊಂಡು ಟೀಕಿಸಿದಂತೆ ಕಾಣುತ್ತಿದೆ- ಕುನಾಲ್‌ ಕಾಮ್ರಾ ಬಗ್ಗೆ ಏಕನಾಥ್‌ ಶಿಂಧೆ ಫಸ್ಟ್‌ ರಿಯಾಕ್ಷನ್‌

YouTube ದೇಣಿಗೆಗಳು!

ಕಾಮ್ರಾ ಅವರ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರಪಂಚದ ವಿವಿಧ ಮೂಲೆಗಳಿಂದ ಲಕ್ಷಾಂತರ ಬೆಂಬಲಿಗರು ಯೂಟ್ಯೂಬ್‌ನಲ್ಲಿ ಸೂಪರ್ ಥ್ಯಾಂಕ್ಸ್ ಬಳಸಿಕೊಂಡು ದೇಣಿಗೆ ನೀಡಿದ್ದಾರೆ. ಕುನಾಲ್, ಧೈರ್ಯದಿಂದ ಮಾತನಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ನಮ್ಮ ದೇಶದಲ್ಲಿ ವಾಕ್‌ ಸಾತ್ರಂತ್ಯವಿದೆ, ನೀವು ಸರಿಯಾಗಿ ಮಾತನಾಡಿದ್ದೀರಿ ಎಂದು ಹಲವರು ಹೇಳಿದ್ದಾರೆ.