ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honey Trap Case: ಹೀನ ಕೃತ್ಯ ಮಾಡುವವರು ರಾಜಕೀಯದಲ್ಲಿ ಇರಬಾರದು: ಸಚಿವ ಕೆ.ಎನ್‌. ರಾಜಣ್ಣ

Honey Trap Case: ಹನಿ ಟ್ರ್ಯಾಪ್ ಪ್ರಕರಣದ ಬಗ್ಗೆ ತನಿಖೆ ಆಗುತ್ತಿದೆ. ಯಾವ ಸಂಸ್ಥೆಯಿಂದ ತನಿಖೆ ಮಾಡ್ತಾರೋ ಮಾಡಲಿ. ಎಸ್.ಐ.ಟಿಯಿಂದ ಮಾಡ್ತಾರೋ, ಮತ್ತೊಂದು ಮಾಡ್ತಾರೋ‌ ಮಾಡಲಿ. ಅದು ಗೃಹ ಮಂತ್ರಿಗಳಿಗೆ, ಸಿಎಂಗೆ ಬಿಟ್ಟ ವಿಚಾರ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

ಹೀನ ಕೃತ್ಯ ಮಾಡುವವರು ರಾಜಕೀಯದಲ್ಲಿ ಇರಬಾರದು: ಸಚಿವ ಕೆ.ಎನ್‌. ರಾಜಣ್ಣ

Profile Prabhakara R Apr 1, 2025 3:46 PM

ತುಮಕೂರು: ಹನಿ ಟ್ರ್ಯಾಪ್‌ನಂತಹ (Honey Trap Case) ಹೀನ ಕೃತ್ಯ ಮಾಡುವವರು ರಾಜಕೀಯದಲ್ಲಿ ಇರಬಾರದು. ಆರೋಪಿಗಳು ಪ್ರಭಾವಿ ಇದ್ದಾರೋ ಇಲ್ಲವೋ, ಇಂತಹ ಕಾನೂನು ಬಾಹಿರ ಕ್ರಮಕ್ಕೆ ಯಾರ ಕುಮ್ಮಕ್ಕಿರಲಿ, ಪ್ರಯತ್ನವಿರಲಿ, ಅವರಿಗೆ ದೇವರು ಒಳ್ಳೆದು ಮಾಡಲ್ಲ. ಜತೆಗೆ ಅವರು ಸಾರ್ವಜನಿಕ ಜೀವನದಲ್ಲಿ ಇರಬಾರದು. ನಮ್ಮ ಪಕ್ಷದವರೋ ಇನ್ನೊಂದು ಪಕ್ಷದವರೋ ಯಾರೇ ಆದರೂ ಈ ರೀತಿಯ ಹೀನ ಕೃತ್ಯಗಳಿಗೆ ಪ್ರಯತ್ನ ಮಾಡಿರೋದು ಖಂಡನಾರ್ಹ ಎಂದು ಸಚಿವ ಕೆ.ಎನ್‌. ರಾಜಣ್ಣ (KN Rajanna) ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಅವರು ಮಂಗಳವಾರ ಮಾತನಾಡಿದ್ದಾರೆ. ಇನ್ನು ಹನಿ ಟ್ರ್ಯಾಪ್ ಪ್ರಕರಣದ ಬಗ್ಗೆ ತನಿಖೆ ಆಗುತ್ತಿದೆ. ಯಾವ ಸಂಸ್ಥೆಯಿಂದ ತನಿಖೆ ಮಾಡ್ತಾರೋ ಮಾಡಲಿ. ಎಸ್.ಐ.ಟಿಯಿಂದ ಮಾಡ್ತಾರೋ, ಮತ್ತೊಂದು ಮಾಡ್ತಾರೋ‌ ಮಾಡಲಿ. ಅದು ಗೃಹ ಮಂತ್ರಿಗಳಿಗೆ, ಸಿಎಂಗೆ ಬಿಟ್ಟ ವಿಚಾರ. ನೋಟಿಸ್‌ ಕೊಟ್ಟರೆ ಉತ್ತರಿಸುತ್ತೇನೆ ಎಂದರು.

ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿರುವ ವಿಚಾರದ ಬಗ್ಗೆ ಚರ್ಚಿಸಿರುವ ಆಡಿಯೋ ವೈರಲ್‌ ಆಗಿದ್ದು, ಈಗ ತನಿಖೆ ನಡೆಯುತ್ತಿದೆ ಎಂದರು.

ಈ ಸುದ್ದಿಯನ್ನೂ ಓದಿ | Murder Case: ಯುಗಾದಿಯ ಎಣ್ಣೆಪಾರ್ಟಿಯಲ್ಲಿ ಕುಖ್ಯಾತ ರೌಡಿಶೀಟರ್ ಕೊಚ್ಚಿ ಕೊಲೆ​​

ರಾಜೇಂದ್ರ ಕೊಲೆ ಯತ್ನ ಪ್ರಕರಣ; ಆರೋಪಿ ಗುಂಡನ ಪ್ರೇಯಸಿ ಪೊಲೀಸರ ವಶಕ್ಕೆ

ಬೆಂಗಳೂರು: ಸಚಿವ ಕೆ.ಎನ್. ರಾಜಣ್ಣ ಹನಿಟ್ರಾಪ್ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿದ ಬೆನ್ನಲ್ಲೇ ಅವರ ಪುತ್ರ ರಾಜೇಂದ್ರ ಕೊಲೆ ಯತ್ನ ಕೇಸ್‌ (Murder Conspiracy) ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿ ಗುಂಡನ ಲವರ್ ಯಶೋಧಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜೇಂದ್ರ ಅವರ ಕೊಲೆ ಸುಪಾರಿಗೆ ಸಂಬಂಧಿಸಿದಂತೆ ಆಡಿಯೊವೊಂದು ವೈರಲ್‌ ಆಗಿತ್ತು. ಇದಕ್ಕೂ ಮೊದಲು ಇದೇ ಆಡಿಯೊ ಆಧರಿಸಿ ರಾಜೇಂದ್ರ ಅವರು ತುಮಕೂರು ಎಸ್‌ಪಿಯವರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು ಪುಷ್ಪಾ ಸೇರಿ ಮೂವರನ್ನು ಬಂಧಿಸಿದ್ದರು. ಇದೀಗ ಗುಂಡನ ಲವರ್ ಯಶೋಧಾಳನ್ನು ಖಾಕಿ ವಶಕ್ಕೆ ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ | ವೆಬ್ ಸೀರಿಸ್ ನೋಡಿ ಬ್ಯಾಂಕ್‌ ದರೋಡೆ; 6 ಮಂದಿ ಬಂಧನ, 13 ಕೋಟಿ ಮೌಲ್ಯದ ಚಿನ್ನಾಭರಣ ವಶ

ಡಾ.ಜಿ.ಪರಮೇಶ್ವರ್ ಹೇಳಿದ್ದೇನು?

ಸಚಿವ ಕೆ.ಎನ್. ರಾಜಣ್ಣ ಹನಿ ಟ್ರ್ಯಾಪ್‌ ಹಾಗೂ ಅವರ ಪುತ್ರ ಎಂಎಲ್‌ಸಿ ರಾಜೇಂದ್ರ ಅವರ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವ‌ರ್ ಅವರು ಪ್ರತಿಕ್ರಿಯೆ ನೀಡಿದ್ದು ತನಿಖೆ ವೇಳೆ ಯಾವುದೇ ವಿಷಯವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನಿಖೆ ವೇಳೆ ಯಾವುದೇ ವಿಚಾರ ಬಹಿರಂಗ ಪಡಿಸುವುದಿಲ್ಲ. ರಾಜೇಂದ್ರ ಅವರ ಹತ್ಯೆ ಯತ್ನ ಕುರಿತ ಆಡಿಯೊ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯ ವರದಿ ಬಂದ ಬಳಿಕವಷ್ಟೇ ಮಾಹಿತಿ ನೀಡುತ್ತೇನೆ. ಹನಿ ಟ್ರ್ಯಾಪ್ ಮತ್ತು ಹತ್ಯೆಗೆ ಸುಪಾರಿ ನೀಡಿದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.