ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Firecracker factory blast: ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; 17 ಕಾರ್ಮಿಕರು ಬಲಿ

ಪಟಾಕಿ ಕಾರ್ಖಾನೆಯೊಂದರಲ್ಲಿ ಭಾರೀ ಸ್ಫೋಟ(Firecracker factory blast) ಸಂಭವಿಸಿ 17 ಕಾರ್ಮಿಕರು ಬಲಿಯಾಗಿರುವ ಘಟನೆ ಗುಜರಾಜ್‌ನಲ್ಲಿ ನಡೆದಿದೆ. ದೀಪಕ್ ಟ್ರೇಡರ್ಸ್‌ ಎಂಬ ಪಟಾಕಿ ಕಾರ್ಖಾನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಕಾರ್ಖಾನೆಯ ಸ್ಲ್ಯಾಬ್ ಕುಸಿದು ಬಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಜಿಲ್ಲಾಧಿಕಾರಿ ಮಿಹಿರ್ ಪಟೇಲ್ ತಿಳಿಸಿದ್ದಾರೆ.

ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; 17 ಕಾರ್ಮಿಕರು ಬಲಿ

Profile Rakshita Karkera Apr 1, 2025 3:43 PM

ಅಹ್ಮದಾಬಾದ್‌: ಗುಜರಾತ್‌ನ ದೀಸಾದಲ್ಲಿರುವ ಪಟಾಕಿ ಕಾರ್ಖಾನೆ ಮತ್ತು ಗೋದಾಮಿನಲ್ಲಿ ಮಂಗಳವಾರ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 17 ಕಾರ್ಮಿಕರು ಸಾವನ್ನಪ್ಪಿದ್ದಾರೆ, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀಪಕ್ ಟ್ರೇಡರ್ಸ್‌ ಎಂಬ ಪಟಾಕಿ ಕಾರ್ಖಾನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಕಾರ್ಖಾನೆಯ ಸ್ಲ್ಯಾಬ್ ಕುಸಿದು ಬಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಜಿಲ್ಲಾಧಿಕಾರಿ ಮಿಹಿರ್ ಪಟೇಲ್ ತಿಳಿಸಿದ್ದಾರೆ. 108 ಆಂಬ್ಯುಲೆನ್ಸ್ ತಂಡಗಳೊಂದಿಗೆ ದೀಸಾ ಪುರಸಭೆಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಆರಂಭದಲ್ಲಿ ಆರು ಸಾವುಗಳನ್ನು ವರದಿಯಾಗಿತ್ತು. ಆದರೆ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಅವಶೇಷಗಳನ್ನು ಹುಡುಕುತ್ತಿದ್ದಂತೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಬೆಂಕಿ ಬಾಯ್ಲರ್ ಸ್ಫೋಟದಿಂದ ಉಂಟಾಗಿದೆ. ಸ್ಫೋಟ ಮತ್ತು ಪರಿಣಾಮವಾಗಿ ಉಂಟಾದ ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಕಟ್ಟಡದ ಕೆಲವು ಭಾಗಗಳು ಕುಸಿದವು.

ಈ ಸುದ್ದಿಯನ್ನೂ ಓದಿ: Tamil Nadu: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಕಾರ್ಮಿಕರ ದುರ್ಮರಣ



ಕೆಲವು ತಿಂಗಳ ಹಿಂದೆಯಷ್ಟೇ ಇಂತಹದ್ದೇ ಒಂದು ಘಟನೆ ತಮಿಳುನಾಡಿನಲ್ಲಿ ನಡೆದಿತ್ತು. ವಿರುದ್ವುನಗರದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ, ಸ್ಥಳದಲ್ಲೇ ಆರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಅಲ್ಲದೇ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಪಟಾಕಿ ತಯಾರಿಸುವ ವೇಳೆ ರಾಸಾಯನಿಕ ಮಿಶ್ರಣದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿತ್ತು. ವಿರುದ್ವುನಗರದಲ್ಲಿ 1,150 ಪಟಾಕಿ ತಯಾರಿಕೆ ಕಾರ್ಖಾನೆಗಳಿದ್ದು, 4 ಲಕ್ಷ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಶಿವಕಾಶಿವೊಂದರಲ್ಲೇ ದೇಶದ ಶೇ.70ರಷ್ಟು ಪಟಾಕಿ ಉತ್ಪಾದನೆಯಾಗುತ್ತದೆ ಎಂದು ವರದಿ ಮೂಲಕ ತಿಳಿದು ಬಂದಿದೆ. ಸ್ಫೋಟಗೊಂಡ ಸ್ಥಳದಿಂದ ಸುಮಾರು 500 ಮೀಟರ್‌ ನಿಂದ ಒಂದು ಕಿಮೀ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಮುನ್ನೆಚ್ಚರಿಕೆಯಾಗಿ ಒಂದು ದಿನದ ಮಟ್ಟಿಗೆ ಮುಚ್ಚಲು ತಿಳಿಸಲಾಗಿದೆ.