ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs GT: ಮಳೆ ಬಂದರೂ ಪಂದ್ಯ ನಡೆಯುತ್ತೆ; ಏನಿದು ಸಬ್​ಏರ್​ ಸಿಸ್ಟಮ್​?

ದಶಕದ ಹಿಂದೆ ಇಲ್ಲಿ ಅಳವಡಿಸಲಾಗಿರುವ ಸಬ್‌ ಏರ್ ಸಿಸ್ಟಂ ತಂತ್ರಜ್ಞಾನದಿಂದ ಮಳೆ ನೀರನ್ನು ಶೀಘ್ರವಾಗಿ ಹೊರಹಾಕಬಹುದು. ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸಬಹುದು. ಆದ್ದರಿಂದ ಮಳೆಯಿಂದಾಗಿ ಪಂದ್ಯ ರದ್ದಾಗುವುದು ತೀರಾ ವಿರಳ. ಒಂದೊಮ್ಮೆ ಮಳೆ ಎಡೆಬಿಡದೆ ಸುರಿದರೆ ಆಗ ಪಂದ್ಯ ರದ್ದಾಗಲಿದೆ.

ಮಳೆ ಬಂದರೂ ಪಂದ್ಯ ನಡೆಯುತ್ತೆ; ಏನಿದು ಸಬ್​ಏರ್​ ಸಿಸ್ಟಮ್​?

Profile Abhilash BC Apr 1, 2025 3:23 PM

ಬೆಂಗಳೂರು: ಯಾವುದೇ ಕ್ರಿಕೆಟ್ ಪಂದ್ಯ ನಡೆಯುವ ಮುನ್ನಾದಿನ ಅಭಿಮಾನಿಗಳ ವಲಯದಲ್ಲಿ ಸೋಲು, ಗೆಲುವುಗಳ ಲೆಕ್ಕಾಚಾರ ನಡೆಯುತ್ತದೆ. ಆದರೆ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣ(M.Chinnaswamy Stadium)ದಲ್ಲಿ ನಡೆಯಲಿರುವ ಆರ್‌ಸಿಬಿ(RCB vs GT) ಮತ್ತು ಗುಜರಾತ್‌ ಪಂದ್ಯದ ಸನ್ನಿವೇಶ ವಿಭಿನ್ನವಾಗಿದೆ. ಈ ಪಂದ್ಯ ಸುಸೂತ್ರವಾಗಿ ನಡೆಯಲು ಮಳೆಯು( Rain threat RCB-GT clash) ಅವಕಾಶ ಕೊಡುವುದೇ ಎಂಬ ಮಾತುಕತೆಗಳು ಜೋರಾಗಿವೆ.

ಮಂಗಳವಾರ ಬೆಳಗಿನ ಜಾವದಿಂದಲೇ ಉದ್ಯಾನನಗರಿಯಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಮುಂದಿನ ಎರಡು, ಮೂರು ದಿವಸ ಮಳೆ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬುಧವಾರ ಬೆಂಗಳೂರಿನಲ್ಲಿ ಶೇ.30ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಅದರಿಂದಾಗಿ ಪಂದ್ಯಕ್ಕೆ ಮಳೆ ಭೀತಿ ತಪ್ಪಿದ್ದಲ್ಲ.

ಇದನ್ನೂ ಓದಿ RCB vs GT: ನಾಳೆ ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ; ಈ ಮಾರ್ಗದ ಸಂಚಾರ ನಿಷೇಧ

ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಜೋರಾಗಿ ಮಳೆ ಬಂದರೂ 15 ರಿಂದ 20 ನಿಮಿಷದೊಳಗೆ ಮತ್ತೆ ಪಂದ್ಯ ಮುಂದುವರಿಯಲು ಅವಕಾಶ ಮಾಡಿಕೊಡುವ ಸೌಲಭ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ಹೀಗಾಗಿ ಅಭಿಮಾನಿಗಳು ಮಳೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.



ದಶಕದ ಹಿಂದೆ ಇಲ್ಲಿ ಅಳವಡಿಸಲಾಗಿರುವ ಸಬ್‌ ಏರ್ ಸಿಸ್ಟಂ ತಂತ್ರಜ್ಞಾನದಿಂದ ಮಳೆ ನೀರನ್ನು ಶೀಘ್ರವಾಗಿ ಹೊರಹಾಕಬಹುದು. ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸಬಹುದು. ಆದ್ದರಿಂದ ಮಳೆಯಿಂದಾಗಿ ಪಂದ್ಯ ರದ್ದಾಗುವುದು ತೀರಾ ವಿರಳ. ಒಂದೊಮ್ಮೆ ಮಳೆ ಎಡೆಬಿಡದೆ ಸುರಿದರೆ ಆಗ ಪಂದ್ಯ ರದ್ದಾಗಲಿದೆ.