Dirty Magazine’s Event: ಡರ್ಟಿ ಮ್ಯಾಗಜೀನ್ ಇವೆಂಟ್ ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಬಾಲಿವುಡ್ ಸೆಲೆಬ್ರಿಟಿಗಳು!
ಮುಂಬೈನ ಸೋಹೋ ಹೌಸ್ನಲ್ಲಿ 'ಡರ್ಟಿ ಮ್ಯಾಗಜೀನ್’ ಆಯೋಜಿಸಿದ್ದ ‘ಡರ್ಟಿ ನೈಟ್’ ಆಫ್ಟರ್ ಪಾರ್ಟಿಗೆ ಬಾಲಿವುಡ್ ನಟರು ಮತ್ತು ರಿಯಾಲಿಟಿ ಶೋ ಖ್ಯಾತಿಯ ಸೆಲೆಬ್ರಿಟಿಗಳು ಗ್ಲ್ಯಾಮರ್ ಲುಕ್ನಲ್ಲಿ ಎಂಟ್ರಿ ನೀಡಿದ್ದಾರೆ. ಇವರ ವಿಭಿನ್ನ ಲುಕ್ ನ ಫೋಟೋ ಬಹಳಷ್ಟು ವೈರಲ್ ಆಗುತ್ತಿದೆ.



ಬಾಲಿವುಡ್ ನಟ ಇಶಾನ್ ಖಟ್ಟರ್ 'ಧಡಕ್ ' ಸಿನಿಮಾ ಮೂಲಕ ಭರ್ಜರಿ ಗೆಲುವು ಗಳಿಸಿದ್ದರು. 2005ಲ್ಲಿ ತೆರೆಕಂಡ ʼವಾಹ್ʼ ಸಿನಿಮಾದಲ್ಲಿ ಬಾಲ ನಟನಾಗಿ ವೃತ್ತಿ ಜೀವನ ಆರಂಭಿಸಿದ್ದ ಇವರು ಸಿನಿಮಾ ಇವೆಂಟ್ ಗಳಲ್ಲೂ ಬ್ಯುಸಿ ಯಾಗಿದ್ದಾರೆ. ಇಷಾನ್ ಖಟ್ಟರ್ ಸದ್ಯ ಈ ಈವೆಂಟ್ನ ಸ್ಟೈಲ್ ಲೀಡ್ ಆಗಿದ್ದು ಬ್ರೈಟ್ ಯೆಲ್ಲೋ ಪ್ಯಾಂಟ್ಸೂಟ್ ಹಾಗೂ ಗ್ರೇ ಶರ್ಟ್ ಧರಿಸಿ ಯಂಗ್ ಲುಕ್ನಲ್ಲಿ ಗಮನಸೆಳೆದರು.

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ತನ್ನ ವಿಬಿನ್ನ ಉಡುಗೆಗಳಿಂದಲೇ ಖ್ಯಾತಿ ಪಡೆದಿದ್ದಾರೆ. ಈ ಇವೆಂಟಿಗೂ ಸಿಲ್ವರ್ ಶಾಟ್ ಡ್ರೆಸ್ ಗೆ ರೆಡ್ ಶಾಲು ಧರಿಸಿ ವಿಭಿನ್ನವಾಗಿ ಕಾಣಿಸಿಕೊಂಡರು.

ಫಾತಿಮಾ ಸನಾ ಶೇಖ್ ‘ಆಪ್ ಜೈಸಾ ಕೋಯಿ’ ಸಿನಿಮಾದಲ್ಲಿ ಬಹಳಷ್ಟು ಖ್ಯಾತಿ ಪಡೆದಿದ್ದಾರೆ. ಇವರು ಸ್ಲಿಂಕಿ ಆಫ್ ಶೋಲ್ಡರ್ ಡ್ರೆಸ್ನಲ್ಲಿ ಹಾಟ್ ಲುಕ್ನೊಂದಿಗೆ ಗಮನ ಸೆಳೆದರು.

‘ಮೆಟ್ರೋ ಇನ್ ಡಿನೋ’ ನಟಿ ಕೋಂಕಣಾ ಸೆನ್ ಶರ್ಮಾ ಆಲ್ ಬ್ಲಾಕ್ ಲುಕ್ನಲ್ಲಿ ಕ್ಲಾಸಿಕ್ ಸ್ಟೈಲ್ ಮೂಲಕ ನೆಟ್ಟಿಗರನ್ನು ಮೋಡಿ ಮಾಡಿದ್ದಾರೆ..

ಅಲಿ ಫಜಲ್ ಸ್ವೀಲರ್ ಸೂಟ್ ಬ್ಲೇಜರ್ ಧರಿಸಿ ಫ್ರೆಶ್ ಲುಕ್ ನೀಡಿದ್ದಾರೆ. ಈ ಡ್ರೆಸ್ ನಲ್ಲಿ ಬಹಳಷ್ಟು ಹ್ಯಾಂಡ್ ಸಮ್ ಆಗಿ ಕಾಣಿಸಿದ್ದಾರೆ..

‘ಲಾಪತಾ ಲೇಡೀಸ್’ ಖ್ಯಾತ ನಟಿ, ಪ್ರತಿಭಾ ರಾಂಟಾ, ಆಫ್ ಶೋಲ್ಡರ್ ಡ್ರೆಸ್ನಲ್ಲಿ ವಿಂಟೇಜ್ ಲುಕ್ ನೀಡಿದ್ದಾರೆ. ನಟಿಯ ಈ ಹಾಟ್ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಕಿರಣ್ ರಾವ್ ಪ್ರಿಂಟೆಡ್ ಪ್ರಾಕ್ ನಲ್ಲಿ ಸ್ಟೈಲಿಶ್ ಲುಕ್ ಮೂಲಕ ಎಂಟ್ರಿ ನೀಡಿದ್ದಾರೆ. ಇವರ ಸಿಂಪಲ್ ನೆಸ್ ಗೂ ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.

ಕಲ್ಯಾಣಿ ಸಾಹಾ ಚಾವ್ಲಾ, ವೈಟ್ ಶರ್ಟ್ ಹಾಗೂ ಬ್ಲಾಕ್ ಡೆನಿಮ್ ಪ್ಯಾಂಟ್ ಧರಿಸಿ ಮಸ್ತ್ ಆಗಿ ಕಂಡಿದ್ದಾರೆ. ಈ ಡ್ರೆಸ್ ಗೆ ಬೇಕಾದಂತೆ ಹೇರ್ ಸ್ಟೈಲ್ ಮಾಡಿಕೊಂಡಿದ್ದು ಕ್ಯೂಟ್ ಆಗಿ ಕಂಡಿದ್ದಾರೆ.