Sunday, 19th May 2024

ಮಲೆನಾಡಲ್ಲಿ ಕಂಬ್ಳಿಹುಳ

ಸಿನಿಮಾ ಪ್ರೀತಿಯುಳ್ಳ ಒಂದಿಷ್ಟು ಸಮಾನ ಮನಸ್ಕರು ಸೇರಿ ಹೊಸತನದ ಕಥೆಯ ಹೊಂದಿರುವ ಕಂಬ್ಳಿಹುಳ ಚಿತ್ರವನ್ನು ನಿರ್ಮಿಸಿದ್ದಾರೆ. ಕಂಬ್ಳಿಹುಳ ಟೈಟಲ್ ಕೇಳಿದಾ ಗಲೇ ಕಚಗುಳಿ ಇಟ್ಟಂತಾಗುತ್ತದೆ.

ಸಿನಿರಸಿಕರಲ್ಲಿ ಒಂದಿಷ್ಟು ಕುತೂಹಲವನ್ನು ಮೂಡಿಸಿದೆ. ಚಿತ್ರದ ಟ್ರೇಲರ್ ಬಿಡುಗಡೆ ಯಾಗಿದ್ದು, ಚಿತ್ರದಲ್ಲಿ ಗಟ್ಟಿ ಕಥೆ ಇರುವುದು ಸ್ಪಷ್ಟವಾಗಿದೆ. ನಿರ್ದೇಶಕ ನವನ್ ಶ್ರೀನಿವಾಸ್ ಸಿನಿಮಾವನ್ನು ನಿರ್ದೇಶಿಸಿದ್ದು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಪ್ರಕೃತಿಯ ಸೊಬಗು
ಕಂಬ್ಳಿಹುಳ ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ಮಲೆನಾಡಿನ ಮಡಿಲಲ್ಲಿ ನಡೆಯುವ ಒಂದು ಸುಂದರ ಕಥೆ ಈ ಚಿತ್ರದಲ್ಲಿದೆ. ತುಂಟಾಟದ ಹುಡುಗರ ಪೀಕಲಾಟ. ಜವಾಬ್ದಾರಿಯೇ ಇಲ್ಲದ ಯುವಕನ ಬಾಳಲ್ಲಿ ಪ್ರೀತಿ ಚಿಗುರಿದಾಗ ಆತ ಹೇಗೆ
ಬದಲಾಗುತ್ತಾನೆ. ಜೀವನದ ಬಗ್ಗೆ ಯಾವೆಲ್ಲಾ ಕನಸುಗಳನ್ನು ಕಟ್ಟಿಕೊಳ್ಳುತ್ತಾನೆ ಎಂಬುದನ್ನು ಹಾಸ್ಯದ ಜತೆಗೆ ಕಟ್ಟಿಕೊಡ ಲಾಗಿದೆ. ಹಾಗಂತ ಕಂಬ್ಳಿಹುಳ ಕಾಮಿಡಿಗೆ ಸೀಮಿತವಾಗಿಲ್ಲ. ಇಲ್ಲಿ ಎಮೋಷನ್, ಸಸ್ಪೆನ್ಸ್ ಕೂಡ ಇದೆ. ಗ್ರೇಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ.

ಕಪ್ಪೆ ಕರಕರ
ಇದೆಲ್ಲದರ ಜತೆಗೆ ಒಂದು ನಿಗೂಢತೆಯೂ ಚಿತ್ರದಲ್ಲಿ ಅಡಕವಾಗಿದೆ. ಇಬ್ಬರು ಪ್ರೇಮಿಗಳ ನಡುವೆ ಬಂದು ಕಾಡುವ ಖಳನ ರೋಚಕ ಕಥೆಯೂ ಚಿತ್ರದಲ್ಲಿ ಥ್ರಿಲ್ ನೀಡುತ್ತದೆ. ಅದೆಲ್ಲವನ್ನು ತೆರೆಯಲ್ಲಿ ನೋಡಿಯೇ ಕಣ್ತುಂಬಿಕೊಳ್ಳಬೇಕು ಎನ್ನುತ್ತಾರೆ ನಿರ್ದೇಶಕ ನವನ್.

ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸುತ್ತಮುತ್ತ ಕಂಬ್ಳಿಹುಳ ಚಿತ್ರೀಕರಣ ನಡೆಸಲಾಗಿದೆ. ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸಿದ್ದು, ಅಶ್ವಿತಾ ಆರ್ ಹೆಗ್ಡೆ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿದಂತೆ ಹಲವು ಹಲವು ಕಲಾವಿದರು ನಟಿಸಿದ್ದಾರೆ. ಸತೀಶ್ ರಾಜೇಂದ್ರನ್ ಛಾಯಾ ಗ್ರಹಣ, ಜಿತೇಂದ್ರ ಮತ್ತು ರಾಘವೇಂದ್ರ ಸಂಕಲನ, ಶಿವ ಪ್ರಸಾದ್ ಸಂಗೀತ ನಿರ್ದೇಶನ ಕಂಬ್ಳಿಹುಳ ಚಿತ್ರಕ್ಕಿದೆ. ನಾನು ಈ ಚಿತ್ರ ದಲ್ಲಿ ಮಲೆನಾಡಿನಲ್ಲಿ ವಾಸವಾಗಿರುವ ಮಲಯಾಳಿ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದೇನೆ ನನಗೆ ತುಂಬಾ ಇಷ್ಟವಾದ ಪಾತ್ರವದು. ನಾನು ಬಯಸಿದ ಪಾತ್ರ ನೀಡಿದ್ದು ಖುಷಿ ತಂದಿದೆ.

– ಅಶ್ವಿತಾ ಆರ್ ಹೆಗ್ಡೆ ನಟಿ

ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮಕಥೆ ಇದು. ನಾನು ಕೂಡ ಮಲೆನಾಡಿನವನಾದ್ದರಿಂದ ಬಲು ಸುಲಭವಾಗಿ ಹೇಳ ಬಹುದೆಂದು ಆ ಭಾಗದ ಕಥೆಯನ್ನೇ ಆಯ್ಕೆ ಮಾಡಿಕೊಂಡೆ. ಎಲ್ಲರ ಜೀವನಕ್ಕೂ ನ್ವಯವಾಗುವ ಕಥೆ ಈ ಚಿತ್ರದಲ್ಲಿದೆ.
ತೆರೆಯಲ್ಲಿ ಸಿನಿಮಾ ನೋಡುತ್ತಿದ್ದರೆ ಸುಮಧುರ ಹಳೆಯ ನೆನಪುಗಳು ಖಂಡಿತಾ ಕಾಡುತ್ತವೆ.

– ನವನ್ ಶ್ರೀನಿವಾಸ್ ನಿರ್ದೇಶಕ

error: Content is protected !!