Virat Kohli: 2010 ರಿಂದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನನ್ನು ಹೆಸರಿಸಿದ ಕೇನ್ ವಿಲಿಯಮ್ಸನ್!
ಫ್ಯಾಬ್ ನಾಲ್ವರು ಕ್ರಿಕೆಟಿಗರ ಬಗ್ಗೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್ ಹಾಗೂ ಜೋ ರೂಟ್ ಅವರನ್ನು ಆಧುನಿಕ ಕ್ರಿಕೆಟ್‌ನ ಫ್ಯಾಬ್ ಆಟಗಾರರು ಎಂದು ಹಲವು ಮಾಜಿ ಕ್ರಿಕೆಟಿಗರು ವ್ಯಾಖ್ಯಾನಿಸಿದ್ದಾರೆ. ಆದರೆ, ಇದೀಗ ಭಾರತ ತಂಡದ ಮಾಜಿ ವಿರಾಟ್ ಕೊಹ್ಲಿಯನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಕೇನ್ ವಿಲಿಯಮ್ಸನ್ ಬಣ್ಣಿಸಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನು ಹೆಸರಿಸಿದ ಕೇನ್ ವಿಲಿಯಮ್ಸನ್.

ನವದೆಹಲಿ: ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಇದೀಗ ನ್ಯೂಜಿಲೆಂಡ್ (New Zealand) ಮಾಜಿ ನಾಯಕ ಕೇನ್ ವಿಲಿಯಮ್ಸನ್ (Kane Williamson), ತಮ್ಮ ಪಾಲಿಗೆ ಟೆಸ್ಟ್, ಒಡಿಐ ಹಾಗೂ ಟಿ20ಐ ಸೇರಿದಂತೆ ಮೂರೂ ಸ್ವರೂಪದಲ್ಲಿ ಯಾರು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪ್ರಸ್ತುತ ಮೂರೂ ಸ್ವರೂಪದಲ್ಲಿ ಸಕ್ರಿಯರಾಗಿರುವ ಆಟಗಾರರನ್ನು ಕಡೆಗಣಿಸಿದ ಕಿವೀಸ್ ಬ್ಯಾಟ್ಸ್‌ಮನ್, ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿರುವ ಭಾರತದ ದಿಗ್ಗಜ ವಿರಾಟ್ ಕೊಹ್ಲಿಯನ್ನು (Virat Kohli) ಆಯ್ಕೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಒಂದೇ ತಲೆ ಮಾರಿನ ಆಟಗಾರರು. ಅಂಡರ್-19ನಿಂದ ಹಿಡಿದು ಹಿರಿಯರ ಅಂತಾರಾಷ್ಟ್ರೀಯ ಕ್ರಿಕೆಟ್‌ವರೆಗೂ ಜೊತೆಯಲ್ಲಿ ಆಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಇಬ್ಬರೂ ಮೂರೂ ಸ್ವರೂಪದಲ್ಲಿ ದಿಗ್ಗಜ ಆಟಗಾರರಾಗಿದ್ದಾರೆ. ಆದರೆ, ಇತ್ತೀಚೆಗೆ ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ಕೇನ್ ವಿಲಿಯಮ್ಸನ್‌ಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅವರು ಕ್ರಿಕೆಟ್ ಆಟದ ಜೊತೆಗೆ ವೈಯಕ್ತಿಕ ಜೀವನದಲ್ಲಿಯೂ ಸೂಕ್ತವಾಗಿರುವ ಆಟಗಾರನನ್ನು ಹೆಸರಿಸಿದ್ದಾರೆ.
IND vs ENG-'ಶುಭಮನ್ ಗಿಲ್ 430 ರನ್ ಗಳಿಸಿದ್ದಾರೆ': ಡ್ಯೂಕ್ ಬಾಲ್ ಸಿಇಒ ಟೀಕೆಗಳಿಗೆ ತಿರುಗೇಟು!
"ಕಳೆದ 15 ವರ್ಷಗಳಿಂದ ನಾನು ನೋಡಿದ ಹಾಗೆ ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪದಲ್ಲಿಯೂ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿದ್ದಾರೆ," ಎಂದು ತಿಳಿಸಿದ ಕೇನ್ ವಿಲಿಯಮ್ಸನ್, "ಕ್ರಿಕೆಟ್ ಅಭಿಮಾನದಿಂದ ತುಂಬಿರುವ ದೇಶದಲ್ಲಿ ಅವರಿಗೆ ತನ್ನದೇ ಆದ ಸವಾಲುಗಳಿದ್ದವು ಮತ್ತು ಅವರು ಉನ್ನತ ಸ್ಥಾನದಲ್ಲಿದ್ದರು. ಇದು ಸ್ವಲ್ಪ ವಿಭಿನ್ನ ರೀತಿಯಲ್ಲಿ ಉತ್ತಮ ಸಂಬಂಧ. ನಾವು ಹಲವು ರೀತಿಯಲ್ಲಿ ಸಂಪರ್ಕದಲ್ಲಿದ್ದೇವೆ. ಆದರೆ ಹೌದು, ಅದು ನಿಜವಾಗಿಯೂ ಸ್ಪರ್ಧಾತ್ಮಕ ವಿಷಯವಾಗಿರಲಿಲ್ಲ. ನೀವು ತಂಡದಲ್ಲಿ ಇದ್ದು, ನೀವು ತಂಡವಾಗಿ ಸ್ಪರ್ಧಿಸಲು ಬಯಸುತ್ತೀರಿ," ಎಂದು ತಿಳಿಸಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ವಲ್ಲದೇ ಬೇರೆ ಬೇರೆ ತಂಡಗಳ ವಿರುದ್ಧ ಸರಣಿ ಅಥವಾ ಟೂರ್ನಿಯಿದ್ದರೂ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಪರಸ್ಪರ ಸಂಪರ್ಕದಲ್ಲಿದ್ದರು ಹಾಗೂ ಒಬ್ಬರಿಬೊಬ್ಬರಿಗೆ ಪರಸ್ಪರ ಬೆಂಬಲವನ್ನು ನೀಡುತ್ತಿದ್ದರು.
KANE WILLIAMSON ON VIRAT KOHLI. 🗣️
— Mufaddal Vohra (@mufaddal_vohra) July 12, 2025
"Virat is probably the greatest all formats player we've seen in the last 15 years". pic.twitter.com/JrVkKTOjFR
"ಇದು ನಿಜಕ್ಕೂ ಮೋಜಿನಿಂದ ಕೂಡಿದೆ ಹಾಗೂ ಇದೊಂದು ರೀತಿ ವೃತ್ತವಾಗಿದೆ. ಮತ್ತೊಂದು ಭಾಗವಾಗಿ ಹೇಳಬೇಕೆಂದರೆ, ನಾವು ಕೇವಲ ಕ್ರಿಕೆಟ್ ಆಡುತ್ತಿಲ್ಲ, ಆದರೆ ನೀವು ದೊಡ್ಡ ಪ್ರಮಾಣದಲ್ಲಿ ಸಮಾನಾಂತರವಾಗಿ ಜೀವನವನ್ನು ನಡೆಸುತ್ತಿದ್ದೀರಿ. ನೀವು ವಯಸ್ಸಾದಂತೆ ಅನುಭವಿಸುವ ವಿಭಿನ್ನ ವಿಷಯಗಳು ಇವು, ಆದ್ದರಿಂದ ನೀವು ಒಂದೇ ರೀತಿಯ ಹಂತಗಳಲ್ಲಿ ಸಂಪರ್ಕ ಸಾಧಿಸುತ್ತೀರಿ," ಎಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ.
IND vs ENG: ಅರ್ಧಶತಕ ಬಾರಿಸಿದ ಬಳಿಕ ಸರ್ಫರಾಝ್ ಖಾನ್ ದಾಖಲೆ ಮುರಿದ ಜೇಮಿ ಸ್ಮಿತ್!
ಈ ವರ್ಷದ ಮೇ ತಿಂಗಳಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು, ಆದರೆ ವಿಲಿಯಮ್ಸನ್ ಎಲ್ಲಾ ಸ್ವರೂಪಗಳಲ್ಲಿ ಸಕ್ರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಮುಂದುವರಿದಿದ್ದಾರೆ. ಕಳೆದ ವರ್ಷ, ಅವರು ತಂಡದ ವೈಟ್-ಬಾಲ್ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು ಮತ್ತು ನ್ಯೂಜಿಲೆಂಡ್‌ನ ಕೇಂದ್ರ ಒಪ್ಪಂದಗಳಿಂದ ಹೊರಗುಳಿದರು; ಆದಾಗ್ಯೂ, ವಿಲಿಯಮ್ಸನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬದ್ಧರಾಗಿರುವುದಾಗಿ ಹೇಳಿದ್ದಾರೆ.