ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Champions Trophy: ಐಸಿಸಿ ಸಿಇಒ ಹುದ್ದೆಯಿಂದ ಕೆಳಗಿಳಿದ ಜೆಫ್ ಅಲ್ಲಾರ್ಡಿಸ್

57 ರ ಹರೆಯದ ಜೆಫ್ ಅಲ್ಲಾರ್ಡಿಸ್ ಅವರು 2012 ರಲ್ಲಿ ಐಸಿಸಿಗೆ ಕ್ರಿಕೆಟ್ ಜನರಲ್ ಮ್ಯಾನೇಜರ್ ಆಗಿ ಸೇರಿದ್ದರು, ಎಂಟು ತಿಂಗಳ ಕಾಲ ಹಂಗಾಮಿ ಸಿಇಒ ಆಗಿ ಸೇವೆ ಸಲ್ಲಿಸಿದ ನಂತರ ಅವರನ್ನು ನವೆಂಬರ್ 2021 ರಲ್ಲಿ CEO ಆಗಿ ನೇಮಿಸಲಾಗಿತ್ತು.

ಐಸಿಸಿ ಸಿಇಒ ಹುದ್ದೆಯಿಂದ ಕೆಳಗಿಳಿದ ಜೆಫ್ ಅಲ್ಲಾರ್ಡಿಸ್

Geoff Allardice

Profile Abhilash BC Jan 29, 2025 9:46 AM

ದುಬೈ: ಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ(Champions Trophy) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಐಸಿಸಿ ಸಿಇಒ ಜೆಫ್ ಅಲ್ಲಾರ್ಡಿಸ್(Geoff Allardice) ಅವರು ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಅವರು ಹುದ್ದೆಯಿಂದ ಕೆಳಗಿಳಿದ ಬಗ್ಗೆ ಸ್ಪಷ್ಟ ಕಾರಣ ಏನೆಂಬುದು ತಿಳಿದಿಲ್ಲ. ಕೆಲ ಮೂಲಗಳ ಪ್ರಕಾರ ಚಾಂಪಿಯನ್ಸ್‌ ಟ್ರೋಫಿ ಸಿದ್ಧತೆ ಬಗ್ಗೆ ಪಾಕ್‌ ಕ್ರಿಕೆಟ್‌ ಮಂಡಳಿ ಸರಿಯಾದ ಮಾಹಿತಿ ನೀಡದೆ ಸತಾಯಿಸುತ್ತಿತ್ತು, ಇದರಿಂದ ಬೇಸತ್ತು ಅವರು ಈ ಹುದ್ದೆಯನ್ನು ತ್ಯಜಿಸಿದ್ದಾರೆ ಎನ್ನಲಾಗಿದೆ.

57 ರ ಹರೆಯದ ಜೆಫ್ ಅಲ್ಲಾರ್ಡಿಸ್ ಅವರು 2012 ರಲ್ಲಿ ಐಸಿಸಿಗೆ ಕ್ರಿಕೆಟ್ ಜನರಲ್ ಮ್ಯಾನೇಜರ್ ಆಗಿ ಸೇರಿದ್ದರು, ಎಂಟು ತಿಂಗಳ ಕಾಲ ಹಂಗಾಮಿ ಸಿಇಒ ಆಗಿ ಸೇವೆ ಸಲ್ಲಿಸಿದ ನಂತರ ಅವರನ್ನು ನವೆಂಬರ್ 2021 ರಲ್ಲಿ CEO ಆಗಿ ನೇಮಿಸಲಾಗಿತ್ತು.

'ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವುದು ಒಂದು ಗೌರವವಾಗಿದೆ. ಕ್ರಿಕೆಟ್‌ನ ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಐಸಿಸಿ ಸದಸ್ಯರಿಗೆ ವಾಣಿಜ್ಯ ಅಡಿಪಾಯದವರೆಗೆ ನಾವು ಸಾಧಿಸಿದ ಫಲಿತಾಂಶಗಳ ಬಗ್ಗೆ ನಂಬಲಾಗದಷ್ಟು ಹೆಮ್ಮೆಪಡುತ್ತೇನೆ' ಎಂದು ಅಲಾರ್ಡಿಸ್ ಹೇಳಿದ್ದಾರೆ.

ಇದನ್ನೂ ಓದಿ IND vs IRE: 304 ರನ್‌ಗಳಿಂದ ಗೆದ್ದು ಇತಿಹಾಸ ಬರೆದ ಭಾರತ ವನಿತೆಯರು!

ಪಾಕಿಸ್ತಾನದ ಕರಾಚಿ, ಲಹೋರ್‌ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳ ನವೀಕರಣ ಕಾರ್ಯ ಸಂಪೂರ್ಣಗೊಂಡಿಲ್ಲ. ಕ್ರೀಡಾಂಗಣಗಳ ನವೀಕರಣ ಕೆಲಸ ಪೂರ್ತಿಗೊಳಿಸಲು ಐಸಿಸಿ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಜ.30ರ ಗುಡುವು ನೀಡಿತ್ತು. ಆದರೆ ಇನ್ನೂ ಕೆಲಸ ಬಾಕಿ ಇರುವ ಕಾರಣ ಕೆಲವು ಪಂದ್ಯವನ್ನು ದುಬೈಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಪಾಕ್‌ ಕ್ರಿಕೆಟ್‌ ಮಂಡಳಿ ಮಾತ್ರ ಯಾವುದೇ ವರದಿಗೆ ಕಿವಿಗೊಡಬೇಡಿ ಎಂದು ಹೇಳುತ್ತಲೇ ಬಂದಿದೆ.

ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್​ ಪಂದ್ಯಗಳು ಮತ್ತು ಒಂದು ಸೆಮಿಫೈನಲ್​ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್​ ಮತ್ತು ಇನ್ನೊಂದು ಸೆಮಿಫೈನಲ್​ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್​ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್​ ಮಾರ್ಚ್​ 2ರಂದು ಲಾಹೋರ್​ನಲ್ಲಿ ನಿಗದಿಯಾಗಿದೆ