ನವದೆಹಲಿ: ದೆಹಲಿಯ ಅರುಣ್ ಜಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಕ್ಯಾಪಿಟಲ್ಸ್ ನ ಮುಂದಿನ ಪಯಣ ನಿರ್ಧಾರವಾಗಲಿದ್ದು ಈ ಪಂದ್ಯವನ್ನು ಸೋತರೆ ಸೆಮಿಫೈನಲ್ ರೇಸ್ ನಿಂದ ಹೊರಬೀಳುವ ಐದನೇ ತಂಡವಾಗ ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ರತಿ ಐಪಿಎಲ್ ನಲ್ಲೂ ಬಲಿಷ್ಠ ತಂಡವನ್ನು ಹೊಂದಿದ್ದರೂ ಚಾಂಪಿಯನ್ ಪಟ್ಟ ಅಲಂಕರಿಸಲು ವಂಚಿತರಾಗಿದ್ದಾರೆ. ಇಂದು ಜಯಭೇರಿಯಾಗುವ ಮೂಲಕ ತನ್ನ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿಸಿಕೊಳ್ಳಬೇಕಾಗಿದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡ ಜಯಭೇರಿ ಆದರೆ ಐಪಿಎಲ್ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ನಂಬರ್ ಒನ್ ಸ್ಥಾನಕ್ಕೆ ಜಿಗಿಯಲಿದೆ.
ಇಷ್ಟರವರೆಗಿನ ಪಂದ್ಯಗಳಲ್ಲಿ ಡೆಲ್ಲಿಯ ನಿರ್ವಹಣೆ ಸ್ಥಿರವಾಗಿರಲಿಲ್ಲ. ಇನ್ನುಳಿದ ಮೂರು ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವಿದೆ. ಇನ್ನುಳಿದ ಎರಡು ಸ್ಥಾನಗಳಿಗಾಗಿ ಸದ್ಯ 12 ಅಂಕ ಹೊಂದಿರುವ ಚೆನ್ನೈ, ಹೈದರಾಬಾದ್, ಲಕ್ನೋ ತೀವ್ರ ಪೈಪೋಟಿ ನಡೆಸುವ ಸಾಧ್ಯತೆ ಯಿದೆ. ಇದರ ನಡುವೆ ಡೆಲ್ಲಿ ಮತ್ತು ಆರ್‌ಸಿಬಿ ಕೂಡ ಪ್ಲೇ ಆಫ್ಗೆ ತೇರ್ಗಡೆಯಾಗುವ ನಿರೀಕ್ಷೆ ಇಟ್ಟು ಕೊಂಡಿದೆ.