BAN vs NZ: ನಜ್ಮುಲ್ ಹುಸೇನ್ ಶಾಂತೊರ ಸ್ಟನಿಂಗ್ ಕ್ಯಾಚ್ ಪಡೆದ ಮೈಕಲ್ ಬ್ರೇಸ್‌ವೆಲ್! ವಿಡಿಯೊ
ನ್ಯೂಜಿಲೆಂಡ್ ಸ್ಪಿನ್ನರ್ ಮೈಕಲ್ ಬ್ರೇಸ್‌ವೆಲ್ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಾಂಗ್ಲಾದೇಶ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದರು. ಬೌಲಿಂಗ್ ಮಾತ್ರವಲ್ಲದೆ, ಬ್ರೇಸ್‌ವೆಲ್ ಅದ್ಭುತ ಕ್ಯಾಚ್‌ವೊಂದನ್ನು ಕೂಡ ಪಡೆದಿದ್ದಾರೆ. ಇದು ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ನಜ್ಮುಲ್ ಹುಸೇನ್ ಶಾಂತೊ ಅವರ ಸ್ಟನಿಂಗ್ ಕ್ಯಾಚ್ ಎಲ್ಲರ ಗಮನ ಸೆಳೆಯಿತು. ಈ ವಿಡಿಯೊ ವೈರಲ್ ಆಗಿದೆ.

ಸ್ಟನಿಂಗ್ ಕ್ಯಾಚ್ ಪಡೆದ ಮೈಕಲ್ ಬ್ರೇಸ್ ವೆಲ್.

ರಾವಲ್ಪಿಂಡಿ: ಬಾಂಗ್ಲಾದೇಶ ವಿರುದ್ಧ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಮೈಕಲ್ ಬ್ರೇಸ್‌ವೆಲ್ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದರು. ಕಿವೀಸ್ ತಂಡದ ಪರ ಬೌಲ್ ಮಾಡಿದ ಬ್ರೇಸ್‌ವೆಲ್ 10 ಓವರ್‌ಗಳಲ್ಲಿ ಕೇವಲ 26 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ಬೌಲಿಂಗ್ ಮಾತ್ರವಲ್ಲದೆ, ಫೀಲ್ಡಿಂಗ್‌ನಲ್ಲೂ ಬ್ರೇಸ್‌ವೆಲ್ ತಮ್ಮ ಪ್ರತಿಭೆಯನ್ನು ಹೊರ ಹಾಕಿದರು. ಫೀಲ್ಡಿಂಗ್ ವೇಳೆ ಬ್ರೇಸ್‌ವೆಲ್, ಬಾಂಗ್ಲಾದೇಶ ತಂಡದ ಬ್ಯಾಟ್ಸ್‌ಮನ್ ನಜ್ಮುಲ್ ಹುಸೇನ್ ಶಾಂತೊ ಅವರ ಸ್ಟನಿಂಗ್ ಕ್ಯಾಚ್ ಪಡೆಯುವ ಮೂಲಕ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ತಂದುಕೊಟ್ಟರು.
ಸೋಮವಾರ ಇಲ್ಲಿನ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಬಾಂಗ್ಲಾದೇಶ ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ನಜ್ಮುಲ್ ಹುಸೇನ್ ಶಾಂತೊ ಅವರು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಒಂದು ತುದಿಯಲ್ಲಿ ಇತರೆ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಪೆರೆಡ್ ನಡೆಸುತ್ತಿದ್ದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ನಜ್ಮುಲ್, ಕಿವೀಸ್ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಂತರು.
IND vs PAK: ʻಬಾಬರ್ ಆಝಮ್ ಒಬ್ಬ ಮೋಸಗಾರʼ-ಮಾಜಿ ನಾಯಕನ ವಿರುದ್ಧ ಶೋಯೆಬ್ ಅಖ್ತರ್ ಕಿಡಿ!
ಒಟ್ಟು 110 ಎಸೆತಗಳನ್ನು ಆಡಿದ ಶಾಂತೊ ಅವರು 9 ಬೌಂಡರಿಗಳೊಂದಿಗೆ 77 ರನ್‌ಗಳನ್ನು ಸಿಡಿಸಿ ಶತಕದ ಭರವಸೆ ಮೂಡಿಸಿದ್ದರು. ಆದರ, 38 ನೇ ಓವರ್‌ನ ಎರಡನೇ ಎಸೆತದಲ್ಲಿ ಶಾಂತೊ, ವಿಲಿಯಮ್ ರೌರ್ಕಿ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಆದರೆ, ಚೆಂಡು ಸರಿಯಾಗಿ ಬ್ಯಾಟ್‌ಗೆ ಸಿಗದೆ ಗಾಳಿಯಲ್ಲಿ ಹಾರಿತು, ಈ ವೇಳೆ ಮಿಡ್ ಆಫ್ ಜಾಗದಲ್ಲಿದ್ದ ಮೈಕಲ್ ಬ್ರೇಸ್‌ವೆಲ್ ಓಡಿ ಬಂದು ಹಾರಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಬಹುತೇಕ ಸುರಕ್ಷಿತ ವಲಯದಲ್ಲಿ ಬೀಳುತ್ತಿತ್ತು ಆದರೆ ಬ್ರೇಸ್‌ವೆಲ್ ದೀರ್ಘ ಓಟ ತೆಗೆದುಕೊಂಡು ಕ್ಯಾಚ್ ಪಡೆದರು.
Michael Bracewell is on a roll today!
— Sameer Allana (@HitmanCricket) February 24, 2025
Registered best bowling figures of 4/26, now took this STUNNING CATCH 🤯pic.twitter.com/xGhKnAJHeL
ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಪಂದ್ಯವನ್ನು ಗೆಲ್ಲದಿದ್ದರೆ ತಂಡ ಸೆಮಿಫೈನಲ್‌ನಿಂದ ಹೊರಬೀಳಲಿದೆ. ಬಾಂಗ್ಲಾದೇಶ ತಂಡವು ಟೂರ್ನಿಯಲ್ಲಿ ಭಾರತದ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಪರಿಸ್ಥಿತಿ ಈ ರೀತಿ ಇರುವಾಗ ಎಷ್ಟೇ ಕಷ್ಟವಾದರೂ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲೇಬೇಕೆಂದು ಬಾಂಗ್ಲಾ ಆಡಿತು. ಲೀಗ್ ಹಂತದಲ್ಲಿ ಬಾಂಗ್ಲಾದೇಶದ ಕೊನೆಯ ಪಂದ್ಯ ಆತಿಥೇಯ ಪಾಕಿಸ್ತಾನ ವಿರುದ್ಧ ನಡೆಯಲಿದೆ.
Career-best ODI figures for Michael Bracewell in Rawalpindi! He finishes with figures of 4-26 from his 10-over spell, including 43 dot balls. Scores | https://t.co/IZGEOqV6Q7 📲 #ChampionsTrophy #BANvNZ pic.twitter.com/BSyX3Ghoch
— BLACKCAPS (@BLACKCAPS) February 24, 2025
ಈ ಪಂದ್ಯದಲ್ಲಿ ಕಿವೀಸ್ ತಂಡ ಗೆದ್ದರೆ, ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಆತಿಥೇಯ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಲೀಗ್ ಹಂತದಲ್ಲಿ ನ್ಯೂಜಿಲೆಂಡ್‌ನ ಕೊನೆಯ ಪಂದ್ಯ ಭಾರತದೊಂದಿಗೆ ಆಡಲಿದೆ. ಉಭಯ ತಂಡಗಳ ನಡುವಣ ಈ ಪಂದ್ಯ ಮಾರ್ಚ್ 2 ರಂದು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.