Sunday, 19th May 2024

ಟಿ-20 ವಿಶ್ವಕಪ್​ನ ಎರಡು ತಂಡಗಳಿಗೆ KMF ಪ್ರಾಯೋಜಕತ್ವ

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (KMF) ಮುಂಬರುವ ಟಿ-20 ವಿಶ್ವಕಪ್​ನಲ್ಲಿ ಆಡುತ್ತಿರುವ ಎರಡು ತಂಡಗಳಿಗೆ ಪ್ರಾಯೋಕಜತ್ವ ನೀಡಿದೆ.

ಅದರಂತೆ ಸ್ಕಾಟ್​ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಜೆರ್ಸಿ ಮೇಲೆ ಪ್ರಾಯೋಜಕರಾಗಿ ನಂದಿನಿ ಹೆಸರು ಕಾಣಿಸಿಕೊಳ್ಳಲಿದೆ.

ಜೂನ್​ 01ರಿಂದ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ಟೀಮ್​ ಇಂಡಿಯಾ ತನ್ನ ಆಭಿಯಾನವನ್ನು ಜೂನ್​ 05ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ.

ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಎಂಬ ಎರಡು ತಂಡಗಳನ್ನು ಪ್ರಾಯೋಜಿಸಲು ಏ.20ರಂದು ಅಧಿಕೃತವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಂತೆ ಸ್ಕಾಟ್​ಲೆಂಡ್​ ಹಾಗೂ ಐರ್ಲೆಂಡ್​ ತಂಡಗಳ ಆಟಗಾರರ ಜೆರ್ಸಿಯ ತೋಳಿನ ಭಾಗದ ಮೇಲೆ ಕೆಎಂಎಫ್‌ ಲೋಗೋ ಇರಲಿದೆ.

ಎಡಗೈ ಬ್ಯಾಟ್ಸ್‌ಮನ್‌ಗಳ ಬಲ ಮತ್ತು ಬಲ ಬ್ಯಾಟ್ಸ್‌ಮನ್‌ಗಳ ಎಡ ಭಾಗದಲ್ಲಿ ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ. ಎರಡೂ ತಂಡಗಳ ಆಟಗಾರರು ನಂದಿನಿ ಉತ್ಪನ್ನಗಳ ಜಾಹೀರಾತು, ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಅಭಿಯಾನ, ಫೋಟೋಶೂಟ್‌ಗಳಲ್ಲಿ ಭಾಗವಹಿಸಲಿದ್ದಾರೆ. ವಿಶ್ವಕಪ್‌ ವೇಳೆ ಜಾಹೀರಾತುಗಳು ಪ್ರಸಾರಗೊಳ್ಳಲಿವೆ. ಇದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ಮಿಡಲ್ ಈಸ್ಟ್, ಸಿಂಗಾಪುರ, ಭೂತಾನ್ ಮತ್ತು ಮ್ಯಾನ್ಮಾರ್ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಎಂಎಫ್​ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದೀಗ ಟಿ20 ವಿಶ್ವಕಪ್​ನಲ್ಲಿ ಎರಡು ತಂಡಗಳಿಗೆ ಪ್ರಾಯೋಜಕತ್ವ ವಹಿಸಿಕೊಂಡಿದ್ದೇವೆ.

Leave a Reply

Your email address will not be published. Required fields are marked *

error: Content is protected !!