ಶಾರ್ಜಾ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯವಾಗಿ ಸೋಲುಂಡಿದೆ. ಆರ್‌ಸಿಬಿ ನೀಡಿದ 121 ರನ್‌ಗಳ ಸುಲಭ ಗುರಿಯನ್ನು ಹೈದರಾಬಾದ್ 5 ವಿಕೆಟ್ ಕಳೆದುಕೊಂಡು ತಲುಪುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಿಂದ ಹೈದರಾಬಾದ್ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಎದುರಾಳಿ ಬೌಲರ್‌ಗಳ ಮುಂದೆ ಮಂಡಿಯೂರಿ ದರು. ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ದಿಟ್ಟ ಪ್ರತಿರೋಧ ಒಡ್ಡಲು ಸಾಧ್ಯವಾಲೇ ಇಲ್ಲ. ನಿಗದಿತ 20 ಓವರ್‌ಗಳಲ್ಲಿ 120 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸುಲಭ ಸವಾಲನ್ನು ಮುಂದಿಡ್ಡಿತ್ತು.
ಹೈದರಾಬಾದ್ ಪರವಾಗಿ ಸಂದೀಪ್ ಶರ್ಮಾ, ಟಿ ನಟರಾಜನ್ ಹಾಗೂ ಹೋಲ್ಡರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಸಂದೀಪ್ ಶರ್ಮಾ ಹಾಗೂ ಹೋಲ್ಡರ್ ತಲಾ ಎರಡು ವಿಕೆಟ್ ಕಿತ್ತರೆ ನಟರಾಜನ್ ನಾಲ್ಕು ಓವರ್‌ಗಳಲ್ಲಿ ಕೇವಲ 11 ರನ್ ನೀಡಿ 1 ವಿಕೆಟ್ ಪಡೆದರು. ರಶೀದ್ ಖಾನ್ ಹಾಗೂ ನದೀಮ್ ಕೂಡ ತಲಾ ಒಂದು ವಿಕೆಟ್ ಕಬಳಿಸಿದರು.
ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ಕೂಡ ನಾಯಕ ಡೇವಿಡ್ ವಾರ್ನರ್ ವಿಕೆಟನ್ನು ಬೇಗನೆ ಕಳೆದು ಕೊಂಡಿತು. ಆದರೆ 2ನೇ ವಿಕೆಟ್‌ಗೆ ಮನಿಶ್ ಪಾಂಡೆ ಹಾಗೂ ಸಾಹಾ 50 ರನ್‌ಗಳ ಜೊತೆಯಾಟವನ್ನು ನೀಡಿದರು. ಬಳಿಕ ಸಣ್ಣ ಕುಸಿತವನ್ನು ಹೈದರಾಬಾದ್ ಎದುರಿಸಿತಾದರೂ ಹೆಚ್ಚಿನ ಆಘಾತವಾಗದಂತೆ ಕೆಳ ಕ್ರಮಾಂಕದ ಆಟಗಾರರು ನೋಡಿಕೊಂಡರು.
ಅಂತಿಮವಾಗಿ ಜೇಸನ್ ಹೋಲ್ಡರ್ 10 ಎಸೆತಗಳಲ್ಲಿ 26 ರನ್ ಸಿಡಿಸಿ ರನ್ ವೇಗ ಹೆಚ್ಚಿನ 14.1ಓವರ್‌ನಲ್ಲಿಯೇ ಹೈದರಾಬಾದ್ ಗೆಲ್ಲುವಂತೆ ನೋಡಿಕೊಂಡರು. ಈ ಮೂಲಕ ಅಗತ್ಯವಾಗಿದ್ದ ಗೆಲುವನ್ನು ಸಂಪಾದಿಸುವಲ್ಲಿ ಹೈದರಾಬಾದ್ ಯಶಸ್ವಿಯಾಗಿದೆ.