Saturday, 27th April 2024

ರಾಜ್ಯದಲ್ಲಿ 29 ಹೊಸ ಪ್ರಕರಣ: ಸೋಂಕುತರ ಸಂಖ್ಯೆ 474

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ ಶುಕ್ರವಾರ 29 ಹೊಸ ಪ್ರಕರಣಗಳು ದಾಖಲಾಗಿದ್ದು ಸೋಂಕುತರ ಸಂಖ್ಯೆ 474 ತಲುಪಿದೆ. ಈವರೆಗೆ 18 ಜನ ಸಾವನ್ನಪ್ಪಿದ್ದು, 152 ಜನ ಗುಣಮುಖರಾಗಿದ್ದಾರೆ.
‌ಬೆಂಗಳೂರಿನಿಂದ  ವರದಿಯಾಗಿರುವ 18 ಪ್ರಕರಣಗಳಲ್ಲಿ ಪಾದರಾಯನಪುರದಲ್ಲಿ ಮತ್ತೆ‌ 12 ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದಂತೆ ತುಮಕೂರಿನಿಂದ‌ 1, ವಿಜಯಪುರದಿಂದ 1, ಮಂಡ್ಯದಿಂದ 1 ಪ್ರಕರಣಗಳು ವರದಿಯಾಗಿವೆ‌.
ಪಾದರಾಯನಪುರದಲ್ಲಿ ಒಟ್ಟು 248 ಮಂದಿ ಕ್ವಾರಂಟೈನ್ ಹಾಗೂ 20 ಜನರಲ್ಲೊ ಸೋಂಕು ಮತ್ತು ಹೊಂಗಸಂದ್ರದಲ್ಲಿ 188 ಮಂದಿಯನ್ನು ಕ್ವಾರಂಟೈನ್ ಹಾಗೂ 21 ಜನರಲ್ಲಿ  ಸೋಂಕು ದೃಢಪಟ್ಟಿವೆ.
ಮುಂಜಾಗೃತಾ ಕ್ರಮವಾಗಿ ರಾಜ್ಯದಲ್ಲಿ 377 ಸೋಂಕಿತರಿರುವ 111  ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಿದ್ದು, ಆ ಪ್ರದೇಶದಲ್ಲಿರುವ 6,77,673 ಮನೆಗಳಲ್ಲಿ ವಾಸವಿರುವ 31,68,886 ಜನರ ಸುರಕ್ಷತೆಗೆ‌ ಸಂಪೂರ್ಣ ಕ್ರಮ ವಹಿಸಲಾಗಿದೆ.
*ಕೆಲಸದ ಸ್ಥಳಗಳು ಹಾಗೂ ಕಾರ್ಖಾನೆಗಳ ಕುರಿತು ಕೇಂದ್ರ ಗೃಹ ಇಲಾಖೆ ಸ್ಪಷ್ಟೀಕರಣ* 
ಕೆಲಸದ ಸ್ಥಳಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಸಂಬಂಧಿತ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಬಂಧನ ಮಾಡಲಾಗುತ್ತದೆಯೆಂಬಂತೆ ಈ ಹಿಂದಿನ‌ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಕೇಂದ್ರ ಸರಕಾರದ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಈ ಕುರಿತಂತೆ ಯಾವುದೇ ಅಂಶಗಳು ಇಲ್ಲದ ಕಾರಣ ಆತಂಕದ ಅವಶ್ಯಕತೆಯಿಲ್ಲ ಎಂದು ಕೇಂದ್ರ‌ ಗೃಹ ಇಲಾಖೆಯ ಕಾರ್ಯದರ್ಶಿ ಎಲ್ಲ ರಾಜ್ಯಗಳಿಗೆ ಬರೆದ ಅರೆ ಸರ್ಕಾರಿ ಪತ್ರದಲ್ಲಿ ಸ್ಪಷ್ಟೀಕರಣ ನೀಡಿದೆ.
*ರಾಮನಗರದಿಂದ ಹಜ್ ಭವನಕ್ಕೆ ಸ್ಥಳಾಂತರ* 
ಬೆಂಗಳೂರಿನ ಜೆ ಜೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 116 ಬಂಧಿತ ಆರೋಪಿಗಳನ್ನು ಮತ್ತು ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದ 17 ಬಂಧಿತ ಕೈದಿಗಳನ್ನು ಒಳಗೊಂಡಂತೆ ಒಟ್ಟು 133 ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹದಿಂದ ಬೆಂಗಳೂರಿನ ಅಧಿಸೂಚಿತ ನಿರ್ಬಂಧ ಕೇಂದ್ರವಾದ ಹಜ್ ಭವನಕ್ಕೆ‌ ಸ್ಥಳಾಂತರಿಸಲಾಗಿದೆ.
ಸೋಂಕಿತರ ಮಾಹಿತಿ:
ಬೆಳಗ್ಗೆ ಬಿಡುಗಡೆಯಾದ ಪಟ್ಟಿ:
1. ರೋಗಿ-446: ಬೆಂಗಳೂರಿನ 49 ವರ್ಷದ ಮಹಿಳೆ. ಸಂಪರ್ಕದ ಮಾಹಿತಿ ಲಭ್ಯವಾಗಿಲ್ಲ.
2. ರೋಗಿ-447: ತುಮಕೂರಿನ 32 ವರ್ಷದ ಪುರುಷ. ಸೂರತ್-ಗುಜರಾತ್‍ಗೆ ಪ್ರಯಾಣ ಬೆಳೆಸಿದ ಹಿನ್ನಲೆ ಹೊಂದಿದ್ದಾರೆ.
3. ರೋಗಿ-448: ಬೆಳಗಾವಿ ಜಿಲ್ಲೆ ರಾಯಬಾಗ್‍ನ 10 ವರ್ಷದ ಬಾಲಕಿ. ರೋಗಿ-150ರ ಸಂಪರ್ಕದಲ್ಲಿದ್ದರು.
4. ರೋಗಿ-449: ಬೆಂಗಳೂರಿನ 30 ವರ್ಷದ ಪುರುಷ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ.
5. ರೋಗಿ-450: ಬೆಂಗಳೂರಿನ 22 ವರ್ಷದ ಯುವಕ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ.
6. ರೋಗಿ-451: ಚಿಕ್ಕಬಳ್ಳಾಪುರದ 39 ವರ್ಷದ ಪುರುಷ. ರೋಗಿ-250ರ ಸಂಪರ್ಕದಲ್ಲಿದ್ದರು.
7. ರೋಗಿ-452: ಬೆಂಗಳೂರಿನ 35 ವರ್ಷದ ಪುರುಷ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ.
8. ರೋಗಿ-453: ಬೆಂಗಳೂರಿನ 32 ವರ್ಷದ ಪುರುಷ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ.
9. ರೋಗಿ-454: ಬೆಂಗಳೂರಿನ 23 ವರ್ಷದ ಯುವಕ. ಪಾದರಾಯನಪುರದ ಸೋಂಕಿನ ಸಂಪರ್ಕ ಹೊಂದಿದ್ದಾರೆ.
10. ರೋಗಿ-455: ಬಾಗಲಕೋಟೆ ಜಿಲ್ಲೆ ಮುದೋಳದ 28 ವರ್ಷದ ಪುರುಷ. ರೋಗಿ-380ರ ಸಂಪರ್ಕದಲ್ಲಿದ್ದರು.
11. ರೋಗಿ-456: ಬಾಗಲಕೋಟೆ ಜಿಲ್ಲೆ ಜಮಕಂಡಿಯ 46 ವರ್ಷದ ಪುರುಷ. ಸಂಪರ್ಕದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
12. ರೋಗಿ-457: ವಿಜಯಪುರದ 17 ವರ್ಷದ ಯುವಕ. ರೋಗಿ-221ರ ಸಂಪರ್ಕ ಹೊಂದಿದ್ದರು.
13. ರೋಗಿ-458: ಬೆಂಗಳೂರಿನ 26 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿದ್ದರು.
14. ರೋಗಿ-459: ಬೆಂಗಳೂರಿನ 35 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿ ಇದ್ದರು.
15. ರೋಗಿ-460: ಬೆಂಗಳೂರಿನ 31 ವರ್ಷದ ಪುರುಷ. ರೋಗಿ-419ರ ಸಂಪರ್ಕದ ಹೊಂದಿದ್ದರು.
16. ರೋಗಿ-461: ಬೆಂಗಳೂರಿನ 32 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿ ಇದ್ದರು.
17. ರೋಗಿ-462: ಬೆಂಗಳೂರಿನ 35 ವರ್ಷದ ಪುರುಷ. ರೋಗಿ-419ರ ಸಂಪರ್ಕದಲ್ಲಿದ್ದರು.
18. ರೋಗಿ-463: ಬೆಳಗಾವಿ ಜಿಲ್ಲೆ ರಾಯಬಾಗ್‍ನ 15 ವರ್ಷದ ಬಾಲಕ. ರೋಗಿ-148ರ ಸಂಪರ್ಕದಲ್ಲಿದ್ದರು.
19. ರೋಗಿ-464: ಮಂಡ್ಯ ಜಿಲ್ಲೆ ಮಳವಳ್ಳಿಯ 60 ವರ್ಷದ ಪುರುಷ. ರೋಗಿ ನಂಬರ್ 179ರ ಜೊತೆ ಸಂಪರ್ಕದಲ್ಲಿದ್ದರು.
20. ರೋಗಿ-465: ಬೆಂಗಳೂರು ನಗರದ 45 ವರ್ಷದ ಮಹಿಳೆ, ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ.
21. ರೋಗಿ-466: ಬೆಂಗಳೂರು ನಗರದ 50 ವರ್ಷದ ಪುರುಷ, ತೀವ್ರ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲು
22. ರೋಗಿ-467: ವಿಜಯಪುರದ 27 ವರ್ಷದ ಯುವಕ, ರೋಗಿ ನಂಬರ್ 221ರ ಜೊತೆ ಸಂಪರ್ಕದಲ್ಲಿದ್ದರು.
23. ರೋಗಿ-468: ಬಾಗಲಕೋಟೆ ಜಿಲ್ಲೆಯ ಮುಧೋಳದ 14 ವರ್ಷದ ಬಾಲಕ. ರೋಗಿ ನಂಬರ್ 380ರ ಜತೆ ಸಂಪರ್ಕದಲ್ಲಿದ್ದನು
24. ರೋಗಿ-469: ಬೆಂಗಳೂರು ನಗರದ 26 ವರ್ಷದ ಯುವಕ. ರೋಗಿ ನಂಬರ್ 419ರ ಜೊತೆ ಸಂಪರ್ಕದಲ್ಲಿದ್ದನು.
25. ರೋಗಿ-470: ಬೆಂಗಳೂರಿನ 20 ಯುವಕ, ರೋಗಿ-419ರ ಸಂಪರ್ಕ ಹೊಂದಿದ್ದರು.
26. ರೋಗಿ-471 ಬೆಂಗಳೂರಿನ 22 ಯುವಕ, ರೋಗಿ-419ರ ಸಂಪರ್ಕದಲ್ಲಿದ್ದರು.
27. ರೋಗಿ-472: ಬೆಂಗಳೂರಿನ 58 ಪುರುಷ, ರೋಗಿ-419ರ ಸಂಪರ್ಕದಲ್ಲಿದ್ದರು.
28. ರೋಗಿ-473: ಬೆಂಗಳೂರಿನ 38 ಪುರುಷ, ರೋಗಿ-419ರ ಸಂಪರ್ಕದಲ್ಲಿದ್ದರು.
29. ರೋಗಿ-474: ಬೆಂಗಳೂರಿನ 44 ಪುರುಷ, ರೋಗಿ-419ರ ಸಂಪರ್ಕದ ಹೊಂದಿದ್ದರು.

Leave a Reply

Your email address will not be published. Required fields are marked *

error: Content is protected !!