Monday, 20th May 2024

ತಿಪಟೂರಿನಲ್ಲಿ ಮೊದಲ ಬ್ಲಾಕ್ ಫಂಗಸ್ ಪತ್ತೆ : ಮಾಜಿ ಎಸಿಪಿ ಲೋಕೇಶ್ವರ ಮಾಹಿತಿ

ತಿಪಟೂರು : ಕರೋನ ಸೋಂಕಿಗೆ ಒಳಗಾಗಿದ್ದ ತಿಪಟೂರಿನ ಮಾರನಗೆರೆಯ ರಮೇಶ್ ಎಂಬ ವ್ಯಕ್ತಿಗೆ ಬ್ಲಾಕ್ ಫಂಗಸ್ ದೃಢ ವಾಗಿದ್ದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಬಿಜೆಪಿ ಮುಖಂಡ, ಮಾಜಿ ಎಸಿಪಿ ಲೋಕೇಶ್ವರ ತಿಳಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರೋನದಿಂದ ಚೇತರಿಸಿಕೊಂಡು ಬ್ಲಾಕ್ ಫಂಗಸ್ ಬಂದಿದ್ದ ರಮೇಶ್ ಬೆಂಗಳೂರಿನ ಆಸ್ಪತ್ರೆಗೆ ತೆರಳಿದರೂ ನಿಯಮದ ಅನುಸಾರ ತಾಲ್ಲೂಕು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣಿತ ಪತ್ರ ತರದೆ ಅಲ್ಲಿ ಅಡ್ಮಿಟ್ ಮಾಡಿಕೊಳ್ಳವಂತಿಲ್ಲ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ ಅವರನ್ನು ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ಪ್ರಾರಂಭಿಸಲಾಗಿದೆ. ಆಪರೇಷನ್ ಮಾಡಿ ಒಂದು ಕಣ್ಣು ತೆಗೆದು ಜೀವ ಉಳಿಸ ಲಾಗಿದೆ. ಈ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಗಳಿಗೂ ಸಹ ಮಾಹಿತಿ ನೀಡಿರುವುದಾಗಿ ತಿಳಿಸಿದರು.

ನಗರದಲ್ಲಿ ಲೋಕೇಶ್ವರ ಬಳಗ ಹಾಗೂ ಇತರೆ ದಾನಿಗಳ ಸಹಾಯದಿಂದ ಬಡವರಿಗೆ ಆಹಾರ ನೀಡುವ ಕಾರ್ಯಕ್ರಮ ೩೬ ನೇ ದಿನ ತಲುಪಿದ್ದು ಇದುವರೆಗೂ ೩೦ ಸಾವಿರ ಜನರಿಗೆ ಆಹಾರ ನೀಡಲಾಗಿದೆ. ಕಳೆದ ದಿನಗಳಿಂದ ಲಾಕ್‌ಡೌನ್‌ನಿಂದ ಸಂಕಷ್ಟ ಕ್ಕೀಡಾದ ರಿಕ್ಷಾ ಚಾಲಕರು, ಅಕ್ಕಸಾಲಿಗರು, ಟೈಲರ್ ವೃತ್ತಿಯವರು, ಮಡಿವಾಳರು, ಸ್ಲಂವಾಸಿಗಳು, ಕೂಲಿ ಕಾರ್ಮಿಕರು ಒಳಗೊಂಡು ಸುಮಾರು ೨೫೦೦ ಜನರಿಗೆ ಫುಡ್ ಕಿಟ್‌ಗಳನ್ನು ನೀಡಲಾಗುತ್ತಿದೆ.

ವಾರಿಯರ‍್ಸ್‌ಗಳಿಗೆ ಮಾಸ್ಕ್ ಸ್ಯಾನಿಟೈಸರ್ ಹೆಲ್ತ್ ಕಿಟ್‌ಗಳನ್ನು ನೀಡಲಾಗುತ್ತಿದೆ. ಇದಲ್ಲದೆ, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ, ಬಡವರಿಗೆ, ಭಿಕ್ಷುಕರಿಗೆ, ನಿರ್ಗತಿಕರಿಗೆ ಬೆಳಗಿನ ಹೊತ್ತು ಹಾಲು-ಗಂಜಿ ನೀಡುವ ಕಾರ್ಯಕ್ರಮ ಪ್ರಾರಂಭಿಸ ಲಾಗಿದ್ದು ಒಳ್ಳೆಯ ಸ್ಪಂದನೆ ದೊರತಿದೆ ಎಂದರು. ಈ ಎಲ್ಲಾ ಸೇವಾ ಕಾರ್ಯಕ್ಕೆ ಸ್ನೇಹಿತರು, ಹಲವಾರು ಸಂಘ-ಸಂಸ್ಥೆಗಳು, ಅನೇಕ ಸಾರ್ವಜನಿಕರು ಕೈಜೋಡಿಸಿದ್ದು, ೧೨ ಲಕ್ಷ ರೂಗಳಿಗೂ ಹೆಚ್ಚು ಹಣ ಸಂಗ್ರಹವಾಗಿದೆ ಮತ್ತುಲಕ್ಷಕ್ಕೂ ಹೆಚ್ಚು ಬೆಲೆ ಯುಳ್ಳ ಸರಕು ಸಾಮಗ್ರಿಗಳು ಬಂದಿದೆ. ಸರ್ಕಾರ ಲಾಕ್‌ಡೌನ್ ತೆರವುಗೊಳಿಸುವವರೆಗೂ ಈ ಕಾರ್ಯಕ್ರಮವನ್ನು ಮುಂದುವರಿ ಸುವುದಾಗಿ ತಿಳಿಸಿದರು.

ಕಾಳಸಂತೆಯಲ್ಲಿ ಸರ್ಕಾರದ ಕರೋನ ವ್ಯಾಕ್ಸಿನ್ ಮಾರಾಟ – ಲೋಕೇಶ್ವರ ಆರೋಪ ಸಾರ್ವಜನಿಕರಿಗೆ ಸರ್ಕಾರ ಉಚಿತವಾಗಿ ನೀಡುತ್ತಿರುವ ಕರೋನ ವ್ಯಾಕ್ಸಿನೇಷನ್ ಸರ್ಕಾರಿ ಆಸ್ಪತ್ರೆಗಳಿಂದ ಹೊರಗೆ ಬಂದು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ವಾಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಲಾಗಿದೆ.

ಶಾಸಕರೂ ಸಾರ್ವಜನಿಕರಿಗೆ ವ್ಯಾಕ್ಸಿನ್ ದೊರಕಿಸಲು ಮುಂದೆ ನಿಂತು ಕೆಲಸ ಮಾಡುತ್ತಿದ್ದರೂ ಬೇರೆ ಕೆಲವು ಆಸ್ಪತ್ರೆಗಳಿಗೆ ಹಂಚಿಕೆಯಾದ ವ್ಯಾಕ್ಸಿನ್ ಅನ್ನು ತಮಗೆ ಬೇಕಾದವರಿಗೆ ೯೦೦ ರೂಗಳಿಗೆ ನೀಡುತ್ತಿರುವ ಮಾಹಿತಿ ಬಂದಿದ್ದು, ಶಾಸಕರು, ವೈದ್ಯಾಧಿಕಾರಿಗಳು ಈ ಬಗ್ಗೆ ಸೂಕ್ತ ಕಲ್ರಮ ಕೈಗೊಂಡು ತಪ್ಪಿತಸ್ತರನ್ನು ಕಂಡುಹಿಡಿಯಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಸೊಪ್ಪು ಗಣೇಶ್, ಜಯರಾಂ, ಯಮುನ ಧರಣೇಶ್, ನಯೀಮ್, ಮುಖಂಡರಾದ ಬಸವರಾಜು, ಸಿಂಗ್ರಿ ದತ್ತಪ್ರಸಾದ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!