Sunday, 28th April 2024

ಮನುಷ್ಯನ ಕೆಟ್ಟ ಅಭ್ಯಾಸದಿಂದ ಆರೋಗ್ಯಕ್ಕೆ ಹಾನಿ: ಹಿರಿಯ ಸಿವಿಲ್ ನ್ಯಾ.ಎಂ.ಭಾರತಿ

ಹರಪನಹಳ್ಳಿ: ಮನುಷ್ಯನ ಕೆಟ್ಟ ಅಭ್ಯಾಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಇಂತಹ ಆರೋಗ್ಯಕ್ಕೆ ಹಾನಿ ಆಗುವ ಮಾದಕ ವಸ್ತುಗಳನ್ನು ಬದಿಗೊತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹರಪನಹಳ್ಳಿ , ಆರೋಗ್ಯ ಇಲಾಖೆ, ಬಂಗಿಬಸಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜ್, ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಜಿಲ್ಲಾ ಸರ್ವೇ ರಕ್ಷಣಾ ಘಟಕ ಜಿಲ್ಲಾ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ ಕಾರ್ಯಕ್ರಮದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ, ಮತ್ತು ತಂಬಾಕು ಅಂಗಡಿ ಮಾಲೀಕರಿಗೆ ಗುಲಾಬಿ ಹೂ ನೀಡುವ ಮೂಲಕ ಜಾಗೃತಿ ಮೂಡಿಸಿದರು.

ಧೂಮಪಾನ ಮಾಡುವವರ ಜೊತೆಗೆ ಅವರ ಪಕ್ಕದಲ್ಲಿ ನಿಲ್ಲುವ ಜನರಿಗೂ ಹಾನಿ ಎನ್ನುವುದು ಅಧ್ಯಯನ ಮೂಲಕ ದೃಢ ಪಟ್ಟಿದೆ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದಕ್ಕೆ ನಿಷೇಧವಿದೆ. ಧೂಮಪಾನದ ಹೊಗೆ ಶ್ವಾಸಕೋಸವನ್ನು ಸಂಪೂರ್ಣ ಹಾನಿ ಮಾಡುವ ಜೊತೆಗೆ, ಇತರ ಆರೋಗ್ಯ ಹಾಗೂ ಕ್ಯಾನ್ಸರ್‌ಕಾರಕ ಸಮಸ್ಯೆಗೆ ಕಾರಣವಾಗಲಿದೆ ಇದು ಧೂಮ ಪಾನ ಸೇವನೆಯಿಂದ ಮಾತ್ರವಲ್ಲ ಆ ಹೊಗೆ ಕುಡಿಯುವ ಜನರ ಆರೋಗ್ಯದ ಮೇಲೂ ಈ ಪರಿಣಾಮ ಬೀರಲಿದೆ ಎಂದು ಸಾರ್ವಜನಿಕ ರಿಗೆ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಜ್ಞಾನಗಂಗೋತ್ರಿ ಬಿ.ಇಡಿ ಕಾಲೇಜ್‌ನಲ್ಲಿ ಸಹಾಯಕ ಅಭಿಯೋಜಕ ರಾದ ಎನ್. ಮೀನಾಕ್ಷಿ ಕಾರ್ಯಕ್ರಮ ಉದ್ಘಾಟಿಸಿದರು.

ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಉಪಾಧ್ಯಕ್ಷ ಡಿ.ಬಿ.ವಾಸುದೇವ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಎಂ ಮೃತಂಜಯ್ಯ, ಬಾಗಳಿ ಮಂಜುನಾಥ್, ಎಂ. ಮಂಜುನಾಥ್, ಬಂಡ್ರಿ ಆನಂದ, ಕೆ. ಕೋಟ್ರೇಶ್, ವಾಮದೇವ, ಮುತ್ತಿಗಿ ರೇವಣ್ಣ, ಸಿ. ಹನುಂತಪ್ಪ, ಶಿವನಾಗ, ತಾಲೂಕು ವೈಧ್ಯಾಧಿಕಾರಿ ಅಧಿಕಾರಿ ಡಾ|| ಹಾಲ ಸ್ವಾಮಿ, ಎಸ್.ಸಿ.ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ|| ಆರ್. ನಾಗೇಂದ್ರರಾವ್, ಬಂಗಿ ಬಸಪ್ಪ ವಿಜ್ಞಾನ ಪದವಿ ಪೂರ್ವ ಕಾಳೇಜಿನ ಪ್ರಾಂಶುಪಾಲ ಅರುಣ ಕುಮಾರ್, ಆರೋಗ್ಯ ಇಲಾಖೆಯ ಸಿಬ್ಬಂಧಿಗಳಾದ ಭವನೇಶ್ವರಿ, ಗೌರಮ್ಮ, ಕೋಟ್ರೇಶ್, ಬಸವರಾಜ್. ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!