ಕೊಲ್ಹಾರ: ಪಟ್ಟಣದ ಬಹುಮುಖ ಪ್ರತಿಭೆಯುಳ್ಳ ಬಾಲನಟಿ ಮಧು ಕಟಬರ್ ಕಲೆ ಯನ್ನು ಗುರುತಿಸಿ ಪ್ರಸಿದ್ದ ಬೆಂಗಳೂರಿನ ಹಾಲ್ಮಾರ್ಕ್ ಸಂಸ್ಥೆ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಿ ಗೌರವಿಸಿದೆ.
ಹಾಲ್ ಮಾರ್ಕ್ ಸಂಸ್ಥೆಯ ಅಧ್ಯಕ್ಷ ಶಶಿಕುಮಾರ್ ನಾಯ್ಡು, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಮಧು ಕಟಬರಗೆ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದು ಬಾಲನಟಿಯಾಗಿ ಗುರುತಿಸಿ ಕೊಂಡಿರುವ ಮಧು ಕಟಬರ್ ಅನೇಕ ಸ್ಟೇಜ್ ಶೋ ಮೂಲಕ ಮನೆಮಾತಾಗಿದ್ದಾಳೆ ಹಲವು ನಾಟಕಗಳಲ್ಲಿ, ಕೆಲವು ಚಲನಚಿತ್ರ ಗಳಲ್ಲಿ ನಟಿಸುವ ಮೂಲಕ ತನ್ನ ಕಲೆಯನ್ನು ಪ್ರಚುರ ಪಡಿಸು ತ್ತಿದ್ದಾಳೆ.
ಕಡುಬಡತನದಲ್ಲಿ ಕಲೆಯನ್ನೇ ಉಸಿರು ಎಂಬಂತೆ ಬದುಕುತ್ತಿರುವ ಮಧು ಕಟಬರಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅವಶ್ಯಕತೆ ಇದೆ.