ಕೊಲ್ಹಾರ: ಪಾರದರ್ಶಕ, ಲಂಚಮುಕ್ತ, ಜನಪರ ಆಡಳಿತಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಸ್ತುವಾರಿ ವಿಜಯಕುಮಾರ್ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ಯುವಕರನ್ನು ಬರಮಾಡಿಕೊಂಡು ಮಾತನಾಡಿದ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯವನ್ನು ಲೂಟಿ ಮಾಡಿವೆ. ಅನ್ಯಾಯ, ಅಕ್ರಮ ಸ್ವಜನ ಪಕ್ಷಪಾತದಿಂದ ರಾಜ್ಯ ಅಭಿವೃದ್ಧಿಯಿಂದ ವಂಚಿತವಾಗಿದೆ ಲಂಚಮುಕ್ತ ಸುಭದ್ರ ಆಡಳಿತಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸ್ಥಾಪನೆಯಾಗಿದ್ದು ರಾಜ್ಯದ ಜನತೆ ಜನಪರ ಆಡಳಿತಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಶಿವಾನಂದ ಯಡಹಳ್ಳಿ, ಸುರೇಶ ಪಡಶಟ್ಟಿ, ರಾಕೇಶ ಇಂಗಳಗಿ, ಪುಂಡಲೀಕ ಬಿರಾದಾರ, ಪ್ರವೀಣ ಕನಸೆ ಇತರರು ಇದ್ದರು.