ಮಾನವಿ : ದೇಶದಲ್ಲಿ ಕೋವಿಡ್19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕ ಆರೋಗ್ಯ ಇಲಾಖೆ ಹಾಗೂ ತಾಲೂಕ ವಕೀಲರ ಸಂಘದ ಸಹಯೋಗದೊಂದಿಗೆ ಮಾನವಿ ವಕೀಲರ ಸಂಘದ ಸದಸ್ಯರಿಗೆ ಕೋವಿಸಿಲ್ಡ್ ಲಸಿಕೆಯನ್ನು ಹಾಕಲಾಯಿತು ಮುಂದಿನ ದಿನಗಳಲ್ಲಿ ಎರಡನೇ ಲಸಿಕೆಯನ್ನು ಹಾಕುವುದಕ್ಕೆ ಸಿದ್ದತೆ ಮಾಡಲಾಗುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ತಿಳಿಸಿದರು.
ತಾಲೂಕ ನ್ಯಾಯಲಯದ ಆವರಣದಲ್ಲಿ ಇಂದು ವಕೀಲರ ಸದಸ್ಯರಿಗೆ ಕೋವಿಡ್ ಲಸಿಕೆ ಹಾಕುವುದಕ್ಕೆ ಚಾಲನೆ ನೀಡಿ ಒಟ್ಟು 50 ಹೆಚ್ಚು ವಕೀಲರ ಲಸಿಕೆಯನ್ನು ಹಾಕಲಾಗಿದೆ ಎಂದು ಕಾರ್ಯದರ್ಶಿ ರವಿಕುಮಾರ್ ಪಾಟೀಲ ತಿಳಿಸಿದರು..ಕಾರ್ಯಕ್ರಮವನ್ನು ನ್ಯಾಯದೀಶರಾದ ವಿಜಯಕುಮಾರ್ ಎಸ್ ಹಿರೇಮಠ ಹಾಗೂ ವೈದ್ಯಧಿಕಾರಿ ಚಂದ್ರಶೇಖರಯ್ಯ ಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಚಾಲನೆ ನೀಡಿದರು..
ಈ ಸಂದರ್ಭದಲ್ಲಿ ನ್ಯಾಯದೀಶರಾದ ವಿಜಯಕುಮಾರ್ ಎಸ್ ಹಿರೇಮಠ. ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ. ಕಾರ್ಯದರ್ಶಿ ರವಿಕುಮಾರ್ ಪಾಟೀಲ, ಖಜಾಂಚಿ ಚಂದ್ರಶೇಖರ ಮದ್ಲಾಪೂರ, ಹಿರಿಯ ವಕೀಲರಾದ ಗುಮ್ಮ ಬಸವರಾಜ, ವೀರನಗೌಡ ಪೋತ್ನಾಳ, ವೈದ್ಯಾಧಿಕಾರಿ ಚಂದ್ರಶೇಖರಯ್ಯ ಸ್ವಾಮಿ, ವಿರೇಶ, ತಸ್ಲೀಮಾ, ಸೇರಿದಂತೆ ವಕೀಲರ ಸಂಘದ ಪದಾಧಿ ಕಾರಿಗಳು, ಹಿರಿಯ ಕಿರಿಯ ಮಹಿಳಾ ವಕೀಲರು ಹಾಗೂ ಕೋರ್ಟ್ ಸಿಬ್ಬಂದಿಗಳು ಉಪಸ್ಥಿತರಿದ್ದರು.