Saturday, 18th May 2024

ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ: ಯಶವಂತ ರಾಯಗೌಡ ಪಾಟೀಲ

ಇಂಡಿ: ಭಾರತ ದೇಶ ವಿವಿಧ ಸಂಸ್ಕೃತಿ, ಆಚಾರ,ವಿಚಾರ, ವೇಷಭೋಷಣಗಳಿಂದ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾ ಗಿದ್ದು ಸರ್ವಜನಾಂಗ ಶಾಂತಿ, ಸಹಬಾಳ್ವೆಯೊಂದಿಗೆ ಸಾಮರಸ್ಯ ಜೀವನ ಸಾಗಿಸುತ್ತಿದ್ದಾರೆ ಎಂದು ಶಾಸಕ ಯಶವಂತ ರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಶಿರಕನಹಳ್ಳಿ ಗ್ರಾಮದಲ್ಲಿ ಲಕ್ಷ್ಮೀ ದೇವಿಯ ಜಾತ್ರಾಮಹೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭಾರತ ದೇಶ ದೇವಾಲಯಗಳ ತೋಟಿಲು. ಇಲ್ಲಿನ ಜನತೆ ಬಹುದೇವತಾ ಆರಾಧಕರಾಗಿ ಪ್ರಕೃತಿಯಲ್ಲಿರುವ ಚರಾಚರ ವಸ್ತು ಗಳನ್ನು ದೇವರ ಸ್ಥಾನದಲ್ಲಿ ಪೂಜಿಸುವ ಸಂಸ್ಕೃತಿ ನಮ್ಮದಾಗಿದೆ. ನಮ್ಮ ಪೂರ್ವಜರು ಹಿಂದಿನಿಂದಲೂ ಆಶಾಢ ಮಾಸದಲ್ಲಿ ಮಾತೆ ಶ್ರೀ ಲಕ್ಷ್ಮೀ ದೇವತೆಯನ್ನು ಆರಾಧಿಸುತ್ತಾ ಬಂದಿದ್ದಾರೆ.

ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಲಕ್ಷ್ಮೀ ದೇವಿಯ ಜಾತ್ರಾಮಹೋತ್ಸವಗಳು ಜರುಗು ತ್ತವೆ. ಜಾತ್ರೆಗಳು ,ಹಬ್ಬ ಹರಿದಿನಗಳು ಆಚರಣೆ ಮಾಡುವುದರಿಂದ ಗ್ರಾಮಗಳಲ್ಲಿ ವಾಸಿಸುವ ಜನತೆ ಪರಸ್ಪರ ಸಾಮರಸ್ಯ ಮೂಡುತ್ತದೆ. ಇಂಡಿ ತಾಲೂಕಿನಲ್ಲಿ ಅನೇಕ ಪುಣ್ಯ ಪುರುಷರು ದಾರ್ಶನಿಕ ಸಾಧು-ಸಂತರು ನಡೇದಾಡಿ ಈ ಭಾಗದ ಜನರಿಗೆ ಒಳ್ಳೇಯ ಸಂಸ್ಕಾರ ನೀಡಿದ್ದಾರೆ. ಇಂತಹ ಮಹಾನ್ ದಾರ್ಶನಿಕ ಪುರುಷರ ಮಾರ್ಗದರ್ಶನದಿಂದ ಧಾನ ,ಧರ್ಮ ಪುಣ್ಯದ ಕೆಲಸಗಳು ಸದಾ ನಡೆಯುತ್ತಿವೆ.

ಮಾತೆ ಶ್ರೀಲಕ್ಷ್ಮೀ ದೇವಿಯ ಕೃಪಾರ್ಶಿವಾದಿಂದ ಮಳೆ.ಬೆಳೆ ಚೆನ್ನಾಗಿ ಬಂದು ರೈತರ ಬಾಳಿನಲ್ಲಿ ಸುಖ;ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ.ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ದರು. ಅಡವಿಲಿಂಗ ಮಹಾರಾಜರು ದಿವ್ಯಸಾನಿಧ್ಯವಹಿಸಿದರು.

ಕಾಂಗ್ರೇಸ್ ಮುಖಂಡ ರಾಜುಗೌಡ ಪಾಟೀಲ, ಶ್ರೀಮಂತ ಲೋಣಿ, ಗುತ್ತಿಗೆದಾರ ಶೇಖರ ರೂಗಿ, ಶಾಂತು ಶಿರಕನಹಳ್ಳಿ, ರಾಜು ಹೊಸಮನಿ ಮುಖಂಡರಾದ ಕಾಸು ಹಚಡದ್, ರಾಯಗೊಂಡ ಅಂಕಲಗಿ, ಶೇಖರ ಲೋಣಿ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಮಲ್ಲೇಶಿಗೌಡ ಪಾಟೀಲ ನಿರೂಪಿಸಿ, ಲಕ್ಷ್ಮಣ ಪಾಟೀಲ ವಂದಿಸಿದರು.

error: Content is protected !!