Saturday, 27th April 2024

ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ‘ದಿ ಗ್ಲೋ ವಾಕ್’ ನೈಟ್ ವಾಕಥಾನ್

ಬೆಂಗಳೂರು: ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿರುವ ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್, ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ‘ದಿ ಗ್ಲೋ ವಾಕ್’ ನೈಟ್ ವಾಕಥಾನ್‌ನೊಂದಿಗೆ ಆಚರಿಸಿತು. ಎಚ್‌ಸಿಜಿ ಕ್ಯಾನ್ಸರ್ ಕೇರ್‌ನ ಸರ‍್ಥ ಮತ್ತು ಸಮಗ್ರ ಚಿಕಿತ್ಸಾ ವಿಧಾನದ ಸಹಾಯ ದಿಂದ ಮಹಿಳೆಯರು ಕ್ಯಾನ್ಸರ್‌ ಎಂಬ ಕತ್ತಲೆಯನ್ನು ಯಾವುದೇ ಭಯವಿಲ್ಲದೆ ಎದುರಿಸಬಹುದು ಎಂಬ ಜಾಗೃತಿ ಮೂಡಿಸುವುದು ಮತ್ತು ಉತ್ತೇಜಿಸು ವುದು ಈ ಕರ‍್ಯಕ್ರಮದ ಉದ್ದೇಶವಾಗಿತ್ತು.

ಪೊಲೀಸ್ ಇನ್ಸ್‌ಪೆಕ್ಟರ್, ಆಯೇಷಾ. ಎಸ್ ಹಲಸುರುಗೇಟ್, ಸಂಚಾರ. ಪೊಲೀಸ್ ಠಾಣೆ ಬೆಂಗಳೂರು ಚಾಲನೆ ನೀಡಿದ ವಾಕಥಾನ್‌ನಲ್ಲಿ, ಕ್ಯಾನ್ಸರ್‌ನಿಂದ ಬದುಕುಳಿದವರು, ಕಾಲೇಜು ವಿದ್ಯರ‍್ಥಿಗಳು, ಉದ್ಯೋಗಸ್ಥ ತಾಯಂದಿರು, ಹಿರಿಯ ನಾಗರಿಕರು ಮತ್ತು ಸಮಾಜದ ವಿವಿಧ ಸ್ಥರಗಳಿಗೆ ಸೇರಿದ 300 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ಗಮನರ‍್ಹವಾಗಿತ್ತು.

‘ದಿ ಗ್ಲೋ ವಾಕ್’ ನೈಟ್ ವಾಕಥಾನ್‌ನಲ್ಲಿ ಭಾಗವಹಿಸಿದವರು, ಸೇಂಟ್ ಜೋಸೆಫ್ ಮೈದಾನದಿಂದ ರಾತ್ರಿ 08:30ಕ್ಕೆ ಆರಂಭವಾಗಿ ವಿಠಲ್ ಮಲ್ಯ ರಸ್ತೆ ಮತ್ತು ಯುಬಿ ಸಿಟಿ ಗೇಟ್‌ನಲ್ಲಿ ಹಾದುಹೋಗಿ ಮತ್ತೆ ಆರಂಭದ ಹಂತಕ್ಕೆ ಬರುವ ಮೂಲಕ 4 ಕಿ.ಮೀ. ಕ್ರಮಿಸಬೇಕಿತ್ತು. ಪಾಲ್ಗೊಂಡವರು ವಿಧವಿಧ ವಾದ ಆರ‍್ಷಕ ಪರಿಕರಗಳನ್ನು ಧರಿಸಿ, ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ವಿಧಾನಸೌಧದಂತಹ ನಗರದ ಪ್ರಮುಖ ಹೆಗ್ಗುರುತುಗಳಿರುವ ರಸ್ತೆಗಳಲ್ಲಿ ಹುರುಪಿನಿಂದ ನಡೆಯುವ ಮೂಲಕ ನಡೆದು ಕರ‍್ಯಕ್ರಮಕ್ಕೊಂದು ಕಳೆ ಬರುವಂತೆ ಮಾಡಿದರು.

ನಡಿಗೆಗೆ ಮೊದಲು, ಭಾಗವಹಿಸಿದ ಮಹಿಳೆಯರು ಗ್ಲೋ ಫೇಸ್ ಪೇಂಟಿಂಗ್, ಹೇರ್ ಬ್ರೇಡಿಂಗ್ ಮತ್ತು ಟೇ ಬೋ ಸೆಷನ್‌ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ನಡಿಗೆಯ ನಂತರ, ಸ್ಪರ್ಧಿಗಳು ಲಕ್ಕಿಡ್ರಾದಲ್ಲಿ ಭಾಗವಹಿಸಿದರು, ಅದರಲ್ಲಿ ಮೂವರು ವಿಜೇತರನ್ನು ಆಯ್ಕೆ ಮಾಡಲಾಯಿತು. ಈ ಅದೃಷ್ಟಶಾಲಿ ವಿಜೇತರು ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್‌ನಲ್ಲಿ ದೇಹದ ಉಚಿತ ತಪಾಸಣೆಗೆ ಅರ್ಹರಾಗಿರುತ್ತಾರೆ. ಈ ವಿಶಿಷ್ಟ ಕಾರ್ಯಕ್ರಮದ ಮೂಲಕ ಜನರು ರಾತ್ರಿಯಲ್ಲೂ ಬೆಂಗಳೂರಿನ ರಸ್ತೆಗಳನ್ನು ಬೆಳಗಿಸಿದರು.

ಕರ‍್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್‌ನ ಕರ್ನಾಟಕದ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನೀಷಾ ಕುಮಾರ್, “ಗ್ಲೋ ವಾಕ್ ನೈಟ್ ವಾಕಥಾನ್, ಜೀವನವನ್ನು ನಿರ್ಭೀತಿಯಿಂದ ಮುನ್ನಡೆಸುವ ಮಹಿಳೆಯರ ಮನೋಸ್ಥೈರ್ಯ ಮತ್ತು ಸ್ಥಿರತೆಗೆ ನೀಡುವ ಗೌರವವಾಗಿದೆ. ಮಹಿಳೆಯರು ತಮ್ಮ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲು ಇದು ಒಂದು ಅವಕಾಶ. ವಾಕಥಾನ್‌ಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿರುವುದನ್ನು ನೋಡಿ ನಮಗೆ ಸಂತೋಷವಾಗಿದೆ,” ಎಂದು ಹೇಳಿದರು.

ಗ್ಲೋ ವಾಕಥಾನ್, ಮಹಿಳೆಯರ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುವ, ಜೊತೆಗೆ ಪರಿಣಾಮಕಾರಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವ ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್‌ನ ಸಮರ್ಪಣಾ ಮನೋಭಾವಕ್ಕೆ ಸಾಕ್ಷಿಯಾಯಿತು.

Leave a Reply

Your email address will not be published. Required fields are marked *

error: Content is protected !!