ಹಾವೇರಿಯಲ್ಲಿ ಯುವತಿಯ ಬರ್ಬರ ಹತ್ಯೆ; ನಯಾಜ್ ಅರೆಸ್ಟ್
Murder Case: ಮೊದಲು ಅಪರಿಚಿತ ಯುವತಿಯ ಶವ ಎಂದು ಹಲಗೇರಿ ಪೊಲೀಸರು ಘೋಷಿಸಿದ್ದರು. ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಎಂಬ ಯುವತಿ ಹತ್ಯೆಯಾಗಿರುವುದು ದೃಢಪಟ್ಟಿದೆ. ಪ್ರಕರಣ ಸಂಬಂಧ ಆರೋಪಿ ನಯಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
B. S. Yediyurappa: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪೋಕ್ಸೊ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆವರೆಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ. ಇದರಿಂದ ಎರಡನೇ ಸುತ್ತಿನ ದಾವೆಯಲ್ಲಿ ಸದ್ಯಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿರಾಳರಾದಂತಾಗಿದೆ.
ಬೆಂಗಳೂರಲ್ಲಿ ಆಟೋ ಓಡಿಸುವ ಒಬ್ಬ ಸಾಮಾನ್ಯ ವ್ಯಕ್ತಿ ಸದ್ಯಕ್ಕೆ ಇಂಟರ್ನೆಟ್ನಲ್ಲಿ(internet) ಸಂಚಲನ ಮೂಡಿಸಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ, ಅವರ ಆಟೋದಲ್ಲಿದ್ದ ಒಂದು ಸಣ್ಣ ಪೋಸ್ಟರ್(Poster). ಈ ಪೋಸ್ಟರ್ ಮೂಲಕ ಆಟೋ ಚಾಲಕನ ಬದುಕಿನ ಕತೆ ಇಂದು ನೆಟ್ಟಿಗರಿಗೆ ಸ್ಫೂರ್ತಿಯನ್ನು ತುಂಬಿದೆ. ಅರೇ ಅಂತದ್ದು ಆ ಪೋಸ್ಟರ್ ನಲ್ಲಿ ಏನಿದೆ ಅಂತೀರಾ..? ಇಲ್ಲಿದೆ ನೋಡಿ ಉತ್ತರ
ಹಲ್ಲೆ ಮಾಡಿರುವ ಸೊಸೆ ಪ್ರಿಯದರ್ಶಿನಿ ವಿಕ್ಟೋರಿಯ ಆಸ್ಪತ್ರೆಯ ವೈದ್ಯೆ ಆಗಿದ್ದಾಳೆ ಎಂದು ತಿಳಿದುಬಂದಿದೆ. ಕಳೆದ 10 ವರ್ಷದಿಂದ ಈಕೆ ಅತ್ತೆ ಮತ್ತು ಮಾವನಿಗೆ ಕಿರುಕುಳ ನೀಡುತ್ತಿದ್ದಾಳೆ. ಕಿರುಕುಳ ತಾಳದೆ ಅತ್ತೆ ಹಾಗೂ ಮಾವ ಬೇರೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೂ ಕೂಡ ಮಾರ್ಚ್ 10ರಂದು ಈಕೆ ವೃದ್ಧ ಅತ್ತೆ ಮಾವನ ಬಾಡಿಗೆ ಮನೆಗೆ ಹೋಗಿ ಹಲ್ಲೆ ನಡೆಸಿದ್ದಾಳೆ.
Cotton Saree Styling 2025: ಕಾಟನ್ ಸೀರೆಗಳನ್ನು ಸ್ಟೈಲಿಶ್ ಆಗಿ ಉಟ್ಟು ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಒಂದಿಷ್ಟು ಸ್ಟೈಲಿಂಗ್ ಕಾನ್ಸೆಪ್ಟ್ ಅಳವಡಿಸಿಕೊಳ್ಳಬೇಕು ಎನ್ನುವ ಸೀರೆ ಸ್ಟೈಲಿಸ್ಟ್ ರೇಣುಕಾ ಪ್ರಕಾಶ್ ಒಂದಿಷ್ಟು ಉದಾಹರಣೆಯೊಂದಿಗೆ 5 ಸಿಂಪಲ್ ಐಡಿಯಾ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಪರಿಹಾರದ ಮೊತ್ತವನ್ನು ನೇರವಾಗಿ ಮೃತರ ಕುಟುಂಬಗಳಾದ ಜ್ಯೋತಿ ಹತ್ತರವಾಡ, ಮೇಘಾ ಹತ್ತರವಾಡ, ಮಹಾದೇವಿ ಬಾವನೂರ ಮತ್ತು ಅರುಣ್ ಕೋಪರ್ಡೆ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ. ಮಹಾಕುಂಭದ ಪ್ರಮುಖ ಸ್ನಾನದ ದಿನವಾದ ಮೌನಿ ಅಮಾವಾಸ್ಯೆಯಂದು ಸಂಗಮ ಘಾಟ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಭಕ್ತರು ಸಾವನ್ನಪ್ಪಿದ್ದರು.
ಇಂದು ಪೂರ್ವ ಸಂಚಾರಿ ವಿಭಾಗದ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ಆಟೋ ಮೀಟರ್ ದರ ಪರಿಷ್ಕರಣೆಗಾಗಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸಾರಿಗೆ ಇಲಾಖೆಯ ಅಧಿ ಕಾರಿಗಳು ಸೇರಿದಂತೆ ನಗರದ ಎಲ್ಲಾ ಚಾಲಕ ಸಂಘಟನೆಗಳು ಭಾಗಿ ಯಾಗಿದ್ವು. 17 ಸಂಘಟನೆ ಗಳ ಪೈಕಿ 16 ಸಂಘಟನೆಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿವೆ.
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿಸೇರಿದ್ದಾಗ ಸ್ಫೋಟಕ ಭವಿಷ್ಯ ನುಡಿದಿದ್ದ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು, ಸದ್ಯ ದರ್ಶನ್ ರಾಜಕೀಯ ಜೀವನದ ಬಗ್ಗೆ ಮತ್ತೆ ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ದರ್ಶನ್ ಜೈಲು ಸೇರಿದ್ದಾಗಲೂ ಇವರು ಜ್ಯೋತಿಷಿ ಭವಿಷ್ಯ ನುಡಿದು ಸುದ್ದಿಯಾಗಿದ್ದರು.
ಅಂಗಾಂಗ ದಾನ ಮಾನವೀಯತೆಯ ಪರಮೋಚ್ಛ ಕಾರ್ಯಗಳಲ್ಲಿ ಒಂದು. ನಾವೆಲ್ಲರೂ ಈ ಶ್ರೇಷ್ಟ ಕಾರ್ಯವನ್ನು ಬೆಂಬಲಿಸಬೇಕು” ಎಂದ ಅವರು ಜೀವ ರಕ್ಷಕ ಅಂಗಾಂಗ ಕಸಿಗೆ ಅನುವು ಮಾಡಿಕೊಡುವ ಕರ್ನಾಟಕ ಅಂಗ ಮತ್ತು ಅಂಗಾಂಶಗಳ ಕಸಿ ಸಂಸ್ಥೆ (SOTTO Karnataka)ಯ ಪಾತ್ರ ಹಾಗೂ ವೈದ್ಯರು, ದಾನಿಗಳ ತ್ಯಾಗವನ್ನು ಶ್ಲಾಘಿಸಿದರು. ಕಿಡ್ನಿ ಸಂಬಂಧಿ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದು
ಮಾ.4ರಂದು ಸಿಸೇರಿಯನ್ ಮೂಲಕ ವೈದ್ಯೆ ಡಾ.ರೇಣುಕಾ ಹೆರಿಗೆ ಮಾಡಿಸಿದ್ದರು. ಹೆರಿಯಾದ ಒಂದು ವಾರದ ಕಾಲ ಅನುಶ್ರೀ ಆರೋಗ್ಯವಾಗಿದ್ದಳು. ಇನ್ನೇನು ತಾಯಿ ಮಗುವನ್ನು ಡಿಸ್ಚಾರ್ಜ್ ಮಾಡಬೇಕಿತ್ತು. ಆದರೆ ಬುಧವಾರ ಅನುಶ್ರೀ ಆರೋಗ್ಯದಲ್ಲಿ ಏರುಪೇರಾಗಿದೆ, ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಹಲೋಕ ತ್ಯಜಿಸಿ ದ್ದಾರೆ.
Koratagere Protest: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂಯ ಚೀಲಗಾನಹಳ್ಳಿ ಗ್ರಾಮದ ಸಮೀಪ ಕಲ್ಲುಗಣಿಗಾರಿಕೆ ಮತ್ತು ಜಲ್ಲಿಕ್ರಷರ್ ನಡೆಸಲು ಮುಂದಾಗಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ತಾಲೂಕು ಕಚೇರಿಗೆ ಮುತ್ತಿಗೆಹಾಕಿ ರೈತರು ಪ್ರತಿಭಟನೆ ನಡೆಸಿದ್ದಾರೆ.
Ahobala Lakshmi Narasimhaswamy rathotsava: ಮಧುಗಿರಿ ತಾಲೂಕಿನ ಬಡವನಹಳ್ಳಿ ಹೋಬಳಿಯ ಜಕ್ಕೇನಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ರಥೋತ್ಸವಕ್ಕೆ ಬಹು ಭಾಷೆ ನಟ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಅವರು ಚಾಲನೆ ನೀಡಿದರು. ಬಳಿಕ ನರಸಿಂಹ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
DK Shivakumar: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ ಅನುಷ್ಠಾನಕ್ಕೆ ಬಜೆಟ್ನಲ್ಲಿ ನಮ್ಮ ಸರ್ಕಾರ ಬದ್ದತೆ ತೋರಿಸಿದೆ. ಈ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇನೆ. ಬಿಜೆಪಿಯ ಸದಸ್ಯರು ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆಗೆ ಅಧಿಸೂಚನೆ ಹೊರಡಿಸಿದರೆ ಎಲ್ಲರೂ ಸೇರಿ ಯೋಜನೆ ಪೂರ್ಣಗೊಳಿಸಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.