Viral Video: ಸೇತುವೆ ದಾಟಲು ಅಜ್ಜಿಯ ಸಾಹಸ ಕಂಡ ಜಿಲ್ಲಾಧಿಕಾರಿ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿ
ಜಾರ್ಖಂಡ್‌ನ ಬೊಕಾರೊದಲ್ಲಿ ಹಾನಿಗೊಳಗಾದ ಸೇತುವೆಯೊಂದನ್ನು ವೃದ್ಧ ಮಹಿಳೆಯೊಬ್ಬಳು ಕಷ್ಟಪಟ್ಟು ದಾಟಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ವಿಡಿಯೊವನ್ನು ಗಮನಿಸಿದ ಜಿಲ್ಲಾಧಿಕಾರಿ ಕೂಡಲೇ ಅದನ್ನು ದುರಸ್ತಿ ಮಾಡುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.


ರಾಂಚಿ: ಜಾರ್ಖಂಡ್‌ನ ಬೊಕಾರೊದಲ್ಲಿ ಹಾನಿಗೊಳಗಾದ ಸೇತುವೆಯೊಂದನ್ನು ದಾಟಲು ವೃದ್ಧ ಮಹಿಳೆಯೊಬ್ಬಳು ಹೆಣಗಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಸಂಪೂರ್ಣವಾಗಿ ಸವೆದುಹೋಗಿರುವ ಕಬ್ಬಿಣದ ಸೇತುವೆಯನ್ನು ದಾಟಲು ಮಹಿಳೆ ಪಟ್ಟ ಪಾಡನ್ನು ನೋಡಿದ ಜಿಲ್ಲಾಧಿಕಾರಿ ಕೂಡಲೇ ಅದನ್ನು ದುರಸ್ತಿ ಮಾಡುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.
ವೈರಲ್ ಆದ ವಿಡಿಯೊದಲ್ಲಿ ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಬ್ಬಿಣದ ಸೇತುವೆಯು ತೀವ್ರವಾಗಿ ಹಾನಿಗೊಳಗಾಗಿದ್ದು, ಅತ್ಯಂತ ಅಪಾಯಕಾರಿಯಾದ ಸೇತುವೆಯನ್ನು ವೃದ್ಧ ಮಹಿಳೆಯೊಬ್ಬಳು ದಾಟುತ್ತಿರುವುದು ಸೆರೆಯಾಗಿದೆ. ಸೋಶಿಯಲ್ ಮೀಡಿಯಾ ನೆಟ್ಟಿಗರು ಈ ದೃಶ್ಯವನ್ನು ಕಂಡು ಶಾಕ್ ಆಗಿದ್ದಾರೆ. ವಿಡಿಯೊದಲ್ಲಿ ಮಹಿಳೆ, ಸೇತುವೆಯ ಅಲ್ಪಸ್ವಲ್ಪ ಉಳಿದ ಭಾಗಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಬ್ಬಿಣದ ಸರಳುಗಳ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾ ಹೇಗೋ ಸೇತುವೆಯನ್ನು ದಾಟುವಲ್ಲಿ ಯಶಸ್ವಿಯಾಗಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
आ० उपायुक्त @BokaroDc महोदय वीडियो के माध्यम से बोकारो जिला के चाँपी का बताया जा रहा है ग्रामीणों को आने जाने बहुत दिक्कत हो रहा है बुजुर्ग दादी किस तरह पार करते हुए नजर आ रही है मामला को संज्ञान में ले@HemantSorenJMM
— dineshwar_patel (@dineshwar_15261) July 8, 2025
निवेदन है कि प्रस्तिथि को देखते हुए यथा शीघ्रजरूरी कदम उठाए pic.twitter.com/wk3SQcBRTA
ಈ ವಿಡಿಯೋ ಗ್ರಾಮಸ್ಥರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿತ್ತು. ಕಬ್ಬಿಣದ ಅವಶೇಷಗಳನ್ನು ಮಾತ್ರ ಹೊಂದಿರುವ ಸೇತುವೆಯನ್ನು ತೋರಿಸುವ ವಿಡಿಯೊವನ್ನು ಪೋಸ್ಟ್ ಮಾಡಿದ ನೆಟ್ಟಿಗರು ಬೊಕಾರೊ ಡಿಸಿ ಮತ್ತು ಹೇಮಂತ್ ಸೊರೆನ್ ಮತ್ತು ಜಾರ್ಖಂಡ್‌ನ ಗೌರವಾನ್ವಿತ ಮುಖ್ಯಮಂತ್ರಿಯ ಅಧಿಕೃತ ಎಕ್ಸ್ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿನಂತಿಸಿದ್ದರು.
ಈ ವಿಡಿಯೊಗೆ ಸಾಕಷ್ಟು ಜನ ನೆಟ್ಟಿಗರು ಕಾಮೆಂಟ್‍ಗಳನ್ನು ಮಾಡಿದ್ದಾರೆ. ಒಬ್ಬರು “ಬೊಕಾರೊ ಡಿಸಿ ಮತ್ತು ಗೌರವಾನ್ವಿತ ಜಿಲ್ಲಾಧಿಕಾರಿ ಸರ್, ದಯವಿಟ್ಟು ಈ ಗಂಭೀರ ವಿಷಯವನ್ನು ಅರಿತು ಗ್ರಾಮಸ್ಥರಿಗೆ ಸಹಾಯ ಮಾಡಿ” ಎಂದು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ದುಬೈ ಮಾಲ್‌ನಲ್ಲಿ ಸೂಪರ್‌ಮ್ಯಾನ್ ಹಾರಾಟ; ಏನಿದು ವೈರಲ್ ವಿಡಿಯೊ?
ಹಲವರ ಮನವಿ ಮೇರೆಗೆ ಈ ವಿಡಿಯೊಗೆ ಕೂಡಲೇ ಪ್ರತಿಕ್ರಿಯಿಸಿದ ಬೊಕಾರೊ ಡಿಸಿ ಅಜಯ್ ನಾಥ್ ಝಾ ಅವರು ಈಗಾಗಲೇ ದುರಸ್ತಿ ಕೆಲಸಕ್ಕೆ ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ. ಈ ವಿಡಿಯೊ ಇಲ್ಲಿಯವರೆಗೆ 65,100 ವ್ಯೂವ್ಸ್ ಗಳಿಸಿದೆ.