ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭರವಸೆಯ ಬೆಳಕಿನೆಡೆಗೆ ದಾರಿ ತೋರುವ ಗುರು

ಯಾವ ಮ್ಯಾನೆಂಜಮೆಂಟ್ ಗುರುಗಳು ಕೂಡ ಜನರ ನೈತಿಕತೆಯ ಮಟ್ಟವನ್ನು ಸುಧಾರಿಸಲು ಸಮರ್ಥ ರಾಗುತ್ತಿಲ್ಲ. ಸಮಸ್ಯೆ ಏನೆಂದರೆ ನಾವು ನಮ್ಮ ಸಹಜ ಕಲಿಕೆಯನ್ನು ಮರೆತಿದ್ದೇವೆ. ಯಾವುದು ಒಂದು ಕಾಲದಲ್ಲಿ ನಮ್ಮ ಜೀವನದ ಕ್ರಮವಾಗಿತ್ತೋ ಅದು ನಮಗೆ ಒಂದು ಅಪರಿಚಿತ ವಸ್ತುವಿನಂತೆ ಗೋಚರಿ ಸುತ್ತಿದೆ. ಭಾರತದ ಅಧ್ಯಾತ್ಮ ತತ್ವವು ಅಂತಹ ಒಂದು ಭವ್ಯ ಪರಂಪರೆ ಹೊಂದಿದ ಜೀವನ ಕ್ರಮವು.

ಭರವಸೆಯ ಬೆಳಕಿನೆಡೆಗೆ ದಾರಿ ತೋರುವ ಗುರು

Profile Ashok Nayak Jul 10, 2025 12:14 PM

ವಿದ್ಯಾಶಂಕರ ಶರ್ಮ

(ಇಂದು ಗುರು ಪೌರ್ಣಮಿ)

ದಾರಿ ದುರ್ಗಮವಾದಾಗ ನಾವು ಸಹಾಯವನ್ನು ನಿರೀಕ್ಷಿಸುತ್ತೇವೆ. ಮುಂದಿನ ಹಾದಿ ಕತ್ತಲಿನಿಂದ ತುಂಬಿದ್ದರೆ ಕಂದೀಲು ಹಚ್ಚುತ್ತೇವೆ. ನಮಗೆ ದಾರಿ ತಪ್ಪಿತು ಅನಿಸಿದಾಗ, ಯಾರನ್ನಾದರೂ ಕೇಳಿ ಮುಂದುವರಿಯುತ್ತೇವೆ. ಇದು ನಮ್ಮ ಹೊರಗಿನ ಪಯಣದ ಕತೆಯಾಯಿತು. ಬದುಕಿನ ದಾರಿ ತಪ್ಪಿದಾಗ, ಗೊಂದಲಗಳು ನಮ್ಮನ್ನು ಸುತ್ತುವರಿದಾಗ ನಾವು ನಿತ್ರಾಣವಾಗುತ್ತೇವೆ.

ಇಂದಿನ ಸಮಾಜದ ಪರಿಸ್ಥಿತಿ ಇದೇ ತೆರನಾಗಿದೆ. ಎತ್ತ ನೋಡಿದರೂ ಹಣದ ಅಮಲಿನ ಘಾಟು, ಅನ್ಯಾಯ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿವೆ. ಅದನ್ನು ಕೇಳುವ ಧೈರ್ಯ ಯಾರಿಗೂ ಇಲ್ಲ, ಏಕೆಂದರೆ ಹಾಗೆ ಕೇಳಿದವರನ್ನು ಒಂದೋ ಸುಮ್ಮನಿರಲಾಗಿಸುತ್ತದೆ ಅಥವಾ ಅವರನ್ನು ಇಲ್ಲವಾಗಿಸುತ್ತಾರೆ. ನಿಜಕ್ಕೂ ಭಯ ಹುಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.

ಎಲ್ಲವನ್ನೂ, ಎಲ್ಲರನ್ನೂ ಹಣ, ಅಧಿಕಾರದ ಬಲದಲ್ಲಿ ಅಳೆಯಲಾಗುತ್ತಿದೆ. ಯುವ ಜನತೆ ದಿಕ್ಕು ತಪ್ಪಿದ ಹರಿಣಗಳಂತಾಗಿದ್ದಾರೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ನಮಗೆ ಭರವಸೆಯಾಗಿ ಇರು ವುದು ಅಧ್ಯಾತ್ಮವೊಂದೇ. ಯಾಕೆ ಈ ಮಾತು ಹೇಳಬೇಕಾಗಿಯೆಂದರೆ, ಯಾವ ಲೌಕಿಕದ ಕೌಶಲ್ಯ, ಚತುರತೆಗಳು ಕೂಡ ನಮಗೆ ಸಹಾಯವಾಗಿ ಒದಗಿ ಬರುತ್ತಿಲ್ಲ.
ಇದನ್ನೂ ಓದಿ:Roopa Gururaj Column: ತಾವೇ ನೀಡಿದ ವರದಿಂದ ಹತರಾದ ಮಧು ಕೈಟಭ

ಯಾವ ಮ್ಯಾನೆಂಜಮೆಂಟ್ ಗುರುಗಳು ಕೂಡ ಜನರ ನೈತಿಕತೆಯ ಮಟ್ಟವನ್ನು ಸುಧಾರಿಸಲು ಸಮರ್ಥರಾಗುತ್ತಿಲ್ಲ. ಸಮಸ್ಯೆ ಏನೆಂದರೆ ನಾವು ನಮ್ಮ ಸಹಜ ಕಲಿಕೆಯನ್ನು ಮರೆತಿದ್ದೇವೆ. ಯಾವುದು ಒಂದು ಕಾಲದಲ್ಲಿ ನಮ್ಮ ಜೀವನದ ಕ್ರಮವಾಗಿತ್ತೋ ಅದು ನಮಗೆ ಒಂದು ಅಪರಿಚಿತ ವಸ್ತುವಿನಂತೆ ಗೋಚರಿಸುತ್ತಿದೆ. ಭಾರತದ ಅಧ್ಯಾತ್ಮ ತತ್ವವು ಅಂತಹ ಒಂದು ಭವ್ಯ ಪರಂಪರೆ ಹೊಂದಿದ ಜೀವನ ಕ್ರಮವು.

ಬದುಕಿನ ಏರಿಳಿತಗಳು ಒಂದು ಸ್ವಾಭಾವಿಕ ಪ್ರಕ್ರಿಯೆ. ಉತ್ತಮ ಗುಣಗಳನ್ನು ನಮ್ಮ ವ್ಯಕ್ತಿತ್ವದ ಭಾಗವನ್ನಾಗಿ ಮಾಡಿಕೊಳ್ಳಬೇಕು. ಇರುವುದರಲ್ಲಿ ಸಂತೃಪ್ತಿಯನ್ನು ಕಾಣುವುದು, ದ್ವೇಷ, ಅಸೂಯೆ, ಅತಿ ಆಸೆ, ಮೋಸ, ವಂಚನೆಗಳಿಂದ ಮುಕ್ತವಾದ ಜೇವನ ಶೈಲಿ ಇವು ಭಾರತ ಸಂಸ್ಕೃತಿಯ ಲಕ್ಷಣಗಳು.

ಇಂತಹ ಉದಾತ್ತ ಮೌಲ್ಯಗಳನ್ನು ಅಧ್ಯಾತ್ಮ ವಿದ್ಯೆಯು ನಮಗೆ ಕೊಡ ಮಾಡುವುದು. ನೈತಿಕತೆ ಯಿಂದ ಬಹು ದೂರ, ಬಲು ವೇಗವಾಗಿ ಸಾಗುತ್ತಿರುವ ಮನು ಕುಲಕ್ಕೆ ಅಧ್ಯಾತ್ಮ ಗುರುವಿನ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕದಡಿದ ಕೊಳದ ನೀರು ತಳದಲ್ಲಿ ಇರುವ ಕೊಳೆ ಯಿಂದ ಕಲುಷಿತವಾದಂತಿರುವ ನಮ್ಮ ಮನ ಮನೆಗಳಿಗೆ ಗುರುವಿನ ಅಮೃತ ಹಸ್ತದ ಸ್ಪರ್ಶ ಬೇಕಿದೆ. ತಮ್ಮ ಜ್ಞಾನದ ತಿಳಿವನ್ನು ನಮಗೆ ನೀಡುತ್ತ ನಮ್ಮನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುವ ಆಪದ್ಭಾಂದವ ಗುರು.

ತಾಯಿಯ ಮಮತೆ, ತಂದೆಯ ಕಾಳಜಿ ಇವೆರಡೂ ಮೇಳೈಸಿರುವ ಅಪರೂಪದ ವ್ಯಕ್ತಿ ಜ್ಞಾನಿಯಾದ ಗುರು. ಇಂದಿನ ಈ ಸಮಯದಲ್ಲಿ, ಅನೈತಿಕತೆಯ ಮುಸುಕು ಹಿರಿ ಕಿರಿಯರೆಂಬ ಭೇದವಿಲ್ಲದೆ ಎಲ್ಲ ರನ್ನೂ ಕವಿದಿದೆ. ಇಂದ್ರಿಯ ನಿಗ್ರಹ ಬಹು ಕಠಿಣ ಎನಿಸಿದೆ. ತಾಳ್ಮೆ ಎಂಬ ಶಬ್ದವನ್ನೇ ಜನರು ಮರೆತಂತಿದೆ. ವಿಪರೀತ ಹಿಂಸೆ, ಅವಮಾನವೀಯ ಕೃತ್ಯಗಳನ್ನು ಮಾಡುವುದರ ಜೊತೆಗೆ ಅದರ ಬಗ್ಗೆ ಪಶ್ಚಾತ್ತಾಪ ಪಡದಿರುವುದು ನೈತಿಕತೆಯ ಸಂಪೂರ್ಣ ಪತನ ಎನ್ನಲಡ್ಡಿಯಿಲ್ಲ.

ಅಧ್ಯಾತ್ಮದ ಮೂಲ ಚಿಂತನೆಗಳಾದ- ಆತ್ಮ ತೃಪ್ತಿ, ಸುಖ ಮತ್ತು ಸಂತೋಷಕ್ಕಾಗಿ ಹೊರಗಡೆಯ ವಸ್ತು ವಿಷಯಗಳ ನಿರಾವಲಂಬನೆ, ಸೋಲು- ಗೆಲುವು, ಸುಖ-ದು:ಖ, ಲಾಭ-ನಷ್ಟ ಎಂಬ ದ್ವಂದ್ವ ಗಳನ್ನು ಸಮಭಾವದಿಂದ ಪರಿಗಣಿಸುವುದು ಮುಂತಾದವುಗಳು ನಮ್ಮನ್ನು ನೈತಿಕ ದಿವಾಳಿತನ ದಿಂದ ಹೊರಗೆ ತರಬಲ್ಲವು. ಈ ದಿಕ್ಕಿನಲ್ಲಿ ನಮ್ಮ ಪಯಣವು ಯಶಸ್ಸು ಕಾಣಬೇಕೆಂದರೆ ಜ್ಞಾನ ಶೀಲ ಗುರುವಿನ ಮಾರ್ಗದರ್ಶನ ಅತ್ಯಗತ್ಯ.

ಗುರುವಿನ ಹಿತೋಪದೇಶ, ಸತ್ಸಂಗ, ಆಧ್ಯಾತ್ಮಿಕ ಗ್ರಂಥಗಳ ಸತತ ಅಭ್ಯಾಸದ ಮೂಲಕ ನಮ್ಮ ವ್ಯಕ್ತಿತ್ವವು ಶುದ್ಧಗೊಳ್ಳುತ್ತ ಸಾಗುವುದು. ಇದು ನಮ್ಮ ಶಿಕ್ಷಣದ ಭಾಗವೇ ಆದರೆ ನಮ್ಮ ಯವಪೀಳಿಗೆ ಯ ದೃಷ್ಟಿಕೋನವು ಉನ್ನತ ಮೌಲ್ಯಗಳೆಡೆಗೆ, ಉದಾತ್ತ ಚಿಂತನೆಡೆಗಳಿಗೆ ಸರಿಯುವುದು ಖಚಿತ. ಗುರುಪೌರ್ಣಮಿಯ ಈ ಶುಭ ಸಂದರ್ಭದಲ್ಲಿ ನಮ್ಮ ಪರಂಪರೆಯ ಸಂತರನ್ನು ನೆನೆಸುತ್ತ, ಅವರಿಗೆ ನಮಿಸುತ್ತ, ನಮ್ಮ ಚಿತ್ತವನ್ನು ಅಧ್ಯಾತ್ಮ ಸಾಧನೆಯೆಡೆಗೆ ಹರಿಸೋಣ. ಒಂದು ಆರೋಗ್ಯಕರ, ನೀತಿಯುತ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡೋಣ.