Pralhad Joshi Column: ಮೋದಿ ಸರಕಾರದ ಬೆಂಬಲದಲ್ಲಿ ಕೃಷಿಯ ನಾಗಾಲೋಟ
ರಾಷ್ಟ್ರವನ್ನು ಉನ್ನತಸ್ತರಕ್ಕೆ ಕೊಂಡೊಯ್ಯಲು ಬಯಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೇಲಿನ ವಾಕ್ಯ ಸಾರ್ವಕಾಲಿಕ ಸತ್ಯ ಎನ್ನುವಂತೆ ಮೊದಲು ಆದ್ಯತೆ ನೀಡಿದ್ದೇ ರೈತರ ಕಲ್ಯಾ ಣ ಮತ್ತು ಸಬಲೀಕರಣಕ್ಕೆ. ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಆಧಾರ ಸ್ತಂಭವಾಗಿರುವ ಕೃಷಿ ಕ್ಷೇತ್ರದ ಬಲವರ್ಧನೆ, ಪರಿವರ್ತನೆಗೆ ಅದ್ಭುತ ಯೋಜನೆಗಳನ್ನು ರೂಪಿಸಿ ಸಾಕಾರಗೊಳಿಸುವ ಮೂಲಕ ರೈತಶಕ್ತಿಗೆ ಮತ್ತಷ್ಟು ಬಲ ತುಂಬಿದ್ದಾರೆ.


10 ವರ್ಷದಲ್ಲಿ ಭಾರತೀಯ ಕೃಷಿ ಅಭ್ಯುದಯಕ್ಕೆ ಎನ್‌ಡಿಎ ಸರಕಾರದ ನವ್ಯ ಯೋಜನೆ ಗಳ ಅಭಯ Its meaningfully said in English that Once in our life we need a Doctor, a Lawyer, a Policeman and a Preacher but everyday three times a day we need a Farmer . (ಜೀವನದಲ್ಲಿ ನಮಗೆ ವೈದ್ಯರು, ವಕೀಲರು, ಪೊಲೀಸರು ಮತ್ತು ಪ್ರವಚನ ಕಾರರು ಒಮ್ಮೆಯಾದರೂ ಬೇಕು. ಆದರೆ ಪ್ರತಿದಿನ ಮೂರು ಬಾರಿ ನಮಗೆ ರೈತರು ಬೇಕು) ಎಂಬುದೊಂದು ಅರ್ಥ ಪೂರ್ಣ ಮಾತಿದೆ. ರಾಷ್ಟ್ರವನ್ನು ಉನ್ನತಸ್ತರಕ್ಕೆ ಕೊಂಡೊ ಯ್ಯಲು ಬಯಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೇಲಿನ ವಾಕ್ಯ ಸಾರ್ವಕಾಲಿಕ ಸತ್ಯ ಎನ್ನುವಂತೆ ಮೊದಲು ಆದ್ಯತೆ ನೀಡಿದ್ದೇ ರೈತರ ಕಲ್ಯಾಣ ಮತ್ತು ಸಬಲೀಕರಣಕ್ಕೆ. ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಆಧಾರ ಸ್ತಂಭವಾಗಿರುವ ಕೃಷಿ ಕ್ಷೇತ್ರದ ಬಲವರ್ಧನೆ, ಪರಿವರ್ತನೆಗೆ ಅದ್ಭುತ ಯೋಜನೆಗಳನ್ನು ರೂಪಿಸಿ ಸಾಕಾರ ಗೊಳಿಸುವ ಮೂಲಕ ರೈತಶಕ್ತಿಗೆ ಮತ್ತಷ್ಟು ಬಲ ತುಂಬಿದ್ದಾರೆ.
ಕೃಷಿಗೆ 4 ಪಟ್ಟು ಬಜೆಟ್: ಯುಪಿಎ ಸರಕಾರದ ಅವಧಿಗಿಂತ ನಾಲ್ಕೈದು ಪಟ್ಟು ಹೆಚ್ಚಿನ ಬಜೆಟ್ ಒದಗಿಸಿ ಕೃಷಿ ಕ್ಷೇತ್ರವನ್ನು ಸಶಕ್ತಗೊಳಿಸಿದ್ದೇ ಪ್ರಧಾನಿ ಮೋದಿ ನೇತೃತ್ವದ ಘೆಈಅ ಸರಕಾರ. 2004-2014ರ ಮಧ್ಯೆ ವಾರ್ಷಿಕ ಕೇವಲ ರೂ.25-40 ಸಾವಿರ ಕೋಟಿ ಆಸುಪಾಸು ಇರುತ್ತಿದ್ದ ಕೃಷಿ ಬಜೆಟ್ ಗಾತ್ರವೀಗ 1.3ಲಕ್ಷ ಕೋಟಿ ರು. ಮೀರಿದೆ. 2014ರಿಂದ ಈಚೆಗೆ ಭಾರ ತದ ಕೃಷಿ ಕ್ಷೇತ್ರದ ವಾರ್ಷಿಕ ಬಜೆಟ್ ಮೂರು ಪಟ್ಟು ಹೆಚ್ಚಳ ಕಂಡಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲೂ ಶೇ.18ರಷ್ಟು ಪ್ರಗತಿ ಸಾಧಿಸಿದೆ.
ಭಾರತದ ಆರ್ಥಿಕತೆ, ಔದ್ಯೋಗಿಕತೆಯಲ್ಲಿ ಕೃಷಿ ವಲಯದ ಅನನ್ಯ ಕೊಡುಗೆ ಅಡಕ ವಾಗಿದೆ. ನಮ್ಮ ಕೃಷಿ ವಲಯ ದೇಶದ ಶೇ.45ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿ ಅತಿದೊಡ್ಡ ಉದ್ಯೋಗದಾತವಾಗಿದೆ.
ರೈತರು ಅನ್ನದಾತರಷ್ಟೇ ಅಲ್ಲ, ದೇಶದ ಪ್ರಬಲ ಶಕ್ತಿಯಾಗಿದ್ದಾರೆ. ದೇಶದ ಒಟ್ಟು ಆದಾ ಯಕ್ಕೆ ತನ್ನದೇ ಆದ ರೂಪದಲ್ಲಿ ಶೇ.15ರಷ್ಟು ಕೊಡುಗೆ ನೀಡುತ್ತಿರುವ ಭಾರತದ ಕೃಷಿ ವಲಯ ವರ್ಷದಿಂದ ವರ್ಷಕ್ಕೆ ಹೊಸ ಆಯಾಮ ಪಡೆಯುತ್ತಿದೆ. ಅನ್ನದಾತರ ಆಪ್ತಮಿತ್ರ ಎನ್ನುವಂತೆ ಪ್ರಧಾನಿ ಮೋದಿ ನೇತೃತ್ವದ ಘೆಈಅ ಸರಕಾರ ಕಳೆದೊಂದು ದಶಕದಿಂದಲೂ ರೈತಸ್ನೇಹಿ ಯೋಜನೆಗಳನ್ನೇ ಅನುಷ್ಠಾನಗೊಳಿಸಿ 2047ರ ಅಭಿವೃದ್ಧಿ ಹೊಂದಿದ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ.
ಆರ್ಥಿಕತೆಯಲ್ಲಿ ವಿಶ್ವದ ವಿಶಿಷ್ಟ ಛಾಪು ಮೂಡಿಸುತ್ತಿರುವ ಭಾರತದ ಮನೋಬಲವೇ ರೈತಶಕ್ತಿ. ಅಂತೆಯೇ ದೇಶಾದ್ಯಂತ ರೈತರು ಇದೀಗ ಆರ್ಥಿಕ ಭದ್ರತೆ-ಭರವಸೆಯ ಹೊಸ, ನಿಜಾರ್ಥವನ್ನು ಅನುಭವಿಸುವ ಜತೆಗೆ ರಾಷ್ಟ್ರದ ಆರ್ಥಿಕತೆಯ ಒಂದು ಭಾಗವಾಗಿದ್ದಾರೆ.
ದೇಶದ ರೈತರ ಕಲ್ಯಾಣ, ತನ್ಮೂಲಕ ಕೃಷಿ ಕ್ಷೇತ್ರದ ವಿಕಾಸಕ್ಕೆ ಮೋದಿ ಸರಕಾರ ಪ್ರಾಮಾ ಣಿಕ ಬದ್ಧತೆ ತೋರುತ್ತಿದೆ. ನಮೋ ಪ್ರಧಾನಿಯಾದ ದಶಮಾನದಲ್ಲಿ ತಳೆದ ರೈತಪರ ನಿಲುವುಗಳು ಮಹೋನ್ನತವಾಗಿವೆ. ಕೃಷಿವಲಯಕ್ಕೆ ಒದಗಿಸಿದ ಬಜೆಟ್, ರೈತರಿಗಾಗಿ ಅನು ಷ್ಠಾನಗೊಳಿಸಿದ ಫಸಲ್ ಬಿಮಾ, ಕಿಸಾನ್ ಸಮ್ಮಾನ್ , ಪಿಎಂ ಕುಸುಮ, ಸಬ್ಸಿಡಿ ಸಾಲ ವಿಸ್ತರಣೆ, ಬೆಂಬಲ ಬೆಲೆ, ಮತ್ಸ್ಯ ಸಂಪದ, ಕೃಷಿ ಸಿಂಚಾಯಿ, ಕಿಸಾನ್ ಕ್ರೆಡಿಟ್ ಕಾರ್ಡ್, ಡಿಜಿಟಲ್ ಬೆಳೆ ಸಮೀಕ್ಷೆ, ಕಿಸಾನ್ ಪಿಂಚಣಿ, ಡ್ರೋಣ್ ತಂತ್ರಜ್ಞಾನ, ಪಿಎಂ ಧನ್-ಧಾನ್ಯ, ನ್ಯಾನೋ ಗೊಬ್ಬರ, ನೈಸರ್ಗಿಕ ಕೃಷಿ ಉತ್ತೇಜನ ಹೀಗೆ ಹತ್ತು ಹಲವು ಹೊಸ ಹೊಸ ಸಾರ್ಥಕ ಯೋಜನೆಗಳು ‘ರೈತಸ್ನೇಹಿ’ ಸರಕಾರವನ್ನು ಸಾಕ್ಷೀಕರಿಸುತ್ತಿವೆ.
3ನೇ ಅವಧಿಯ ಆರಂಭದಲ್ಲೇ ರೈತರಿಗೆ ಸಿಹಿ: ನರೇಂದ್ರ ಮೋದಿಯವರು ಐತಿಹಾಸಿಕ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಕಿಸಾನ್ ಸಮ್ಮಾನ್ 17ನೇ ಕಂತಿನ ೨೦ ಸಾವಿರ ಕೋಟಿ ರು. ಬಿಡುಗಡೆ ಕಡತಕ್ಕೆ ಸಹಿ ಹಾಕಿ ರೈತರಿಗೆ ಸಿಹಿ ನೀಡಿದರು. 2024ರಲ್ಲಿ ಮೋದಿ-3ರ ಪ್ರಥಮ ಸಂಪುಟ ಸಭೆಯಲ್ಲಿ ರೈತರಿಗೆ ಅರ್ಪಿತ ವಾದ ವಿಶೇಷ ಅನುಮೋದನೆಗಳು ಅವರ ರೈತಪರ ಕಾಳಜಿ, ಬದ್ಧತೆಯ ಧ್ಯೋತಕವಾಗಿವೆ.
ನೈಸರ್ಗಿಕ ವಿಕೋಪ ವೇಳೆ ರೈತರನ್ನು ಬೆಳೆಹಾನಿ ಸಂಕಷ್ಟದಿಂದ ಪಾರುಮಾಡಲೆಂದು ಅನುಷ್ಠಾನಗೊಳಿಸಿದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ರೈತರ ಪಾಲಿಗೆ ಸಂಜೀ ವಿನಿ. ಪ್ರಸಕ್ತ ಬಜೆಟ್‌ನಲ್ಲೂ ಅದನ್ನು ಮುಂದುವರಿಸಿ ರೈತವರ್ಗಕ್ಕೆ ಒಂದೊಳ್ಳೇ ಉಡುಗೊರೆ ನೀಡಿದ್ದಾರೆ.
2021-22ರಿಂದ 2025-26ರವರೆಗೆ ಒಟ್ಟು 69.515.71 ಕೋಟಿ ರು. ವಿಮಾ ಕೊಡುಗೆ ಕೊಟ್ಟ ರೈತಸ್ನೇಹಿ ಪ್ರಧಾನಿ ಎಂಬುದರಲ್ಲಿ ಎರಡು ಮಾತಿಲ್ಲ. NDA ಸರಕಾರದ ಮಹತ್ವದ ರೈತ ಪರ ನಿಲುವುಗಳಲ್ಲಿ ಅತ್ಯಾಧುನಿಕ ತಾಂತ್ರಿಕತೆ ಬಳಕೆಯೂ ಒಂದು. ಇದಕ್ಕಾಗಿ 824.77 ಕೋಟಿ ರು. ವಿಶೇಷ ನಿಧಿ ಸ್ಥಾಪಿಸಿ ಸಂಶೋಧನೆಗೆ ಒತ್ತು ನೀಡಿದೆ. ನಮ್ಮ ಕರ್ನಾಟಕವೂ ಸೇರಿ 9 ರಾಜ್ಯಗಳು ಹೊಸ ಹೊಸ ತಾಂತ್ರಿಕತೆಗಳನ್ನು ಅನುಷ್ಠಾನಗೊಳಿಸಿವೆ.
NDA ಸರಕಾರ ಹತ್ತು ವರ್ಷದಲ್ಲಿ ಸುಲಭ ದರದಲ್ಲಿ ರಸಗೊಬ್ಬರ ಪೂರೈಕೆಗಾಗಿಯೇ ಬರೋ ಬ್ಬರಿ 11 ಲಕ್ಷ ಕೋಟಿ ರು.ಗಳಿಗೂ ಮೀರಿ ಹಣ ನೀಡಿದೆ. ಬೇವುಲೇಪಿತ ಯೂರಿಯಾ 45 ಕೆಜಿ ಪ್ರತಿ ಚೀಲಕ್ಕೆ ಮಾರುಕಟ್ಟೆ ದರ 1666 ರು. ಇದ್ದರೆ, ಸರಕಾರ ಕೇವಲ 267 ರು.ಗಳ ಅತ್ಯಲ್ಪ ಬೆಲೆಗೆ ಗೊಬ್ಬರಮೂಟೆ ರೈತರ ಕೈಗಿಡುತ್ತಿದೆ.
ಬೆಂಬಲ ಬೆಲೆಯ ಬಲ: ಪ್ರಧಾನಿ ಮೋದಿಯವರ ವಿಶೇಷ ಕಾಳಜಿಯಿಂದ ಇಂದು ಎಂಎಸ್‌ಪಿ ದರ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. 12 ಕೋಟಿ ರೈತರಿಗೆ 2 ಲಕ್ಷ ಕೋಟಿ ರು. ಲಾಭವಾಗಿದೆ. ಹತ್ತು ವರ್ಷದಲ್ಲಿ ಒಟ್ಟು 22 ಮುಂಗಾರು-ಹಿಂಗಾರು ಉತ್ಪನ್ನ ಗಳಿಗೆ ಬೆಂಬಲ ಬೆಲೆ ರೂಪದಲ್ಲಿ 18 ಲಕ್ಷ ಕೋಟಿ ರು. ಭರಿಸಿದೆ. ಯುಪಿಎ ಸರಕಾರಕ್ಕೆ ಹೋಲಿಸಿದರೆ ಇದು ಶೇ.2.5ರಷ್ಟು ಅಧಿಕ ಎಂಬುದು ಪ್ರಶಂಸಾರ್ಹ.
ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯಡಿ 38 ಲಕ್ಷ ರೈತರು ಲಾಭ ಪಡೆಯುತ್ತಿದ್ದು, 10 ಲಕ್ಷ ಜನ ಉದ್ಯೋಗ ಕಂಡುಕೊಳ್ಳುತ್ತಿದ್ದಾರೆ. 1.75 ಲಕ್ಷ ಕಿಸಾನ್ ಸಮೃದ್ಧಿ ಕೇಂದ್ರ ಹಾಗೂ 8 ಸಾವಿರ ರೈತ ಉತ್ಪನ್ನಗಳ ಸಂಘಗಳನ್ನು (FPO) ಸ್ಥಾಪಿಸಿ ರೈತಕಲ್ಯಾಣ ಕಾರ್ಯ ಗಳಿಗೆ ನಾಂದಿ ಹಾಡಿದೆ.
ಕೃಷಿ ಸಿಂಚಾಯಿ, ಪಿಎಂ ಧನ-ಧಾನ್ಯ, ಕಿಸಾನ್ ಸಮ್ಮಾನ್, ಸಾಲಮಿತಿ ಹೆಚ್ಚಳ, ನೈಸರ್ಗಿಕ ಕೃಷಿ ಉತ್ತೇಜನದಂತಹ ಕ್ರಮಗಳು ಭಾರತೀಯ ಕೃಷಿ ಪದ್ಧತಿಗಳಿಗೆ ಹೊಸ ಆಯಾಮ ನೀಡುವ ಜತೆ ಅನ್ನದಾತರ ಆದಾಯ ದ್ವಿಗುಣಗೊಳಿಸುವ ಆಶಯಕ್ಕೆ ಪೂರಕವಾಗಿವೆ. ಸುಸ್ಥಿರ, ರಾಸಾಯನಿಕ ಮುಕ್ತ ಕೃಷಿ ಉತ್ತೇಜಿಸಲು ನೈಸರ್ಗಿಕ ಕೃಷಿ ರಾಷ್ಟ್ರೀಯ ಮಿಷನ್ ಆರಂಭಿಸಿ 2481 ಕೋಟಿ ರು. ಬಿಡುಗಡೆ ಮಾಡಿದೆ.
ರೈತರ ಅಭ್ಯುದಯಕ್ಕೆ ನಾಂದಿ ಹಾಡಿದ ನವೀಕರಿಸಬಹುದಾದ ಇಂಧನ ಇಲಾಖೆ ಅನ್ನದಾ ತರ ಅಭ್ಯುದಯಕ್ಕೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಸಹ ಸಾಥ್ ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ ( PM&KUSUM) ಯೋಜನೆ ಮೂಲಕ ರೈತರನ್ನು ವಿದ್ಯುತ್ ಸ್ವಾವಲಂಬಿಗಳನ್ನಾಗಿ ಪರಿವರ್ತಿ ಸುವಲ್ಲಿ ದಾಪುಗಾಲಿಟ್ಟಿದೆ.
ಈ ಯೋಜನೆಯಡಿ ಮಾರ್ಚ್ 2026ರ ವೇಳೆಗೆ ಸೋಲಾರ್ ಶಕ್ತಿ ಮೂಲಕ 34800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಇದಕ್ಕಾಗಿ 34,442 ಕೋಟಿ ರು. ಬಿಡು ಗಡೆ ಮಾಡಿ ಕೃಷಿ ಚಟುವಟಿಕೆ ಮೇಲೆ ಬೆಳಕು ಚೆಲ್ಲಿದೆ. ಕೇಂದ್ರ ಗ್ರಾಹಕ ವ್ಯವಹಾರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಸಹ 2024-24ನೇ ಸಾಲಿನಲ್ಲಿ 10 ಲಕ್ಷ ಮೆ. ಟನ್ ಸಕ್ಕರೆ ರಫ್ತಿಗೆ ಅವಕಾಶ ನೀಡಿದ್ದು, 5 ಕೋಟಿ ಕಬ್ಬು ಬೆಳೆಗಾರ ರೈತರಿಗೆ ಹಾಗೂ 5 ಲಕ್ಷ ಕಾರ್ಮಿಕರಿಗೆ ವರದಾನವಾಗಲಿದೆ.
ಭಾರತೀಯ ಕೃಷಿಯಲ್ಲಿ ಅಗ್ರಿಟೆಕ್ ಕ್ರಾಂತಿ: ಭಾರತೀಯ ಕೃಷಿಗೆ ಆಧುನಿಕ ತಂತ್ರಜ್ಞಾ ನದ ಸ್ಪರ್ಶ ಸಿಕ್ಕಿದೆ. ಮೋದಿಯವರ ಮಹತ್ವಾಕಾಂಕ್ಷೆಯ ಇ-ನ್ಯಾಮ್ (e-NAM ) ಡಿಜಿಟಲ್ ವೇದಿಕೆ ಸಾಕಾರಗೊಂಡಿದೆ. e&nam ದೇಶದ ಕೃಷಿ ಮಾರುಕಟ್ಟೆ ಸಮಿತಿಗಳಿಗೆ ಏಕೀಕೃತ ಬುನಾದಿ ಹಾಕಿದೆ. ರೈತರು ಮಧ್ಯವರ್ತಿಗಳ ಮೊರೆಹೋಗದೆ ನೇರವಾಗಿ e&nam ಮೂಲಕ ವೇ ಕೃಷಿ ಉತ್ಪನ್ನ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುವ ಕ್ರಾಂತಿಕಾರಿ ಕೊಡುಗೆ ಇದು. ಅಲ್ಲದೇ, ರೈತರಿಗೆ ಇದೀಗ ಸುಲಭ ದರದಲ್ಲಿ ಡ್ರೋನ್ ತಾಂತ್ರಿಕತೆ ಅಳವಡಿಕೆಗೆ ಉತ್ತೇಜನ ಸಿಗುತ್ತಿದೆ. ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳನ್ನು ನಬಾರ್ಡ್ ನೊಂದಿಗೆ ಏಕೀಕೃತ ಗೊಳಿಸಿ ರಾಷ್ಟ್ರೀಯ ಸಾಫ್ಟ್ ವೇರ್ ಅಂತರ್ಜಾಲ ಮೂಲಕ ಮಂಜೂರಾತಿ ಪ್ರಕ್ರಿಯೆ ಪಾರದರ್ಶಕಗೊಳಿಸಿದೆ. 65000ಕ್ಕೂ ಅಧಿಕ ಸಹಕಾರಿ ಸಂಘಗಳು ಕಾರ್ಯತತ್ಪರವಾಗಿವೆ.
2025-26ನೇ ಬಜೆಟ್ ನಲ್ಲಿ ಕೃಷಿ ಬಲವರ್ಧನೆ 2025-26ನೇ ಆರ್ಥಿಕ ವರ್ಷದ ಬಜೆಟ್ ಅಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಕೃಷಿ ಅಭಿವೃದ್ಧಿಗೆ ಮತ್ತಷ್ಟು ಕ್ರಾಂತಿಕಾರಿ ಪ್ರಸ್ತಾವನೆಗಳನ್ನು ಮಂಡಿಸುವ ಮೂಲಕ ಮೋದಿ ಸರಕಾರದ ಬದ್ಧತೆಯನ್ನು ಅನಾವರಣಗೊಳಿಸಿದ್ದಾರೆ.
2029ಕ್ಕೆ ದ್ವಿದಳ ಧಾನ್ಯ ಆಮದುಮುಕ್ತ ಗುರಿ: ತೊಗರಿ, ಉದ್ದು ಹಾಗೂ ಮಸೂರ್ ದಾಲ್ ದ್ವಿದಳ ಧಾನ್ಯ ಉತ್ಪನ್ನ ಹೆಚ್ಚಿಸಿ ಆಮದನ್ನು ತಗ್ಗಿಸುವ ದೂರದರ್ಶಿ ಯೋಜನೆ ಅನುಷ್ಠಾನಕ್ಕೆ ಮಹತ್ತರ ಹೆಜ್ಜೆಯಿರಿಸಿದೆ. ಇದಕ್ಕಾಗಿ ದ್ವಿದಳಗಳ ಆತ್ಮ ನಿರ್ಭರತಾ 6 ವರ್ಷ ಗಳ ದೂರಗಾಮಿ ಮಿಷನ್ ಘೋಷಿಸಿದೆ. 2029ರ ಹೊತ್ತಿಗೆ ದ್ವಿದಳ ಧಾನ್ಯಗಳ ಸಂಪೂರ್ಣ ಆಮದು ಮುಕ್ತವನ್ನಾಗಿಸುವ ಮಹತ್ವದ ಗುರಿ ಹೊಂದಿದೆ.
ಪಿಎಂ ಧನ-ಧಾನ್ಯ ಯೋಜನೆ ರೂಪಿಸಿ ದೇಶಾದ್ಯಂತ ಕನಿಷ್ಠ ಇಳುವರಿಯ 100 ಜಿಲ್ಲೆ ಗಳನ್ನು ಯೋಜನೆಯೊಳಗೆ ತಂದು ಅಮೂಲಾಗ್ರ ಬದಲಾವಣೆ ಮೂಲಕ ಭಾರತದ ಕೃಷಿ ಪದ್ಧತಿಗೆ ಹೊಸ ಆಯಾಮ ನೀಡುವ ಕಾರ್ಯ ಕೈಗೊಂಡಿರುವುದೂ ಮೋದಿ ಸರಕಾರದ ಒಂದು ವಿಶಿಷ್ಟ ಕಾರ್ಯವೇ ಆಗಿದೆ.
ಕಿಸಾನ್ ಸಾಲಮಿತಿ ಹೆಚ್ಚಳ ಕೋಟ್ಯಂತರ ರೈತರಿಗೆ ಬಲ: ಪ್ರಸಕ್ತ ಬಜೆಟ್ ಅಲ್ಲಿ ಪ್ರಧಾನಿ ಮೋದಿ ಅವರ ಮತ್ತೊಂದು ಮಹೋನ್ನತ ರೈತಪರ ನಿಲುವು ಕೃಷಿ ಸಾಲ ವಿಸ್ತರಣೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರಿಯಾಯಿತಿ ಬಡ್ಡಿ ದರದ ಅಲ್ಪಾವಧಿ ಕೃಷಿಸಾಲವನ್ನು 5 ಲಕ್ಷ ರು.ಗಳಿಗೆ ಹೆಚ್ಚಿಸುವ ಮೂಲಕ ದೇಶದ 7.7 ಕೋಟಿ ರೈತರಿಗೆ ಆರ್ಥಿಕ ಬಲ ತುಂಬಿರುವುದು ಅನನ್ಯ.
ಒಟ್ಟಾರೆ ಹೇಳುವುದಾದರೆ ದೇಶದ ಬೆನ್ನೆಲುಬಾಗಿರುವ ರೈತರ ಅಭ್ಯುದಯ ಮತ್ತು ಕೃಷಿ ವಲಯದ ಸಬಲೀಕರಣಕ್ಕೆ ಮೋದಿ ಸರಕಾರ ಟೊಂಕ ಕಟ್ಟಿ ನಿಂತಿದೆ. ಭಾರತೀಯ ಕೃಷಿ ಯನ್ನು ಜಗತ್ತಿನ ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಕೃಷಿ ಬೆಳವಣಿಗೆ ಯೊಂದಿಗೆ ಪ್ರಬಲವಾಗಿ ವಿಕಸನಗೊಳಿಸುತ್ತಿದೆ.
ನಮ್ಮ ಕೃಷಿಯನ್ನು ಹೆಚ್ಚು ಹೆಚ್ಚು ಲಾಭದಾಯಕವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ಅನ್ನದಾತನ ಜೀವನಮಟ್ಟವನ್ನು ನಿರಂತರ ಸುಧಾರಿಸುವ ನಿಟ್ಟಿನಲ್ಲಿ...‘ ಕೃಷಿ ವಿನಃ ನ ಜೀವಂತಿ ಜೀವಃ ಸರ್ವೇ ಪ್ರಣಶ್ಯತಿ ತಸ್ಮಾತ್ ಕೃಷಿ ಪ್ರಯತ್ನನ ಕುರ್ವಿತಾ ಸುಖ ಸಂಯುತಃ ’ ಎಂಬ ಅರ್ಥಪೂರ್ಣ ಪುರಾತನ ವಾಕ್ಯದ ಪ್ರೇರಣೆಯಿಂದ ನಿರಂತರ ನೂತನ ಕ್ರಮಗಳ ಸರಣಿಯನ್ನು ಮುಂದುವರಿಸಿದೆ.