ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Mahurat Deliveries: ಮುಹೂರ್ತಕ್ಕೆ ಸರಿಯಾಗಿ ಹೆರಿಗೆ! ಏನಿದು ಹೊಸ ಕ್ರೇಜ್‌- ವೈದ್ಯರು ಬಿಚ್ಚಿಟ್ಟ ಆ ಭಯಾನಕ ಸಂಗತಿ ಏನು?

ಹುಟ್ಟು-ಸಾವು ಎರಡೂ ನಮ್ಮ ಕೈಲಿಲ್ಲ... ಎಲ್ಲವೂ ದೇವರ ಕೈಲಿದೆ ಎನ್ನುತ್ತಾರೆ. ಆದರೆ ಇದೀಗ ಮುಹೂರ್ತ ಫಿಕ್ಸ್‌ ಮಾಡಿ ನಂತರ ಹೆರಿಗೆ ಮಾಡಿಸುವ ಕೇಜ್‌ವೊಂದು ಭಾರೀ ಸದ್ದು ಮಾಡುತ್ತಿದೆ. ಪೋಷಕರು ತಮ್ಮ ಮಗು ಯಾವ ಶುಭ ದಿನದಂದು, ಯಾವ ಘಳಿಗೆಯಲ್ಲಿ ಜನಿಸಬೇಕೆಂದು ಮೊದಲೇ ನಿರ್ಧರಿಸುತ್ತಾರಂತೆ.

ಮುಹೂರ್ತಕ್ಕೆ ಸರಿಯಾಗಿ ಹೆರಿಗೆ! ದೇಶದಲ್ಲಿ ಹೆಚ್ಚುತ್ತಿದೆ ಇದೊಂದು ಕ್ರೇಜ್‌

Profile Pushpa Kumari Feb 20, 2025 4:09 PM

ನವದೆಹಲಿ: ಮಗುವಿಗೆ ಜನ್ಮನೀಡುವುದು ಎಂದರೆ ತಂದೆ ತಾಯಿಗೆ ಸಂತಸದ ಕ್ಷಣ, ಅಲ್ಲದೇ ಜೀವನದ ಖುಷಿಯನ್ನು ಸಂಭ್ರಮಿಸುವ ಒಂದು ಸುಂದರವಾದ ಘಳಿಗೆಯಾಗಿದ್ದು ಎಲ್ಲರೂ ಆ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ದಿನ ನೋಡಿ ಹೆರಿಗೆ ಮಾಡಿಸುವ (Mahurat Deliveries) ಕ್ರಮವಂತೂ ಟ್ರೆಂಡ್ ಆಗಿ ಬಿಟ್ಟಿದೆ. ಹಿಂದೆಲ್ಲಾ ಇದಕ್ಕೆ ಅವಕಾಶವಿರಲಿಲ್ಲ.. ಇಂದು ತಂತ್ರಜ್ಞಾನ ಬಹಳ ಮುಂದುವರಿದಿದ್ದು ಮಗುವಿನ ಬಗ್ಗೆ ಸಂಪೂರ್ಣ ವಿಚಾರ ಗರ್ಭದಲ್ಲಿರುವಾಗಲೇ ತಿಳಿದುಕೊಳ್ಳವ ಅವಕಾಶ ಇದ್ದು, ಅದರ ಜೊತೆ ಮಗುವಿನ ಹೆರಿಗೆ ಇದೇ ಮುಹೂರ್ತದಲ್ಲಿ ಆಗಬೇಕು ಎಂದು ಪೋಷಕರೇ ವೈದ್ಯರಿಗಿಂತ ಮೊದಲು ನಿಗದಿ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಟ್ರೆಂಡ್ ಮೀತಿ ಮೀರಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಮುಹೂರ್ತ ಡೆಲಿವರಿ ಎಂದೇ ಜನಜನಿತವಾಗಿರುವ ಈ ಟ್ರೆಂಡ್‌ ಬಗ್ಗೆ ಹೇಳುವುದಾದರೆ, ಇತ್ತೀಚಿನ ದಿನಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರು ಜ್ಯೋತಿಷಿಗಳ ಬಳಿ ಹೋಗಿ ಮಗು ಜನನಕ್ಕೆ ಯಾವ ದಿನ ಯಾವ ಘಳಿಗೆ ಉತ್ತಮ ಎಂಬುದನ್ನು ಬರೆಸಿಕೊಂಡು ಬಂದು ವೈದ್ಯರಿಗೆ ತಿಳಿಸುತ್ತಾರೆ. ಅಶುಭ ಘಳಿಗೆ ಯಲ್ಲಿ ಮಗು ಹುಟ್ಟಿದರೆ ಕಷ್ಟಗಳು ಬರಬಹುದು ಎನ್ನುವ ಕಾರಣಕ್ಕಾಗಿ ಪೋಷಕರು ಈ ರೀತಿಯ ನಿರ್ಧಾರ ತೆಗೆದುಕೊಳುತ್ತಿದ್ದಾರೆ. ಪೋಷಕರೇ ಇಂತಹ ದಿನ ಹೆರಿಗೆಯಾದರೆ ಉತ್ತಮ ಎಂದು ಅವರೇ ಸಮಯವನ್ನು ನಿಗದಿ ಮಾಡಿಕೊಂಡು ವೈದ್ಯರಿಗೆ ತಿಳಿಸು ವಂತಹ ಸನ್ನಿವೇಶ ಉಂಟಾಗಿದೆ. ಇತ್ತೀಚೆಗೆ ಈ ರೀತಿಯ ಘಟನೆಗಳು ವಿಪರೀತವಾಗಿವೆ ಎಂದು ವೈದ್ಯರೇ ಬಹಿರಂಗ ಪಡಿಸಿದ್ದಾರೆ.

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಬಳಿಕ ಹೆಚ್ಚಿನ ಕ್ರೇಜ್‌

ಅದರಲ್ಲೂ ಜನವರಿ 2024ರಲ್ಲಿ ಈ ಒಂದು ಹುಚ್ಚು ವಿಪರೀತಕ್ಕೆ ಹೋಗಿತ್ತು. ಜನವರಿ 22 ರಂದು ರಾಮಜನ್ಮಭೂಮಿಯಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಅಂದು ನಡೆಯುತ್ತಿತ್ತು. ಅದೇ ವಿಶೇಷ ದಿನವೇ ನಮ್ಮ ಮಗುವಿನ ಹೆರಿಗೆಯಾಗಬೇಕು ಎಂದು ಹೆರಿಗೆಯಾಗುವ ದಿನಾಂಕಕ್ಕೂ ಮೊದಲೇ ಪೋಷಕರು ವೈದ್ಯರಿಗೆ ಒತ್ತಾಯ ಮಾಡಿ ಹೆರಿಗೆ ಮಾಡಿಸಿರುವ ಘಟನೆ ದೇಶದ ತುಂಬಾ ಹೆಚ್ಚಾಗಿ ನಡೆದಿವೆ ಎಂಬ ಆತಂಕಕಾರಿ ಮಾಹಿತಿ ಆಚೆ ಬಂದಿದೆ.

ವೈದ್ಯರ ಆತಂಕ

ಇನ್ನು ಪೋಷಕರ ಈ ಹುಚ್ಚಾಟಕ್ಕೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ‌ತಾಯಿ ಮತ್ತು ಮಗು ಇಬ್ಬರ ಪ್ರಾಣಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಮಗು ಜನನದ ಅವಧಿ ಪೂರ್ಣಗೊಳ್ಳದೆ ಪೋಷಕರೇ ನಿರ್ಧರಿಸಿದರೆ ನವಜಾತ ಶಿಶುವಿಗೆ ಅನೇಕ ತೊಂದರೆಗಳು ಉಂಟಾಗುತ್ತವೆ. ಕೆಲವೊಮ್ಮೆ ಮಗುವನ್ನು ಎನ್​ಐಸಿಯುನಲ್ಲಿಡುವ ಪ್ರಸಂಗ ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ: Health Tips: ತೂಕ ಇಳಿಕೆಯಿಂದ ಚರ್ಮದ ಆರೈಕೆವರೆಗೆ- ಬೆಳಗ್ಗೆ ಚಹಾ ಬದಲು ಈ ಆರೋಗ್ಯಕರ ಪಾನೀಯ ಸೇವಿಸಿ!

ಗರ್ಭದಲ್ಲಿ ಮಗು ಸಂಪೂರ್ಣ ದಿನ ಇರದೇ ಅಂದ್ರೆ 37 ವಾರಗಳಿಗಿಂತ ಕಡಿಮೆ ಅವಧಿ ಯಲ್ಲಿ ಮಗುವನ್ನು ಹೆರಿಗೆ ಮಾಡಿಸಿದರೆ ಅನೇಕ ತೊಂದರೆಗಳು ಉಂಟಾಗುತ್ತವೆ. ಇಂತಹ ಸಮಯದಲ್ಲ ಸಿಸೇರಿಯನ್ ಮಾಡಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಅನಗತ್ಯ ಶಸ್ತ್ರಚಿಕಿತ್ಸೆ ಪ್ರಕ್ರಿಯೆಗಳು ಹೆಚ್ಚು ಅಪಾಯವನ್ನು ತಂದಿಡಲಿದ್ದು, ಡೆಲಿವರಿ ನಂತರ ತಾಯಿ ಮತ್ತು ಮಗುವಿನ ಮೇಲೆ ಅನೇಕ ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.