Children’s Skin: ಮಕ್ಕಳ ಚರ್ಮದ ಕಾಂತಿ ಹೆಚ್ಚಿಸಲು ಈ ನೈಸರ್ಗಿಕ ವಸ್ತುಗಳನ್ನು ಬಳಸಿ
ಮಕ್ಕಳ ಚರ್ಮ ಅಥವಾ ತ್ವಚೆಯನ್ನು ಕಾಪಾಡಲು ಏನು ಮಾಡಬೇಕು ಎಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ. ವಿವಿಧ ರಸಾಯನಿಕ ಕ್ರಿಮ್‌ಗಳ ಬದಲು ನೈಸರ್ಗಿಕ ಮನೆ ಮದ್ದುಗಳನ್ನು ಬಳಸುವುದರಿಂದ ಮಕ್ಕಳ ಚರ್ಮದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

children’s skin

ನವದೆಹಲಿ: ಮಕ್ಕಳ ಚರ್ಮವು ತುಂಬಾ ಸೂಕ್ಷ್ಮವಾಗಿರುವ ಕಾರಣ ಸೋಂಕು ಹಾಗೂ ಸಮಸ್ಯೆ ಅತೀ ಬೇಗನೆ ಕಾಣಿಸಿಕೊಳ್ಳುತ್ತದೆ. ಮಾರುಕಟ್ಟೆಯಿಂದ ಖರೀದಿಸಿದ ಸೋಪು, ಶ್ಯಾಂಪೂ, ಮಾಯ್‌ಶ್ಚರೈಸರ್ ಡಿಟರ್ಜಂಟ್‌ಗಳು ಬಳಕೆಯಿಂದ ಚರ್ಮಕ್ಕೆ ಹಾನಿ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಹಾಗಾದರೆ ಮಕ್ಕಳ ಚರ್ಮ ಅಥವಾ ತ್ವಚೆಯನ್ನು ಕಾಪಾಡಲು ಏನು ಮಾಡಬೇಕು? ಈ ಪ್ರಶ್ನೆ ಹೆತ್ತವರಲ್ಲಿ ಮೂಡುವುದು ಸಹಜ (children’s skin Care). ಇದಕ್ಕೆ ಆರೋಗ್ಯ ತಜ್ಞರು ಪರಿಹಾರವನ್ನೂ ಸೂಚಿಸಿದ್ದಾರೆ. ಮಾರುಕಟ್ಟೆಯಿಂದ ಖರೀದಿಸಿದ ವಿವಿಧ ರಸಾಯನಿಕ ಕ್ರಿಮ್ ಬಳಸುವ ಬದಲು ನೈಸರ್ಗಿಕ ಮನೆ ಮದ್ದುಗಳನ್ನು ಬಳಸುವುದರಿಂದ ಮಕ್ಕಳ ಚರ್ಮದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಓಟ್ಸ್ ಬಳಸಿ
ಓಟ್ಸ್ ನಿಮ್ಮ ಮಗುವಿನ ಒಣ ಚರ್ಮಕ್ಕೆ ಅದ್ಭುತ ಮನೆಮದ್ದು ಎನಿಸಿಕೊಂಡಿದೆ. ಇದು ಚರ್ಮವನ್ನು ತೇವವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ರಕ್ಷಣಾತ್ಮಕ ತಡೆ ಗೋಡೆಯಾಗಿ ಕಾರ್ಯನಿರ್ವಹಿಸುವ ಮೂಲಕ ತೇವಾಂಶವನ್ನು ತಡೆಯುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುವುದಷ್ಟೇ ಅಲ್ಲದೆ ಮಕ್ಕಳ ಚರ್ಮದ ಆರೈಕೆಗೆ ಉತ್ತಮ ಎನಿಸಿಕೊಂಡಿದೆ. ಓಟ್ಸ್ ಅನ್ನು ಮೊದಲು ಪುಡಿಮಾಡಿ ಅದಕ್ಕೆ ತೆಂಗಿನ ಎಣ್ಣೆ ಅಥವಾ ಇತರ ಯಾವುದೇ ನೈಸರ್ಗಿಕ ಎಣ್ಣೆಯನ್ನು ಬೆರೆಸಿ ಮೈಗೆ ಹಚ್ಚಿ ಬಳಿಕ ಸ್ನಾನ ಮಾಡಿಸಬಹುದು.
ಗೋಧಿ ಪ್ರೋಟೀನ್
ಗೋಧಿ ಪ್ರೋಟೀನ್ ಕೂಟ ಮಕ್ಕಳ ಚರ್ಮಕ್ಕೆ ಉತ್ತಮ. ಗೋಧಿ ಪ್ರೋಟೀನ್‌ಗಳು ಚರ್ಮಕ್ಕೆ ತೇವಾಂಶವನ್ನು ಸೆಳೆಯುವ ಜತೆಗೆ ಜಲಸಂಚಯನ ಮಟ್ಟವನ್ನು ಹೆಚ್ಚಿಸಿ ಶುಷ್ಕತೆಯನ್ನು ತಡೆಯುತ್ತದೆ. ಇದು ನಿಮ್ಮ ಮಕ್ಕಳ ಚರ್ಮದಲ್ಲಿರುವ ಕೊಳಕು, ಹಾನಿಕಾರಕ ಅಂಶ ಇದ್ದರೆ ತೆಗೆದು ಹಾಕಲು ಸಹಾಯ ಮಾಡುತ್ತದೆ.
ಕ್ಯಾಮೊಮೈಲ್ (ಬಬೂನಾ)
ಕ್ಯಾಮೊಮೈಲ್ ಚರ್ಮಕ್ಕೆ ಹಿತಕರ. ಸೂಕ್ಷ್ಮ ಅಥವಾ ಕಿರಿಕಿರಿ ಚರ್ಮ ಹೊಂದಿರುವ ಮಕ್ಕಳಿಗೆ ಇದನ್ನು ವಿಶೇಷವಾಗಿ ಬಳಕೆ ಮಾಡಲಾಗುತ್ತದೆ. ಕ್ಯಾಮೊಮೈಲ್‌ನಲ್ಲಿ ಕಂಡುಬರುವ ಬಿಸಾಬೊಲೋಲ್ ಎಂಬ ಅಂಶವು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ನೈಸರ್ಗಿಕ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಸೋಂಕನ್ನು ತಡೆಯುತ್ತದೆ. ಈ ಕ್ಯಾಮೊಮೈಲ್ ಮಕ್ಕಳ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಶುಷ್ಕತೆಯನ್ನು ಶಮನ ಗೊಳಿಸಿ ಮೃದುವಾದ ಚರ್ಮ ಪಡೆಯಲು ಸಹಾಯಕವಾಗುತ್ತದೆ.
ಅರಿಶಿನ
ಅರಶಿನದಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಲಕ್ಷಣ ಸಮೃದ್ಧವಾಗಿದ್ದು, ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅನೇಕ ಚರ್ಮದ ಕಾಯಿಲೆಗಳಿಗೆ ರಾಮಬಾಣವಾಗಿದೆ. ಇದು ಚರ್ಮದ ತುರಿಕೆ ಮತ್ತು ಶುಷ್ಕತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ಚರ್ಮದ ಮೊಡವೆ ಮತ್ತು ದದ್ದುಗಳಿಗೆ ಬಳಸಬಹುದು.
ಇದನ್ನು ಓದಿ: Health Tips: ಋತುಬಂಧಕ್ಕೆ ಒಳಗಾಗುವ ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಳ!
ನುಗ್ಗೆ
ನುಗ್ಗೆ ಅಥವಾ ಮೊರಿಂಗಾವು ಮಕ್ಕಳ ತ್ವಚೆಯ ಆರೈಕೆಗೆ ಬಳಸಬಹುದಾದ ಅತ್ಯುತ್ತಮ ಮನೆಮದ್ದು ಎನಿಸಿಕೊಂಡಿದೆ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿದ್ದು ಇದು ಚರ್ಮದ ಆರೈಕೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದರಲ್ಲಿ ಉತ್ಕರ್ಷಣ ನಿರೋಧಕ ಶಕ್ತಿಯೂ ಇದ್ದು, ಮಾಲಿನ್ಯ ಮತ್ತು ಯುವಿ ಒಡ್ಡುವಿಕೆಯಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡದಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳ ಚರ್ಮದ ಆರೈಕೆಯಲ್ಲಿ ಇದನ್ನು ಬಳಸಬಹುದು.