Health Tips: ತೂಕ ಇಳಿಕೆಯಿಂದ ಚರ್ಮದ ಆರೈಕೆವರೆಗೆ- ಬೆಳಗ್ಗೆ ಚಹಾ ಬದಲು ಈ ಆರೋಗ್ಯಕರ ಪಾನೀಯ ಸೇವಿಸಿ!
ಖಾಲಿ ಹೊಟ್ಟೆಯಲ್ಲಿ ಕೆಲವೊಂದು ನೈಸರ್ಗಿಕ ಪಾನೀಯಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಆರೋಗ್ಯಕ್ಕೆ ಉತ್ತಮ. ಕೆಲವೊಂದು ಆಯುರ್ವೇದ ಪಾನೀಯ ಅಂದರೆ ನಮ್ಮ ಮನೆಯಲ್ಲಿಯೇ ಇರುವಂತಹ ಆಹಾರ ಪದಾರ್ಥಗಳಿಂದ ತಯಾರಿಸಿದ ಪಾನೀಯಗಳನ್ನು ಸೇವಿಸುವುದರಿಂದ ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ನಮ್ಮ ಚರ್ಮದ ಅಂದವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಳಗ್ಗಿನ ಸಮಯದಲ್ಲಿ ನಾವು ಸೇವನೆ ಮಾಡುವ ಆಹಾರಗಳು ತುಂಬಾ ಆರೋಗ್ಯಕರವಾಗಿರಬೇಕೆಂದು ತಜ್ಞರು ಸಲಹೆ ನೀಡು ತ್ತಾರೆ.ಅದರಲ್ಲೂ ಬೆಳಗ್ಗಿನ ಚಹಾ ಅಥವಾ ಕಾಫಿ ಸೇವನೆ ಅನಾರೋಗ್ಯಕರ(Health Tips) ಎಂದು ಈಗಾಗಲೇ ಸಾಬೀತಾಗಿವೆ. ಬೆಳಗಿನ ಸಮಯದಲ್ಲಿ ನೀರು ಉತ್ತಮ ಆಯ್ಕೆಯಾಗಿದ್ದರೂ, ಖಾಲಿ ಹೊಟ್ಟೆಯಲ್ಲಿ ಕೆಲವೊಂದು ನೈಸರ್ಗಿಕ ಪಾನೀಯಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಆರೋ ಗ್ಯಕ್ಕೆ ಉತ್ತಮ. ಕೆಲವೊಂದು ಆಯುರ್ವೇದ ಪಾನೀಯ ಅಂದರೆ ನಮ್ಮ ಮನೆಯಲ್ಲಿಯೇ ಇರುವಂತಹ ಆಹಾರ ಪದಾರ್ಥಗಳಿಂದ ತಯಾರಿಸಿದ ಪಾನೀಯಗಳನ್ನು ಸೇವಿಸುವುದರಿಂದ ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ನಮ್ಮ ಚರ್ಮದ ಕಾಂತಿಯನ್ನೂ ಹೆಚ್ಚು ಮಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ತೂಕ ಇಳಿಕೆಗೆ ಇವನ್ನು ಸೇವಿಸಿ
ಶುಂಠಿ ರಸ: ನೀರಿನಲ್ಲಿ ಶುಂಠಿ ರಸ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳಷ್ಟು ಒಳಿತು. ಇದು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಯಾವುದೇ ಸಾಮಾನ್ಯ ಖಾಯಿಲೆ ಬರದಂತೆ ತಡೆಯಲಿದೆ. ಅದರ ಜೊತೆ ದೇಹದ ತೂಕ ನಿಯಂತ್ರಣ ಮಾಡಲು ಸಹಾಯಕವಾಗಲಿದೆ. ದೈನಂದಿನ ಆಹಾರದಲ್ಲಿ ಶುಂಠಿಯ ರಸವನ್ನು ಸೇರಿಸುವುದರಿಂದ ಮಲಬದ್ಧತೆ, ಆಮ್ಲೀಯತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ
ಕೊತ್ತಂಬರಿ ನೀರು: ಕೊತ್ತಂಬರಿ ಬೀಜಗಳನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ಮತ್ತೆ ಬಿಸಿ ಮಾಡಿ ಕುಡಿದರೆ ದೇಹಕ್ಕೆ ಆರೋಗ್ಯಕಾರಿ ಪ್ರಯೋಜನ ನೀಡಲಿದೆ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿದರೆ ದೇಹಕ್ಕೆ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫಾಮೇಟರಿ ಅಂಶಗಳು ಹೆಚ್ಚಾಗಿ ಸಿಗಲಿದ್ದು ಇದು ನಮ್ಮ ಹೊಟ್ಟೆ ಹಸಿವನ್ನು ನಿಯಂತ್ರಿಸುತ್ತದೆ ಮತ್ತು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಿ ತೂಕ ನಿಯಂತ್ರಣಕ್ಕೆ ಸಹಾಯಕವಾಗಲಿದೆ.
ಮೆಂತೆಕಾಳು ನೀರು: ತೂಕ ಕಡಿಮೆ ಮಾಡಲು ಬಯಸುವವರು, ಮೆಂತೆ ಬೀಜಗಳನ್ನು ರಾತ್ರಿ ನೆನೆ ಸಿಟ್ಟು, ಮರುದಿನ ಬೆಳಗ್ಗೆ ಇದನ್ನು ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಬಹಳಷ್ಟು ಆರೋಗ್ಯ ಪ್ರಯೋಜನ ಸಿಗಲಿದೆ. ಇದು ತೂಕ ಇಳಿಸಲು, ಯಕೃತ್, ಕಿಡ್ನಿ ಮತ್ತು ಚಯಾಪಚಯ ಕ್ರಿಯೆಗೆ ಇದು ಬಹಳ ಸಹಕಾರಿಯಾಗಲಿದೆ.
ಓಂ ಕಾಳುಗಳ ಪಾನೀಯ: ಓಂ ಕಾಳುಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗಿನ ಸಮಯ ದಲ್ಲಿ ಸೋಸಿಕೊಂಡು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದ್ದು, ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಕೊಬ್ಬು ಕರಗಿಸವ ಜೊತೆ ಇದು ಹಸಿವನ್ನು ತಗ್ಗಿಸಲು ಸಹಕಾರಿ.
ಕರಿಬೇವಿನ ಎಲೆಗಳು: ಕರಿಬೇವಿನ ಎಲೆಗಳನ್ನು ನೆನೆಸಿ ಅದರ ನೀರು ಕುಡಿಯುವುದರಿಂದ ಮತ್ತಷ್ಟು ಆರೋಗ್ಯಲಾಭಗಳನ್ನು ನಾವು ಕಂಡುಕೊಳ್ಳಬಹುದು.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.ನಮ್ಮ ದೇಹದಲ್ಲಿ ಬೇಡವಾದ ಕೊಬ್ಬು ಹಾಗೂ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡುವ ಗುಣ ಇದರಲ್ಲಿದೆ.
ಚರ್ಮದ ಆರೈಕೆಗೆ ಇವು ಉತ್ತಮ
ಅಲೊವೆರಾ ಜ್ಯೂಸ್: ಅಲೊವೆರಾ ಜ್ಯೂಸ್ ಇದರಲ್ಲಿ ಕೆಟ್ಟ ಗುಣಾಂಶಗಳನ್ನು ಶಮನ ಪಡಿಸುವ ಶಕ್ತಿ ಇರಲಿದ್ದು ಈ ಜ್ಯೂಸ್ ನಿಂದ ಅನೇಕ ಆರೋಗ್ಯಕರ ಪ್ರಯೋಜನ ಇರಲಿದೆ. ವಿಟಮಿನ್ ಗಳು,ಖನಿಜಾಂಶಗಳು ಮತ್ತು ಉತ್ಕರ್ಷಣ ನಿರೋ ಧಕ ಗಳನ್ನು ಸಮೃದ್ದವಾಗಿ ಇದ್ದು ಹೊಳೆಯುವ ಚರ್ಮಕ್ಕೆ ಅಲೊವೆರಾ ಒಳಿತು. ಹಾಗಾಗಿ ಬೆಳಗ್ಗಿನ ಪಾನೀಯವಾಗಿ ಈ ಜ್ಯೂಸ್ ಬಳಕೆ ಮಾಡಬಹುದು.
ಆಮ್ಲಾ ಜ್ಯೂಸ್: ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಈ ಪೌಷ್ಠಿಕಾಂಶ ಭರಿತವಾದ ಹಣ್ಣಿನಲ್ಲಿ ಆರ್ಧ್ರಕ ಗುಣಗಳು ಚರ್ಮ ಮತ್ತು ಕೂದಲಿಗೆ ಬಹಳ ಒಳ್ಳೆಯದು. ನಿಮಗೆ ಪ್ರತಿನಿತ್ಯ ಚಹಾ ಮತ್ತು ಕಾಫಿ ಸೇವನೆಯ ಬದಲಾಯಿಸುವ ಮನಸ್ಸು ಹೊಂದಿದ್ದರೆ, ಆಮ್ಲಾ ಜ್ಯೂಸ್ ಬಹಳ ಬೆಸ್ಟ್ ಆಯ್ಕೆ ಯಾಗಿದೆ.
ಇದನ್ನು ಓದಿ: Health Tips: ಯಾವ ಬಗೆಯ ಅಕ್ಕಿ ಹೆಚ್ಚು ಆರೋಗ್ಯಕರ? ಇಲ್ಲಿದೆ ಡಿಟೇಲ್ಸ್
ಬ್ಲೂಬೆರ್ರಿ ಸ್ಮೂಥಿ: ಚರ್ಮದ ಹೊಳಪಿಗಾಗಿ ನೀವು ಬ್ಲೂಬೆರ್ರಿ ಸ್ಮೂಥಿ ಸಹ ಚರ್ಮದ ಆರೈಕೆಗಾಗಿ ಬಳಸಿಕೊಳ್ಳಬಹುದು, ಬೆರ್ರಿಗಳು ಉತ್ಕರ್ಷಣ ನಿರೋಧಕ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಚರ್ಮದ ರಕ್ಷಣೆಗೆ ಮತ್ತು ಹೊಳಪಿಗೆ ಅವಶ್ಯಕವಾಗಿದೆ.