ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಮತ್ತೆ ಶುರುವಾದ ನಮಸ್ತೆ ಚಿಕ್ಕಬಳ್ಳಾಪುರ : ಬೆಳ್ಳಂಬೆಳಿಗ್ಗೆ ನಗರವಾಸಿಗಳ ಅಹವಾಲು ಆಲಿಕೆ

ನಗರಕ್ಕೆ ಹೊಂದಿಕೊಂಡಂತೆ ತಿಪ್ಪೇಹನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಡಿವೈನ್‌ ಸಿಟಿಯ ಕ್ಲಬ್‌ಹೌಸ್‌ನಲ್ಲಿ ಅಲ್ಲಿನ ನಿವಾಸಿಗಳು, ನಗರಸಭೆ ಅಧಿಕಾರಿಗಳು, ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು,ನಗರಸಭೆ ಸದಸ್ಯರ ಸಭೆ ನಡೆಸಿದ ಶಾಸಕ ಪ್ರದೀಪ್ ಈಶ್ವರ್ ಈ ಬಡಾವಣೆ ನಿವಾಸಿಗಳ ಹತ್ತಾರು ವರ್ಷದ ಖಾತಾ ಸಮಸ್ಯೆಯನ್ನು ಆಲಿಸಿ ಶೀಘ್ರವೇ ಪರಿಹ ರಿಸುವ ಭರವಸೆ ನೀಡಿದರು.

ಡಿವೈನ್ ಸಿಟಿ ನಿವಾಸಿಗಳ ಕಷ್ಟ ಪರಿಹಾರ ಮಾಡುವೆ : ಶಾಸಕ ಭರವಸೆ

ಹಲವು ತಿಂಗಳ ಸುದೀರ್ಘ ವಿರಾಮದ ಬಳಿಕ ಶಾಸಕ ಪ್ರದೀಪ್ ಈಶ್ವರ್ ಶುಕ್ರವಾರ ಮತ್ತೊಮ್ಮೆ ೨೮ನೇ ವಾರ್ಡಿನಲ್ಲಿ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮ ಪುನರಾರಂಭಿಸಿದರು.

Profile Ashok Nayak Feb 21, 2025 11:45 PM

ಚಿಕ್ಕಬಳ್ಳಾಪುರ: ಹಲವು ತಿಂಗಳ ಸುದೀರ್ಘ ವಿರಾಮದ ಬಳಿಕ ಶಾಸಕ ಪ್ರದೀಪ್ ಈಶ್ವರ್ ಶುಕ್ರವಾರ ಮತ್ತೊಮ್ಮೆ 28ನೇ ವಾರ್ಡಿನಲ್ಲಿ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮ ಪುನರಾ ರಂಭಿಸಿದರು. ಹೌದು ಶುಕ್ರವಾರ ಬೆಳಿಗ್ಗೆ 6.30ಕ್ಕೆ ನಗರದ 28ನೇ ವಾರ್ಡಿನಲ್ಲಿ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಭಾಗವಾಗಿ ನಗರಾಡಳಿತ ಸಿಬ್ಬಂದಿಯೊಂದಿಗೆ ಮನೆಮನೆ ಭೇಟಿ ಆರಂಭಿ ಸಿದ ಶಾಸಕರು ನಗರವಾಸಿಗಳ ಕಷ್ಟಗಳನ್ನು ಆಲಿಸಿದರು. ಪ್ರತಿಯೊಂದು ಮನೆಗೂ ಭೇಟಿ ನೀಡಿದ ವೇಳೆಯೂ ಕೂಡ ಬಿಖಾತಾ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಿದರ ಲ್ಲದೆ,ಖಾತೆ ಮಾಡಿಸಿಕೊಳ್ಳಲಾಗದವರು ತಪ್ಪದೆ ಖಾತೆ ಮಾಡಿಸಿಕೊಳ್ಳುವಂತೆ ಮನವೊಲಿಸಿದರು.

ಇದನ್ನೂ ಓದಿ: Pradeep Eshwar: ಎದೆ ತಟ್ಟಿ ಹೇಳುತ್ತೇನೆ ಸಿಎಂ ಪ್ರಾಮಾಣಿಕರು: ಪ್ರದೀಪ್‌ ಈಶ್ವರ್

ಶಾಸಕರ ಭೇಟಿಯ ವೇಳೆ ಸ್ವಚ್ಛತೆ, ಅನೈರ್ಮಲ್ಯತೆ, ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಪೆನ್ಶನ್ ಸಮಸ್ಯೆ ಪರಿಹರಿಸುವಂತೆ ಶಾಸಕರಿಗೆ ನಗರವಾಸಿಗಳು ಮನವಿ ಮಾಡಿಕೊಂಡರು. ಸ್ಪಂದಿಸಿದ ಅವರು ಕೂಡಲೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿನೆ ನೀಡಿದರು.

ದೊಡ್ಡಭಜನೆ ಮನೆ ಬಳಿಯಿರುವ ಗೋಲ್ಡ್ನ್ ಗ್ಲೀಮ್ಸ್ ಕಾಲೇಜಿಗೆ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿಗಳಿಗೆ ಚೆನ್ನಾಗಿ ಓದಿ ಉನ್ನತ ದರ್ಜೆಯಲ್ಲಿ ಪಾಸಾಗುವ ಮೂಲಕ ಕಾಲೇಜಿಗೆ ಕೀರ್ತಿ ತರಬೇಕು ಎಂದರು. ಈ ಸಂಸ್ಥೆಯನ್ನು ಕಟ್ಟುವ ಮೂಲಕ ಪ್ರಾಂಶುಪಾಲ ಮುನಿ ಕೃಷ್ಣ ಅವರು ಹತ್ತಾರು ಮಂದಿಗೆ ಉದ್ಯೋಗ ನೀಡಿ ನೂರಾರು ಮಂದಿಯ ಶಿಕ್ಷಣಕ್ಕೆ ದಾರಿದೀಪವಾಗಿದ್ದಾರೆ.ಇಂತಹ ಉದ್ಯಮಿಗಳ ಸಂತತಿ ಬೆಳೆಯಬೇಕು ಎಂದು ಶುಭ ಹಾರೈಸಿ ದರು.

ಡಿವೈನ್‌ಸಿಟಿಯಲ್ಲಿ ಸಭೆ
ನಗರಕ್ಕೆ ಹೊಂದಿಕೊಂಡಂತೆ ತಿಪ್ಪೇಹನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಡಿವೈನ್‌ಸಿಟಿಯ ಕ್ಲಬ್‌ಹೌಸ್‌ನಲ್ಲಿ ಅಲ್ಲಿನ ನಿವಾಸಿಗಳು, ನಗರಸಭೆ ಅಧಿಕಾರಿಗಳು, ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು,ನಗರಸಭೆ ಸದಸ್ಯರ ಸಭೆ ನಡೆಸಿದ ಶಾಸಕ ಪ್ರದೀಪ್ ಈಶ್ವರ್ ಈ ಬಡಾವಣೆ ನಿವಾಸಿಗಳ ಹತ್ತಾರು ವರ್ಷದ ಖಾತಾ ಸಮಸ್ಯೆಯನ್ನು ಆಲಿಸಿ ಶೀಘ್ರವೇ ಪರಿಹರಿಸುವ ಭರವಸೆ ನೀಡಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಲ್ಲಿರುವ 269 ನಿವೇಶನಗಳ ಪೈಕಿ 197 ನಿವೇಶನಗಳಿಗೆ ಮೊದಲ ಹಂತದಲ್ಲಿ ಖಾತೆ ನೀಡುವ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡಲಾಗಿದೆ. ಉಳಿದವು ಎರಡನೇ ಹಂತದಲ್ಲಿ ಆಗಲಿವೆ.ನಗರ ಯೋಜನಾ ಪ್ರಾಧಿಕಾರದ ಆಯುಕ್ತರು,ಅಧ್ಯಕ್ಷರು,ಡಿವೈನ್ ಸಿಟಿ ಮಾಲಿಕರ ಸಮಕ್ಷಮದಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದ್ದು ಎಲ್ಲರಿಗೂ ಒಳಿತಾಗುವ ಹಾಗೆ ಚಿಂತನೆ ಮಾಡಲಾಗಿದೆ ಎಂದರು.

ಎA.ಸಿ.ಸುಧಾಕರ್ ಅವರು ನನ್ನ ಗುರುಗಳು
ಚಿಂತಾಮಣಿಯಲ್ಲಿ ಶುಕ್ರವಾರ ನಡೆಯುತ್ತಿರುವ ಬೃಹತ್ ರಕ್ತದಾನ ಶಿಬಿರ, ಮತ್ತು ಮಾಜಿ ಸಚಿವ ಚೌಡರೆಡ್ಡಿ ಅವರ ಜನ್ಮದಿನೋತ್ಸವ ಯೋಜನಾ ಬದ್ಧವಾಗಿ ರೂಪಿಸಿದ್ದು,ಅಲ್ಲಿಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆಯುತ್ತೇನೆ.ನನ್ನ ರಾಜಕೀಯ ಬದುಕಿಗೆ ದೊಡ್ಡ ತಿರುವುಕೊಟ್ಟವರು ಡಾ.ಎಂ.ಸಿ.ಸುಧಾಕರ್ ಮತ್ತು ಚೌಡರೆಡ್ಡಿ ಕುಟುಂಬವಾಗಿದೆ.ಇದರಲ್ಲಿ ಕೃಷ್ಣಬೈರೇಗೌಡರ ಕೊಡುಗೆಯೂ ಇದೆ.ಗಿನ್ನೀಸ್ ರೆಕಾರ್ಡ್ ಮಾಡುವ ರೀತಿಯಲ್ಲಿ ರಕ್ತ ದಾನ ಶಿಬಿರ ಆಯೋಜನೆ ಮಾಡಿರುವ ಡಾ.ಬಾಲಾಜಿ ಅವರ ಶ್ರಮಕ್ಕೆ ಬೆಲೆಯಿರಲಿದೆ ಎಂದರು.

ವದಂತಿಗಳಿಗೆ ಕಿವಿಕೊಡಬೇಡಿ
ಕಾಂಗ್ರೆಸ್ ಸರಕಾರ ಬಡವರಿಗೆ ಅನುಕೂಲ ಆಗಲಿ ಎಂದು ಪ್ರಾರಂಭಿಸಿರುವ ಬಿಖಾತಾ ಅಭಿಯಾನದ ಬಗ್ಗೆ ಕೆಲವರು ಸುಖಾಸುಮ್ಮನೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ.ಇದಕ್ಕೆ ಯಾವ ನಾಗರೀಕರೂ ಕಿವಿಗೊಡಬೇಡಿ. 90 ದಿನಗಳ ನಂತರ ಈ ಅವಕಾಶ ಮತ್ತೆ ದೊರೆ ಯುವುದಿಲ್ಲ. ನಿಮ್ಮ ನಿವೇಶನ, ಮನೆ, ಆಸ್ತಿಗಳಿಗೆ ಅಧಿಕೃತದಾಖಲೆ ನೀಡುವ ಈ ಯೋಜನೆ ಯನ್ನು ಸದ್ಬಳಕೆ ಮಾಡಿಕೊಳ್ಳಿ, ಯಾರನ್ನೋ ನಂಬಿ, ದಲ್ಲಾಳಿಗಳ ಮಾತಿಗೆ ಓಗೊಟ್ಟು ಈಗಿರುವ ಅವಕಾಶ ಕಳೆದುಕೊಂಡರೆ ಅದಕ್ಕೆ ನೀವೇ ಜವಾಬ್ದಾರರು. ಹೀಗಾಗದಂತೆ ನೋಡಿ ಕೊಳ್ಳಿ ಎಂದು ಮನವಿ ಮಾಡಿದರು.