Saturday, 27th April 2024

ಬದುಕನ್ನು ಬದಲಿಸಬಹುದು, ಪುಟಿದೇಳುವ ಭರವಸೆಯೊಂದಿಗೆ !

ಶ್ವೇತಪತ್ರ

shwethabc@gmail.com

ಬದುಕೂ ನಮ್ಮ ಮೇಲೆ ಅನೇಕ ಕಸಗಳನ್ನು ಸುರಿಯುತ್ತಲೇ ಇರುತ್ತದೆ. ಅದರಿಂದ ಹೊರಬರುವುದಕ್ಕೆ ಇರುವ ಒಂದೇ ಮಾರ್ಗವೆಂದರೆ ಕಸವನ್ನು ಕೊಡವಿ ಮೇಲೇಳಬೇಕು. ಬದುಕಿನ ಆಳದಲ್ಲಿ ಕಳೆದುಹೋಗಿರುವ ನಾವುಗಳು ಮೇಲೆ ಬರಲು ಸಾಧ್ಯವಿರುವುದು ನಮ್ಮ ಪ್ರಯತ್ನದಿಂದಷ್ಟೇ. ಮೈಕೊಡವುತ್ತಲೇ ಮೇಲೇರಬೇಕು. ಇದು ಬದುಕಿಗೆ ನಾವು ಅಳವಡಿಸಿಕೊಳ್ಳಬೇಕಿರುವ ಟ್ರಿಕ್.

ಒಂದೂರಲ್ಲಿ ರೈತನೊಬ್ಬ ಕತ್ತೆಯೊಂದನ್ನು ಸಾಕಿದ್ದ. ಒಂದು ದಿನ ಆ ಕತ್ತೆ, ರೈತನ ಮನೆಯ ಬಾವಿಯೊಳಗೆ ಅಚಾನಕ್ಕಾಗಿ ಬಿದ್ದುಬಿಟ್ಟಿತು. ತನ್ನನ್ನು ಮೇಲಕ್ಕೆತ್ತುವಂತೆ ಕತ್ತೆ ಇನ್ನಿಲ್ಲದಂತೆ ಆಕ್ರಂದಿಸುತ್ತಿತ್ತು. ರೈತನ ಕರುಳು ಚುರುಗಟ್ಟಿತು. ಹೇಗಾದರೂ ಮಾಡಿ ಕತ್ತೆಯನ್ನು ಬಾವಿಯಿಂದ ಹೊರತೆಗೆಯ ಬೇಕೆಂದು ಆತ ಯೋಚಿಸತೊಡಗಿದ. ಆದರೆ ಅದು ಸಾಧ್ಯವಾಗುವುದಿಲ್ಲ.

ಹಾಗಾಗಿ ರೈತ ತನ್ನ ನೆರೆಹೊರೆಯವರೊಂದಿಗೆ ಮಾತನಾಡುತ್ತಾ ತನ್ನ ಕತ್ತೆಯನ್ನು ಬಾವಿಯಿಂದ ಹೊರತೆಗೆಯಲು ಸಹಾಯ ಮಾಡಬೇಕೆಂದು ಕೋರಿಕೊಳ್ಳುತ್ತಾನೆ. ಅವರೆಲ್ಲ ರೈತನ ಮನೆಯ ಹಿತ್ತಲಲ್ಲಿ ಜಮಾಯಿಸುತ್ತಾರೆ, ಬಾವಿಯೊಳಗೆ ಇಣುಕಿ ನೋಡಿ ಕತ್ತೆಯನ್ನು ಹೊರ ತೆಗೆಯಲು ಸಾಧ್ಯವೇ ಎನ್ನುವ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಮರಳಿ ಸರಿದುಬಿಡುತ್ತಾರೆ. ಜತೆಗೆ ಎಲ್ಲರೂ ಸೇರಿ ರೈತನಿಗೆ ಒಂದು ಸಲಹೆ ನೀಡುತ್ತಾರೆ- ‘ಬಾವಿಯಿಂದ ಕತ್ತೆಯನ್ನು ಹೊರತೆಗೆಯುವುದು ಕಷ್ಟ ಸಾಧ್ಯ; ಅದರ ಬದಲು ನಾವೆಲ್ಲ ಸಲಿಕೆಯಿಂದ ಬಾವಿಯೊಳಗೆ ಕಸವನ್ನು ತುಂಬಿ ಬಿಡೋಣ.

ಕತ್ತೆ ಅಲ್ಲಿಯೇ ಮಣ್ಣಾಗಿಬಿಡಲಿ’ ಎಂದು. ತಮ್ಮ ಸಲಹೆಯನ್ನು ರೈತ ಒಪ್ಪುವಂತೆಯೂ ಮಾಡಿಬಿಡುತ್ತಾರೆ. ಮೊದಲು ಮರುಗುವ ರೈತ ಕೊನೆಗೆ ತನ್ನ ನೆರೆಹೊರೆಯವರ ಮಾತುಗಳಿಗೆ ಒಪ್ಪಿ ಕತ್ತೆಯನ್ನು ಹೊರತೆಗೆಯುವುದರ ಬದಲು ಸಲಿಕೆಯಿಂದ ಬಾವಿಯೊಳಗೆ ಕಸವನ್ನು ತುಂಬಿ ಅದನ್ನು ಮುಚ್ಚಿ ಬಿಡುವುದೇ ಮೇಲು ಎಂದು ಭಾವಿಸಿ ತನ್ನ ಸ್ನೇಹಿತರೊಂದಿಗೆ ಸಲಿಕೆಯನ್ನು ಹಿಡಿದು ಬಾವಿಯನ್ನು ಕಸದಿಂದ ಮುಚ್ಚಲು ತೊಡಗಿಸಿಕೊಳ್ಳುತ್ತಾನೆ. ಎಲ್ಲರೂ ಸೇರಿ ಬಾವಿಯೊಳಗೆ ಕಸವನ್ನು ಸುರಿಯುತ್ತಿರುವಾಗ ಕತ್ತೆಯ ಆಕ್ರಂದನ ಮುಗಿಲು ಮುಟ್ಟಿದರೂ ಆ ಗೋಳಾಟ ಯಾರ ಕಿವಿಗೂ ಕೇಳಿಸುವುದಿಲ್ಲ. ಆದರೆ ಏನಾಶ್ಚರ್ಯ, ಸ್ವಲ್ಪ ಸಮಯದ ನಂತರ ಕತ್ತೆ ಆಕ್ರಂದಿಸುವುದನ್ನು ನಿಲ್ಲಿಸಿ ಬಿಡುತ್ತದೆ ಸಂಪೂರ್ಣವಾಗಿ.

ರೈತ ಬಾವಿಯೊಳಗೆ ಇಣುಕಿ ನೋಡುತ್ತಾನೆ. ಆಶ್ಚರ್ಯವೆಂಬಂತೆ ಕತ್ತೆ ತನ್ನ ಮೇಲೆ ಬಿದ್ದ ಕಸವನೆಲ್ಲ ಕೊಡವಿ ಅದನ್ನೇ ಮೆಟ್ಟಿಲನ್ನಾಗಿ ಮಾಡಿಕೊಂಡು
ಕಸದ ಮೇಲೆ ತಾನು ಹತ್ತಿ ನಿಂತು ಬಾವಿಯಲ್ಲಿ ಬಿದ್ದ ಕಸದ ರಾಶಿಯನ್ನ ಏರುತ್ತಾ, ಏರುತ್ತಾ ಪಾತಾಳದಿಂದ ಬಾವಿಯ ಅರ್ಧದಷ್ಟು ಭಾಗವನ್ನು ಕ್ರಮಿಸಿರುತ್ತದೆ. ರೈತನ ಸ್ನೇಹಿತರಂತೂ ಬಾವಿಯೊಳಗೆ ಕಸ ತುಂಬುವುದನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ಕತ್ತೆ ಕಸವನ್ನು ಕೊಡವಿ ದಾಟಿ ಬಾವಿಯಿಂದ ಮೇಲೆದ್ದು ನೆಗೆದು ಹೊರಬರುತ್ತದೆ, ಖುಷಿಯಿಂದ.

ಬದುಕೂ ಅಷ್ಟೇ, ನಮ್ಮ ಮೇಲೆ ಅನೇಕ ಕಸಗಳನ್ನು ಸುರಿಯುತ್ತಲೇ ಇರುತ್ತದೆ. ಅದರಿಂದ ಹೊರಬರುವುದಕ್ಕೆ ಇರುವ ಒಂದೇ ಮಾರ್ಗವೆಂದರೆ ಕತ್ತೆಯಂತೆ ಕಸವನ್ನು ಕೊಡವಿ ಮೇಲೇಳಬೇಕು. ಬದುಕಿನ ಆಳದಲ್ಲಿ ಕಳೆದು ಹೋಗಿರುವ ನಾವುಗಳು ಮೇಲೆ ಬರಲು ಸಾಧ್ಯವಿರುವುದು ನಮ್ಮ ಪ್ರಯತ್ನದಿಂದಷ್ಟೇ. ಮೈಕೊಡ ವುತ್ತಲೇ ಮೇಲೇರಬೇಕು. ಇದು ಬದುಕಿಗೆ ನಾವು ಅಳವಡಿಸಿ ಕೊಳ್ಳಬೇಕಿರುವ ಟ್ರಿಕ್.

ಒಬ್ಬ ಚಿಕ್ಕ ಹುಡುಗಿ ತನ್ನ ತಾಯಿಯ ಬಳಿ ಹೋಗಿ, ತನಗೆ ಬದುಕಲ್ಲಿ ಎಷ್ಟೊಂದು ಕಷ್ಟಗಳಿವೆ, ನೋವುಗಳಿವೆ ಎಂದು ತೋಡಿಕೊಳ್ಳುತ್ತಾಳೆ. ಒಂದು ಕಷ್ಟ ಮುಗಿದ ನಂತರ ಮತ್ತೊಂದು ಕಷ್ಟ; ಅವೆಲ್ಲವನ್ನು ಹೇಗೆ ಸಂಭಾಳಿಸುವುದೆಂಬ ಪ್ರಶ್ನೆ ಆಕೆಯ ಮೊಗದಲ್ಲಿ ಎದ್ದು ಕಾಣುತ್ತಿರುತ್ತದೆ. ತನ್ನ ಮಗಳ ವೇದನೆಗಳನ್ನು ಕೇಳಿಸಿಕೊಂಡ ತಾಯಿ ಆಕೆಯನ್ನು ಅಡುಗೆ ಮನೆಗೆ ಕರೆದು ಕೊಂಡು ಹೋಗುತ್ತಾಳೆ. ಮೂರು ಪಾತ್ರೆಗಳಲ್ಲಿ ನೀರು ತುಂಬಿಸಿ ಕುದಿಸಲು ಒಲೆಯ ಮೇಲೆ ಇಡುತ್ತಾಳೆ. ಒಂದು ಪಾತ್ರೆಯೊಳಗೆ ಗಟ್ಟಿಯಾಗಿರುವ ಕ್ಯಾರೆಟ್ ಅನ್ನು, ಮತ್ತೊಂದರೊಳಗೆ ಮೊಟ್ಟೆಯನ್ನು, ಮಗದೊಂದು ಪಾತ್ರೆಯಲ್ಲಿ ಕಾಫಿ ಬೀಜಗಳನ್ನು ಹಾಕಿ ಬೇಯಲು ಬಿಡುತ್ತಾಳೆ, ಒಂದೂ ಮಾತನ್ನು ಆಡದೆ.

ಇಪ್ಪತ್ತು ನಿಮಿಷಗಳ ನಂತರ ತಾಯಿ ಒಲೆಯನ್ನು ಆರಿಸಿ ಒಂದು ಬೌಲ್ ನಿಂದ ಕ್ಯಾರೆಟ್ಟನ್ನು ಹೊರಗೆ ಬಸಿದು, ಮತ್ತೊಂದು ಪಾತ್ರೆಯಿಂದ ಮೊಟ್ಟೆಗಳನ್ನು ಆಚೆ ತೆಗೆದು ಮಗದೊಂದು ಪಾತ್ರೆಯಿಂದ ಕಾಫಿ ಬೀಜಗಳನ್ನು ಬಸಿದು ಮಗಳೆಡೆಗೆ ತಿರುಗಿ, ‘ನೀನು ಇಲ್ಲಿ ಏನು ನೋಡಿದೆ?’ ಎಂಬುದಾಗಿ ಕೇಳುತ್ತಾಳೆ. ಇದಕ್ಕೆ ಮಗಳು, ‘ಕ್ಯಾರೆಟ್, ಮೊಟ್ಟೆ ಹಾಗೂ ಕಾಫಿ ಬೀಜಗಳು ಬೆಂದಿದ್ದನ್ನು ನೋಡಿದೆ’ ಎಂದು ಉತ್ತರಿಸುತ್ತಾಳೆ. ಕ್ಯಾರೆಟ್, ಮೊಟ್ಟೆ ಹಾಗೂ ಕಾಫಿ ಬೀಜಗಳನ್ನು ಮಗಳ ಹತ್ತಿರ ತರುವ ತಾಯಿ, ಅವುಗಳನ್ನು ಫೀಲ್ ಮಾಡಿ ನೋಡಲು ಹೇಳುತ್ತಾಳೆ. ಅವುಗಳನ್ನು ಮುಟ್ಟಿ ನೋಡುವ ಮಗಳಿಗೆ ಆಶ್ಚರ್ಯವಾಗುತ್ತದೆ. ಕ್ಯಾರೆಟ್ ಸಂಪೂರ್ಣವಾಗಿ ಬೆಂದು ಮೆತ್ತಗಾಗಿಬಿಟ್ಟಿರುತ್ತದೆ. ಆದರೆ ಮೊಟ್ಟೆ ಗಟ್ಟಿಯಾಗಿ, ಬಿಡಿಸಿದರೆ ತಿನ್ನಲು ಯೋಗ್ಯವಾದ ರೀತಿ
ಯಲ್ಲಿ ಸಂಪೂರ್ಣವಾಗಿ ಬೆಂದಿರುತ್ತದೆ ಹಾಗೂ ಕಾಫಿ ಬೀಜಗಳು ಬೆಂದು ಸಿಪ್ಪೆಗಳು ಸುಲಿದು ಅದರ ಪರಿಮಳವು ಬಹಳ ಆಹ್ಲಾದಕರವಾಗಿ ಸುತ್ತಲೂ ಪಸರಿಸುತ್ತಿರುತ್ತದೆ. ಈಗ ತಾಯಿ ಮಗಳನ್ನು ಪ್ರಶ್ನಿಸುತ್ತಾಳೆ- ‘ಈಗ ಹೇಳು ಮಗಳೇ, ನೀನು ಇವುಗಳಲ್ಲಿ ಯಾವುದು? ಕ್ಯಾರೆಟ್ಟಾ, ಮೊಟ್ಟೆಯಾ ಅಥವಾ ಕಾಫಿ ಬೀಜವಾ?’ ಎಂದು. ಈ ಕಥೆಯನ್ನು ನಿಮ್ಮ ಬದುಕಿಗೂ ಅನ್ವಯಿಸಿಕೊಳ್ಳುತ್ತಾ ಈಗ ಯೋಚಿಸಿ- ಹೊರಗಡೆ ಗಟ್ಟಿಯಾಗಿ ಕಾಣುವ ಕ್ಯಾರೆಟ್
ಬಿಸಿನೀರಿನಲ್ಲಿ ಹಾಕಿ ಕುದಿಸಿದಾಗ ತನ್ನ ಶಕ್ತಿ ಕಳೆದುಕೊಂಡು ಮೆತ್ತಗಾದ ಹಾಗೆ ಆಗಲು ನೀವು ಬಯಸುವಿರೋ ಅಥವಾ ಒಡೆದು ಹೋಗುವಂತಿದ್ದ ಮೊಟ್ಟೆಯು ನೀರೊಳಗೆ ಹಾಕಿ ಬೇಯಿಸಿದಾಗ ಗಟ್ಟಿಯಾಗಿ ಬದಲಾಗಿ ತಿನ್ನಲು ಯೋಗ್ಯವಾಗಿತ್ತಲ್ಲ ಹಾಗೆ ಆಗಲು ಬಯಸುವಿರೋ? ಅಥವಾ ಎಲ್ಲಾ ನೋವು, ನಿರಾಶೆ, ಹತಾಶೆ, ಆರ್ಥಿಕ ಏರುಪೇರುಗಳ ಆಚೆಯೂ ಕೊನೆಯ ಕಾಫಿ ಬೀಜವಾಗ ಬಯಸುವಿರೋ? ನೀರು ಕುದಿಯುತ್ತಾ ಹೋದಂತೆ ಬೇಯುತ್ತಾ ಘಮಲನ್ನು ಪಸರಿಸಿತಲ್ಲ ಹಾಗೆ? ನೀವು ಕಾಫಿ ಬೀಜವಾಗಲು ಬಯಸಿದರೆ, ನಿಮ್ಮ ಬದುಕು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದಾಗಲೂ ನೀವು ಉತ್ತಮಗೊಂಡು ಸುತ್ತಲಿನ ಜಗತ್ತನ್ನು ಬದಲಾಯಿಸಲು ಪ್ರಯತ್ನಿಸುವಿರಿ.

ಸಮಯ ಕತ್ತಲಿನಿಂದ ಕೂಡಿದ್ದರೂ ಪ್ರಯತ್ನಗಳಿಗೆ ಎಷ್ಟೇ ಸೋಲಾಗಿದ್ದರೂ ನಿಮ್ಮನ್ನು ನೀವು ಮತ್ತೊಂದು ಎತ್ತರಕ್ಕೆ ಏರಿಸಿಕೊಳ್ಳಲು ಪ್ರಯತ್ನಿಸುವಿರಿ. ಪ್ರತಿಕೂಲತೆಯನ್ನು ಹೇಗೆ ನಿಭಾಯಿಸುವಿರಿ ಕ್ಯಾರೆಟ್‌ನ ಹಾಗೋ, ಮೊಟ್ಟೆಯ ಹಾಗೋ ಅಥವಾ ಕಾಫಿ ಬೀಜದ ಹಾಗೋ? ಎಂಬುದು ನಿಮ್ಮ ಆಯ್ಕೆ. ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳುವ ಅವಕಾಶಗಳು ನಿಮ್ಮೊಳಗೇ ಇವೆ; ನೀವು ಗಟ್ಟಿಯಾಗಬೇಕು, ಬದುಕಿಗೆ ಭರವಸೆ ಮೂಡಿಸಿಕೊಳ್ಳ ಬೇಕು. ಖುಷಿಯಾಗಿರುವುದಕ್ಕೆ ಬದುಕಿನ ಎಲ್ಲಾ ಉತ್ತಮಿಕೆಗಳು ನಮ್ಮವಾಗಬೇಕಿಲ್ಲ. ಉತ್ತಮವಾಗಿರುವುದೆಲ್ಲವೂ ಬದುಕನ್ನು ತುಂಬುವಂತೆ ನೋಡಿಕೊಳ್ಳ ಬೇಕು.

ಪ್ರಕಾಶಮಾನವಾದ ಭವಿಷ್ಯ ವೆಂದು ಹಳೆಯ ನೆನಪುಗಳಿಂದ ಬಿಡುಗಡೆಗೊಂಡಿರಬೇಕು; ಹಳೆಯ ಸೋಲುಗಳನ್ನು, ಅವಮಾನಗಳನ್ನು, ಹತಾಶೆಗಳನ್ನು
ಮೀರಿದ ಹೊರತು ಎದುರಿನ ದಾರಿ ಕಾಣಿಸಲ್ಲ. ಅಜ್ಜನೊಬ್ಬ ತನ್ನ ಮೊಮ್ಮಕ್ಕಳಿಗೆ ಬದುಕಿನ ಪಾಠಗಳನ್ನು ಹೇಳಿಕೊಡುತ್ತಾ ಇರುತ್ತಾನೆ. ‘ನನ್ನ ಮನಸ್ಸಿನೊಳಗೆ ಘರ್ಷಣೆ ಯೊಂದು ಎದುರಾಗಿದೆ. ಆ ಘರ್ಷಣೆಯು ಎರಡು ಬಲಶಾಲಿ ತೋಳಗಳ ನಡುವಿನದ್ದು. ಒಂದು ತೋಳವು ಭಯ, ಕೋಪ,
ಹೊಟ್ಟೆಕಿಚ್ಚು, ದುಃಖ, ಪರಿತಪಿಸುವಿಕೆ, ದುರಾಸೆ, ಅಹಂಕಾರ, ಸ್ವಯಂ-ಮರುಕ, ಅಪರಾಽ ಮನೋಭಾವ, ಅಸಮಾಧಾನ, ಹಿಂಜರಿಕೆ, ಸುಳ್ಳು, ತಪ್ಪುಗಳನ್ನು ಪ್ರತಿನಿಽಸಿದರೆ ಮತ್ತೊಂದು ತೋಳವು ಖುಷಿ, ನೆಮ್ಮದಿ, ಪ್ರೀತಿ, ಭರವಸೆ, ಪ್ರಶಾಂತತೆ, ನಮ್ರತೆ, ಉದಾರತೆ, ಸಹಾನುಭೂತಿ, ಸತ್ಯ, ಪ್ರೀತಿ,
ಮಮಕಾರ, ನಂಬಿಕೆ ಇವುಗಳನ್ನು ಪ್ರತಿನಿಽಸುತ್ತದೆ. ಮಕ್ಕಳೇ ಈ ಘರ್ಷಣೆ ನನ್ನಲ್ಲಷ್ಟೇ ಅಲ್ಲ, ನಿಮ್ಮೊಳಗೂ, ನಮ್ಮೆಲ್ಲರೊಳಗೂ ನಡೆಯುತ್ತಲೇ ಇರುತ್ತದೆ’ ಎನ್ನುತ್ತಾನೆ ಅಜ್ಜ. ಒಂದು ಕ್ಷಣ ಯೋಚಿಸಿದ ಮೊಮ್ಮಕ್ಕಳು ‘ಹಾಗಿದ್ದರೆ ಯಾವ ತೋಳ ಗೆಲ್ಲುತ್ತದೆ?’ ಎಂದು ಅಜ್ಜನನ್ನು ಕೇಳುತ್ತಾರೆ. ಮುಗುಳ್ನಗುವ
ಅಜ್ಜ, ‘ಯಾವ ತೋಳವನ್ನು ನೀವು ಪೋಷಿಸುತ್ತೀರೋ ಅದು ಗೆಲ್ಲುತ್ತದೆ’ ಎಂದು ಉತ್ತರಿಸುತ್ತಾನೆ. ಈ ಉತ್ತರದಲ್ಲೇ ಬದುಕಿನ ಎಲ್ಲಾ ಅರ್ಥ ವಿವರಣೆಗಳು ಅಡಗಿವೆ, ಏನಂತೀರಿ? ಸುಂದರ ಬದುಕು ಇದು ನಮ್ಮೆಲ್ಲರ ಕನಸು, ಹೌದಲ್ಲವೇ? ಸುಂದರ ಬದುಕು ಎಂಬುದೊಂದಿಲ್ಲ; ಬದುಕನ್ನು ಸುಂದರ ವಾಗಿಸಿಕೊಳ್ಳ ಬಹುದು.

ಅದಕ್ಕಾಗಿ ಕೆಲವು ಟಿಪ್ಸ್ ಇಲ್ಲಿವೆ:
? ನೆನಪಿಡಿ, ಬದುಕೊಂದು ಪಾಠಶಾಲೆ. ಇಲ್ಲಿ ನೀವು ಬದುಕು ನೀಡುವ ಎಲ್ಲಾ ಪರೀಕ್ಷೆಗಳನ್ನು ಬರೆದು ಪಾಸ್ ಆಗುವಂತೆ ನೋಡಿಕೊಳ್ಳಬೇಕು. ಅಕಸ್ಮಾತ್ ಪರೀಕ್ಷೆಗಳಲ್ಲಿ ಫೇಲಾದರೆ ಧೃತಿಗೆಡಬೇಡಿ. ಸೋಲಿನಿಂದ ಕಲಿಯುವ ಪಾಠಗಳನ್ನು ಯಾವ ವಿಶ್ವವಿದ್ಯಾಲಯವೂ ಕಲಿಸಲಾಗದು. ಕಲಿತು ಮತ್ತೆ
ಭರವಸೆಯ ಜತೆಗೆ ಹೆಜ್ಜೆ ಹಾಕಿರಿ.

? ಬದುಕು ಎಲ್ಲರಿಗೂ ನ್ಯಾಯೋಚಿತವಾಗಿ ಇಲ್ಲದಿರಬಹುದು, ಆದರೆ ಒಳ್ಳೆಯದಾಗಂತೂ ಇರುತ್ತದೆ.
? ಬೇರೆಯವರನ್ನು ದ್ವೇಷಿಸುತ್ತ ಕೂರುವುದಕ್ಕೆ ಬದುಕು ಬಹಳ ಚಿಕ್ಕದು.
? ಬದುಕನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವುದನ್ನು ಬಿಟ್ಟುಬಿಡಿ, ಹಾಗೆಯೇ ಜನರನ್ನು ಕೂಡ.

? ನಿಮ್ಮ ಹಳೆಯ ನೋವು, ನಿರಾಶೆ, ಹತಾಶೆಗಳ ಜತೆಗೆ ನೆಮ್ಮದಿಯನ್ನು ಕಂಡುಕೊಳ್ಳಿ. ಆಗ ಭವಿಷ್ಯದ ಹಾದಿ ಸುಂದರವಾಗಿರುತ್ತದೆ. ಇಲ್ಲವಾದಲ್ಲಿ ಬರಿಯ ನೋವುಗಳ ಹೊರೆಯನ್ನು ಜೀವನವಿಡೀ ನೀವು ಹೊರಬೇಕಾಗುತ್ತದೆ.

? ನಿಮ್ಮ ಬದುಕನ್ನು ಬೇರೆಯವರ ಬದುಕಿನೊಂದಿಗೆ ಹೋಲಿಸಿ ನೋಡಲು ಹೋಗಲೇಬೇಡಿ; ಅವರ ಬದುಕಿನ ಜಂಜಾಟ ಗಳು ಏನಿವೆಯೋ ನಿಮಗೇನು ಗೊತ್ತು?

? ಈ ಕ್ಷಣಗಳು ಅವು ನಿಮ್ಮವು, ಅವುಗಳನ್ನು ಸಂಭ್ರಮಿಸಿ, ಏಕೆಂದರೆ ಈ ದಿನ ಅದು ವಿಶೇಷ.

? ಬೇರೆಯವರು ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ ಅದಕ್ಕೂ ನಿಮಗೂ ಸಂಬಂಧವಿಲ್ಲ. ಜಸ್ಟ್ ಕೆಲಸ ಮಾಡುತ್ತಾ ಮುಂದೆ ಸಾಗಿ.

? ಸಮಯಕ್ಕೆ ಎಲ್ಲವನ್ನೂ ಸರಿಮಾಡುವ, ಸರಿದೂಗಿಸುವ ಶಕ್ತಿ ಇದೆ. ಹಾಗಾಗಿ ಸಮಯವೇ ಎಲ್ಲದಕ್ಕೂ ಉತ್ತರವಾಗಿರುತ್ತದೆ.

? ಸಂದರ್ಭಗಳು ಒಳ್ಳೆಯದ್ದೋ ಕೆಟ್ಟದ್ದೋ, ಆದರೆ ಆ ಸಂದರ್ಭವು ಬದಲಾಗುತ್ತದೆ, ಭರವಸೆಯಿಡಿ.

? ನಿಮಗೆ ಉಪಯೋಗವಿಲ್ಲದ ನಿಮ್ಮನ್ನು ಖುಷಿಪಡಿಸದ ಯಾವುದೇ ಸಂಗತಿಗಳಿಂದಾಗಲಿ ಜಸ್ಟ್ ದೂರವಿದ್ದುಬಿಡಿ.

? ಅತ್ಯಂತ ಒಳ್ಳೆಯದು ನಿಮ್ಮನ್ನು ಬಂದು ಸೇರಲಿದೆ, ನಂಬಿಕೆ ಇರಲಿ.

? ಆಳದಲ್ಲಿ ನೀವೆಷ್ಟು ಕುಸಿದಿದ್ದೀರೋ ಕುಗ್ಗಿದ್ದಿರೋ ಗೊತ್ತಿಲ್ಲ; ಆದರೆ ಎದ್ದೇಳಿ, ಚೆನ್ನಾಗಿ ಅಲಂಕರಿಸಿಕೊಂಡು ಜಗತ್ತಿನೆದುರು ನಿಮ್ಮನ್ನು ನೀವು ಅತ್ಯಂತ ದೃಢತೆಯಿಂದ ಆತ್ಮವಿಶ್ವಾಸದಿಂದ ತೋರ್ಪಡಿಸಿಕೊಳ್ಳಿ.

? ಜಗತ್ತು ಡಿಸ್ನಿವರ್ಲ್ಡ್ ಅಲ್ಲ, ಅದರೊಳಗೆ ನುಗ್ಗಲು ನಮಗೆ -ಸ್ಟ್ ಆಗಿರೋ ಪಾಸ್ ಬೇಕಾಗಿಲ್ಲ. ಪ್ರತಿಕ್ಷಣಗಳನ್ನು ಅನುಭವಿಸುತ್ತಾ-ಅನುಭಾವಿಸುತ್ತಾ ಖುಷಿಯಾಗಿ ಇದ್ದು ಬಿಡೋಣ.

Leave a Reply

Your email address will not be published. Required fields are marked *

error: Content is protected !!