Vishweshwar Bhat Column: ಅಪ್ಪಟ ಜಪಾನಿ ಅನುಭವಗಳು
ಕ್ಯಾಪ್ಸುಲು ಹೋಟೆಲನ್ನು ಮತ್ತೆಲ್ಲೂ ನೋಡಲು ಸಾಧ್ಯವಿಲ್ಲ. ಈ ಅನುಭವವನ್ನು ಜಪಾನಿ ನಲ್ಲಿ ಮಾತ್ರ ಪಡೆಯಲು ಸಾಧ್ಯ. ಜಪಾನಿನ ಸಾಂಪ್ರದಾಯಿಕ ಹೋಟೆಲ್‌ಗಳಲ್ಲಿ ಉಳಿಯಬೇಕು ಎಂದು ಅನಿಸಿದರೆ ರೈಕಾನ್ ಹೋಟೆಲ್‌ಗಳಲ್ಲಿ ಉಳಿಯಬಹುದು. ಈ ಹೋಟೆಲ್‌ಗಳಲ್ಲಿ ಜಪಾನಿನ ಸಾಂಪ್ರದಾಯಿಕ ಉಡುಗೆಯಾದ ಕಿಮೋನೋ ಧರಿಸಿದ ಮಹಿಳೆಯರು ನಿಮ್ಮನ್ನು ಸ್ವಾಗತಿಸಿ ಹೋಟೆಲ್ ಒಳಗಡೆಗೆ ಕರೆದುಕೊಂಡು ಬರುತ್ತಾರೆ.


ಸಂಪಾದಕರ ಸದ್ಯಶೋಧನೆ
ಪರಿಚಿತ ಪಾಶ್ಚಿಮಾತ್ಯ ಮೂಲದ ಹೋಟೆಲ್‌ನಲ್ಲಿ ಉಳಿಯುವುದರಿಂದ ಅದರದೇ ಅನುಕೂಲಗಳಿವೆ. ನಿಮಗೆ ಆ ಹೋಟೆಲುಗಳಲ್ಲಿ ನಿಖರವಾಗಿ ಏನನ್ನು ನಿರೀಕ್ಷಿಸ ಬೇಕೆಂ ಬುದು ತಿಳಿದಿರುತ್ತದೆ ಮತ್ತು ಅಲ್ಲಿ ಎಲ್ಲವೂ ಪರಿಚಿತವೂ, ಆರಾಮದಾಯಕವೂ ಆಗಿರು ತ್ತದೆ. ಯಾವುದೇ ದೇಶಗಳಿಗೆ ಹೋದಾಗಲೂ, ಒಂದೇ ರೀತಿಯ ಅನುಭವವನ್ನು ಪಡೆಯಲು ನೀವು ಪ್ರಯಾಣಿಸುವುದಿಲ್ಲ. ಜಪಾನ್ ಪ್ರವಾಸವನ್ನು ಯೋಜಿಸುವಾಗ ಎಲ್ಲಿ ತಂಗುವುದು ಎಂದು ಯೋಚಿಸುವಾಗ, ಪರಿಚಿತ ಪಾಶ್ಚಿಮಾತ್ಯ ಶೈಲಿಯ ಹೋಟೆಲ್‌ಗಳಲ್ಲಿ ತಂಗೋಣ ಎಂದು ತೀರ್ಮಾನಿಸುವಾಗ ಇನ್ನೊಮ್ಮೆ ಯೋಚಿಸುವುದು ಒಳ್ಳೆಯದು. ಕಾರಣ ಜಪಾನಿ ನಲ್ಲಿ ವಿಶಿಷ್ಟವಾದ ಹಲವಾರು ರೀತಿಯ ಹೋಟೆಲ್‌ಗಳಿವೆ. ಅವು ಅಪ್ಪಟ ಜಪಾನಿ ಅನು ಭವವನ್ನು ಕಟ್ಟಿಕೊಡುವ ಹೋಟೆಲುಗಳು. ಮಾಮೂಲಿ ಹೋಟೆಲುಗಳಲ್ಲಿ ಉಳಿಯುವ ಬದಲು ಕ್ಯಾಪ್ಸುಲು ಹೋಟೆಲುಗಳಲ್ಲಿ ಉಳಿಯಬಹುದು.
ಇದನ್ನೂ ಓದಿ: Ganesh Bhat Column: ದೇಶದ ಸಮಗ್ರತೆಗೆ ಹಾನಿ ಮಾಡುವ ಹುನ್ನಾರ
ಇವು ಕೋಣೆಯ ಬದಲು, ನಿಮಗೆ ಮಲಗುವ ಕ್ಯಾಪ್ಸುಲ್‌ಗಳಂತೆ ಕಾಣುತ್ತವೆ. ಅದರಲ್ಲಿ ಎರಡು ಲಾಕರುಗಳಿರುತ್ತವೆ. ಒಂದರಲ್ಲಿ ಶೂಗಳನ್ನು ಮತ್ತೊಂದರಲ್ಲಿ ಲಗೇಜುಗಳನ್ನು ಇಡಬಹುದು. ಅದರ ಜತೆಗೆ ಪುಟ್ಟ ಬಾತ್‌ರೂಮ. ಅಗತ್ಯಕ್ಕೆ ತಕ್ಕ ಬೆಡ್. ಅದರಲ್ಲಿ ಅಗತ್ಯ ಕ್ಕಿಂತ ಹೆಚ್ಚಿನ ಒಂದು ವಸ್ತುವಿದ್ದರೆ ಟಿವಿ. ಕೆಲವು ಕ್ಯಾಪ್ಸುಲು ಹೋಟೆಲುಗಳಲ್ಲಿ ಅದೂ ಇರುವುದಿಲ್ಲ. ಅಲ್ಲಿ ಅದರ ಹೊರತಾಗಿ ಮತ್ತೇನೂ ಇರುವುದಿಲ್ಲ.
ಕ್ಯಾಪ್ಸುಲು ಹೋಟೆಲನ್ನು ಮತ್ತೆಲ್ಲೂ ನೋಡಲು ಸಾಧ್ಯವಿಲ್ಲ. ಈ ಅನುಭವವನ್ನು ಜಪಾನಿ ನಲ್ಲಿ ಮಾತ್ರ ಪಡೆಯಲು ಸಾಧ್ಯ. ಜಪಾನಿನ ಸಾಂಪ್ರದಾಯಿಕ ಹೋಟೆಲ್‌ಗಳಲ್ಲಿ ಉಳಿಯಬೇಕು ಎಂದು ಅನಿಸಿದರೆ ರೈಕಾನ್ ಹೋಟೆಲ್‌ಗಳಲ್ಲಿ ಉಳಿಯಬಹುದು. ಈ ಹೋಟೆಲ್‌ಗಳಲ್ಲಿ ಜಪಾನಿನ ಸಾಂಪ್ರದಾಯಿಕ ಉಡುಗೆಯಾದ ಕಿಮೋನೋ ಧರಿಸಿದ ಮಹಿಳೆಯರು ನಿಮ್ಮನ್ನು ಸ್ವಾಗತಿಸಿ ಹೋಟೆಲ್ ಒಳಗಡೆಗೆ ಕರೆದುಕೊಂಡು ಬರುತ್ತಾರೆ.
ಹೋಟೆಲ್ ಒಳಾಂಗಣಕ್ಕೆ ಬರುತ್ತಿದ್ದಂತೆ ನೀವು ಚಪ್ಪಲಿ ಅಥವಾ ಶೂಗಳನ್ನು ಬಿಚ್ಚಿಡ ಬೇಕು. ರೂಮಿನೊಳಗಡೆ ಕಾಲಿಡುತ್ತಿದ್ದಂತೆ ಹುಲ್ಲಿನ ಟಟಾಮಿ ಚಾಪೆಯ ಮೇಲೆ ಕುಳಿತು ಕೊಳ್ಳಬೇಕು. ಚಿಕ್ಕದಾದ ಟೇಬಲ್ ಮೇಲೆ ಇಟ್ಟಿರುವ ಚಹಾ ಮತ್ತು ಜಪಾನಿ ಬಿಸ್ಕತ್ ಸೇವಿಸುವುದರ ಮೂಲಕ ಹೊಸ ಅನುಭವವನ್ನು ಪಡೆಯಬಹುದು.
ವಿಶಾಲವಾದ ಕೋಣೆಯಲ್ಲಿ ಎಷ್ಟು ಅಗತ್ಯವೋ ಅಷ್ಟೇ ಸಾಮಾನುಗಳಿರುತ್ತವೆ. ಸಾಮಾನ್ಯ ಟೇಬಲ್ ಬದಲು ಒಂದಡಿ ಎತ್ತರದ ಟೇಬಲ್ ಇರುತ್ತದೆ ಮತ್ತು ಕುರ್ಚಿಯ ಬದಲು ಮೆತ್ತನೆ ಯ ದಿಂಬುಗಳಿರುತ್ತವೆ. ಅದರ ಮೇಲೆ ಆಸೀನರಾಗಬಹುದು. ಅದೇ ಟೇಬಲ್ಲಿನ ಮೇಲೆ ಊಟವನ್ನೂ ಮಾಡಬಹುದು.
ಅಲ್ಲಿ ಟಿವಿ, ಫ್ರಿಜ್ ಏನೂ ಇರುವುದಿಲ್ಲ. ಇಡೀ ಕೋಣೆಯಲ್ಲಿ ಶಾಂತ ವಾತಾವರಣ ನೆಲೆಸಿರು ತ್ತದೆ. ಕಿಟಕಿಯಿಂದ ಇಣುಕಿದರೆ ಹೊರಗಡೆ ಹಸಿರು ಸಸ್ಯಗಳು ಕಾಣುತ್ತವೆ. ರೂಮಿನ ಒಳಗೂ ಸಾಂಪ್ರದಾಯಿಕ ಅಲಂಕಾರಿಕ ಗಿಡಗಳಿರುತ್ತವೆ. ಜಪಾನ್ ರಾಜಧಾನಿ ಟೋಕಿ ಯೋಕ್ಕೆ ಹೋಗುವ ಹೆಚ್ಚಿನವರು ಅಲ್ಲಿನ ಪ್ರಸಿದ್ಧ ದೇವಾಲಯಗಳಿಗೆ ಹೋಗುವುದಿಲ್ಲ.
ವೈಭವದ ದೇಗುಲ, ವಿಶಿಷ್ಟ ಪೂಜಾಸ್ಥಳ ಹಾಗೂ ಸಾಂಸ್ಕೃತಿಕ ಕೇಂದ್ರಗಳಿಗೆ ಜಪಾನ್ ಸುಪ್ರಸಿದ್ಧ. ಅಲ್ಲಿನ ಒಂದೊಂದು ದೇವಾಲಯವೂ ವೈಶಿಷ್ಟ್ಯಪೂರ್ಣ. ಕೆಲವು ದೇವಾಲಯ ಗಳು ಕಿಲೋಮೀಟರ್‌ಗಟ್ಟಲೆ ಉದ್ದವಾಗಿರುತ್ತವೆ. ಜಪಾನ್ ಎಷ್ಟು ಆಧುನಿಕ ರಾಷ್ಟ್ರವೋ, ಅಷ್ಟೇ ಸಾಂಪ್ರದಾಯಿಕ ರಾಷ್ಟ್ರವೂ ಹೌದು.
ಜಪಾನಿಯರು ಧಾರ್ಮಿಕ ನಂಬಿಕೆಗಳಲ್ಲಿ ನಿಷ್ಠೆ ಹೊಂದಿದವರು. ಹೀಗಾಗಿ ಅಲ್ಲಿನ ಧಾರ್ಮಿಕ ಕೇಂದ್ರಗಳು ಅತ್ಯಂತ ಸುಂದರವಾದ ಪ್ರೇಕ್ಷಣೀಯ ಸ್ಥಳಗಳೂ ಹೌದು. ಆದ್ದ ರಿಂದ ಜಪಾನಿಗೆ ಹೋದವರು ಅಲ್ಲಿನ ಗುಡಿ-ಗುಂಡಾರಗಳಿಗೆ ಹೋಗದೇ ಬರಬಾರದು. ಜಪಾನಿನಲ್ಲಿರುವ ಸಾಂಪ್ರದಾಯಿಕ ಕಟ್ಟಡಗಳನ್ನು ಅನ್ವೇಷಿಸುವುದು ಒಂದು ರೋಚಕ ಅನುಭವ. ಆ ಪೈಕಿ ಅತ್ಯಂತ ಸಾಮಾನ್ಯವಾದವು ಬೌದ್ಧ ಮತ್ತು ಶಿಂಟೋ ದೇವಾಲಯ ಗಳು.
ಶಿಂಟೋಯಿಸಂ ಜಪಾನ್‌ಗೆ ವಿಶಿಷ್ಟವಾದ ಧರ್ಮವಾಗಿದೆ, ಆದರೆ ಹೆಚ್ಚಿನ ಜಪಾನಿಯರು ಬೌದ್ಧಧರ್ಮ ಮತ್ತು ಶಿಂಟೋಯಿಸಂ ಎರಡನ್ನೂ ಆಚರಿಸುತ್ತಾರೆ. ವಿವಾಹಗಳನ್ನು ಸಾಂಪ್ರದಾಯಿಕವಾಗಿ ಶಿಂಟೋ ದೇವಾಲಯಗಳಲ್ಲಿ ಏರ್ಪಡಿಸಲಾಗುತ್ತದೆ ಮತ್ತು ಅಂತ್ಯ ಕ್ರಿಯೆಗಳನ್ನು ಸಾಮಾನ್ಯವಾಗಿ ಬೌದ್ಧ ದೇವಾಲಯಗಳಲ್ಲಿ ನಡೆಸಲಾಗುತ್ತದೆ, ಉದಾಹರಣೆ ಗೆ. ಕೆಂಪು ಟೋರಿ (ದ್ವಾರಗಳು) ಶಿಂಟೋ ಶೈಲಿಯವು ಮತ್ತು ನೈಸರ್ಗಿಕ ಮರದ ಪಗೋಡ ಗಳು ಸಾಮಾನ್ಯವಾಗಿ ಬೌದ್ಧ ಶೈಲಿಯವು. ಇವನ್ನು ನೋಡದೇ ಜಪಾನ್ ಪ್ರವಾಸ ಪೂರ್ಣ ವಾಗುವುದಿಲ್ಲ.