ಶ್ವೇತಪತ್ರ
shwethabc@gmail.com
ಸೋಲು ನಮ್ಮನ್ನು ಆವರಿಸಿಕೊಂಡಾಗ ನಾವು ಮಾಡಲು ಸಾಧ್ಯವಾಗುವ ಉತ್ತಮ ಕೆಲಸವೆಂದರೆ ಅದನ್ನು ಒಪ್ಪಿಕೊಂಡು ಹೊಸ ದಾರಿಯ ಅನ್ವೇಷಣೆ ಯೊಂದಿಗೆ ಮುಂದುವರಿಯುವುದು. ಗೆಲುವಿಗಷ್ಟೇ ಒಗ್ಗಿಕೊಂಡಿರುವ ನಾವು ಸೋಲುಗಳಿಗೂ ತೆರೆದುಕೊಳ್ಳಬೇಕು. ಬೆಳೆಯುವು ದಕ್ಕೆ ಸೋಲು ಒಂದು ಅವಕಾಶವೆಂದು ಭಾವಿಸಬೇಕು. ಆಗಲೇ ಬದುಕು ಸುಂದರ, ಸುಮನೋಹರ.
ಬದುಕನ್ನೊಮ್ಮೆ ಹತ್ತಿರದಿಂದ ಕಣ್ಣಾಡಿಸಿ ನೋಡಿ, ಸೋಲಿನ ದೊಡ್ಡ ಪರಂಪರೆ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ನನ್ನದೇ ಇಲ್ಲಿಯವರೆಗಿನ ಬದುಕನ್ನು ಹಿಂತಿರುಗಿ ನೋಡಿದಾಗ ಕಾಣಸಿಗುವುದು ಹೆಚ್ಚಾಗಿ ಸೋಲಿನ ಸರಣಿಯ ಕಥೆಗಳು ಯಶಸ್ಸಿನ ಸಂಭ್ರಮಗಳು. ಸೋಲು ನನ್ನನ್ನು ಕಂಗೆಡಿಸಿಲ್ಲ, ಬದಲಾಗಿ ನನ್ನನ್ನು ಬದಲಾಯಿಸಿದೆ. ನನ್ನ ಮನೋಭಾವ, ಆಲೋಚನೆ ಗಳು, ಕಂಫರ್ಟ್ ಜೋನ್‌ಗೆ ಹೊರಗೆ ಕುಳಿತು ಕೊಳ್ಳುವ ಪರಿ ಎಲ್ಲವೂ ಬದಲಾಗಿವೆ.
ಅನೇಕ ಬಾರಿ ಸೋತಿದ್ದೇನೆಂದರೆ ಅನೇಕ ಹೊಸ ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಅರ್ಥ. ಹೊಸ ಅನುಭವಗಳಿಗೆ ತೆರೆದುಕೊಳ್ಳಲು ನನ್ನ ಭಯ ಗಳೆಂದೂ ನನ್ನನ್ನು ತಡೆದಿಲ್ಲ. ಸೋಲಿನ ಛಾಯೆ ಮುಖದಲ್ಲಿ ಕಾಣಿಸಿಕೊಂಡರೂ ಮುನ್ನುಗ್ಗುವುದನ್ನಂತೂ ನಾನು ಬಿಟ್ಟಿಲ್ಲ. ಸೋಲು ಅನೇಕ ನೋವಿನ ಗಳಿಗೆಗಳನ್ನು ನನಗೆ ನೀಡಿದೆ. ಎಷ್ಟೋ ಸಲ ಬಿಟ್ಟು ಹೊರ ನಡೆದು ಬಿಡಲೇ ಅನಿಸಿದ್ದೂ ಇದೆ. ಸೋಲಿನ ಪ್ರಪಾತದೊಳಗೆ ನಿಂತಾಗಲೂ ನನ್ನನ್ನು ನಾನೇ ತಳ್ಳಿಕೊಂಡು ಮುಂದೆ ಸಾಗಿದ್ದೇನೆ. ಆಲೋಚನೆಗಳನ್ನು ಬದಲಿಸಿಕೊಂಡು ಸೋಲುಗಳನ್ನು ಆರಗಿಸಿಕೊಳ್ಳುವುದನ್ನು ಕಲಿತಿದ್ದೇನೆ.
ಸೋಲಿನ ಬಗ್ಗೆ ಮಾತನಾಡುವಾಗ ಡಚ್ ಹಾಗೂ ಫ್ಲೆಮಿಶ್ ರೆನೆಜಾನ್ಸ್‌ನ ಪೇಂಟರ್ ಪೀಟರ್ ಬ್ರೂಗಲ್ ದ ಎಲ್ಡರ್‌ನ ‘ಔZboZmಛಿ ಡಿಜಿಠಿe ಠಿeಛಿ Z ಟ್ಛ ಐZo’ ಪೇಂಟಿಂಗ್ ನೆನಪಾಗು ತ್ತದೆ. ಈ ಚಿತ್ರದಲ್ಲಿ ರೈತನು ತನ್ನ ಬಗಲಿಗೆ ಇರುವ ಸಮುದ್ರದ ಕಡೆಗೆ ಹೆಚ್ಚು ಗಮನವಿಯದೆ ತನ್ನ ಪಾಡಿಗೆ ತಾನು ಉಳುಮೆ ಮಾಡುತ್ತಲಿರುತ್ತಾನೆ. ಚಿತ್ರದ ಹಿಂಭಾಗದಲ್ಲಿ ಬಂದರಿನಲ್ಲಿ ಹಡಗುಗಳು ತಮ್ಮ ಎಂದಿನ ವ್ಯಾವಹಾರಿಕ ಪಯಣಕ್ಕೆ ಸಿದ್ಧವಾಗಿರುವುದನ್ನು ನೋಡ ಬಹುದು. ಚಿತ್ರದ ಬಲಗಡೆಯ ಮೂಲೆಯಲ್ಲಿ ಐಕ್ಯಾರಸ್ ಮುಳುಗುತ್ತಿರುವುದನ್ನು ಕಾಣಬಹುದು. ಐಕ್ಯಾರಸ್‌ನ ಕಥೆ ನಿಮ್ಮ ನೆನಪುಗಳಿಂದ ಮಾಸಿದ್ದರೆ ಗ್ರೀಕ್ ಪುರಾಣಗಳಲ್ಲಿ ಕಾಣಸಿಗುವ ಕಥೆ ಇದು.
ಡೇಡಾಲಸ್ ಮತ್ತು ಐಕ್ಯಾರಸ್ ಎಂಬ ತಂದೆ-ಮಗನ ಕಥೆ. ಅಥೆನ್ಸ್‌ನಲ್ಲಿ ಕುಶಲಕರ್ಮಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಡೇಡಾಲಸ್. ತನ್ನ ವೈಯಕ್ತಿಕ ದ್ವೇಷ ಹಾಗೂ ಅಸೂಯೆಯಿಂದ, ಮತ್ತೊಬ್ಬ ಅದ್ಭುತ ಕುಶಲಕರ್ಮಿಯಾದ ಟಾಲೆಸ್‌ನನ್ನು ಬೆಟ್ಟದಿಂದ ತಳ್ಳಿ ಸಾಯಿಸಲು ಪ್ರಯತ್ನಿಸುತ್ತಾನೆ. ಆದರೆ ಆತನನ್ನು ಅದೇನ ಎಂಬ ದೇವತೆ ಕಾಪಾಡುತ್ತಾಳೆ. ಈ ವಿಷಯ ತಿಳಿದ ರಾಜ, ಡೇಡಾಲಸ್‌ನನ್ನು ಕೊಲೆ ಆರೋಪದ ಮೇರೆಗೆ ಮಿನೋಟಲ್ ದ್ವೀಪದಲ್ಲಿ ಸೇವಕನಾಗಿ ಬಂಧಿಸಿ ಇಡುತ್ತಾನೆ. ಅಲ್ಲಿ ಹೊಸ ಜೀವನವನ್ನು ಪ್ರಾರಂಭಿಸುವ ಡೇಡಾಲಸ್ ಅಲ್ಲಿನ ಸೇವಕಿ ನೌಕ್ರೆಟ್ ಅನ್ನು ಮದುವೆಯಾಗುತ್ತಾನೆ.
ಮುಂದೆ ಅವರಿಗೆ ಹುಟ್ಟುವ ಮಗುವೇ ಐಕ್ಯಾರಸ್. ಅಲ್ಲಿಯೂ ಕುಶಲಕರ್ಮಿಕೆಯನ್ನು ಮುಂದುವರಿಸುವ ಡೇಡಾಲಸ್ ಆ ರಾಜ್ಯದ ರಹಸ್ಯ ದಾರಿಯನ್ನು
ಕಂಡುಹಿಡಿದುಬಿಡುತ್ತಾನೆ. ಇದನ್ನು ತಿಳಿದ ದೊರೆ ಆ ವಿಷಯವು ಎಲ್ಲಿಯೂ ಬಹಿರಂಗವಾಗಬಾರದೆಂದು ಅವರ ಇಡೀ ಕುಟುಂಬವನ್ನು ದೈತ್ಯಾಕಾರದ ಮೇಜಿನೊಳಗೆ ಕೂಡಿಹಾಕುತ್ತಾನೆ. ಅಲ್ಲಿಂದ ತಪ್ಪಿಸಿಕೊಂಡು ಹೋಗುವ ಉಪಾಯ ಹುಡುಕುವ ಡೇಡಾಲಸ್ ಹಕ್ಕಿಗಳ ಪುಕ್ಕಗಳನ್ನೆಲ್ಲ ಸಂಗ್ರಹಿಸಿ ಅವುಗಳನ್ನು ರೆಕ್ಕೆಗಳನ್ನಾಗಿ ಪರಿವರ್ತಿಸುತ್ತಾನೆ. ಮೇಣದಿಂದ ಅವುಗಳನ್ನು ಅಂಟಿಸಿಕೊಂಡು ದೈತ್ಯಾಕಾರದ ಮೇಜಿನಿಂದ ತಪ್ಪಿಸಿಕೊಂಡು ಅಪ್ಪ-ಮಗ ಇಬ್ಬರೂ ಹಾರತೊಡಗುತ್ತಾರೆ.
ತಂದೆ ಡೇಡಾಲಸ್ ಮಗ ಐಕ್ಯಾರಸ್‌ನನ್ನು ಕುರಿತು ‘ಸೂರ್ಯನಿಗೆ ಹತ್ತಿರದಲ್ಲಿ ಹಾರಬೇಡ’ ಎಂದು ಸಾರಿ ಸಾರಿ ಹೇಳುತ್ತಾನೆ. ಅಪ್ಪನ ಮಾತುಗಳನ್ನು ಮೀರುವ ಐಕ್ಯಾರಸ್ ಸೂರ್ಯನ ಸಮೀಪಕ್ಕೆ ಸಾಗುತ್ತಾನೆ. ಸೂರ್ಯನ ಶಾಖದಿಂದ ಮೇಣವು ಕರಗಿ ಸಮುದ್ರದೊಳಗೆ ಆತ ಮುಳುಗುತ್ತಾನೆ. ಐಕ್ಯಾರಸ್‌ನ ಕಥೆ ಇಷ್ಟೊಂದು ದೊಡ್ಡದಿದ್ದರೂ ಪೇಂಟಿಂಗ್‌ನಲ್ಲಿ ಆತ ಪಡೆದುಕೊಳ್ಳುವುದು ಒಂದು ಪುಟ್ಟ ಜಾಗ ಮಾತ್ರ. ಆದರೆ ರೈತ ಇಡೀ ಚಿತ್ರದ ಅರ್ಥದಷ್ಟು ಭಾಗವನ್ನು ಆಕ್ರಮಿಸಿಕೊಳ್ಳುತ್ತಾನೆ. ಆಗೆಲ್ಲ ನೆನಪಾಗುವುದು ‘ಅb ಠಿeಛಿ Zಞಛ್ಟಿ ಟ್ಞಠಿಜ್ಞ್ಠಿಛಿb ಠಿಟ mಟಡಿ’ ಎನ್ನುವ ಗಾದೆಮಾತು.
ಇದರ ಅರ್ಥ, ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ಬಾಳುವಿಕೆಗೆ ಸೊಪ್ಪು ಹಾಕದ ಪ್ರವೃತ್ತಿ. ಈ ಕಥೆಯನ್ನು ನಮ್ಮ ಬದುಕುಗಳಿಗೆ ಅನ್ವಯಿಸಿ ಕೊಂಡರೆ, ಸೋಲುಗಳನ್ನು ಎದುರಿಸುವ ನಮ್ಮ ಸಂವೇದನೆಯಲ್ಲಿ ಕೊಂಚ ವ್ಯತ್ಯಾಸವಾಗಬಹುದು ಎಂದು ನಾನಂತೂ ಭಾವಿಸಿರುತ್ತೇನೆ. ನಾವು ಸೋಲಲು ಏಕೆ ಹೆದರುತ್ತೇವೆ? ನಮ್ಮ ಸೋಲುಗಳನ್ನು ಕಂಡ ಜನ ನಮ್ಮನ್ನು ಕಡೆಗಾಣಿಸುತ್ತಾರೆ ಎಂಬ ಭಯಕ್ಕೆ ನಾವು ಹೆದರುತ್ತೇವೆ. ಆದರೆ ನಾವಿಲ್ಲಿ ನೆನಪಿಡಬೇಕಾದ ಮುಖ್ಯ ವಿಷಯವೆಂದರೆ ಎಲ್ಲಾ ಜನರು ತಮ್ಮ ತಮ್ಮದೇ ಬದುಕಿನೊಳಗೆ ಮುಳುಗಿ ಹೋಗಿರುತ್ತಾರೆ; ಅಂದರೆ ಬೇರೆಯವರ ಬದುಕು ಹಾಗೂ ಬಯಕೆ ಗಳು, ಸೋಲುಗಳು ಅವರನ್ನು ತಾಗುವುದೇ ಇಲ್ಲ, ತಟ್ಟುವುದೂ ಇಲ್ಲ; ಪೇಂಟಿಂಗ್‌ನಲ್ಲಿರುವ ರೈತನಂತೆ ಜಸ್ಟ್ ನಿರ್ಲಿಪ್ತ.
ಈ ಕಥೆಯನ್ನು ನಾವೆಲ್ಲ ನಮ್ಮದಾಗಿಸಿಕೊಳ್ಳಬೇಕು ನಮ್ಮದೇ ವೈಯಕ್ತಿಕ, ವೃತ್ತಿಪರ ಬದುಕಿನೊಳಗೆ. ನಮ್ಮ ಸೋಲುಗಳೆಂದಿಗೂ ಭೂಮಿಯನ್ನು ಬಿರುಕು ಬಿಡಿಸುವುದಿಲ್ಲ. ನಾವು ಅಂದುಕೊಂಡ ಹಾಗೆ ಜಗತ್ತು ಮುಂದೆ ಸಾಗುತ್ತದೆ. ನಾವು ಹೆಜ್ಜೆ ಹಾಕುತ್ತೇವೆ. ಗೆಲುವಿಗೆ ಅಷ್ಟೇ ಕಂಡಿಶನ್ ಆಗಿರುವ ನಾವು ಸೋಲುಗಳಿಗೂ ತೆರೆದುಕೊಳ್ಳಬೇಕು. ಬೆಳೆಯು ವುದಕ್ಕೆ ಸೋಲೊಂದು ಅವಕಾಶವೆಂದು ಭಾವಿಸ ಬೇಕು. ಪ್ರತಿಷ್ಠಿತ ಕಂಪನಿಯ ಸಿಇಒ ವಿಡಿಯೋ
ಒಂದನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದರು.
ಆತ ಹೇಳುತ್ತಿದ್ದರು, ಸಾಂಪ್ರದಾಯಿಕ ಬಿಸಿನೆಸ್ ಆಲೋಚನೆಗಳಿಗೆ ಬ್ರೇಕ್ ಹಾಕಿ, ಅವರ ಕಂಪನಿ ತನ್ನದೇ ಹೊಸ ಆರ್ಗ್ಯಾನಿಕ್ ಲೀಡ್ ಒಂದನ್ನು ಪರಿಚಯಿಸಿತಂತೆ. ಅದಕ್ಕಾಗಿ ಕಂಪನಿ ಭಾರಿ ಮೊತ್ತದ ಹೂಡಿಕೆಯನ್ನು ಮಾಡಿತು. ದುರದೃಷ್ಟವಶಾತ್ ಆ ಯೋಜನೆ ಯಶಸ್ಸು ಕಾಣಲಿಲ್ಲ. ಅನೇಕರ ಕೆಂಗಣ್ಣಿಗೆ ಸಿಇಒ ಗುರಿಯಾಗಿದ್ದರು. ಇದು ಅವರನ್ನು ವೈಯಕ್ತಿಕವಾಗಿ ಕಾಡಿತ್ತು. ಏಕೆಂದರೆ ಆ ಯೋಜನೆ ಅವರ ಇಷ್ಟದ ಯೋಜನೆಯಾಗಿತ್ತು. ಆ ಯೋಜನೆ ದುಬಾರಿಯಾಗಿದ್ದೆ? ಖಂಡಿತ ಹೌದು.
ಅದು ಸೋತದ್ದರಿಂದ ನೋವಾಗಿತ್ತೆ? ಖಂಡಿತ ಹೌದು ಎಂದು ಮಾತು ಮುಂದುವರಿಸುವ ಸಿಇಒ ನಗುತ್ತಾ ಹೇಳುತ್ತಾರೆ- ‘ನನ್ನ ಅನುಭವದಿಂದ ಈಗ ನಾನು ಹೆಚ್ಚು ಜಾಣನಾಗಿದ್ದೇನೆ’ ಎಂದು. ಈ ಸೋಲು ನಿರೀಕ್ಷೆಗಳೆಡೆಗೆ, ಆಂತರಿಕ ಪ್ರಕ್ರಿಯೆಯೆಡೆಗೆ, ಜನರನ್ನು ನಿಭಾಯಿಸುವೆಡೆಗೆ ನನ್ನನ್ನು ಮತ್ತಷ್ಟು ಸಂಸ್ಕರಿಸಿತು ಎನ್ನುತ್ತಾರೆ. ಸೋತದ್ದಕ್ಕೆ ನೆಗೆಟಿವ್ ಆಗಿ ಯೋಚಿಸುತ್ತಾ ಕೂರುವುದು, ಇಲ್ಲವೇ ಅದರಿಂದ ಪಾಠಗಳನ್ನು ಹೆಕ್ಕಿ ತೆಗೆದು ಬದುಕಿಗೆ ಅನ್ವ ಯಿಸಿಕೊಂಡು ಮುಂದುವರಿ ಯುವುದು; ನನಗಿದ್ದದ್ದು ಒಂದೇ ಆಯ್ಕೆ- ಮುಂದುವರಿಯಿತು ಎಂದು ಮಾತು ಮುಗಿಸುತ್ತಾರೆ ಸಿಇಒ.
ಸೋಲು ನಮ್ಮನ್ನು ಆವರಿಸಿಕೊಂಡಾಗ ನಾವು ಮಾಡಲು ಸಾಧ್ಯವಾಗುವ ಉತ್ತಮ ಕೆಲಸವೆಂದರೆ ಅದನ್ನು ಒಪ್ಪಿಕೊಂಡು ಹೊಸ ದಾರಿಯ ಅನ್ವೇಷಣೆ
ಯೊಂದಿಗೆ ಮುಂದುವರಿಯುವುದು. ಕೆಲವರನ್ನು ನೋಡಿದ್ದೇನೆ, ‘ಅಯ್ಯೋ ನನಗೇ ಯಾಕೆ ಹೀಗಾಯ್ತು? ಯಾವಾಗಲೂ ನನಗೇ ಹೀಗಾಗಬೇಕಾ? ಏನೋ ಅಪ್ಪ ನನ್ನ ಅದೃಷ್ಟ’ ಎಂಬ ಸ್ವಯಂ ಮರುಕದೊಳಗೆ ಹೊರಳಾಡುತ್ತಾರೆ. ಸ್ವಯಂ ಮರುಕ ನಿಮ್ಮನ್ನು ಮತ್ತಷ್ಟು ನರಳುವಂತೆ ಮಾಡುತ್ತದೆಯೇ ವಿನಾ, ಅದರಿಂದ ಇನ್ನಾವ ಬಿಡುಗಡೆಯೂ ಇಲ್ಲ. ಕೆಲವೊಮ್ಮೆ ನಮ್ಮ ಉತ್ತಮ ಸಾಮರ್ಥ್ಯವು ಸೋತು ಬಿಡುತ್ತದೆ, ಅದು ಸಹಜ.
ಇದು ಎಲ್ಲರ ಬದುಕಲ್ಲೂ ನಡೆಯುವ ಒಂದು ಸಹಜ ಪ್ರಕ್ರಿಯೆ. ಒಪ್ಪಿಕೊಳ್ಳುವಿಕೆ, ಹಾಗೆಂದರೇನು? ಹಾಗೆಂದರೆ ಸೋಲನ್ನು ಕೇರ್ ಮಾಡದೆ
ಇರುವುದಲ್ಲ, ಸೋಲನ್ನು ಗೆಲುವಾಗಿ ಪರಿವರ್ತಿಸುವ ಬಗೆ ಕಾಣುವುದು. ಮೊನ್ನೆಯಷ್ಟೇ ಮಗಳು ಟೆಸ್ಟ್ ಮಾರ್ಕ್ಸ್ ಹಿಡಿದು ನನ್ನೆದುರಿಗೆ ಬಂದಿದ್ದಳು. ‘ಮಮ್ಮ, ಕ್ಲಾಸ್‌ನಲ್ಲಿ ನನ್ನ ಕ್ಲಾಸ್‌ಮೇಟ್ ೨೦ಕ್ಕೆ ೧೯ ಬಂದಿದ್ದಕ್ಕೆ ಅಳುತಿದ್ಲು, ನಾನಂತೂ ಅವಳ ಹಾಗೆ ನಿದ್ದೆಗಟ್ಟು ಓದುವುದಿಲ್ಲ. ಆರಾಮಾಗಿ ಓದುತ್ತೇನೆ’ ಎನ್ನುವ ಅವಳ ನಿರ್ಮಲ ಮನಸ್ಥಿತಿ ಕಂಡು ಖುಷಿಯಾಯಿತು. ಹೀಗೆ ಯೋಚಿಸಿ ಪೋಷಕರಾಗಿ, ಶಿಕ್ಷಕರಾಗಿ, ಸಮುದಾಯವಾಗಿ ನಾವು ಗೆಲ್ಲುವುದನ್ನು ಕಲಿಸುತ್ತಿದ್ದೇವೆಯೇ ಹೊರತು, ಸೋಲನ್ನು ಎದುರಿಸುವುದನ್ನ, ಸೋಲಿ ನಿಂದ ಕಂಗೆಡುವುದನ್ನು ಬಿಡುವುದನ್ನ ಮಕ್ಕಳಿಗೆ ಹೇಳಿ
ಕೊಟ್ಟಿದ್ದೇವೆಯೇ? ನಮ್ಮ ಸುತ್ತಲಿನ ಎಲ್ಲದರಲ್ಲೂ ಪೈಪೋಟಿ ಇದೆ, ಒತ್ತಡವಿದೆ.
ಗೆಲುವಿಗಷ್ಟೇ ನಮ್ಮನ್ನು ತಯಾರು ಮಾಡಿಕೊಳ್ಳುವುದಲ್ಲ; ಸೋಲನ್ನು, ನೋವನ್ನು, ಆತಂಕವನ್ನು, ಅವಮಾನವನ್ನು ಎದುರಿಸಿ ಮತ್ತೆ ಮನಸ್ಸನ್ನು ಅರಳಿಸಿ ಬದುಕಲ್ಲಿ ಭರವಸೆ ಮೂಡಿಸಿ ಮುಂದೂಡಬೇಕಿದೆ. ಏನಂತೀರಿ?!!