ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Viral Video: ವರನಿಗಾಗಿ ಅಲಂಕಾರಗೊಂಡ SUV ಕಾರು ಬೈಕ್‍ಗೆ ಡಿಕ್ಕಿ; ಮುಂದೇನಾಯ್ತು? ವಿಡಿಯೊ ನೋಡಿ

ಲಕ್ನೋ-ಪ್ರಯಾಗ್‍ರಾಜ್ ರಾಷ್ಟ್ರೀಯ ಹೆದ್ದಾರಿಯ ಉಂಚಹಾರ್ ಮಾರುಕಟ್ಟೆ ಪ್ರದೇಶದಲ್ಲಿ ಭಾನುವಾರ (ಮಾರ್ಚ್ 2) ಮದುವೆಗಾಗಿ ಹೂವಿನಿಂದ ಅಲಂಕಾರ ಮಾಡಿಕೊಂಡು ಹೊರಟ ವರನ ಎಸ್‍ಯುವಿ ಕಾರೊಂದು ಅತಿವೇಗವಾಗಿ ಚಲಿಸಿ ಎದುರಿಗೆ ಬಂದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ವ್ಯಕ್ತಿಗಳು ಹಾರಿ ಹೋಗಿ ಇ-ರೀಕ್ಷಾದ ಮೇಲೆ ಬಿದ್ದಿದ್ದಾರೆ. ಈ ಭೀಕರ ಅಪಘಾತ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವರನಿಗಾಗಿ ಅಲಂಕಾರಗೊಂಡ SUV ಕಾರು ಮಾಡಿದ ಅವಾಂತರ ಒಂದಾ...ಎರಡಾ...!

Profile pavithra Mar 4, 2025 12:11 PM

ಲಖನೌ: ಮದುವೆಗಾಗಿ ಅಲಂಕಾರ ಮಾಡಿಕೊಂಡು ಸಜ್ಜಾದ ವರನ ಎಸ್‍ಯುವಿ ಕಾರೊಂದು ಅತಿವೇಗವಾಗಿ ಚಲಿಸಿದ ಕಾರಣ ಎದುರಿಗೆ ಬಂದ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ವ್ಯಕ್ತಿಗಳು ಹಾರಿ ಹೋಗಿ ಇ-ರಿಕ್ಷಾದ ಮೇಲೆ ಬಿದ್ದ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ. ಅದೃಷ್ಟವಶಾತ್‍ ಈ ಘಟನೆಯಲ್ಲಿ ಬೈಕಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭೀಕರ ಅಪಘಾತ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವರದಿಗಳ ಪ್ರಕಾರ, ರಾಯ್‌ಬರೇಲಿಯ ಲಕ್ನೋ-ಪ್ರಯಾಗ್‍ರಾಜ್ ರಾಷ್ಟ್ರೀಯ ಹೆದ್ದಾರಿಯ ಉಂಚಹಾರ್ ಮಾರುಕಟ್ಟೆ ಪ್ರದೇಶದಲ್ಲಿ ಭಾನುವಾರ (ಮಾರ್ಚ್ 2) ಈ ಘಟನೆ ನಡೆದಿದೆ. ಬೈಕ್‍ಗೆ ಡಿಕ್ಕಿ ಹೊಡೆದ ಕಾರನ್ನು ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಈ ಘಟನೆ ನಡೆದಾಗ ಕಾರು ಮದುವೆಗೆ ವರನನ್ನು ಕರೆದೊಯ್ಯಲು ಹೋಗುತ್ತಿತ್ತು ಎನ್ನಲಾಗಿದೆ.



ಬೈಕ್‍ನಲ್ಲಿದ್ದ ಇಬ್ಬರು ವ್ಯಕ್ತಿಗಳು ಮಾರುಕಟ್ಟೆಯ ರಸ್ತೆ ಬದಿಯ ಅಂಗಡಿಯಲ್ಲಿ ಜ್ಯೂಸ್ ಕುಡಿಯಲು ತೆರಳುತ್ತಿದ್ದಾಗ ವೇಗವಾಗಿ ಬಂದ ಎಸ್‍ಯುವಿ ಅವರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರು ಬೈಕಿಗೆ ಡಿಕ್ಕಿ ಹೊಡೆದ ನಂತರ ಬೈಕಿನಲ್ಲಿದ್ದ ಯುವಕರು ಸುಮಾರು 15 ಅಡಿ ದೂರಕ್ಕೆ ಹಾರಿ ಹೋಗಿ ಬಿದ್ದಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಅಪಘಾತದಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.

ಬೈಕ್‍ನಲ್ಲಿದ್ದ ಯುವಕರು ಕಂದರವ ನಿವಾಸಿಗಳಾದ ಸೂರ್ಯ ಮತ್ತು ಆತನ ಸ್ನೇಹಿತ ಗುರು ಶರಣ್ ಎಂದು ಗುರುತಿಸಲಾಗಿದೆ. ಕಾರು ಅವರಿಗೆ ಡಿಕ್ಕಿ ಹೊಡೆದ ನಂತರ ಅವರು ಸತ್ತಿದ್ದಾರೆಯೇ ಅಥವಾ ಜೀವಂತವಾಗಿದ್ದಾರೆಯೇ ಎಂದು ನೋಡಲು ಕೂಡ ನಿಲ್ಲಿಸಲಿಲ್ಲವಂತೆ. ನಂತರ ಅದೇ ಕಾರು ಹನುಮಾನ್ ದೇವಾಲಯದ ಬಳಿ ಮೊಹಮ್ಮದ್ ಕಲೀಮ್ ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಸ್ಥಳದಲ್ಲಿದ್ದ ಜನರು ಗಾಯಾಳುಗಳನ್ನು ಸಿಎಚ್‍ಸಿ(ಸಮುದಾಯ ಆರೋಗ್ಯ ಕೇಂದ್ರ) ಗೆ ಕರೆದೊಯ್ದರು. ಗಂಭೀರವಾಗಿ ಗಾಯಗೊಂಡ ಒಬ್ಬನ ಸ್ಥಿತಿ ಹದಗೆಟ್ಟಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ಶುರುಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ನಂತರ ಪೊಲೀಸರು ಕಾರನ್ನು ಹುಡುಕಿ ತಮ್ಮ ವಶಕ್ಕೆ ತೆಗೆದುಕೊಂಡು ಈ ಬಗ್ಗೆ ಹೆಚ್ಚಿನ ತನಿಖೆ ಶುರುಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Road Accident: ಅಥಣಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ತಂದೆ-ಮಗಳ ದುರ್ಮರಣ

ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ತಂದೆ ಹಾಗೂ ಮಗಳು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಬಳಿ ನಡೆದಿದೆ. ಮೃತರನ್ನು ರಾಮು ಕರ್ಣಿ (28) ಹಾಗೂ ಮಗಳು ಜಾಹ್ನವಿ ಕರ್ಣಿ (11) ಎಂದು ಗುರುತಿಸಲಾಗಿದೆ. ಬೈಕ್‌ನ ಹಿಂಬದಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದ್ದು, ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.