Kanyakumari Tragedy: ಹೈಟೆನ್ಷನ್ ತಂತಿಗೆ ಕಬ್ಬಿಣದ ಏಣಿ ಟಚ್- ವಿದ್ಯುತ್ ಪ್ರವಹಿಸಿ ನಾಲ್ವರ ದುರ್ಮರಣ; ಶಾಕಿಂಗ್ ವಿಡಿಯೊ ಫುಲ್ ವೈರಲ್
ಚರ್ಚ್‌ನ ವಾರ್ಷಿಕೋತ್ಸವಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ನಾಲ್ವರು ಮೃತಪಟ್ಟ ಘಟನೆ ಕನ್ಯಾಕುಮಾರಿ ಜಿಲ್ಲೆಯ ಇನಾಯಂ ಪುತೇನ್‌ತುರೈನಲ್ಲಿ ನಡೆದಿದೆ. ವಿಜಯನ್ (52), ಶೋಭನ್ (45), ಮನು (42) ಮತ್ತು ಜೆಸ್ಟಿಸ್ (35) ಉತ್ಸವಕ್ಕೆ ಮೃತ ದುರ್ದೈವಿಗಳಾಗಿದ್ದು, ಇನಾಯಂ ಪುತೇನ್‌ತುರೈನಲ್ಲಿರುವ ಸೇಂಟ್ ಆಂಟನಿ ಚರ್ಚ್‌ನಲ್ಲಿ ನಡೆದ ವಾರ್ಷಿಕ ಉತ್ಸವದ ಆಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ವಿದ್ಯುತ್ ಅವಘಡದ ಚಿತ್ರ

ಚೆನ್ನೈ, ಮಾರ್ಚ್ 4: ಚರ್ಚ್ ನ ವಾರ್ಷಿಕ ಉತ್ಸವಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ನಾಲ್ವರು ಮೃತಪಟ್ಟ ಘಟನೆ ಕನ್ಯಾಕುಮಾರಿ ಜಿಲ್ಲೆಯ ಇನಾಯಂ ಪುತೇನ್‌ತುರೈನಲ್ಲಿ ನಡೆದಿದೆ. ವಿಜಯನ್ (52), ಶೋಭನ್ (45), ಮನು (42) ಮತ್ತು ಜೆಸ್ಟಿಸ್ (35) ಉತ್ಸವಕ್ಕೆ ಮೃತ ದುರ್ದೈವಿಗಳಾಗಿದ್ದು, ಇನಾಯಂ ಪುತೇನ್‌ತುರೈನಲ್ಲಿರುವ ಸೇಂಟ್ ಆಂಟನಿ ಚರ್ಚ್‌ನಲ್ಲಿ ನಡೆದ ವಾರ್ಷಿಕ ಉತ್ಸವದ ಆಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಇನ್ನು ಈ ಭೀಕರ ಘಟನೆ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಶಾಕಿಂಗ್ ವಿಡಿಯೊ ಭಾರೀ ವೈರಲ್ ಆಗುತ್ತಿದೆ.
ಪುತೇನ್‌ತುರೈನಲ್ಲಿ ಕಳೆದ ಎಂಟು ದಿನಗಳಿಂದ ಸೇಂಟ್ ಆಂಟನಿ ಚರ್ಚ್‌ನಲ್ಲಿ ವಾರ್ಷಿಕ ಉತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಈ ಹಿನ್ನಲೆಯಲ್ಲಿಯೇ ಒಂಭತ್ತನೇ ದಿನದ ಉತ್ಸವಕ್ಕೆ ಉತ್ಸಾಹದಿಂದ ರಥವನ್ನು ಅಲಂಕರಿಸಲಾಗುತ್ತಿತ್ತು. ಉತ್ಸವದ ಮೆರವಣಿಗೆ ಸಾಂಗವಾಗಿ ಸಾಗಲು ರಸ್ತೆ ಬದಿಯಲ್ಲಿದ್ದ ಕಬ್ಬಿಣದ ಎಣಿಯನ್ನು ಮುಂದಾಗಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಆ ಎಣಿಗೆ ಹೈವೋಲ್ಟೇಜ್ ವಿದ್ಯುತ್ ತಂತಿ ತಾಗಿದ್ದು, ಎಣಿಯನ್ನು ಹಿಡಿದುಕೊಂಡಿದ್ದ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Four individuals have tragically lost their lives due to an electric shock in the village of Inaiyamputhenthurai, located in the Kanyakumari district.
— Mahalingam Ponnusamy (@mahajournalist) March 1, 2025
The incident occurred when an iron ladder came into contact with an electric pole while preparations were underway for a temple… pic.twitter.com/vNr6gwAyp1
ಈ ಸುದ್ದಿಯನ್ನು ಓದಿ: Viral Video: ಬಲವಂತವಾಗಿ ಕುದುರೆಯ ಬಾಯಿಗೆ ಸಿಗರೇಟ್ ಇಟ್ಟು ವಿಕೃತಿ ಮೆರೆದ ದುಷ್ಕರ್ಮಿಗಳು
ಈ ಅವಘಡದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಘಟನೆಯ ಭೀಕರತೆ ವಿಡಿಯೊದಲ್ಲಿ ಸೆರೆಯಾಗಿದೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿಗಳು ಸಾರ್ವಜನಿಕ ಪರಿಹಾರ ನಿಧಿಯಿಂದ ಪರಿಹಾರವನ್ನು ಘೋಷಿಸಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ನಾಲ್ವರನ್ನೂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ, ಜಿಲ್ಲಾಧಿಕಾರಿ ಆರ್. ಅಲಗುಮೀನ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಆರ್. ಸ್ಟಾಲಿನ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕನ್ಯಾಕುಮಾರಿ ಲೋಕಸಭಾ ಸದಸ್ಯ ವಿಜಯ್ ವಸಂತ್ ಆಸ್ಪತ್ರೆಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಈ ಬೆಂಗಳೂರು ಕರಗದ ಪಲ್ಲಕ್ಕಿ ಉತ್ಸವದ ವೇಳೆ ವಿದ್ಯುತ್ ಶಾಕ್‍ಗೆ ಇಬ್ಬರು ಬಲಿಯಾದ ದುರ್ಘಟನೆ ಎಲೆಕ್ಟ್ರಾನಿಕ್ ಸಿಟಿಯಯ ಅಗ್ನಿಶಾಮಕ ಠಾಣೆ ಬಳಿ ನಡೆದಿತ್ತು. ಹೆಬ್ಬಗೋಡಿ ಸಮೀಪದ ಗೊಲ್ಲಹಳ್ಳಿಯಲ್ಲಿ ನಡೆದ ಕರಗ ಉತ್ಸವ ನಡೆದಿತ್ತು. ರಾತ್ರಿ ಕರಗ ಉತ್ಸವಕ್ಕೆ ಆಗಮಿಸಿದ್ದ ಪಲ್ಲಕ್ಕಿಗಳು ಕರಗ ಉತ್ಸವ ಮುಗಿಸಿಕೊಂಡು ವಾಪಸ್ ಆಗುತ್ತಿದ್ದಾಗ ಈ ಅವಘಡ ನಡೆದಿತ್ತು. ಪಲ್ಲಕ್ಕಿ ಇದ್ದ ಟ್ರ್ಯಾಕ್ಟರ್ ಸಾಗುವ ಮಾರ್ಗ ಮಧ್ಯದಲ್ಲಿದ್ದ ವಿದ್ಯುತ್ ತಂತಿಯನ್ನು ಮರದ ಕೋಲಿನಿಂದ ಯುವಕರು ಮೇಲೆತ್ತಿದ್ದು, ಮಳೆ ಬಂದಿದ್ದರಿಂದ ಕೋಲು ಒದ್ದೆಯಾಗಿದ್ದು, ವಿದ್ಯುತ್ ಹರಿದಿತ್ತು. ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವಿಗೀಡಾಗಿದ್ದರು. ಈ ವೇಳೆ ಟ್ರ್ಯಾಕ್ಟರ್ ಹೊತ್ತಿ ಉರಿದಿತ್ತು.