ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Murder Case: ಶಾಕಿಂಗ್‌ ಘಟನೆ! ಬರ್ತ್‌ಡೇ ಸೆಲೆಬ್ರೇಶನ್‌ಗೆಂದು ಬಂದವನ ತಲೆ ಒಡೆದ ಕಿರಾತಕರು

ಮಹಾರಾಷ್ಟ್ರದ ನಲಸೊಪರದ ಸಂತೋಷ್ ಭುವನ್ ಪ್ರದೇಶದಲ್ಲಿ ಭಾನುವಾರ(ಮಾರ್ಚ್‌ 2) ತಡರಾತ್ರಿ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಲು ಬಂದ 25 ವರ್ಷದ ಯುವಕ ಸೌರಭ್‍ ಬೈಕ್‍ಗೆ ಡಿಕ್ಕಿ ಹೊಡೆದ ಕಾರಣಕ್ಕೆ ಕೌಶಿಕ್ ಚೌಹಾಣ್ ಹಾಗೂ ಅವನ ಕುಟುಂಬದವರು ಸೇರಿ ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು(Murder Case) ಕೊಲೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಕಬ್ಬಿಣದ ರಾಡ್‌ನಿಂದ ಹೊಡೆದು ಯುವಕನ ಕೊಲೆ!

Profile pavithra Mar 4, 2025 12:05 PM

ಮುಂಬೈ: ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಲು ಬಂದಿದ್ದ 25 ವರ್ಷದ ಯುವಕನನ್ನು ಕ್ರೂರವಾಗಿ ಥಳಿಸಿ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆ(Murder Case) ಮಾಡಿದ ಘಟನೆ ಮಹಾರಾಷ್ಟ್ರದ ನಲಸೊಪರದ ಸಂತೋಷ್ ಭುವನ್ ಪ್ರದೇಶದಲ್ಲಿ ಭಾನುವಾರ(ಮಾರ್ಚ್‌ 2) ತಡರಾತ್ರಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಲಸೊಪಾರಾ ಪಶ್ಚಿಮದ ಛೇಡಾ ನಗರದ ನಿವಾಸಿ ಸೌರಭ್ ಅನಿಲ್ ಮಿಶ್ರಾ (25) ಕೊಲೆಯಾದ ಯುವಕ. ಈತ ಸ್ನೇಹಿತರಾದ ಸಚಿನ್ ಶರ್ಮಾ, ವಿವೇಕ್ ಗುಪ್ತಾ ಮತ್ತು ಸೋನು ಖಾನ್ ಅಲಿಯಾಸ್ ಕೈಫಿ ಅವರೊಂದಿಗೆ ಸಂತೋಷ್ ಭುವನ್‍ನ ಅಭಿನಂದನ್ ಹೋಟೆಲ್‍ನಲ್ಲಿ ರಾತ್ರಿ 11: 30 ರ ಸುಮಾರಿಗೆ ಸ್ನೇಹಿತ ವಿವೇಕ್ ಗುಪ್ತಾನ ಹುಟ್ಟುಹಬ್ಬವನ್ನು ಆಚರಿಸಲು ಬಂದಿದ್ದನು. ಈ ನಡುವೆ ಮತ್ತೊಬ್ಬ ಸ್ನೇಹಿತ ಸರ್ಫರಾಜ್ ಅಬ್ಬಾಸಿಯನ್ನು ಕರೆದೊಯ್ಯಲು ಹೋಗುವಾಗ ಸೌರಭ್ ಓಡಿಸುತ್ತಿದ್ದ ಬೈಕ್‍ ಮಹುರಾ ಬಾಲ ವಿಕಾಸ್ ಶಾಲೆಯ ಬಳಿ ನಿಂತಿದ್ದ ಕೌಶಿಕ್ ಚವಾಣ್ ಬೈಕ್‍ಗೆ ಡಿಕ್ಕಿ ಹೊಡೆದಿದೆ.

ಇದು ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಕೌಶಿಕ್ ಚವಾಣ್, ಸೌರಭ್ ತಾಯಿ ಮತ್ತು ಸಹೋದರಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಂತರ ಕೌಶಿಕ್ ಸಹೋದರ ಅಜಯ್ ಚವಾಣ್ ಕೂಡ ಈ ಜಗಳದಲ್ಲಿ ಸೇರಿಕೊಂಡಿದ್ದಾನೆ. ಬೈಕ್‍ಗೆ ಯಾವುದೇ ಹಾನಿಯಾಗಿಲ್ಲ ಎಂದು ವಿವರಿಸಲು ಸೌರಭ್ ಪ್ರಯತ್ನಿಸಿದರೂ, ಸಹೋದರರಿಬ್ಬರೂ ಅವನ ಮೇಲೆ ಹಲ್ಲೆ ಮಾಡಿದ್ದಾರೆ. ಸೌರಭ್ ಸ್ನೇಹಿತರು ಬಂದು ಜಗಳವನ್ನು ತಡೆಯಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಕೌಶಿಕ್ ತನ್ನ ಮನೆಯಿಂದ ಕಬ್ಬಿಣದ ರಾಡ್ ತೆಗೆದುಕೊಂಡು ಬಂದು ಸೌರಭ್ ತಲೆಗೆ ಹೊಡೆದು ಆತನನ್ನು ಗಾಯಗೊಳಿಸಿದ್ದಾನೆ.

ಅತಿಯಾದ ರಕ್ತಸ್ರಾವದಿಂದಾಗಿ ಸೌರಭ್ ಪ್ರಜ್ಞೆ ಕಳೆದುಕೊಂಡನು. ಕೊನೆಗೆ ಅವನನ್ನು ನಲಸೊಪಾರಾ ಪೂರ್ವದ ಐಕಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಅವನು ಮುಂಜಾನೆ 2: 00 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸೌರಭ್ ಕುಟುಂಬದವರು ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕೌಶಿಕ್ ಚವಾಣ್, ಅಜಯ್ ಚವಾಣ್, ಅವಧೇಶ್ ಚವಾಣ್, ಸುನೀತಾ ಚವಾಣ್ ಮತ್ತು ಸುನಿಲ್ ಸೋನಾವಾನೆ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Murder Case: ಬೆಂಗಳೂರಲ್ಲಿ ಮತ್ತೊಂದು ಬರ್ಬರ ಹತ್ಯೆ, ಸೆಕ್ಯೂರಿಟಿ ಗಾರ್ಡ್ ಕೊಲೆ

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈಯಲಾಗಿದೆ. ನೇಪಾಳ ಮೂಲದ ಗಣೇಶ್ (32) ಎನ್ನುವ ಸೆಕ್ಯೂರಿಟಿ ಗಾರ್ಡ್‌ ಕೊಲೆ ಆದವರು. ಬ್ಯಾಟರಾಯನಪುರದ ಟಿಂಬರ್ ಗಾರ್ಡನ್ ಬಳಿ ಈ ಭೀಕರ ಕೊಲೆ ನಡೆದಿದೆ.ಬ್ಯಾಟರಾಯನಪುರದ ಗಾರ್ಮೆಂಟ್‌ನಲ್ಲಿ ಗಣೇಶ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಆರೋಪಿಗಳಿಗಾಗಿ ಸದ್ಯ ಪೋಲಿಸಲು ಹುಡುಕಾಟ ನಡೆಸುತ್ತಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.