ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Viral Video: ಚರಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಹಸುವಿನ ರಕ್ಷಣೆಗೆ ಈತ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ

ಕೊಳಕು ಚರಂಡಿಯಲ್ಲಿ ಸಿಕ್ಕಿಬಿದ್ದ ಅಸಹಾಯಕ ಹಸುವನ್ನು ರಕ್ಷಿಸಲು ವ್ಯಕ್ತಿಯೊಬ್ಬ ಹರಸಾಹಸ ಮಾಡಿ ಕೊನೆಗೂ ಪಟ್ಟುಹಿಡಿದು ಅದನ್ನು ರಕ್ಷಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ನೆಟ್ಟಿಗರು ವಿಡಿಯೊ ನೋಡಿ ಫಿದಾ ಆಗಿದ್ದಾರೆ.

ರಿಯಲ್‌ ಹೀರೊ ಅಂದ್ರೆ ಇವ್ನೆ! ಈ ವಿಡಿಯೊ ನೋಡಿ

Profile pavithra Mar 4, 2025 12:53 PM

ನವದೆಹಲಿ: ವ್ಯಕ್ತಿಯೊಬ್ಬ ಚರಂಡಿಯಲ್ಲಿ ಸಿಕ್ಕಿಬಿದ್ದ ಅಸಹಾಯಕ ಹಸುವನ್ನು ರಕ್ಷಿಸಿದ ಘಟನೆಯೊಂದು ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಜನರ ಮೆಚ್ಚುಗೆ ಗಳಿಸಿದೆ.ಈ ವಿಡಿಯೊ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ವೈರಲ್ ವಿಡಿಯೊದಲ್ಲಿ ಆಳವಾದ, ಕಿರಿದಾದ ಚರಂಡಿಯಲ್ಲಿ ಬಿದ್ದು ಅಲ್ಲಿಂದ ಮೇಲೆಳಲು ಒದ್ದಾಡುತ್ತಿದ್ದ ಹಸುವಿಗೆ ವ್ಯಕ್ತಿಯೊಬ್ಬ ಸಹಾಯಹಸ್ತ ಚಾಚಿರುವುದು ಸೆರೆಯಾಗಿದೆ. ಹಸುವನ್ನು ಚರಂಡಿಯಿಂದ ಮೇಲೆತ್ತಲು ಹಸುವಿನ ಕುತ್ತಿಗೆಗೆ ಹಗ್ಗವನ್ನು ಕಟ್ಟಲಾಯಿತು, ಆದರೆ ಅದನ್ನು ಹೊರತೆಗೆಯಲು ಮಾಡಿದ ಅನೇಕ ಪ್ರಯತ್ನಗಳು ವಿಫಲವಾದವು. ಆದರೆ ಆ ವ್ಯಕ್ತಿ ಮಾತ್ರ ಛಲ ಬಿಡದೆ ಕೊನೆಗೆ ಹಸುವನ್ನು ಚರಂಡಿಯಿಂದ ಮೇಲಕ್ಕೆತ್ತಿದ್ದಾನೆ.

ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ 'veera__singam' ಹ್ಯಾಂಡಲ್ ಹಂಚಿಕೊಂಡಿದ್ದು, ಕೇವಲ ಒಂದು ದಿನದಲ್ಲಿ 21 ಮಿಲಿಯನ್ ವ್ಯೂವ್ಸ್‌ ಗಳಿಸಿದೆ. ನೆಟ್ಟಿಗರು ಆ ವ್ಯಕ್ತಿಯಲ್ಲಿರುವ ಮಾನವೀಯತೆಯ ಗುಣವನ್ನು ಹೊಗಳಿದ್ದಾರೆ. ಕಾಮೆಂಟ್ ವಿಭಾಗವನ್ನು ಅನೇಕರು ಪ್ರಶಂಸೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಆ ವ್ಯಕ್ತಿಯನ್ನು ನಿಜವಾದ ಹೀರೋ ಎಂದು ಹೊಗಳಿದರೆ, ಇತರರು ಹಸು ಬದುಕುಳಿದಿದೆ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಬ್ಬ ನೆಟ್ಟಿಗರು, "ನಿಜವಾದ ಮಾನವೀಯತೆ ಎಂದರೆ ಇದು. ಅವರಂತಹ ಹೆಚ್ಚಿನ ಜನರು ನಮಗೆ ಬೇಕು” ಎಂದು ಬರೆದಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, "ಈ ದೃಶ್ಯ ಕಂಡು ನನ್ನ ಹೃದಯವು ಜೋರಾಗಿ ಬಡಿದುಕೊಳ್ಳುತ್ತಿತ್ತು! ಆ ಹಸುವನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು” ಎಂದಿದ್ದಾರೆ. "ಈ ಮನುಷ್ಯನು ವಿಶ್ವದ ಎಲ್ಲಾ ಗೌರವಕ್ಕೆ ಅರ್ಹನಾಗಿದ್ದಾನೆ. ಪ್ರಾಣಿಗಳಿಗೆ ಇವನಂತಹ ಹೆಚ್ಚಿನ ರಕ್ಷಕರು ಬೇಕು” ಎಂದು ಒಬ್ಬರು ತಿಳಿಸಿದ್ದಾರೆ.

"ಇತ್ತೀಚಿನ ದಿನಗಳಲ್ಲಿ ಜನರು ಪ್ರಾಣಿಗಳಿಗೆ ಸಹಾಯ ಮಾಡುವುದನ್ನು ನೋಡುವುದೇ ಅಪರೂಪ. ಈ ಮನುಷ್ಯ ಒಬ್ಬ ದೇವದೂತ" ಎಂದು ಕಾಮೆಂಟ್ ಮಾಡಲಾಗಿದೆ. "ಮಾನವೀಯತೆ ಇನ್ನೂ ಸತ್ತಿಲ್ಲ, ಮತ್ತು ಈ ವಿಡಿಯೊ ಅದನ್ನು ಸಾಬೀತುಪಡಿಸುತ್ತದೆ" ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ. ಅನೇಕರು ವ್ಯಕ್ತಿಯ ದಯೆಯನ್ನು ಹೊಗಳಿದರೆ, ಕೆಲವರು ತೆರೆದ ಚರಂಡಿಗಳಿಂದಾಗುವ ಅಪಾಯಗಳ ಬಗ್ಗೆ ತಿಳಿಸಿದ್ದಾರೆ ಮತ್ತು ಅಂತಹ ಘಟನೆಗಳನ್ನು ತಡೆಗಟ್ಟಲು ಉತ್ತಮ ಮೂಲಸೌಕರ್ಯಗಳನ್ನು ಒದಗಿಸುವಂತೆ ಕರೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಏಕಾಏಕಿ ಕಾರಿನಡಿಗೆ ಬಿದ್ದ ಕರು... ಜತೆಗಿದ್ದ ದನಗಳು ಮಾಡಿದ್ದೇನು ಗೊತ್ತಾ? ಈ ಹೃದಯಸ್ಪರ್ಶಿ ವಿಡಿಯೊ ಫುಲ್‌ ವೈರಲ್‌

ಇತ್ತೀಚೆಗೆ ಕಾರಿನಡಿಗೆ ಬಿದ್ದಿದ್ದ ಕರುವೊಂದನ್ನು ರಕ್ಷಿಸುವಂತೆ ಅಲ್ಲಿದ್ದವರೆಲ್ಲರ ಗಮನ ಸೆಳೆಯಲು ಮತ್ತು ಕಾರು ಚಾಲಕನಿಗೆ ಮಾಹಿತಿ ನೀಡಲು ದನಗಳ ಹಿಂಡು ಆ ಕಾರನ್ನು ಬೆನ್ನಟ್ಟಿಬಂದು ನಿಲ್ಲಿಸಿದ ಘಟನೆಯೊಂದು ನಡೆದಿತ್ತು. ಅಲ್ಲಿದ್ದ ಸ್ಥಳೀಯರು ಆ ಕಾರಿನಡಿಯಲ್ಲಿ ಸಿಲುಕಿಕೊಂಡಿದ್ದ ದನದ ಕರುವನ್ನು ಯಶಸ್ವಿಯಾಗಿ ಕಾಪಾಡಿದ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಾರಿನ ಚಾಲಕ ಸುಮಾರು 200 ಮೀಟರ್ ದೂರ ಕರುವನ್ನು ಎಳೆದುಕೊಂಡು ಬಂದಿದ್ದ ಕಾರಣ ಕರು ಸಣ್ಣಪುಟ್ಟ ಗಾಯಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.