ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

IND vs AUS: ಸೆಮಿ ಪಂದ್ಯಕ್ಕೂ ಮುನ್ನ ಭಾರತಕ್ಕೆ ತಲೆನೋವಾದ ಟ್ರಾವಿಸ್‌ ಹೆಡ್‌

IND vs AUS, Champions Trophy 2025 Semifinal: 2009 ರ ಬಳಿಕ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮುಖಾಮುಖಿಯಾಗುತ್ತಿರುವ ಆಸೀಸ್‌ ವಿರುದ್ಧ ಭಾರತ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಲಿ ಹಾಗೂ ಟ್ರಾವಿಸ್‌ ಹೆಡ್‌ ವಿಕೆಟ್‌ ಬೇಗನೆ ಪತನಗೊಳ್ಳಲಿ ಎನ್ನುವುದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಹಾರೈಕೆಯಾಗಿದೆ.

Travis Head: ಭಾರತ ವಿರುದ್ಧ ಟ್ರಾವಿಸ್‌ ಹೆಡ್‌ ದಾಖಲೆ ಹೇಗಿದೆ?

Profile Abhilash BC Mar 4, 2025 12:46 PM

ದುಬೈ: ಭಾರತ ತಂಡ ಇಂದು ಚಾಂಪಿಯನ್ಸ್‌ ಟ್ರೋಫಿ(Champions Trophy 2025) ಸೆಮಿ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಟೀಮ್‌ ಇಂಡಿಯಾಕ್ಕೆ ಟ್ರಾವಿಸ್ ಹೆಡ್(Travis Head) ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಹೌದು, ಕಳೆದ ಕೆಲ ವರ್ಷಗಳಿಂದ ಎಲ್ಲ ಐಸಿಸಿ ಟೂರ್ನಿಯಲ್ಲಿಯೂ ಟ್ರಾವಿಸ್‌ ಹೆಡ್‌ ಭಾರತಕ್ಕೆ ಕಂಟಕವಾಗಿ ಕಾಡಿದ್ದಾರೆ. ಟೂರ್ನಿಯುದ್ದಕ್ಕೂ ಆಡದೇ ಇದ್ದರೂ ಕೂಡ ಭಾರತ ವಿರುದ್ಧ ಮಾತ್ರ ಸೇಡಿನ ಪಂದ್ಯದಂತೆ ಆಡಿ ಸೋಲುಣಿಸುತ್ತಾರೆ. ಈ ಬಾರಿ ಅವರು ಅಡ್ಡಗಾಲಿಕ್ಕದಿರಲಿ ಎನ್ನುವುದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಆಶಯ. ಭಾರತ ವಿರುದ್ಧ ಹೆಡ್‌ ದಾಖಲೆ ಹೇಗಿದೆ ಎಂಬ ವರದಿ ಇಲ್ಲಿದೆ.

ಭಾರತ ವಿರುದ್ಧ ಟ್ರಾವಿಸ್‌ ಹೆಡ್‌ ಇದುವರೆಗೆ 9 ಏಕದಿನ ಪಂದ್ಯಗಳನ್ನು ಆಡಿ 345 ರನ್‌ ಬಾರಿಸಿದ್ದಾರೆ. ಒಂದು ಶತಕ ಕೂಡ ಒಳಗೊಳಡಿದೆ. ಈ ಶತಕ 2023ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯಲ್ಲಿ ದಾಖಲಾಗಿತ್ತು. ಅಂದು ಅವರು 120 ಎಸೆತಗಳಿಂದ 137 ರನ್‌ ಚಚ್ಚಿದ್ದರು.

ಡಬ್ಲ್ಯುಟಿಸಿ ಫೈನಲ್: ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ ಪ್ರವೇಶಿಸಿದ್ದ ಭಾರತ ಚೊಚ್ಚಲ ಕಪ್‌ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಟ್ರಾವಿಸ್‌ ಹೆಡ್‌ 146 ರನ್ ಸಿಡಿಸಿ ಭಾರತದ ಗೆಲುವಿನ ಕನಸನ್ನು ಭಗ್ನಗೊಳಿಸಿದ್ದರು.

ಏಕದಿನ ವಿಶ್ವಕಪ್‌ ಫೈನಲ್‌

2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದ ಭಾರತಕ್ಕೆ ಆಸೀಸ್‌ ತಂಡ ಎದುರಾಗಿತ್ತು. ಇಲ್ಲಿಯೂ ಕೂಡ ಟ್ರಾವಿಸ್‌ ಹೆಡ್‌ ಭಾರತಕ್ಕೆ ಕಂಟವಾಗಿದ್ದರು. ನಾಯಕ ರೋಹಿತ್‌ ಶರ್ಮಾ ಅವರ ಅಸಾಧಾರಣ ಕ್ಯಾಚ್‌, ಆ ಬಳಿಕ ಸ್ಫೋಟಕ ಬ್ಯಾಟಿಂಗ್‌ ಮೂಲಕ ಭಾರತದ ಗೆಲುವನ್ನು ಕಸಿದಿದ್ದರು.

ಇದನ್ನೂ ಓದಿ IND vs AUS: ಭಾರತ-ಆಸೀಸ್‌ ಐಸಿಸಿ ನಾಕೌಟ್‌ ಮುಖಾಮುಖಿಯ ದಾಖಲೆ ಹೇಗಿದೆ?

2024 ರ ಟಿ20 ವಿಶ್ವಕಪ್: 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಸೂಪರ್‌-8 ಹಂತದ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 24 ರನ್‌ ಅಂತರದ ಗೆಲುವು ಸಾಧಿಸಿದರೂ ಕೂಡ ಈ ಪಂದ್ಯದಲ್ಲಿ ಟ್ರಾವಿಸ್‌ ಹೆಡ್‌ 76 ರನ್ ಚಚ್ಚಿದ್ದರು.

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ: ಇತ್ತೀಚೆಗೆ ಮುಕ್ತಾಯ ಕಂಡಿದ್ದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಭಾರತ, ಆ ಬಳಿಕ ಸತತ ಸೋಲು ಕಂಡಿತ್ತು. ಇದಕ್ಕೆ ಕಾರಣ ಟ್ರಾವಿಸ್‌ ಹೆಡ್‌ ಬಾರಿಸಿದ ಸತತ ಶತಕ. ಸರಣಿಯಲ್ಲಿ ಅವರು ಒಟ್ಟು 448 ರನ್ ಗಳಿಸಿದ್ದರು. ಭಾರತ ಸರಣಿ ಸೋತ ಕಾರಣ ಮೂರನೇ ಬಾರಿಗೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶ ಕೈತಪ್ಪಿತು.

2009 ರ ಬಳಿಕ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮುಖಾಮುಖಿಯಾಗುತ್ತಿರುವ ಆಸೀಸ್‌ ವಿರುದ್ಧ ಭಾರತ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಲಿ ಹಾಗೂ ಟ್ರಾವಿಸ್‌ ಹೆಡ್‌ ವಿಕೆಟ್‌ ಬೇಗನೆ ಪತನಗೊಳ್ಳಲಿ ಎನ್ನುವುದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಹಾರೈಕೆಯಾಗಿದೆ.