ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬದಲಾಗಿದೆ ರೈಲ್ವೆ, ಬದಲಾಗಿದೆ ನಿಯಮ

ತತ್ಕಾಲ್ ಟಿಕೆಟ್ ಬುಕಿಂಗ್ ಅನ್ನು ಹೆಚ್ಚು ಪಾರದರ್ಶಕವಾಗಿಸುವುದು ಮತ್ತು ಅಗತ್ಯವಿರುವ ಪ್ರಯಾಣಿಕ ರಿಗೆ ಆದ್ಯತೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಬುಕಿಂಗ್ ವಿಂಡೋ ತೆರೆದ ನಂತರ ಮೊದಲ 30 ನಿಮಿಷಗಳ ಕಾಲ ಏಜೆಂಟರು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯ ವಾಗುವುದಿಲ್ಲ

ಬದಲಾಗಿದೆ ರೈಲ್ವೆ, ಬದಲಾಗಿದೆ ನಿಯಮ

Profile Ashok Nayak Jul 5, 2025 5:45 PM

ಅಶ್ವಿನಿ ವೈಷ್ಣವ್ ಅವರು ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ರೈಲ್ವೆ ಹೊಸ ಹಾದಿಯಲ್ಲಿದೆ. ಹೊಸ ರೈಲ್ವೆ ಮಾರ್ಗ, ಹೊಸ ರೈಲುಗಳ ಆರಂಭ, ನಿಲ್ದಾಣಗಳ ಸುವ್ಯವಸ್ಥೆ, ರೈಲ್ವೆ ಬೋಗಿಗಳ ಆಧುನೀಕರಣ, ಟಿಕೆಟ್ ಬುಕಿಂಗ್ ಎಲ್ಲದರಲ್ಲೂ ಬದಲಾವಣೆಯ ಗಾಳಿ ಬೀಸಿದೆ. ದಶಕಗಳ ಸಮಯ ಹಿಡಿಯುತ್ತಿದ್ದ ರೈಲ್ವೆ ಕಾಮಗಾರಿ ಒಂದೆರಡು ವರ್ಷಗಳಲ್ಲಿ ಮುಗಿಯುತ್ತಿದೆ. ಜುಲೈ ಒಂದರಿಂದ ರೈಲ್ವೆ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ತರಲಾಗಿದ್ದು ಈ ಬದಲಾವಣೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ದೂರದ ಊರುಗಳಿಗೆ ಮುಂಗಡ ರೈಲ್ವೆ ಟಿಕೆಟ್ ಬುಕಿಂಗ್ ಮಾಡುವುದೆಂದರೆ ನಿಜಕ್ಕೂ ತ್ರಾಸದ ಕೆಲಸ. ಕೆಲವೊಂದು ಊರುಗಳಿಗೆ ಎರಡು ತಿಂಗಳ ಮೊದಲೇ ಬುಕ್ ಮಾಡಿದರಷ್ಟೇ ಟಿಕೆಟ್ ಲಭ್ಯ. ಕೊನೆ ಕ್ಷಣದಲ್ಲಿ ತುರ್ತಾಗಿ ಹೋಗಬೇಕಾದವರಿಗೆ ಟಿಕೆಟ್ ಪಡೆಯಲು ತತ್ಕಾಲ್‌ನಡಿ ಬುಕ್ ಮಾಡು ವುದೊಂದೇ ದಾರಿಯಾಗಿತ್ತು. ಆದರೆ ತತ್ಕಾಲ್ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಖಾಲಿ ಯಾಗುತ್ತಿದ್ದವು. ಕೆಲವು ಏಜೆಂಟರು ಹೆಚ್ಚುವರಿ ದರಕ್ಕೆ ತತ್ಕಾಲ್ ಟಿಕೆಟ್ ಮಾರಾಟ ಮಾಡುತ್ತಿರುವ ಆರೋಪಗಳಿದ್ದವು.

ಇದಕ್ಕೆ ಪರಿಹಾರವಾಗಿ ರೈಲ್ವೆ ಈಗ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಓಟಿಪಿ ದೃಢೀಕರಣ ಕಡ್ಡಾಯ ಗೊಳಿಸಿದೆ. ಪ್ರಯಾಣಿಕರಿಗೆ ಏಜೆಂಟರಿಗಿಂತ ಅರ್ಧ ಗಂಟೆ ಮೊದಲೇ ತತ್ಕಾಲ್ ಟಿಕೆಟ್ ಬುಕ್ ಮಾಡುವ ಅವಕಾಶ ನೀಡಿದೆ. ಜುಲೈ ಒಂದರಿಂದ ನಿಯಮ ಜಾರಿಗೆ ಬಂದಿದೆ. ಜುಲೈ 15 ರಿಂದ ಕೌಂಟರ್ ಅಥವಾ ಏಜೆಂಟ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಕಡ್ಡಾಯವಾಗಲಿದೆ.

ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯ ಈ ಬದಲಾವಣೆಯ ಮೊದಲ ದಿನವೇ ಸ್ಪಷ್ಟವಾಗಿ ಗೋಚರಿಸಿದೆ. ಒಂದು ವರ್ಷದ ನಂತರ ದೆಹಲಿಯಿಂದ ವಾರಾಣಸಿ, ಲಖನೌ ಮತ್ತು ಬಿಹಾರಕ್ಕೆ ಹೋಗುವ ಪ್ರಮುಖ ರೈಲುಗಳಲ್ಲಿ ತತ್ಕಾಲ್ ಕೋಟಾದಲ್ಲಿ ಸೀಟುಗಳು ಖಾಲಿಯಾಗಿ ಕಂಡು ಬಂದವು. ಈ ಹಿಂದೆ ಈ ಮಾರ್ಗಗಳಿಗೆ ತತ್ಕಾಲ್ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಬಿಕರಿ ಯಾಗುತ್ತಿದ್ದವು. ಈಗ ಬುಕಿಂಗ್ ಸಮಯದ ನಂತರ ಟಿಕೆಟ್‌ಗಳು ಲಭ್ಯವಾಗುತ್ತಿವೆ ಎಂದು ತೋರಿಸಲಾಗುತ್ತಿದೆ.

ಇದನ್ನೂ ಓದಿ: ‌Vishweshwar Bhat Column: ಡಿಜೆಐ ನಿಯೋ ಡ್ರೋನ್

ತತ್ಕಾಲ್ ಟಿಕೆಟ್ ಬುಕಿಂಗ್ ಅನ್ನು ಹೆಚ್ಚು ಪಾರದರ್ಶಕವಾಗಿಸುವುದು ಮತ್ತು ಅಗತ್ಯವಿರುವ ಪ್ರಯಾಣಿಕರಿಗೆ ಆದ್ಯತೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಬುಕಿಂಗ್ ವಿಂಡೋ ತೆರೆದ ನಂತರ ಮೊದಲ 30 ನಿಮಿಷಗಳ ಕಾಲ ಏಜೆಂಟರು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆಧಾರ್ ಒಟಿಪಿ ದೃಢೀಕರಣದ ಉದ್ದೇಶವನ್ನು ತಿಳಿಸಿದ್ದಾರೆ.

ಬದಲಾವಣೆ ಏನು?

ಈಗ ಆಧಾರ್ ಪರಿಶೀಲಿಸಿದ ಬಳಕೆದಾರರು ಮಾತ್ರ ಐಆರ್‌ಸಿಟಿಸಿ ವೆಬ್ ಸೈಟ್ ಅಥವಾ ಐಆರ್‌ಸಿಟಿಸಿ ಮೊಬೈಲ್ ಅಪ್ಲಿಕೇಶನ್‌ನಿಂದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಏಜೆಂಟ್ ಬುಕಿಂಗ್ ಗಳಿಗೂ ಓಟಿಪಿ ಆಧಾರಿತ ಆಧಾರ್ ಪರಿಶೀಲನೆಯನ್ನು ಕಡ್ಡಾಯ ಗೊಳಿ ಸಲಾಗಿದೆ. ಜುಲೈ 15ರಿಂದ ಕೌಂಟರ್ ಅಥವಾ ಏಜೆಂಟ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಕಡ್ಡಾಯವಾಗಲಿದೆ.

lin R

ಅಂದರೆ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (ಪಿಆರ್‌ಎಸ್) ಕೌಂಟರ್‌ಗಳು ಮತ್ತು ಅಧಿಕೃತ ರೈಲ್ವೆ ಏಜೆಂಟ್‌ಗಳ ಮೂಲಕ ಬುಕಿಂಗ್ ಗಳನ್ನು ಒಳಗೊಂಡಂತೆ ಎಲ್ಲಾ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ ಒಟಿಪಿ ಪರಿಶೀಲನೆ ಕಡ್ಡಾಯವಾಗಲಿದೆ. ತತ್ಕಾಲ್ ಟಿಕೆಟ್ ಬುಕಿಂಗ್‌ನ ಮೊದಲ ೩೦ ನಿಮಿಷಗಳ ಕಾಲ ಏಜೆಂಟರಿಗೆ ನಿಷೇಧ ಹೇರಲಾಗಿದೆ.

ಎಸಿ ವರ್ಗ: ಸಾಮಾನ್ಯ ಪ್ರಯಾಣಿಕರು ಬೆಳಗ್ಗೆ ೧೦ ರಿಂದ ಏಜೆಂಟ್‌ಗಳು ೧೦:೩೦ ರ ನಂತರ ಬುಕ್ ಮಾಡಲು ಸಾಧ್ಯವಾಗುತ್ತದೆ.

Non AC ವರ್ಗ: ಸಾಮಾನ್ಯ ಪ್ರಯಾಣಿಕರು ಬೆಳಗ್ಗೆ ೧೧ ರಿಂದ ಮತ್ತು ಏಜೆಂಟ್‌ಗಳು ೧೧:೩೦ ರ ನಂತರ ಬುಕ್ ಮಾಡಲು ಸಾಧ್ಯವಾಗುತ್ತದೆ. ಇದು ದಳಿಗಳು ಮತ್ತು ನಕಲಿ ಬುಕಿಂಗ್‌ಗಳನ್ನು ತಡೆಯಲು ಅನುಕೂಲವಾಗಲಿದೆ. ಅನೇಕ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಈ ಹಿಂದೆ ತತ್ಕಾಲ್‌ನಲ್ಲಿ ಸರಾಸರಿ ೧೦ ಟಿಕೆಟ್‌ಗಳನ್ನು ಬುಕ್ ಮಾಡಬಹುದಾದ ನಿಲ್ದಾಣಗಳಲ್ಲಿ ಈಗ ಸಂಖ್ಯೆ ದ್ವಿಗುಣಗೊಂಡಿದೆ. ಆದರೂ ಆರಂಭದಲ್ಲಿ ಕಡಿಮೆ ಆನ್‌ಲೈನ್ ಟಿಕೆಟ್‌ಗಳನ್ನು ಬುಕ್ ಮಾಡಲಾಗುತ್ತಿದೆ. ಅಧಿಕೃತ ಏಜೆಂಟರು ಹೊಸ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದಾರೆ.

ಏಜೆಂಟರ ಹಸ್ತಕ್ಷೇಪಕ್ಕೆ ತಡೆ

ಹೊಸ ವ್ಯವಸ್ಥೆಯಡಿಯಲ್ಲಿ ಅಧಿಕೃತ ಏಜೆಂಟ್ ಈಗ ತತ್ಕಾಲ್ ಬುಕಿಂಗ್ ಪ್ರಾರಂಭವಾದ ೩೦ ನಿಮಿಷಗಳ ನಂತರ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಆ ಹೊತ್ತಿಗೆ ಸೀಟುಗಳು ಉಳಿಯಲು ಯಾವುದೇ ಅವಕಾಶವಿರುವುದಿಲ್ಲ. ರೈಲ್ವೆ ತತ್ಕಾಲ್ ಕೋಟಾದಲ್ಲಿ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಿ ಪ್ರೀಮಿಯಂ ತತ್ಕಾಲ್ ಕೋಟಾಕ್ಕೆ ನೀಡಿವೆ. ಇದರರ್ಥ ತತ್ಕಾಲ್ ಬುಕಿಂಗ್‌ನಲ್ಲಿ ಸಾವಿರ ರೂಪಾಯಿಗಳಿಗೆ ಲಭ್ಯವಿರುವ ಸೀಟಿಗೆ, ಪ್ರೀಮಿಯಂ ತತ್ಕಾಲ್‌ನಲ್ಲಿ ಮೂರು ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಹೊಸ ನಿಯಮಗಳು ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಎರಡಕ್ಕೂ ಅನ್ವಯಿಸುತ್ತವೆ.

ಪ್ರಯೋಜನ ಏನು ?

ಸಾಮಾನ್ಯ ಪ್ರಯಾಣಿಕರಿಗೆ ಆದ್ಯತೆ ನೀಡಲು ಈ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳುತ್ತದೆ. ಈ ಹಿಂದೆ ಹೆಚ್ಚಿನ ತತ್ಕಾಲ್ ಟಿಕೆಟ್‌ಗಳು ಏಜೆಂಟರು ಮತ್ತು ಬ್ರೋಕರ್‌ ಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಬುಕ್ ಆಗುತ್ತಿದ್ದವು. ಇದರಿಂದಾಗಿ ಅಗತ್ಯವಿರುವ ಪ್ರಯಾಣಿಕ ರಿಗೆ ಟಿಕೆಟ್‌ಗಳು ಸಿಗುತ್ತಿರಲಿಲ್ಲ. ಈಗ ಆಧಾರ್ ಆಧಾರಿತ ಒಟಿಪಿ ಪರಿಶೀಲನೆ ಮತ್ತು ಏಜೆಂಟ್ ಬುಕಿಂಗ್ ಮೇಲೆ ಕಾಲಮಿತಿಯ ನಿಷೇಧದಿಂದಾಗಿ ಈ ವ್ಯವಸ್ಥೆಯು ಹೆಚ್ಚು ನ್ಯಾಯಯುತ ಮತ್ತು ಪಾರದರ್ಶಕವಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ರೈಲ್ವೆ ಸೀಟುಗಳ ರಿಸರ್ವೇಷನ್ ಪಟ್ಟಿ ಬಿಡುಗಡೆಯ ಸಮಯವನ್ನು ರೈಲ್ವೆ ಇಲಾಖೆ ಬದಲಾಯಿಸ ಲಿದೆ. ರೈಲು ಹೊರಡುವ ಎಂಟು ಗಂಟೆಗಳ ಮುಂಚೆಯೇ ಪಟ್ಟಿ ಬಿಡುಗಡೆ ಮಾಡಲು ರೈಲ್ವೆ ನಿರ್ಧರಿಸಿದೆ. ೨೦೨೫ರ ಡಿಸೆಂಬರ್ ವೇಳೆಗೆ ಹೊಸ ರಿಸರ್ವೇಷನ್ ವ್ಯವಸ್ಥೆ ಜಾರಿಗೆ ಬರಲಿದೆ. ಸದ್ಯಕ್ಕೆ ರೈಲಿನ ಆಸನಗಳ ರಿಸರ್ವೇಷನ್ ಪಟ್ಟಿಯು ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಬಿಡುಗಡೆಯಾಗುತ್ತಿದೆ.

ಅದರಿಂದ ಸಮೀಪದ ಸ್ಥಳಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಗೊಂದಲವಾಗುತ್ತಿತ್ತು. ಆ ಸಮಸ್ಯೆಯನ್ನು ನಿವಾರಿಸಲು ಇನ್ನು ಮುಂದೆ ಈ ಪಟ್ಟಿಯನ್ನು ಎಂಟು ಗಂಟೆಗಳಿಗೂ ಮೊದಲೇ ಬಿಡುಗಡೆ ಮಾಡುವಂತೆ ರೈಲ್ವೆ ಸಚಿವರು ಸೂಚಿಸಿದ್ದಾರೆ.

ಡಿಸೆಂಬರ್‌ನಿಂದ ಹೊಸ ಪದ್ಧತಿ

೨೦೨೫ರ ಡಿಸೆಂಬರ್ ವೇಳೆಗೆ ಸಂಪೂರ್ಣವಾಗಿ ಆಧುನೀಕರಣಗೊಂಡ ಪ್ಯಾಸೆಂಜರ್ ರಿಸರ್ವೇಷನ್ ಸಿಸ್ಟಂ (ಪಿಆರ್‌ಎಸ್) ವ್ಯವಸ್ಥೆ ಜಾರಿಗೆ ಬರಲಿದೆ. ಇದು ಪ್ರಸ್ತುತ ವ್ಯವಸ್ಥೆಗಿಂತ ಹತ್ತು ಪಟ್ಟು ಹೆಚ್ಚು ಸಾಮರ್ಥ್ಯ ಮತ್ತು ದಕ್ಷತೆಯನ್ನು ಹೊಂದಿರಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ರೈಲ್ವೆ ಇಲಾಖೆಯ ಮಾಹಿತಿ ವ್ಯವಸ್ಥೆಯ ಕೇಂದ್ರ (ಸಿಆರ್ ಐಎಸ್) ಸಂಸ್ಥೆ ಕಳೆದ ಹಲವು ತಿಂಗಳಿಂದ ಈ ಸುಧಾರಿತ ಯೋಜನೆಯನ್ನು ದೇಶದ ಅಲ್ಲಲ್ಲಿ ಪ್ರಾಯೋಗಿಕವಾಗಿ ಕಾರ್ಯಗತಗೊಳಿಸುತ್ತಿದ್ದು, ಈಗಾಗಲೇ ಹೊಸ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.

ಈಗ 24 ಗಂಟೆಗಳಲ್ಲಿ ಎಷ್ಟು ಪ್ರಯಾಣಿಕರ ರಿಸರ್ವೇಷನ್ ಸಾಧ್ಯವಿದೆಯೋ ಅದಕ್ಕಿಂತ ಹತ್ತುಪಟ್ಟು ಹೆಚ್ಚು ರಿಸರ್ವೇಷನ್ ಮಾಡುವ ಸಾಮರ್ಥ್ಯ ಹೊಸ ವ್ಯವಸ್ಥೆಯಡಿ ಬರಲಿದೆ.

೮ ಗಂಟೆಗೆ ಮೊದಲೇ ರಿಸರ್ವೇಶನ್ ಲಿಸ್ಟ್!

ನಿಮಿಷಕ್ಕೆ ೪೦ ಲಕ್ಷ ಟಿಕೆಟ್ ಎನ್‌ಕ್ವೈರಿ ಈಗಿರುವ ರಿಸರ್ವೇಷನ್ ವ್ಯವಸ್ಥೆಯಲ್ಲಿ ನಿಮಿಷಕ್ಕೆ ೩೨,೦೦೦ ಟಿಕೆಟ್ ಗಳನ್ನು ರಿಸರ್ವ್ ಮಾಡಬಹುದು. ಆದರೆ, ಡಿಸೆಂಬರ್ ನಿಂದ ಜಾರಿಯಾಗುವ ಹೊಸ ವ್ಯವಸ್ಥೆಯಲ್ಲಿ ೧.೫೦ ಲಕ್ಷ ಟಿಕೆಟ್ ಗಳನ್ನು ರಿಸರ್ವ್ ಮಾಡಬಹುದಾಗಿದೆ. ಇನ್ನು, ಎನ್ ಕ್ವೈಯರಿ ಪ್ರಾಸೆಸಿಂಗ್ ವ್ಯವಸ್ಥೆಯು ಈಗ ನಿಮಿಷಕ್ಕೆ ೪ ಲಕ್ಷ ಎನ್ ಕ್ವಯರಿಗಳನ್ನು ನಿರ್ವಹಿಸಬಲ್ಲದ್ದಾಗಿದ್ದು, ಡಿಸೆಂಬರ್ ನಿಂದ ಅದು ೪೦ ಲಕ್ಷಕ್ಕೆ ಏರಲಿದೆ. ಅಷ್ಟೇ ಅಲ್ಲ, ಹೊಸ ರಿಸರ್ವೇಷನ್ ಪದ್ಧತಿಯು ಬಳಕೆದಾರ ಸ್ನೇಹಿಯಾಗಿರಲಿದೆ. ಅಲ್ಲದೆ ಅದನ್ನು ಭಾರತದ ಯಾವುದೇ ಭಾಷಿಗರು ಸುಲಭವಾಗಿ ಬಳಸುವಂಥzಗಿರುತ್ತದೆ ಎಂದು ರೈಲ್ವೆ ತಿಳಿಸಿದೆ.

ಅಲ್ಲದೆ, ದಿವ್ಯಾಂಗರಿಗಾಗಿ, ವಿದ್ಯಾರ್ಥಿಗಳಿಗಾಗಿ, ರೋಗಿಗಳಿಗಾಗಿ ಹಾಗೂ ಇನ್ನಿತರ ಪ್ರಯಾಣಿಕರಿಗಾಗಿ ಮೀಸಲಿರುವ ಸೀಟುಗಳು ಹಾಗೂ ಅವರಿಗೆ ರೈಲ್ವೆ ಇಲಾಖೆಯಿಂದ ಕಲ್ಪಿಸಲಾಗಿರುವ ವಿವಿಧ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ತತ್ಕಾಲ್‌ ಟಿಕೆಟ್‌ ಅಂದರೇನು ?

ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಸಬೇಕಾದ ಪ್ರಯಾಣಿಕರಿಗೆ ರೈಲ್ವೆಯಿಂದ ತತ್ಕಾಲ್ ಟಿಕೆಟ್‌ ಗಳನ್ನು ನೀಡಲಾಗುತ್ತದೆ. ಹಠಾತ್ ಪ್ರಯಾಣ ಯೋಜನೆಗಳು, ವೈದ್ಯಕೀಯ ಪರಿಸ್ಥಿತಿಗಳು, ಪರೀಕ್ಷೆ ಗಳು ಅಥವಾ ಇತರ ಪ್ರಮುಖ ಕಾರಣಗಳ ಮೇಲಿನ ಪ್ರಯಾಣಕ್ಕೆ ಇದು ಅನುಕೂಲ. ಇದರಲ್ಲಿ ಎಸಿ ದರ್ಜೆಯ ಪ್ರಯಾಣ ಟಿಕೆಟ್ ಬುಕಿಂಗ್ ಒಂದು ದಿನದ ಮೊದಲು ಬೆಳಗ್ಗೆ ೧೦ ಗಂಟೆಗೆ ಪ್ರಾರಂಭ ವಾಗುತ್ತದೆ. NON AC ಒಂದು ದಿನದ ಮೊದಲು ಬೆಳಗ್ಗೆ ೧೧ ಗಂಟೆಗೆ ಪ್ರಾರಂಭವಾಗುತ್ತದೆ. ಮೂಲ ದರವನ್ನು ಹೊರತುಪಡಿಸಿ ತತ್ಕಾಲ್ ಶುಲ್ಕವನ್ನು (?೧೦೦ ರಿಂದ?೫೦೦) ಹೆಚ್ಚುವರಿಯಾಗಿ ವಿಧಿಸ ಲಾಗುತ್ತದೆ. ದೃಢಪಡಿಸಿದ ತತ್ಕಾಲ್ ಟಿಕೆಟ್‌ಗಳಿಗೆ ಮರುಪಾವತಿ ಸಿಗುವುದಿಲ್ಲ.