ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ಹಿರಿಯ ನಟಿ ಶೈಲಶ್ರೀ ಸುದರ್ಶನ್ ಬದುಕಿಗೆ ಬೆಳಕಾದ ನಟ ದರ್ಶನ್

Actor Darshan: ಪತಿ ಸುದರ್ಶನ್ ನಿಧನದ ಬಳಿಕ ಒಬ್ಬಂಟಿಯಾಗಿದ್ದ ಹಿರಿಯ ನಟಿ ಶೈಲಶ್ರೀ ಅವರು ವೃದ್ಧಾಶ್ರಮ ಸೇರಿದ್ದರು. ಹಿರಿಯ ನಟಿಗೆ ಸಹಾಯ ಬೇಕಿದೆ ಎಂಬುವುದನ್ನು ಯೂಟ್ಯೂಬ್‌ ಚಾನೆಲ್‌ ಮೂಲಕ ತಿಳಿದುಕೊಂಡಿದ್ದ ನಟ ದರ್ಶನ್‌, ನಟಿ ಶೈಲಶ್ರೀ ಅವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹಿರಿಯ ನಟಿ ಶೈಲಶ್ರೀ ಸುದರ್ಶನ್ ಬದುಕಿಗೆ ಬೆಳಕಾದ ನಟ ದರ್ಶನ್

Profile Prabhakara R Apr 2, 2025 3:29 PM

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ನಟ ದರ್ಶನ್‌ (Actor Darshan) ಅವರು ಇದೀಗ ಹಿರಿಯ ನಟಿ ಶೈಲಶ್ರೀ ಸುದರ್ಶನ್ (Shailashree Sudarshan) ಅವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನೂರಾರು ಕಲಾವಿದರಿಗೆ ಅನ್ನ ಹಾಕಿದ್ದ ಶೈಲಶ್ರೀ ಅವರು ನೆಲೆಯಿಲ್ಲದೇ ಸದ್ಯ ಆಶ್ರಮ ಪಾಲಾಗಿದ್ದಾರೆ. ಪತಿ ಸುದರ್ಶನ್ ಅಗಲಿಕೆಯ ನಂತರ ಒಂಟಿಯಾಗಿದ್ದ ಶೈಲಶ್ರೀ ಕ್ಯಾನ್ಸರ್‌ನಿಂದ ಬಳಲಿ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಆಶ್ರಮ ಸೇರಿರುವ ಹಿರಿಯ ನಟಿಯ ಖರ್ಚು ವೆಚ್ಚಗಳ ಜವಾಬ್ದಾರಿಯನ್ನು ನಟ ದರ್ಶನ್ ಹೊತ್ತಿದ್ದಾರೆ ಎಂದು ತಿಳಿದುಬಂದಿದೆ.

ಪತಿ ಸುದರ್ಶನ್ ನಿಧನದ ಬಳಿಕ ಒಬ್ಬಂಟಿಯಾಗಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ಹಿರಿಯ ನಟಿ ಶೈಲಶ್ರೀ ವಾಸವಿದ್ದರು. ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಾ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಸಹಾಯದಿಂದ ಜೀವನ ನಡೆಸುತ್ತಿದ್ದರು. ಆದರೆ, ವಯಸ್ಸಾದ ಕಾರಣ ನೋಡಿಕೊಳ್ಳುವುವವರು ಯಾರೂ ಇಲ್ಲದ ಕಾರಣ ನಟಿ ಶೈಲಶ್ರೀ ಸುದರ್ಶನ್ ವೃದ್ಧಾಶ್ರಮ ಸೇರಿದ್ದರು.

Shailashree Sudarshan 1

ಜೈಲಿನಿಂದ ಜಾಮೀನು ಮೂಲಕ ಹೊರಗೆ ಬಂದ ಮೇಲೆ ಯೂಟ್ಯೂಬ್ ಒಂದಕ್ಕೆ ಶೈಲಶ್ರೀ ಸಂದರ್ಶನ ನೀಡಿದ್ದರು. ಆಗ ಅವರಿಗೆ ಸಹಾಯ ಬೇಕಿದೆ ಎಂಬುವುದನ್ನು ದರ್ಶನ್ ಗಮನಿಸಿದ್ದರು. ಬಳಿಕ ಸಹೋದರ ದಿನಕರ್‌ನ ಕಳುಹಿಸಿ ಅವರಿಗೆ ಬೇಕಾದ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟು ದಿನ ಶೈಲಶ್ರೀ ಅವರ ಬೆನ್ನೆಲುಬಾಗಿ ಹಿರಿಯ ನಟಿ ಗಿರಿಜಾ ಲೋಕೇಶ್ ಸಹಾಯಕ್ಕೆ ನಿಂತಿದ್ದರು. ಇದೀಗ ಶೈಲಶ್ರೀ ಅವರ ಕೊನೆಗಾಲದ ತನಕ ಸಹಾಯ ಮಾಡಲು ದರ್ಶನ್ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Kichcha Sudeepa: ಮುದ್ದು ಮಗುವಿನ ಚಿಕಿತ್ಸೆಗೆ ಸುದೀಪ್‌ ಸಹಾಯಹಸ್ತ; ನೆರವು ನೀಡಲು ಅಭಿಮಾನಿಗಳಲ್ಲೂ ಮನವಿ

ಪುಟ್ಟ ಬಾಲಕನ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಧ್ರುವ ಸರ್ಜಾ ನೆರವು

Dhruva sarja

ಬೆಂಗಳೂರು: ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್‌, ನಟ ಧ್ರುವ ಸರ್ಜಾ ಅವರು ನಟನೆ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಚಾಮರಾಜನಗರದ ಜಿಲ್ಲೆಯ ಬುಡಕಟ್ಟು ವಸತಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದ ನಟ, ಇದೀಗ ಬಡ ಕುಟುಂಬದ ಪುಟ್ಟ ಬಾಲಕನ ಬಾಳಿಗೆ ಬೆಳಕಾಗಿದ್ದಾರೆ. ಕಣ್ಣಿನಲ್ಲಿ ಪೊರೆ ಬೆಳೆದಿದ್ದರಿಂದ ಬಾಲಕನಿಗೆ ದೃಷ್ಟಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ನಟ ಧ್ರುವ ಸರ್ಜಾ ಅವರು, ಬಾಲಕನ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಾಲಕನಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ಅನಿವಾರ್ಯತೆ ಇತ್ತು. ಆದರೆ, ಗಾರೆ ಕೆಲಸ ಮಾಡುವ ಪೋಷಕರಿಗೆ ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿವಷ್ಟು ಶಕ್ತಿ ಇರಲಿಲ್ಲ. ಹೀಗಾಗಿ ಮಗುವಿನ ಬೆನ್ನಿಗೆ ನಿಂತ ಧ್ರುವ ಸರ್ಜಾ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ. ಇದೀಗ ಮಗುವಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಮಗುವಿನ ದೃಷ್ಟಿ ಸುಧಾರಿಸಿದೆ ಎಂದು ತಿಳಿದುಬಂದಿದೆ.

ನಟ ಧ್ರುವ ಸರ್ಜಾ ಅವರು ವಿಡಿಯೊ ಕಾಲ್ ಮಾಡುವ ಮೂಲಕ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಬಾಲಕನ ತಂದೆ ಪ್ರತಿಕ್ರಿಯಿಸಿದ್ದು, ನನ್ನ ಪುಟ್ಟ ಮಗನಿಗೆ ಕಣ್ಣಿನ ಸಮಸ್ಯೆ ಇತ್ತು. ಅದನ್ನು ಧ್ರುವ ಸರ್ಜಾ ಅಣ್ಣನ ಬಳಿ ಹೇಳಿಕೊಂಡೆವು. ಕೂಡಲೇ ಅವರು ಆಸ್ಪತ್ರೆಗೆ ಹೇಳಿದರು. ಅವರಿಂದ ಮಗನ ಕಣ್ಣು ದೃಷ್ಟಿ ಸರಿಹೋಗಿದೆ. ಅವನು ಪ್ರಪಂಚ ನೋಡುವಂತಾಗಿದೆ’ ಎಂದಿದ್ದಾರೆ.

boys eye surgery

ಇನ್ನು ಮಂಜುನಾಥ ಆಸ್ಪತ್ರೆ ವೈದ್ಯರು ಮಾತನಾಡಿ, ಧ್ರುವ ಸರ್ಜಾ ಅವರು ನಮಗೆ ಆ ಬಾಲಕನನ್ನು ರೆಫರ್ ಮಾಡಿದ್ದರು. ಪರೀಕ್ಷೆ ಮಾಡಿದಾಗ ಪೊರೆ ಇರುವುದು ಗೊತ್ತಾಯಿತು. ಕೂಡಲೇ ನಾವು ಆಪರೇಷನ್ ಮಾಡಿದೆವು. ಈ ಕಾರ್ಯವನ್ನು ನಾನು ಮಾಡಿದೆ ಎಂದು ಹೇಳುವುದು ಬೇಡ, ಪ್ರಚಾರ ಮಾಡುವುದು ಬೇಡ ಎಂದು ಧ್ರುವ ಸರ್ಜಾ ಹೇಳಿದ್ದರು’ ಎಂದಿರುವುದಾಗಿ ವೈದ್ಯರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Vinay Gowda: ಇನ್ಮುಂದೆ ರಜತ್ ಜೊತೆ ರೀಲ್ಸ್ ಮಾಡಲ್ಲ: ವಿನಯ್ ಗೌಡ ಖಡಕ್ ನಿರ್ಧಾರ

ಆಪರೇಷನ್ ಬಳಿಕ ನಟ ಧ್ರುವ ಸರ್ಜಾ ಅವರು ಆ ಬಾಲಕನೊಟ್ಟಿಗೆ, ಅವರ ಪೋಷಕರೊಟ್ಟಿಗೆ ಮಾತನಾಡಿದ್ದಾರೆ. ಪೋಷಕರಿಬ್ಬರೂ ಸಹ ಧ್ರುವ ಸರ್ಜಾ ಅವರ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ. ‘ಧ್ರುವ ಸರ್ಜಾ ಅಣ್ಣ ಬೈಯ್ಯುತ್ತಾರೆ, ಆದರೆ ಮಾಡಿದ ಸಹಾಯವನ್ನು ಹೇಳಿಕೊಳ್ಳದೇ ಇರಲು ಆಗುವುದಿಲ್ಲ’ ಎಂದು ಬಾಲಕನ ಪೋಷಕರು ಭಾವುಕರಾಗಿದ್ದಾರೆ.