ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Reality Check: ಬಂಕ್ ಸಿಬ್ಬಂದಿ ಮೋಸ ಕಂಡು ರಿಯಾಲಿಟಿ ಚೆಕ್ ಮಾಡಿದ ಗ್ರಾಹಕ

Reality Check: ಬಂಕ್ ಸಿಬ್ಬಂದಿ ಮೋಸ ಕಂಡು ರಿಯಾಲಿಟಿ ಚೆಕ್ ಮಾಡಿದ ಗ್ರಾಹಕ

Reality Check: ಬಂಕ್ ಸಿಬ್ಬಂದಿ ಮೋಸ ಕಂಡು ರಿಯಾಲಿಟಿ ಚೆಕ್ ಮಾಡಿದ ಗ್ರಾಹಕ

Profile Ashok Nayak Jan 1, 2025 2:07 PM
ಪೆಟ್ರೋಲ್ ಬಂಕ್ ನಲ್ಲಿ ಮೋಸ... ರೊಚ್ಚಿಗೆದ್ದ ಗ್ರಾಹಕ : ಮೋಸ ಮಾಡಿಲ್ಲ ಎಂದು ವ್ಯವಸ್ಥಾಪಕನ ಹಠ
ಚಿಂತಾಮಣಿ: ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕರಿಗೆ ಬಂಕ್ ಸಿಬ್ಬಂದಿ ಮೋಸ ಮಾಡಿದ್ದಾನೆ ಎಂದು ಗ್ರಾಹಕನು, ಆಕ್ರೋಶ ವ್ಯಕ್ತಪಡಿಸಿ ಬಂಕ್ ವ್ಯವಸ್ಥಾಪಕರ ವಿರುದ್ಧ ದಿಕ್ಕಾರಗಳನ್ನು ಕೂಗಿದ ಘಟನೆ ಚಿಂತಾಮಣಿ ನಗರದ ಬೆಂಗಳೂರು ವೃತ್ತದ ಸಮೀಪವಿರುವ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.
ಚಿಂತಾಮಣಿ ನಗರದ ಮಂಜುನಾಥ್, ಆಚಾರಪ್ಪ,ಎಂಬುವರು ತಮ್ಮ ವಾಹನಗಳಿಗೆ 220 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡಾಗ ಪೆಟ್ರೋಲ್ ಹಾಕುವುದರಲ್ಲಿ ಕಡಿಮೆ ಹಾಕಿ ಮೋಸ ಮಾಡಲಾಗಿದೆ ಎಂದು ಗ್ರಾಹಕರು ಬಂಕ್ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದಲ್ಲದೆ. ಪೆಟ್ರೋಲ್ ಪಂಪ್ ರೀಡಿಂಗ್ ಸರಿಯಾಗಿ ತೋರಿಸಿದರು ಮೋಸ ಮಾಡಲಾಗಿದೆ ಎಂದು ತನ್ನ ವಾಹನದಲ್ಲಿ ಹಾಕಿಸಿದ್ದ ಪೆಟ್ರೋಲ್ ಅನ್ನು ತೆಗೆಸಿ ರಿಯಾಲಿಟಿ ಚೆಕ್ ಮಾಡಿದ್ದಾನೆ.
ಇನ್ನು ಬಂಕ್‌ನಲ್ಲಿ ಇದ್ದ ವ್ಯವಸ್ಥಾಪಕ ವಿನಯ್ ಪೆಟ್ರೋಲ್ ಹಾಕುವಾಗ ಯಾವುದೇ ರೀತಿಯ ಮೋಸ ನಡೆದಿಲ್ಲ ಸುಖ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡಿರುವ ಪ್ರತಿಯೊಂದು ದೃಶ್ಯ ಗಳು ಸಿಸಿಟಿವಿ ಹಾಗೂ ನಮ್ಮ ಸಿಸ್ಟಮ್‌ನಲ್ಲಿ ಸೆರೆಯಾಗಿವೆ ಬಂಕ್ ಹೆಸರು ಕೆಡಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ವ್ಯವಸ್ಥಾಪಕ ವಿನಯ್ ಸ್ಪಷ್ಟಪಡಿಸಿದ್ದಾನೆ.