#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Zee Kannada: ಮನೆಯಲ್ಲೇ ನೋಡಿ ಕಿಚ್ಚನ ಸೂಪರ್‌ ಹಿಟ್‌ ಚಿತ್ರ ʼಮ್ಯಾಕ್ಸ್'; ಟಿವಿ ಪ್ರಸಾರದ ಡೇಟ್‌ ಅನೌನ್ಸ್‌

ಝೀ ಕನ್ನಡ ವಾಹಿನಿಯು ಪ್ರೇಕ್ಷಕರಿಗೆ ಗುಡ್‌ನ್ಯೂಸ್ ನೀಡಿದೆ. ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿರುವ ಸೂಪರ್‌ ಹಿಟ್‌ ಚಲನಚಿತ್ರ ʼಮ್ಯಾಕ್ಸ್ʼ ಫೆ. 15ರಂದು 7:30ಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಿಚ್ಚ ಸುದೀಪ್ ಮ್ಯಾಕ್ಸ್ ಆಗಿ ನಟಿಸಿರುವ ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಝೀ ಕನ್ನಡದಲ್ಲಿ ಕಿಚ್ಚನ ಸೂಪರ್‌ ಹಿಟ್‌ ಚಿತ್ರ ʼಮ್ಯಾಕ್ಸ್ʼ

max poster

Profile Pushpa Kumari Feb 12, 2025 8:59 PM

ಬೆಂಗಳೂರು: ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಝೀ ಕನ್ನಡ ವಾಹಿನಿಯು (Zee Kannada) ಬರೀ ಧಾರಾವಾಹಿಗಳಿಂದ ಮಾತ್ರವಲ್ಲದೇ, ರಿಯಾಲಿಟಿ ಶೋಗಳು, ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳಿಂದ ಪ್ರೇಕ್ಷಕರ ಮನ ಗೆದ್ದು ನಂ.1 ಪಟ್ಟದಲ್ಲಿದೆ. ಅಷ್ಟೇ ಅಲ್ಲದೇ ಈಗ ಝೀ ಕನ್ನಡ ವಾಹಿನಿಯು ಪ್ರೇಕ್ಷಕರಿಗೆ ಮತ್ತೊಂದು ಗುಡ್‌ನ್ಯೂಸ್ ನೀಡಿದೆ. ಹೌದು, ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ನಟಿಸಿರುವ ಬ್ಲಾಕ್‌ ಬ್ಲಸ್ಟರ್‌ ಚಿತ್ರ ʼಮ್ಯಾಕ್ಸ್ʼ (MAX) ಫೆ. 15ರಂದು 7:30ಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಕಿಚ್ಚ ಸುದೀಪ್ 'ಮ್ಯಾಕ್ಸ್' ಆಗಿ ನಟಿಸಿರುವ ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗಾಗಿ ಮಾಡಿರುವ ಈ ಸಿನಿಮಾವನ್ನು ಸ್ವತಃ ಕಿಚ್ಚ ಸುದೀಪ್ ಮತ್ತು ಎಸ್. ಧನು ಅವರು ನಿರ್ಮಿಸಿದ್ದಾರೆ. ಇಡೀ ಚಿತ್ರವನ್ನು ಕಿಚ್ಚ ಸುದೀಪ್ ಆವರಿಸಿಕೊಂಡಿದ್ದು ಸುನಿಲ್, ವರಲಕ್ಷ್ಮೀ ಶರತ್ ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ವಿಜಯ್ ಚಂಡೂರು ಮುಂತಾದ ಕಲಾವಿದರ ಸಾಥ್ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಾಹಣ ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಇಸರಲ್ಲಿನ ಆ್ಯಕ್ಷನ್, ಖಡಕ್ ಡೈಲಾಗ್, ಸುಮಧುರ ಮತ್ತು ಮಾಸ್ ಹಾಡುಗಳು ಪ್ರೇಕ್ಷಕರನ್ನು ಅತ್ತಿತ್ತ ಕದಲದಂತೆ ಹಿಡಿದಿಡುತ್ತದೆ.

ಇದನ್ನು ಓದಿ: Viral News: ಫ್ಲ್ಯಾಟ್ ಖಾಲಿ ಮಾಡಿದ ಮಹಿಳೆ; ಒಂಟಿಯಾದ ಬೆಕ್ಕು- ಕೊನೆಗೆ ಆಗಿದ್ದೇನು?

ಈ ಚಿತ್ರದ ಕಥೆಯು ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ (ಸುದೀಪ್) ಸುತ್ತ ಸುತ್ತುತ್ತದೆ. ಅರ್ಜುನ್ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು ನ್ಯಾಯದ ಪರ ಹೋರಾಡಲು ಹೋಗಿ ಅತೀ ಹೆಚ್ಚು ಬಾರಿ ಅಮಾನತ್ತುಗೊಂಡಿರುತ್ತಾನೆ. ಈತ ನಟೋರಿಯಸ್ ಗ್ಯಾಂಗ್‌ಗಳಿಗೂ ಮ್ಯಾಕ್ಸ್ ಅಂತಾನೆ ಚಿರಪರಿಚಿತ. ಮ್ಯಾಕ್ಸ್ ಎಂಬ ಹೆಸರು ಕೇಳಿದ್ರೆ ಪುಡಿ ರೌಡಿಗಳಿಂದ ಹಿಡಿದು ಗ್ಯಾಂಗ್ ಸ್ಟರ್ ಗಳು ಕೂಡ ಭಯ ಬೀಳುತ್ತಾರೆ. ಹೀಗಿರುವಾಗ ಅಮಾನತ್ತಿನಲ್ಲಿದ್ದ ಮ್ಯಾಕ್ಸ್ ರಾತ್ರೋರಾತ್ರಿ ಹೊಸ ಸ್ಟೇಷನ್ ಗೆ ವರ್ಗಾವಣೆ ಆಗುತ್ತಾನೆ. ಆ ರಾತ್ರಿ ಒಂದು ನಟೋರಿಯಸ್ ಗ್ಯಾಂಗ್‌ನಿಂದ ಅಲ್ಲಿ ದೊಡ್ಡ ಅವಘಡ ನಡೆಯುತ್ತದೆ. ಆದ ತಪ್ಪಿಗೆ ಕಾರಣರಾದ ಮಿನಿಸ್ಟರ್ ಮಕ್ಕಳಿಬ್ಬರನ್ನು ಅದೇ ರಾತ್ರಿ ಮ್ಯಾಕ್ಸ್ ಅರೆಸ್ಟ್ ಮಾಡ್ತಾನೆ. ಆದರೆ ಸ್ಟೇಷನ್ ಒಳಗೆ ಅವರಿಬ್ಬರೂ ಸಾವಿಗೀಡಾಗುತ್ತಾರೆ. ಅಲ್ಲಿಂದ ಮುಂದೆ ಮ್ಯಾಕ್ಸ್ ಈ ಕೇಸ್‌ನ ಹೇಗೆ ತೆಗೆದುಕೊಂಡು ಹೋಗ್ತಾನೆ ಅನ್ನೋದೇ ಈ ಚಿತ್ರದ ಹೈಲೈಟ್.

ಆ ರಾತ್ರಿ ಅಲ್ಲಿ ಅವಘಡ ಹೇಗಾಯ್ತು? ಮ್ಯಾಕ್ಸ್ ಮುಂದೆ ಏನ್ಮಾಡ್ತಾನೆ? ಇವೆಲ್ಲವನ್ನೂ ತಿಳ್ಕೊಳೋಕೆ ನೀವು ʼಮ್ಯಾಕ್ಸ್' ನೋಡ್ಲೇಬೇಕು.

ಒಟಿಟಿಗೆ ಯಾವಾಗ?

ಇನ್ನು ʼಮ್ಯಾಕ್ಸ್ʼ ಚಿತ್ರ ಫೆ. 22ರ ಸುಮಾರಿಗೆ ಝೀ 5 (Zee 5) ಒಟಿಟಿ ಫ್ಲ್ಯಾಟ್‌ಫಾರಂನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ. ಈ ಚಿತ್ರ ತೆಲುಗು (Telugu) ಹಾಗೂ ಇತರ ಪ್ರಮುಖ ಭಾಷೆಗಳಲ್ಲಿ ಒಟಿಟಿಯಲ್ಲಿ ಪ್ರಸಾರಗೊಳ್ಳುವುದು ಖಚಿತವಾಗಿದೆ.